• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರನ್ಯಾ ರಾವ್‌ಗೆ ₹89 ಕೋಟಿ ದಂಡ! 399 ಪುಟಗಳ ಕಸ್ಟಮ್ಸ್ ಆದೇಶದಲ್ಲಿ ಸ್ಫೋಟಕ ಮಾಹಿತಿ

ರನ್ಯಾ ರಾವ್‌ಗೆ ₹89 ಕೋಟಿ ದಂಡ! 399 ಪುಟಗಳ ಕಸ್ಟಮ್ಸ್ ಆದೇಶದಲ್ಲಿ ಸ್ಫೋಟಕ ಮಾಹಿತಿ

ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್‌ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ 399 ಪುಟಗಳ ಆದೇಶ ಹೊರಡಿಸಿ ₹89 ಕೋಟಿ ದಂಡ ವಿಧಿಸಿದೆ ಎನ್ನಲಾಗಿದೆ. 2024ರ ಮಾರ್ಚ್‌ನಿಂದ 2025ರ ಫೆಬ್ರವರಿವರೆಗೆ 113 ಕೆ.ಜಿ. ಚಿನ್ನ ಸಾಗಾಟಕ್ಕೆ ಸಂಬಂಧಿಸಿದ ವಿವರಗಳು ಆದೇಶದಲ್ಲಿವೆ ಎಂದು ತಿಳಿದುಬಂದಿದೆ. DRI ನೀಡಿದ್ದ ಶೋಕಾಸ್ ನೋಟಿಸ್‌ ಹಾಗೂ ಆರೋಪಿಗಳ ವಾದಗಳನ್ನು ಪರಿಶೀಲಿಸಿದ ಬಳಿಕ ಕಸ್ಟಮ್ಸ್ ಇಲಾಖೆ ಈ ಆದೇಶ ಹೊರಡಿಸಿದೆ.

Written ByPuttaraj K Alur
Published: Oct 01, 2026, 10:04 AM IST|Updated: Oct 01, 2026, 10:20 AM IST
joinshare
ರನ್ಯಾ ರಾವ್‌ಗೆ ₹89 ಕೋಟಿ ದಂಡ! 399 ಪುಟಗಳ ಕಸ್ಟಮ್ಸ್ ಆದೇಶದಲ್ಲಿ ಸ್ಫೋಟಕ ಮಾಹಿತಿ
Image Credit: Ranya Rao Customs Penalty

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Ranya Rao Gold Smuggling Case: ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ಗೆ ಸಂಬಂಧಿಸಿದ ಬಹುಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ ಎನ್ನಲಾಗಿದೆ. ಪ್ರಕರಣದ ವಿಚಾರಣೆಯ ಬಳಿಕ ಕಸ್ಟಮ್ಸ್ ಇಲಾಖೆ ಬರೋಬ್ಬರಿ ₹89 ಕೋಟಿ ದಂಡ ವಿಧಿಸಿ ಆದೇಶಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸುಮಾರು 399 ಪುಟಗಳ ಆದೇಶದಲ್ಲಿ ಚಿನ್ನ ಸಾಗಾಟಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

2024ರ ಮಾರ್ಚ್ 7ರಿಂದ 2025ರ ಫೆಬ್ರವರಿ 18ರವರೆಗೆ ಸುಮಾರು ಒಂದು ವರ್ಷದ ಅವಧಿಯಲ್ಲಿ ಒಟ್ಟು 113 ಕೆ.ಜಿ. ಚಿನ್ನ ಸಾಗಾಟ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ದುಬೈನಿಂದ ಚಿನ್ನವನ್ನ ಭಾರತಕ್ಕೆ ಸಾಗಾಟ ಮಾಡುವ ಕಾರ್ಯದಲ್ಲಿ ರನ್ಯಾ ರಾವ್ ಹಾಗೂ ಇತರ ಸಹ ಆರೋಪಿಗಳು ಭಾಗಿಯಾಗಿದ್ದರು ಎಂದು ತನಿಖೆಯಲ್ಲಿ ಕಂಡುಬಂದಿದೆ ಎನ್ನಲಾಗಿದೆ. ರನ್ಯಾ ರಾವ್ ಅವರನ್ನ 2025ರ ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ DRI ಅಧಿಕಾರಿಗಳು ಬಂಧಿಸಿದ್ದರು. 

ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಅವರ ಬಳಿ ಸುಮಾರು 14.2 ಕೆ.ಜಿ. ಚಿನ್ನ ಪತ್ತೆಯಾಗಿತ್ತು. ಅದರ ಮೌಲ್ಯ ಸುಮಾರು ₹12.56 ಕೋಟಿ ಎಂದು DRI ತನಿಖೆಯಲ್ಲಿ ಹೇಳಲಾಗಿತ್ತು. ಬಂಧನದ ಬಳಿಕ ನಡೆದ ತನಿಖೆಯಲ್ಲಿ ಪ್ರಕರಣದ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿತ್ತು. ರನ್ಯಾ ರಾವ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿದ ವೇಳೆ ಸುಮಾರು ₹2.06 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹2.67 ಕೋಟಿ ನಗದು ಪತ್ತೆಯಾಗಿತ್ತು ಎಂದು ತನಿಖಾ ಸಂಸ್ಥೆಗಳು ತಿಳಿಸಿದ್ದವು.  

ಸಹ ಆರೋಪಿಗಳ ಜೊತೆ ಸೇರಿ ಚಿನ್ನ ಸಾಗಾಟ?

ತನಿಖೆಯ ಸಂದರ್ಭದಲ್ಲಿ ರನ್ಯಾ ರಾವ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಇತರ ವ್ಯಕ್ತಿಗಳ ಪಾತ್ರವೂ ಬೆಳಕಿಗೆ ಬಂದಿತ್ತು. ತೆಲುಗು ನಟ ತರುಣ್ ಕೊಂಡೂರು ಅಲಿಯಾಸ್ ವಿರಾಟ್ ಕೊಂಡೂರು ಹಾಗೂ ಹವಾಲಾ ವ್ಯವಹಾರ ನಡೆಸುತ್ತಿದ್ದ ಸಹಚರರ ಪಾತ್ರದ ಕುರಿತು DRI ತನಿಖೆ ನಡೆಸಿತ್ತು. ತನಿಖಾ ದಾಖಲೆಗಳ ಪ್ರಕಾರ, ದುಬೈನಿಂದ ಭಾರತಕ್ಕೆ ಚಿನ್ನ ಸಾಗಾಟ ಮಾಡುವ ಜಾಲದಲ್ಲಿ ಹಲವು ವ್ಯಕ್ತಿಗಳ ಸಂಪರ್ಕವಿತ್ತು ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು. DRI ತನಿಖೆಯಲ್ಲಿ ರನ್ಯಾ ರಾವ್ ನವೆಂಬರ್ 2024ರಿಂದ ಫೆಬ್ರವರಿ 2025ರವರೆಗೆ ಸುಮಾರು 49.6 ಕೆ.ಜಿ. ಚಿನ್ನವನ್ನ ದುಬೈನಿಂದ ಸಾಗಾಟ ಮಾಡಿದ್ದರೆಂಬ ಆರೋಪದ ವಿವರಗಳೂ ನ್ಯಾಯಾಲಯದ ದಾಖಲೆಗಳಲ್ಲಿ ಕಾಣಿಸಿಕೊಂಡಿದ್ದವು. ಇದರ ಮೌಲ್ಯ ₹40 ಕೋಟಿಗೂ ಅಧಿಕ ಎಂದು DRI ಹೇಳಿತ್ತು.  

ಇದಕ್ಕೂ ಮೀರಿದಂತೆ ನಂತರದ ED ತನಿಖೆಯಲ್ಲಿ 2024ರ ಮಾರ್ಚ್‌ನಿಂದ 2025ರ ಮಾರ್ಚ್‌ವರೆಗೆ ಒಟ್ಟು 127.287 ಕೆ.ಜಿ. ವಿದೇಶಿ ಮೂಲದ ಚಿನ್ನವನ್ನ, ಸುಮಾರು ₹102.55 ಕೋಟಿ ಮೌಲ್ಯದಲ್ಲಿ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಚಿನ್ನವನ್ನ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಹಣವನ್ನ ಹವಾಲಾ ಮಾರ್ಗಗಳ ಮೂಲಕ ವರ್ಗಾಯಿಸಲಾಗಿದೆ ಎಂದು ED ತನ್ನ ತನಿಖೆಯಲ್ಲಿ ಹೇಳಿದೆ.  

ಶೋಕಾಸ್ ನೋಟಿಸ್ ಬಳಿಕ ಕಸ್ಟಮ್ಸ್ ಆದೇಶ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ದಂಡ ವಿಧಿಸುವ ಕುರಿತು ಈ ಹಿಂದೆ DRI ವತಿಯಿಂದ ಶೋಕಾಸ್ ನೋಟಿಸ್ ನೀಡಲಾಗಿತ್ತು ಎನ್ನಲಾಗಿದೆ. ದಂಡದ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿ, ಅವರಿಂದ ಪ್ರತಿಕ್ರಿಯೆ ಪಡೆಯುವ ಪ್ರಕ್ರಿಯೆ ನಡೆದಿತ್ತು. ಕಸ್ಟಮ್ಸ್ ಕಾಯ್ದೆಯಡಿ ಶೋಕಾಸ್ ನೋಟಿಸ್‌ಗೆ ಸಂಬಂಧಿಸಿದ ವಿಚಾರಗಳನ್ನ ಪರಿಶೀಲಿಸಿದ ಬಳಿಕ ಪ್ರಕರಣವು ಕಸ್ಟಮ್ಸ್ ಅಧಿಕಾರಿಗಳ ಮುಂದಿನ ವಿಚಾರಣೆಗೆ ಬಂದಿತ್ತು.

ಆರೋಪಿಗಳ ಪರವಾಗಿ ಕಸ್ಟಮ್ಸ್ ಕಾಯ್ದೆಯನ್ವಯ ಜಂಟಿ ನಿರ್ದೇಶಕರ ಮುಂದೆ ಅಪೀಲ್ ಸಲ್ಲಿಸಲಾಗಿತ್ತು ಎನ್ನಲಾಗಿದೆ. ಇದೀಗ ಸಂಬಂಧಿಸಿದ ದಾಖಲೆಗಳು, ತನಿಖಾ ಅಂಶಗಳು ಹಾಗೂ ಆರೋಪಿಗಳ ವಾದಗಳನ್ನ ಪರಿಶೀಲಿಸಿದ ಬಳಿಕ ಕಸ್ಟಮ್ಸ್ ಇಲಾಖೆ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ. ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರಿಂದ ಈ ಆದೇಶ ಹೊರಬಂದಿದ್ದು, ಅದರ ಮಾಹಿತಿಯನ್ನ ರನ್ಯಾ ರಾವ್ ಅವರಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

₹89 ಕೋಟಿ ದಂಡದ ಆದೇಶ

399 ಪುಟಗಳ ಈ ಆದೇಶದಲ್ಲಿ ಚಿನ್ನದ ಸಾಗಾಟಕ್ಕೆ ಸಂಬಂಧಿಸಿದ ದಿನಾಂಕಗಳು, ಆರೋಪಿಗಳ ನಡುವಿನ ಸಂಪರ್ಕ, ವಿದೇಶದಿಂದ ಚಿನ್ನ ತರಲಾದ ವಿಧಾನ ಹಾಗೂ ಪ್ರಕರಣದ ತನಿಖೆಯಲ್ಲಿ ಸಂಗ್ರಹಿಸಲಾದ ದಾಖಲೆಗಳ ಕುರಿತು ವಿವರಗಳಿವೆ ಎಂದು ತಿಳಿದುಬಂದಿದೆ. ಆದೇಶದ ಪ್ರಕಾರ ರನ್ಯಾ ರಾವ್ ಅವರಿಗೆ ₹89 ಕೋಟಿ ದಂಡ ವಿಧಿಸಲಾಗಿದೆ ಎನ್ನಲಾಗಿದ್ದು, ಈ ಮೊತ್ತವು ಪ್ರಕರಣದ ಗಂಭೀರತೆ ಹಾಗೂ ಕಸ್ಟಮ್ಸ್ ಕಾಯ್ದೆಯಡಿ ಕೈಗೊಳ್ಳಲಾದ ಕ್ರಮವನ್ನ ಸೂಚಿಸುತ್ತದೆ.

ಇದಕ್ಕೂ ಮುನ್ನ 2025ರಲ್ಲಿ ರನ್ಯಾ ರಾವ್ ಮತ್ತು ಸಹ ಆರೋಪಿಗಳ ವಿರುದ್ಧ COFEPOSA ಅಡಿಯಲ್ಲಿ ಬಂಧನ ಕ್ರಮವೂ ಕೈಗೊಳ್ಳಲಾಗಿತ್ತು. ನಂತರ 2026ರಲ್ಲಿ ED, ಚಿನ್ನ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರನ್ಯಾ ರಾವ್ ಸೇರಿದಂತೆ ಮೂವರ ವಿರುದ್ಧ ಪ್ರಾಸಿಕ್ಯೂಷನ್ ದೂರು ಸಲ್ಲಿಸಿತ್ತು. ಹೀಗಾಗಿ ರನ್ಯಾ ರಾವ್ ಪ್ರಕರಣದಲ್ಲಿ ಇದೀಗ ಕಸ್ಟಮ್ಸ್ ಇಲಾಖೆಯ ದಂಡದ ಆದೇಶ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. 399 ಪುಟಗಳ ಆದೇಶದಲ್ಲಿ ಉಲ್ಲೇಖಿಸಿರುವ ವಿವರಗಳು ಹಾಗೂ ದಂಡದ ಮೊತ್ತದ ಕುರಿತು ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಮತ್ತಷ್ಟು ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.

Add Zee News as a Preferred Source
TAGS:
Cinema
Crime
Kannada News