• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಶೆಡ್‌ನಲ್ಲಿ ಭಾರೀ ಸ್ಫೋ*ಟ.. ಶಾಲೆ, ಮನೆಗಳ ಕೂಗಳತೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಕರಾಳ ದಂಧೆ

ಶೆಡ್‌ನಲ್ಲಿ ಭಾರೀ ಸ್ಫೋ*ಟ.. ಶಾಲೆ, ಮನೆಗಳ ಕೂಗಳತೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಕರಾಳ ದಂಧೆ

ಬೆಂಗಳೂರಿನಲ್ಲಿ ಅಕ್ರಮ ಸಿಲಿಂಡರ್ ದಂಧೆ ಸದ್ದಿಲ್ಲದೆ ನಡೆಯುತ್ತಿದ್ದು, ದುಡ್ಡು ಮಾಡುವ ಉದ್ದೇಶದಿಂದ ದಂಧೆಕೋರರು ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಅಕ್ರಮವಾಗಿ ಸಿಲಿಂಡರ್‌ಗಳನ್ನು ರೀ ಫಿಲ್ಲಿಂಗ್ ಮಾಡುತ್ತಿದ್ದ ಶೆಡ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ.

Written ByBhimappa
Published: Sep 30, 2026, 05:39 PM IST|Updated: Sep 30, 2026, 05:51 PM IST
joinshare
ಶೆಡ್‌ನಲ್ಲಿ ಭಾರೀ ಸ್ಫೋ*ಟ.. ಶಾಲೆ, ಮನೆಗಳ ಕೂಗಳತೆಯಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಕರಾಳ ದಂಧೆ
Image Credit: Bengaluru_Cylinder

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bengaluru Baiyappanapalya Cylinder explosion: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಸಿಲಿಂಡರ್ ದಂಧೆ ಸದ್ದಿಲ್ಲದೆ ನಡೆಯುತ್ತಿದ್ದು, ದುಡ್ಡು ಮಾಡುವ ಉದ್ದೇಶದಿಂದ ದಂಧೆಕೋರರು ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಅಕ್ರಮವಾಗಿ ಸಿಲಿಂಡರ್‌ಗಳನ್ನು ರೀ ಫಿಲ್ಲಿಂಗ್ ಮಾಡುತ್ತಿದ್ದ ಶೆಡ್‌ನಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೂ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆ ಇತ್ತು. ಈ ಘಟನೆ ನಡೆದಿದ್ದು ಸಿಲಿಕಾನ್ ಸಿಟಿ ಬೆಂಗಳೂರಿನ ಬೈಯಪ್ಪನಪಾಳ್ಯದ ಕಗ್ಗದಾಸನಪುರದಲ್ಲಿ.

ಅಕ್ರಮವಾಗಿ ಸಿಲಿಂಡರ್ ಶೇಖರಣೆ ಮಾಡಿದ್ದ ಶೆಡ್‌ನಲ್ಲಿ ಸ್ಫೋಟ
ಶಾಲೆಯ ಕೂಗಳತೆ ದೂರದಲ್ಲೇ ಸದ್ದಿಲ್ಲದೆ ನಡೆಯುತ್ತಿದ್ದ ದಂಧೆ

ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ, ನೋಡ ನೋಡುತ್ತಿದ್ದಂತೆ ಎರಡೆರಡು ಬಾರಿ ಸ್ಫೋಟವಾಗಿ ಹೊಗೆ ಆವರಿಸಿಕೊಂಡಿದೆ. ಮತ್ತೊಂದೆಡೆ ಚೂರುಚೂರಾಗಿ ಬಿದ್ದಿರುವ ಗೃಹೋಪಯೋಗಿ ವಸ್ತುಗಳು, ಗೂಡ್ಸ್ ವಾಹನಕ್ಕೆ ಸಿಲಿಂಡರ್‌ಗಳನ್ನು ಲೋಡ್ ಮಾಡುತ್ತಿರುವ ಯುವಕರು, ಇವೆಲ್ಲವೂ ಬೈಯಪ್ಪನಪಾಳ್ಯದ ಕಗ್ಗದಾಸನಪುರದಲ್ಲಿ ನಡೆದ ಸಿಲಿಂಡರ್ ಸ್ಫೋಟದ ದೃಶ್ಯಗಳು.

ಇದೇ ಜಾಗದಲ್ಲಿ ಕಳೆದ ಆರೇಳು ತಿಂಗಳಿನಿಂದ ನಿರಂತರವಾಗಿ ಅಕ್ರಮವಾಗಿ ನೂರಾರು ಸಿಲಿಂಡರ್‌ಗಳನ್ನು ಶೇಖರಣೆ ಮಾಡಿ, ರೀ ಫಿಲ್ಲಿಂಗ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಹಗಲು ವೇಳೆಯಲ್ಲಿ ಟಾಟಾ ಏಸ್ ವಾಹನದಲ್ಲಿ ಸಿಲಿಂಡರ್‌ಗಳನ್ನು ತಂದು ಇಲ್ಲಿ ಇಡಲಾಗುತ್ತಿತ್ತು. ನಾಲ್ಕೈದು ಯುವಕರ ತಂಡ ಇಡೀ ದಿನ ಈ ಕೆಲಸ ಮಾಡುತ್ತಿತ್ತು ಎನ್ನಲಾಗಿದೆ.

ಆದರೆ ಇಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಎರಡು ಬಾರಿ ಸ್ಫೋಟ ಸಂಭವಿಸಿದ್ದು, ಪರಿಣಾಮ ಪಕ್ಕದಲ್ಲಿದ್ದ ಶಾಲೆಯ ಕಿಟಕಿಗೂ ಹಾನಿಯಾಗಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಇನ್ನು ಈ ಖಾಲಿ ಜಾಗದಲ್ಲಿ ಏಳೆಂಟು ಶೆಡ್‌ಗಳಿದ್ದು, ಕೂಲಿ ಕಾರ್ಮಿಕರು ಕೂಡ ವಾಸವಾಗಿದ್ದಾರೆ. ಇಂದು ಬಹುತೇಕ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಈ ಜಾಗದ ಮಾಲೀಕರು ಈ ಹಿಂದೆ ರೀ ಫಿಲ್ಲಿಂಗ್ ಮಾಡುತ್ತಿದ್ದವರನ್ನು ಹೊಡೆದು ಕಳುಹಿಸಿದ್ದರಂತೆ. ಸುಮಾರು 15 ದಿನಗಳ ಕಾಲ ಸುಮ್ಮನಿದ್ದವರು ಮತ್ತೆ ಅಕ್ರಮ ದಂಧೆ ಆರಂಭಿಸಿದ್ದರು ಎನ್ನಲಾಗಿದೆ. ಸ್ಫೋಟ ಸಂಭವಿಸಿದ ವೇಳೆ ಓರ್ವ ಮಹಿಳೆ ತನ್ನ ಮಗಳನ್ನು ಎತ್ತಿಕೊಂಡು ಸ್ಥಳದಿಂದ ಓಡಿ ಹೋಗಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ಇನ್ನು ಇದೇ ಜಾಗದಲ್ಲಿ ಕಳೆದ ಒಂದು ವರ್ಷದ ಹಿಂದೆಯೂ ಇದೇ ರೀತಿಯ ಸ್ಫೋಟ ಸಂಭವಿಸಿತ್ತು ಎನ್ನಲಾಗಿದೆ. ಆಗಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂಬುದು ಸ್ಥಳೀಯರ ಮಾತಾಗಿದೆ. ಅಷ್ಟೇ ಅಲ್ಲ, ಈ ಜಾಗದ ಮಾಲೀಕರು ಯಾರು? ಜಾಗವನ್ನು ಬಾಡಿಗೆಗೆ ಕೊಟ್ಟವರು ಯಾರು? ಅಕ್ರಮವಾಗಿ ಸಿಲಿಂಡರ್ ರೀ ಫಿಲ್ಲಿಂಗ್ ನಡೆಸುತ್ತಿದ್ದವರು ಯಾರು? ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ.

ಭಾರತದಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಮರುಪೂರಣ ಅಥವಾ ರೀ ಫಿಲ್ಲಿಂಗ್‌, ಬಳಕೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದಂಥೆ ಕೇಂದ್ರ ಸರ್ಕಾರ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥೆ ಪಿಇಎಸ್‌ಒ ಕಟ್ಟುನಿಟ್ಟಾದ ಕಾನೂನು ಮತ್ತು ನಿಯಮಗಳನ್ನು ಜಾರಿ ಮಾಡಿದೆ. ದುರಂತ ಎಂದರೆ ಎಷ್ಟೋ ಜನರಿಗೆ ಇದರ ಅರಿವೇ ಇಲ್ಲ. ಹೀಗಾಗಿ ಸಮಾಜದಲ್ಲಿ ಎಲ್ಲೆಂದರಲ್ಲಿ ಅಲ್ಲಿ ಸಿಲಿಂಡರ್‌ ರೀ ಫಿಲ್ಲಿಂಗ್‌ ಕೆಲಸಗಳು ನಡೆಯುತ್ತಿವೆ. ಇದು ಅಪಾಯ ಎನ್ನುವುದು ಗೊತ್ತಿದ್ದರೂ ಸಾರ್ವಜನಿಕವಾಗಿ ಮಾಡುತ್ತಿರುವುದು ದೊಡ್ಡ ದುರಂತವೇ ಸರಿ. ಕಾನೂನಿನಂತೆ ಅನುಮತಿ ಇಲ್ಲದೇ ಯಾರು ಸಿಲಿಂಡರ್‌ಗಳನ್ನು ಫಿಲ್ಲಿಂಗ್‌, ರೀಫಿಲ್ಲಿಂಗ್‌ ಸೇರಿ ಸಿಲಿಂಡರ್‌ನ ಇತರೆ ಕೆಲಸ ಕಾರ್ಯಗಳನ್ನು ಮಾಡುವಂತಿ. ಅವುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವಂತಿಲ್ಲ. ಅನುಮತಿ ಇಲ್ಲದೇ ಸಿಲಿಂಡರ್‌ಗಳನ್ನು ರೀ ಫಿಲ್ಲಿಂಗ್‌ ಮಾಡಿದವರಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.    

Add Zee News as a Preferred Source
TAGS:
Kannada News