• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /KRIDL ಅಧಿಕಾರಿ ಪರ್ವೇಜ್ ನಾಪತ್ತೆ ಪ್ರಕರಣ : ಉಜ್ಜಯಿನಿ, ಅಜ್ಮೀರ್‌ನಲ್ಲಿ ಪೊಲೀಸರ ತೀವ್ರ ಶೋಧ

KRIDL ಅಧಿಕಾರಿ ಪರ್ವೇಜ್ ನಾಪತ್ತೆ ಪ್ರಕರಣ : ಉಜ್ಜಯಿನಿ, ಅಜ್ಮೀರ್‌ನಲ್ಲಿ ಪೊಲೀಸರ ತೀವ್ರ ಶೋಧ

ಗದಗ KRIDL ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಪರ್ವೇಜ್ ಧಾರವಾಡ ಅವರ ದಿಢೀರ್ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಡೀ ಜಿಲ್ಲೆಯಾದ್ಯಂತ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದೆ. ಪೊಲೀಸರು ಇದೀಗ ಅಂತಾರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Sep 30, 2026, 04:33 PM IST|Updated: Sep 30, 2026, 04:35 PM IST
joinshare
KRIDL ಅಧಿಕಾರಿ ಪರ್ವೇಜ್ ನಾಪತ್ತೆ ಪ್ರಕರಣ : ಉಜ್ಜಯಿನಿ, ಅಜ್ಮೀರ್‌ನಲ್ಲಿ ಪೊಲೀಸರ ತೀವ್ರ ಶೋಧ
Image Credit: Gadag News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗದಗ: ಗದಗ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಪರ್ವೇಜ್ ಧಾರವಾಡ ಅವರ ನಾಪತ್ತೆ ಪ್ರಕರಣ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಕಳೆದ 18 ದಿನಗಳಿಂದ ಯಾವುದೇ ಸುಳಿವಿಲ್ಲದೆ ನಾಪತ್ತೆಯಾಗಿರುವ ಪರ್ವೇಜ್ ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.  

ಕಾಮಗಾರಿಗಳ ಬಾಕಿ ಬಿಲ್ ಪಾವತಿಯ ಅನುದಾನ ಕೊರತೆ, ಗುತ್ತಿಗೆದಾರರ ಒತ್ತಡ ಹಾಗೂ ಮಾನಸಿಕ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಪರ್ವೇಜ್ ನಾಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು, ಇತ್ತೀಚೆಗೆ ಗದಗ KRIDL ಕಚೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಕಚೇರಿಯ ವಾತಾವರಣ, ಗುತ್ತಿಗೆದಾರರ ವ್ಯವಹಾರ ಮತ್ತು ಪರ್ವೇಜ್ ಅವರೊಂದಿಗಿನ ಕೊನೆಯ ಸಂಭಾಷಣೆಗಳ ಕುರಿತು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.  

ಉಜ್ಜಯಿನಿ, ಅಜ್ಮೀರ್‌ಗೆ ತೆರಳಿರುವ ಶಂಕೆ
ಪೊಲೀಸರ ಶೋಧ ಕಾರ್ಯಾಚರಣೆಯ ವೇಳೆ ಪರ್ವೇಜ್ ಮಧ್ಯಪ್ರದೇಶದ ಉಜ್ಜಯಿನಿಯತ್ತ ಪ್ರಯಾಣಿಸಿರುವ ಸುಳಿವು ದೊರೆತಿದೆ. ಉಜ್ಜಯಿನಿಯ ಪ್ರಸಿದ್ಧ ಶಾಹಿ ಮಸೀದಿಗೆ ಅಥವಾ ಮಹಾಕಾಳೇಶ್ವರ ದೇಗುಲದ ದರ್ಶನಕ್ಕೆ ಅವರು ತೆರಳಿರಬಹುದು ಎಂಬ ಶಂಕೆಯಿದ್ದು, ತನಿಖಾ ತಂಡದ ಗಮನ ಈಗ ಉಜ್ಜಯಿನಿಯತ್ತ ನೆಟ್ಟಿದೆ. ಅಷ್ಟೇ ಅಲ್ಲದೆ, ಉಜ್ಜಯಿನಿಯಿಂದ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೂ ಅವರು ಪ್ರಯಾಣ ಬೆಳೆಸಿರುವ ಸಾಧ್ಯತೆಗಳನ್ನು ಪೊಲೀಸರು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.

ಆತಂಕದಲ್ಲಿ ಕುಟುಂಬಸ್ಥರ ಮನವಿ
ಮಗ ನಾಪತ್ತೆಯಾಗಿ 18 ದಿನಗಳು ಕಳೆದರೂ ಇನ್ನು ಕೈಗೆ ಸಿಗದಿರುವುದು ಕುಟುಂಬಸ್ಥರನ್ನು ತೀವ್ರ ಆತಂಕಕ್ಕೀಡುಮಾಡಿದೆ. "ತನಿಖೆಯನ್ನು ಇನ್ನುಷ್ಟು ಚುರುಕುಗೊಳಿಸಿ, ಶತಾಯಗತಾಯ ಪರ್ವೇಜ್ ಅವರನ್ನು ಸುರಕ್ಷಿತವಾಗಿ ಹುಡುಕಿಕೊಡಿ" ಎಂದು ಕುಟುಂಬಸ್ಥರು ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ. ಪ್ರಸ್ತುತ ವಿಶೇಷ ಪೊಲೀಸ್ ತಂಡಗಳು ವಿವಿಧ ರಾಜ್ಯಗಳಲ್ಲಿ ಸರ್ಚ್ ಆಪರೇಷನ್ ಮುಂದುವರಿಸಿವೆ.

Add Zee News as a Preferred Source
TAGS:
Kannada News