• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /2028 ಕ್ಕೂ ನಮ್ಮದೇ ಸರ್ಕಾರ ಎಂದು ಸಿಎಂ ಡಿಕೆ ಶಿವಕುಮಾರ್ ಗುಡುಗು

2028 ಕ್ಕೂ ನಮ್ಮದೇ ಸರ್ಕಾರ ಎಂದು ಸಿಎಂ ಡಿಕೆ ಶಿವಕುಮಾರ್ ಗುಡುಗು

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಗೆ ಭರ್ಜರಿ ವೆಲ್ ಕಂ ಸಿಕ್ಕಿತ್ತು. ಖಜಾನೆ ಖಾಲಿ ಎಂಬ ವಿಪಕ್ಷಗಳ ಟೀಕೆಗೆ ಠಕ್ಕರ್ ಕೊಡಲು 1300 ಕೋಟಿ ರೂ. ಅಧಿಕ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಯಿತು.

Reported ByManjunath NaragundEdited ByManjunath Naragund
Published: Sep 30, 2026, 06:36 PM IST|Updated: Sep 30, 2026, 06:40 PM IST
joinshare
2028 ಕ್ಕೂ ನಮ್ಮದೇ ಸರ್ಕಾರ ಎಂದು ಸಿಎಂ ಡಿಕೆ ಶಿವಕುಮಾರ್ ಗುಡುಗು
Image Credit: D K Shivakumar

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಚಾಮರಾಜನಗರ: ಸಿಎಂ ಆದ ಬಳಿಕ ಮೊದಲ ಬಾರಿ ಚಾಮರಾಜನಗರ ಜಿಲ್ಲೆ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಗೆ ಭರ್ಜರಿ ಸ್ವಾಗತ ಸಿಕ್ಕಿತು. ನೆಚ್ಚಿನ ನಾಯಕನನ್ನು ನೋಡಲು ಜನಸಾಗರವೇ ಹೆಲಿಪ್ಯಾಡ್ ಬಳಿ ನೆರೆದಿತ್ತು. ಬರೋಬ್ಬರಿ 1300 ಕೋಟಿ ರೂ.ಗೂ ಅಧಿಕ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಿದರು. ಸಿಎಂ ಡಿಕೆ ಟೂರ್ ಹೇಗಿತ್ತು..? ಈ ಸ್ಟೋರಿ ನೋಡಿ.

ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಗೆ ಭರ್ಜರಿ ವೆಲ್ ಕಂ ಸಿಕ್ಕಿತ್ತು. ಖಜಾನೆ ಖಾಲಿ ಎಂಬ ವಿಪಕ್ಷಗಳ ಟೀಕೆಗೆ ಠಕ್ಕರ್ ಕೊಡಲು 1300 ಕೋಟಿ ರೂ. ಅಧಿಕ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಯಿತು.ಕೊಳ್ಳೇಗಾಲ ಎಂಜಿಎಸ್ವಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ 25 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಸಿಎಂ ಡಿಕೆಗೆ ಸಚಿವರಾದ ಸಿ.ಪುಟ್ಟರಂಗಶೆಟ್ಟಿ, ಚೆಲುವರಾಯಸ್ವಾಮಿ, ಯು.ಟಿ.ಖಾದರ್, ಅಜಯ್ ಧರ್ಮಸಿಂಗ್, ಕೆ.ಎಚ್. ಮುನಿಯಪ್ಪ ಸಾಥ ಕೊಟ್ಟರು.

ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಸಿಎಂ ಗಡಿಜಿಲ್ಲೆ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಚಾಮರಾಜನಗರ ಜಿಲ್ಲೆ ನನ್ನ ಪ್ರೀತಿಯ ಜಿಲ್ಲೆ, ಎಲ್ಲಾ ವರ್ಗದವರು ವಾಸಿಸುವ ರೈತರು- ಶ್ರಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಾಗಿದ್ದು ಬಹಳ ಪ್ರೀತಿಯಿಂದ ಈ ಜಿಲ್ಲೆಗೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಗೆ ಮೊಟಕು ಮಾಡಿದ ಘಟನೆಯೂ ನಡೆಯಿತು‌. ಎರಡು ಚರಣಗಳ ಬಳಿಕ ಮೂರನೇ ಚರಣವನ್ನೂ ಹಾಡುಗಾರರು ಗಾಯನ ಮಾಡಲು ಆರಂಭಿಸಿದಾಗ ಗೀತೆ ನಿಲ್ಲಿಸುವಂತೆ ಸಿಎಂ ಸೂಚಿಸಿ ವಂದೇ ಮಾತರಂ ಗಾಯನವನ್ನು ಸಮಾಪ್ತಿ ಮಾಡಿದರು. ವೇದಿಕೆ ಕಾರ್ಯಕ್ರಮದಲ್ಲಿ  2028 ಕ್ಕೂ ನಮ್ಮದೇ ಸರ್ಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿದೆ ಎಂದು ಭರವಸೆ ನೀಡಿದರು. 
ಜನರಿಗೆ ಅನೇಕ ಕಾರ್ಯಕ್ರಮ ರೂಪಿಸುವ ಜೊತೆಗೆ ಗ್ಯಾರಂಟಿ ನೀಡಲಾಗಿದೆ, ಟೀಕೆಗಳನ್ನು ಹೆದರಿಸಿ ಗೆದ್ದರೆ ನಾಯಕ, ಸೋತರೆ ಮಾರ್ಗದರ್ಶಕನಾಗಲಿದ್ದು ಶಿವ ತಲೆ ಮೇಲೆ ಗಂಗೆಗೆ ಸ್ಥಾನ ನೀಡಿದಂತೆ  ಕಾಂಗ್ರೆಸ್ ಪಕ್ಷವು ತನ್ನ ಹೃದಯದಲ್ಲಿ ಜನರಿಗೆ ಸ್ಥಾನ ನೀಡಿದೆ, ಕೊಳ್ಳೇಗಾಲ, ಹನೂರು ಈಗ ಅಭಿವೃದ್ಧಿಗೆ ಕಾಲಿಟ್ಟಿದೆ, ರೇಷ್ಮೆಗೆ ಉದ್ಯಮದ ಸ್ಥಾನ ಇಲ್ಲಾ, ಹೊಸ ಕೈಮಗ್ಗ ನೀತಿ ರೂಪಿಸಲಾಗಿದೆ, ಕೈಗಾರಿಕಾ ಸ್ಥಾನವನ್ನು ನೀಡಲಾಗಿದೆ, ರೇಷ್ಮೆ ಬೆಳೆಗಾರರು- ನೇಕಾರರ ಬದುಕಿಗೆ ಹೊಸ ರೂಪ ಸಿಗಲಿದೆ ಎಂದರು.

ಸಿಎಂ ಭೇಟಿ ವೇಳೆ ಸಾಥ್ ನೀಡಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಕ್ಯಾನ್ಸರ್‌ ಔಷಧಗಳ ದರಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡುತ್ತೇನೆ ಎಂದರು. ಜೊತೆಗೆ, ಹೋಟೆಲ್ ಗಳಿಗೆ ಅಡುಗೆ ಎಣ್ಣೆ ಮರು ಬಳಕೆ ಬಗ್ಗೆ ಮಾರ್ಗಸೂಚಿ ಹೊರಡಿಸುವುದಾಗಿ ಹೇಳಿದರು. ಇನ್ನು , ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ಆ ವರಣದಲ್ಲಿ ಭೀಕರ ಸ್ಫೋಟಕ್ಕೆ ಸಂಬಂಧಿಸಿದತೆ  ಜಿಲ್ಲಾಧಿಕಾರಿಗೆ ಮೇಲುಸ್ತುವಾರಿ ವಹಿಸುವಂತೆ ಸೂಚಿಸಿದ್ದು ಘಟನೆ ಬಗ್ಗೆ ವರದಿಯನ್ನು ನೀಡುವಂತೆ ಸೂಚಿಸಿದ್ದು ಕೇಂದ್ರಕ್ಕೂ ತನಿಖೆ ನಡೆಸುವಂತೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ಭವನ, ಯಳಂದೂರು 100 ಹಾಸಿಗೆಗಳ ಆಸ್ಪತ್ರೆ ಲೋಕಾರ್ಪಣೆಗೊಂಡವು.ಹನೂರಿನ ಪ್ರಜಾಸೌಧ ಕಟ್ಟಡ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
 

Add Zee News as a Preferred Source
TAGS:
Kannada News