ಅಕ್ಟೋಬರ್ 1, 2026ರಿಂದ ಬ್ಯಾಂಕಿಂಗ್, LPG, FD, NRI ಆಸ್ತಿ ಖರೀದಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ. ಇದರಿಂದ ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಇಂದಿನಿಂದ ಜಾರಿಗೆ ಬರುತ್ತಿರುವ ಹೊಸ ನಿಯಮಗಳು ಯಾವುವು ಎಂದು ತಿಳಿಯಿರಿ...
ಪೋಸ್ಟ್ ಆಫೀಸ್‌ನ 5 ವರ್ಷದ RD ಯೋಜನೆಯಲ್ಲಿ ತಿಂಗಳಿಗೆ ₹8,000 ಹೂಡಿಕೆ ಮಾಡಿದರೆ 60 ತಿಂಗಳಲ್ಲಿ ಒಟ್ಟು ₹4.80 ಲಕ್ಷ ಹೂಡಿಕೆಯಾಗುತ್ತದೆ. ಪ್ರಸ್ತುತ 6.7% ಬಡ್ಡಿದರವನ್ನ ಆಧರಿಸಿದರೆ, ಮೆಚ್ಯುರಿಟಿ ವೇಳೆಗೆ ಸುಮಾರು ₹5.70 ಲಕ್ಷ ಪಡೆಯಬಹುದು. ಅಂದರೆ ಸುಮಾರು ₹90,926 ಬಡ್ಡಿ ಲಭಿಸಬಹುದು. ಬಡ್ಡಿದರವು ಸರ್ಕಾರದ ಪರಿಷ್ಕರಣೆಗೆ ಒಳಪಟ್ಟಿರುತ್ತದೆ.
ಗಂಡನ ಮನೆಯವರ ನಿರಂತರ ಕಿರುಕುಳ ತಾಳಲಾರದೆ ಮನನೊಂದ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಸುನಿತಾ ಎಂದು ಗುರುತಿಸಲಾಗಿದೆ.
ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ 399 ಪುಟಗಳ ಆದೇಶ ಹೊರಡಿಸಿ ₹89 ಕೋಟಿ ದಂಡ ವಿಧಿಸಿದೆ ಎನ್ನಲಾಗಿದೆ. 2024ರ ಮಾರ್ಚ್‌ನಿಂದ 2025ರ ಫೆಬ್ರವರಿವರೆಗೆ 113 ಕೆ.ಜಿ. ಚಿನ್ನ ಸಾಗಾಟಕ್ಕೆ ಸಂಬಂಧಿಸಿದ ವಿವರಗಳು ಆದೇಶದಲ್ಲಿವೆ ಎಂದು ತಿಳಿದುಬಂದಿದೆ. DRI ನೀಡಿದ್ದ ಶೋಕಾಸ್ ನೋಟಿಸ್ ಹಾಗೂ ಆರೋಪಿಗಳ ವಾದಗಳನ್ನು ಪರಿಶೀಲಿಸಿದ ಬಳಿಕ ಕಸ್ಟಮ್ಸ್ ಇಲಾಖೆ ಈ ಆದೇಶ ಹೊರಡಿಸಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಮಳೆ ನೀರು ನಿಲುಗಡೆ ಹಾಗೂ ಪ್ರವಾಹ ಪೀಡಿತ ಸ್ಥಳಗಳ ಕುರಿತು ಪರಿಶೀಲನೆ ನಡೆಸಿ, ಅಪಾಯ ಸಾಧ್ಯತೆಯಿರುವ ಸ್ಥಳಗಳ ಸಮಗ್ರ ಪಟ್ಟಿ ಸಿದ್ಧಪಡಿಸಿ ತ್ವರಿತ ಪರಿಹಾರ ಕ್ರಮ ಕೈಗೊಳ್ಳಲು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ.
ನಿಗೂಢವಾಗಿ ನಾಪತ್ತೆಯಾಗಿರುವ, ರಾಜ್ಯಾದ್ಯಂತ ತೀವ್ರ ಆತಂಕ ಮೂಡಿಸಿದ್ದ ಜಿಲ್ಲೆಯ ಕೆಆರ್‌ಐಡಿಎಲ್ KRIDL ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ AEE ಪರ್ವೇಜ್ ಧಾರವಾಡ ಕೊನೆಗೂ ಭೋಪಾಲ್‌ನಲ್ಲಿ ಪತ್ತೆ ಆಗಿದ್ದಾರೆ.
ನಗರದ್ಯಾಂತ ಭಾರೀ ಮಳೆಯಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಕಚೇರಿಯಿಂದ ಮನೆಗೆ ಹೋಗುವ ಸಂದರ್ಭದಲ್ಲಿಯೇ ಜೋರು ಮಳೆ ಸುರಿದಿದ್ದರಿಂದ ಸಮಸ್ಯೆ ಎದುರಾಯಿತು.
ಗಣಿ ನಾಡಿನಲ್ಲಿ ಕಣ್ಣಿಗೆ ಮಣ್ಣೆರೆಚಿ ನಡೆಸಲಾಗಿದೆ ಎನ್ನಲಾದ ಭೂ ಒತ್ತುವರಿ ಹಾಗೂ ಗಡಿ ಬದಲಾವಣೆ ಹಗರಣದ ತನಿಖೆ ಮತ್ತು ಪರಾಮರ್ಶೆಗೆ ಕೇಂದ್ರ ಮುಂದಾಗಿದೆ.
ಕರ್ನಾಟಕದಲ್ಲಿ ಬಸ್ ಪ್ರಯಾಣ ದರ ಏರಿಕೆ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರ ಪ್ರಕಾರ, ಬಸ್ ದರ ಪರಿಷ್ಕರಣೆ ಕುರಿತು ಅಧ್ಯಯನ ನಡೆಸಿರುವ ಸಮಿತಿಯ ವರದಿ ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್. ಸಾವಿರಾರು ಎಕರೆ ಕೃಷಿ ಜಮೀನುಗಳಿಗೆ ನೀರಿನ ಅನುಕೂಲ ಕಲ್ಪಿಸಬೇಕಿದ್ದ ಯೋಜನೆ. ಆದರೆ ಈಗ ಇದೇ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ಕಣ್ಣೆದುರೇ ಪೋಲು ಆಗ್ತಿದೆ.
ಬರಗಾಲದ ನಡುವೆ ರೈತರ ಜಮೀನುಗಳಿಗೆ ಆಸರೆ ಆಗಬೇಕಿದ್ದ ನೀರು, ಇದೀಗ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಈ ಅವಾಂತರ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.
ಕಳೆದ ಎರಡು ದಿನಗಳಿಂದ ನಗರದಾದ್ಯಂತ ಕೇವಲ ಮೋಡಕವಿದ ವಾತಾವರಣವಿತ್ತು. ಆದರೆ ಇಂದು ಮಧ್ಯಾಹ್ನ ನಂತರ ವಾತಾವರಣ ಸಂಪೂರ್ಣ ಬದಲಾಗಿ ಒಮ್ಮೆಲೇ ಮುಂಗಾರು ಮಳೆ ಧೋ ಎಂದು ಸುರಿಯಲು ಆರಂಭಿಸಿತು.
ನಾನು ಎಲ್‌ಕೆಜಿ ಅಥವಾ ಮೊದಲ ಬಾರಿಯ ಶಾಸಕನೇ ಇರಬಹುದು, ಆದರೆ ಬಿ.ಕೆ. ಹರಿಪ್ರಸಾದ್ ಅವರು ಜೀವನದಲ್ಲಿ ಒಂದೇ ಒಂದು ಬಾರಿಯೂ ಚುನಾವಣೆಯಲ್ಲಿ ನಿಂತು ಗೆದ್ದಿಲ್ಲ.
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಗೆ ಭರ್ಜರಿ ವೆಲ್ ಕಂ ಸಿಕ್ಕಿತ್ತು. ಖಜಾನೆ ಖಾಲಿ ಎಂಬ ವಿಪಕ್ಷಗಳ ಟೀಕೆಗೆ ಠಕ್ಕರ್ ಕೊಡಲು 1300 ಕೋಟಿ ರೂ. ಅಧಿಕ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ಬೆಂಗಳೂರಿನಲ್ಲಿ ಅಕ್ರಮ ಸಿಲಿಂಡರ್ ದಂಧೆ ಸದ್ದಿಲ್ಲದೆ ನಡೆಯುತ್ತಿದ್ದು, ದುಡ್ಡು ಮಾಡುವ ಉದ್ದೇಶದಿಂದ ದಂಧೆಕೋರರು ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಅಕ್ರಮವಾಗಿ ಸಿಲಿಂಡರ್‌ಗಳನ್ನು ರೀ ಫಿಲ್ಲಿಂಗ್ ಮಾಡುತ್ತಿದ್ದ ಶೆಡ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ.
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ವೇಳೆ ಸಿಐಡಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ತನಿಖೆ ಚುರುಕುಗೊಳಿಸಿದ್ದ ಅಧಿಕಾರಿಗಳಿಗೆ ಪ್ರಮುಖ ಆರೋಪಿ ಕನ್ನಾಳೆ ಡೈರಿ ಪರಿಶೀಲನೆ ವೇಳೆ ಸಾರಿಗೆ ಇಲಾಖೆಯ ನೇಮಕಾತಿ ಅಕ್ರಮದ ಬಗ್ಗೆ ಸುಳಿವು ಸಿಕ್ಕಿದೆ
ರೆನೋ ಕಂಪನಿ ಹೊಸ Triber Turbo 7-ಸೀಟರ್ ಕಾರನ್ನ ₹7.84 ಲಕ್ಷ ಎಕ್ಸ್-ಶೋರೂಂ ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಇದರಲ್ಲಿ 1.0 ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ 100 PS ಪವರ್ ಮತ್ತು 180 Nm ಟಾರ್ಕ್ ನೀಡುತ್ತದೆ. 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್, 8-ಇಂಚಿನ ಟಚ್‌ಸ್ಕ್ರೀನ್, 6 ಏರ್‌ಬ್ಯಾಗ್‌ಗಳು ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಹೊಸ Triber Turboವನ್ನ ಮೂರು ವೇರಿಯಂಟ್‌ಗಳಲ್ಲಿ ಪರಿಚಯಿಸಲಾಗಿದೆ.
ಸಂಸ್ಥೆಯ 3ನೇ ಹಂತದ ಕೋಕರ್ ಹೈಡ್ರೋ ಟ್ರೀಟಿಂಗ್ ಯುನಿಟ್ (CHTU) / CST ಪ್ಲಾಂಟ್‌ನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ವಿಶೇಷವೆಂದರೆ, ಈ ಘಟಕವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಿದ್ದರು ಎನ್ನಲಾಗಿದೆ.
ಗದಗ KRIDL ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಪರ್ವೇಜ್ ಧಾರವಾಡ ಅವರ ದಿಢೀರ್ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಡೀ ಜಿಲ್ಲೆಯಾದ್ಯಂತ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದೆ. ಪೊಲೀಸರು ಇದೀಗ ಅಂತಾರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಪಂಚಮುಖಿ ಹನುಮಂತನ ಐದು ಮುಖಗಳು ಧೈರ್ಯ, ರಕ್ಷಣೆ, ಶಕ್ತಿ, ಸಮೃದ್ಧಿ ಮತ್ತು ಜ್ಞಾನದ ವಿವಿಧ ಅಂಶಗಳನ್ನ ಪ್ರತಿನಿಧಿಸುತ್ತವೆ ಎಂಬ ಧಾರ್ಮಿಕ ನಂಬಿಕೆಯಿದೆ. ಹನುಮಂತ, ನರಸಿಂಹ, ಗರುಡ, ವರಾಹ ಮತ್ತು ಹಯಗ್ರೀವ ಸ್ವರೂಪಗಳಿಗೆ ವಿಶೇಷ ಮಹತ್ವವಿದೆ. ವಾಸ್ತು ನಂಬಿಕೆಗಳ ಪ್ರಕಾರ, ಮನೆಯ ಪೂಜಾ ಸ್ಥಳದಲ್ಲಿ ಪಂಚಮುಖಿ ಹನುಮಂತನ ಚಿತ್ರ ಅಥವಾ ವಿಗ್ರಹವನ್ನ ಸೂಕ್ತ ದಿಕ್ಕಿನಲ್ಲಿ ಇರಿಸುವುದರಿಂದ ಸಕಾರಾತ್ಮಕತೆ ಮತ್ತು ರಕ್ಷಣೆಯ ಅನುಭವ ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ.
ಹೆರಿಗೆಗೂ ಮುನ್ನ ಪತಿಯಿಂದಲೇ ತೀವ್ರ ಹಲ್ಲೆಗೊಳಗಾಗಿದ್ದ ಗರ್ಭಿಣಿಯೊಬ್ಬಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಪತ್ನಿ ಕೊನೆಯುಸಿರೆಳೆಯುತ್ತಿದ್ದಂತೆ ಆಕೆಯ ಪತಿ ಆರು ದಿನದ ಹಸುಗೂಸು ಹಾಗೂ ಮೂರು ವರ್ಷದ ಹೆಣ್ಣು ಮಗಳೊಂದಿಗೆ ನಾಪತ್ತೆಯಾಗಿರುವ ಕರುಳು ಹಿಂಡುವ ಘಟನೆ ದಾವಣಗೆರೆ ತಾಲೂಕಿನ ಬೇತೂರು ಗ್ರಾಮದಲ್ಲಿ ನಡೆದಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..