ಡ್ರಮ್ಮರ್ ದೇವ ಅವರು ಆರ್‌ಸಿಬಿಯ ಕಟ್ಟಾ ಅಭಿಮಾನಿಯಾಗಿದ್ದರು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಪಂದ್ಯಗಳಲ್ಲಿ ಡ್ರಮ್ ಬಾರಿಸಿ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಅವರ ಲೈವ್ ಬೀಟ್ಸ್‌ಗಳು ಪಂದ್ಯಗಳ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸುತ್ತಿದ್ದವು.
ಪಂಜಾಬ್‌ನಲ್ಲಿ ಹುಟ್ಟಿ ತಮ್ಮ ವಿಶಿಷ್ಟ ಧ್ವನಿಯ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ ಸಂಗೀತಗಾರ... ಪಂಜಾಬಿ ಗಾಯಕ, ಗೀತರಚನೆ ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ಅಲ್ಪಾವಧಿಯಲ್ಲೇ ದೊಡ್ಡ ಹೆಸರು ಮಾಡಿದ ಕಲಾವಿದ... ಕೆಲವು ಹೆಸರುಗಳು ಕೇವಲ ಹೆಸರುಗಳಾಗಿರುವುದಿಲ್ಲ… ಅವು ಒಂದು ಧ್ವನಿಯಾಗುತ್ತವೆ. ಒಂದು ಪೀಳಿಗೆಯ ಭಾವನೆಯಾಗುತ್ತವೆ. ಅಂತಹ ಹೆಸರೇ ಸಿಧು ಮೂಸೆವಾಲಾ.. ಆದ್ರೆ ಕೇವಲ 28ನೇ ವಯಸ್ಸಿಗೆ ದಾರುಣ ಅಂತ್ಯ ಕಂಡಿದ್ದಾರೆ.. ಸಿಧು ಮೂಸೆವಾಲಾ ಅವರ ಜೀವನ, ಸಂಗೀತ ಸಾಧನೆ ಹಾಗೂ ಸಾವಿನ ಹಿಂದಿನ ಕರಾಳತೆಯನ್ನ ತೋರಿಸ್ತೀವಿ ನೋಡಿ...
ಎಂಬಿಎ ಮುಗಿಸಿ ಕಾರ್ಪೊರೇಟ್ ಕೆಲಸ ಬಿಟ್ಟು ಬಂದ ಯುವಕ, ಸತತ ತಿರಸ್ಕಾರಗಳ ಬಳಿಕ ಕನ್ನಡದ ಪಲ್ಲವಿ ಅನುಪಲ್ಲವಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, ನಾಯಕನ್, ರೋಜಾದಿಂದ ಪೊನ್ನಿಯಿನ್ ಸೆಲ್ವನ್ವರೆಗೆ ದೇಶವೇ ಹೆಮ್ಮೆಪಡುವಂತಹ ಎಪಿಕ್ ಸಿನಿಮಾಗಳನ್ನು ನೀಡಿದ್ದು ಹೇಗೆ?.. ಇದು ‘ಪದ್ಮಶ್ರೀ’ ಮಣಿರತ್ನಂ ಅವರ ಜೀವನದ ರೋಚಕ ಕಥೆ..
ಭಾರತೀಯ ಸಂಸ್ಕೃತಿಯಲ್ಲಿ, ಬುಲ್ ಶಿವನ ವಾಹನ ಆಗಿರುವುದರಿಂದ ಅದನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದನ್ನು ನಂದಿ ಎಂದು ಕೂಡ ಕರೆಯಲಾಗುತ್ತದೆ.
ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿದೆ.
Actress : ನಾಯಕಿಯಾಗಿ ಸ್ಯಾಂಡಲ್‌ವುಡ್ ಅಲ್ಲ, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ ಇದೀಗ ತಮ್ಮ ಸಿನಿ ಕೆರಿಯರ್‌ನ ಆರಂಭದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ತಾವು ಮಾಡಿದ ದೊಡ್ಡ ತಪ್ಪೇನು? ಅವಕಾಶಗಳು ಯಾಕೆ ತಡವಾದವು? ಈ ಬಗ್ಗೆ ನಟಿ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ನಟ ನಾನಿ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಸಿನಿಮಾ ‘ದಿ ಪ್ಯಾರಡೈಸ್’ ಇತ್ತೀಚೆಗೆ ತೆರೆಕಂಡಿದ್ದು, ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗಳನ್ನು ಎದುರಿಸುತ್ತಿದೆ. ಈ ಎಲ್ಲ ನೆಗೆಟಿವ್ ರಿವ್ಯೂಸ್ ಹಾಗೂ ಆನ್‌ಲೈನ್ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿ ನಾನಿ ಪೋಸ್ಟ್ ಹಾಕಿದ್ದು ಸಖತ್ ವೈರಲ್ ಆಗುತ್ತಿದೆ..
ಕೆಲವರು ಚಿತ್ರದ ಆಕ್ಷನ್ ದೃಶ್ಯಗಳನ್ನ ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಸಿನಿಮಾದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಿಂಸಾತ್ಮಕ ದೃಶ್ಯಗಳಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಿತ್ರದ ಕಥೆ ಮತ್ತು ನಿರೂಪಣೆಯ ಬಗ್ಗೆಯೂ ಪ್ರೇಕ್ಷಕರಿಂದ ಟೀಕೆಗಳು ಕೇಳಿಬಂದಿವೆ. ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಬರುವ ಕೆಲವು ಸನ್ನಿವೇಶಗಳು ಕಥೆಗೆ ಅಗತ್ಯವಿತ್ತೇ ಎಂಬ ಪ್ರಶ್ನೆಯನ್ನ ಪ್ರೇಕ್ಷಕರು ಎತ್ತಿದ್ದಾರೆ.
ದೇಶದ ಶ್ರೀಮಂತ ನಟರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಸ್ಟಾರ್ ಹೀರೋಗೆ ಭಾರೀ ಆಘಾತವೊಂದು ಎದುರಾಗಿದ್ದು, ಒಂದೇ ವರ್ಷದಲ್ಲಿ 2 ಸಾವಿರ ಕೋಟಿ ಕಳೆದುಕೊಂಡಿದ್ದಾರೆ. ಈ ನಟ ಮಾಡಿದ್ದಾರು ಏನು ಅಂತ ಎಂದು ತಿಳಿಯಲು ಈ ಸ್ಟೋರಿ ಓದಿ
ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮುಂದಿನ ಹೊಸ ಚಿತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟದಲ್ಲಿದ್ದಾರೆ. ತಮ್ಮ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕಾಗಿ ಅಧಿಕೃತ ಆಡಿಷನ್ ಕರೆ ನೀಡಿದ್ದು, ನಟನೆಯಲ್ಲಿ ಆಸಕ್ತಿಯಿರುವ ನವ ಕಲಾವಿದರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಹೆಚ್ಚಿನ ವಿವರ ಇಲ್ಲಿದೆ..
ಬಹುಭಾಷಾ ನಟ ಪ್ರಕಾಶ್ ರಾಜ್, ಕೇಂದ್ರ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ, SIR ಪ್ರಕ್ರಿಯೆಯು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮತದಾರರ ಹಕ್ಕುಗಳನ್ನು ಕಸಿಯುವ ಉದ್ದೇಶವನ್ನು ಹೊಂದಿದೆ ಎಂದು ಕಿಡಿಕಾರಿದ್ದಾರೆ..
ನಟ ದರ್ಶನ್‌ಗೆ ಮತ್ತೊಮ್ಮೆ ಪ್ರಮುಖ ಕಾನೂನು ಸಂಕಷ್ಟ ಎದುರಾಗಿದೆ. ಆರೋಪಿ ಪ್ರದೋಷ್ ಮಾಫಿ ಸಾಕ್ಷಿ (ಅಪ್ರೂವರ್) ಆಗಲು ನಿರ್ಧರಿಸಿದ್ದು, ಅವರ ಅಧಿಕೃತ ಹೇಳಿಕೆ ದಾಖಲಿಸಲು 59ನೇ ಸಿಸಿಹೆಚ್ ನ್ಯಾಯಾಲಯವು ದಿನಾಂಕ ನಿಗದಿಪಡಿಸಿ ಸಮನ್ಸ್ ನೀಡಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
ಸಿನಿಮಾದಲ್ಲಿರುವ ಭಕ್ತಿ, ನಂಬಿಕೆ ಮತ್ತು ಮಹಾರಾಜ್‌ಜಿಯ ಮೌಲ್ಯಗಳು ದೇಶದ ಗಡಿಗಳನ್ನು ಮೀರಿ ಪ್ರೇಕ್ಷಕರೊಂದಿಗೆ ಬೆಸೆದುಕೊಂಡಿವೆ. ದೇವರನ್ನು ಹುಡುಕುತ್ತ ಹೋಗುವ ಸಿನಿಮಾದಲ್ಲಿನ ನಟ..
ರೇಣುಕಾಸ್ವಾಮಿ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ತಿರುವು ಸಿಗುತ್ತಿದ್ದು, ಪ್ರಕರಣದ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ (ಅಪ್ರೂವರ್) ಪರಿಗಣಿಸಿದ್ದ 59ನೇ ಸಿಸಿಎಚ್ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಯಶ್ ನಟನೆಯ ʻಟಾಕ್ಸಿಕ್ʼ, ತಮಿಳುನಾಡು ಸಿಎಂ ವಿಜಯ್ ನಟನೆಯ ʻಜನ ನಾಗಯನ್ʼ ಸೇರಿದಂತೆ ಹಲವಾರು ಬಿಗ್ ಬಜೆಟ್ ಸಿನಿಮಾಗಳನ್ನು ನೀಡಿರುವ ʻಕೆವಿಎನ್ ಪ್ರೊಡಕ್ಷನ್ಸ್ʼ ವಿರುದ್ದ ಇದೀಗ ವಂಚನೆ ಆರೋಪ ಕೇಳಿಬಂದಿದೆ. ಬಲರಾಮನ ದಿನಗಳು ಸಿನಿಮಾ ನಿರ್ಮಾಣ ಸಂಸ್ಥೆ ʻಪದ್ಮಾವತಿ ಫಿಲ್ಮ್ಸ್ʼ ನಿರ್ಮಾಪಕರ ಸಂಘಕ್ಕೆ ದೂರು ನೀಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
ಬೈಕ್ ರೈಡಿಂಗ್‌ನಿಂದ ಹಿಡಿದು ಸಾಹಸಮಯ ಅಂಡರ್ ವಾಟರ್ ಆ್ಯಕ್ಷನ್ ಸೀಕ್ವೆನ್ಸ್‌ಗಳವರೆಗೆ ರಶ್ಮಿಕಾ ಮಂದಣ್ಣ ಅವರು ತಮ್ಮನ್ನು ಸಂಪೂರ್ಣವಾಗಿ ಪಾತ್ರಕ್ಕೆ ಸಮರ್ಪಿಸಿಕೊಂಡಿದ್ದಾರೆ.
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಗುಜರಾತ್‌ನ ಏಕ್ತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನ ಗುರುತಿಸಿ ಈ ಗೌರವ ನೀಡಲಾಗಿದೆ. ವಿವಿಧ ವಿಭಾಗಗಳಲ್ಲಿ ಹಲವು ಕಲಾವಿದರು ಹಾಗೂ ಚಿತ್ರತಂಡಗಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನ ಸ್ವೀಕರಿಸಿದರು.
ನಿರ್ಮಾಪಕರ ಪುತ್ರ, ಸ್ಪುರದ್ರೂಪಿ, ಪ್ರತಿಭಾವಂತ. ಆದರೆ ನಾಯಕ ನಟನಾಗಲು ಬಯಸದೆ ಖಳನಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಭಯ್, ತಾವು ವಿದೇಶದಲ್ಲೇ ಹುಟ್ಟಿ ಬೆಳೆದ ಕಾರಣ ಕನ್ನಡ ಭಾಷೆ ಅರಿತಿಲ್ಲ.
Pavithra gowda threat: ವಿಚಾರಣೆ ವೇಳೆ ಜೈಲಿನಲ್ಲಿ ಆ ಗ್ಯಾಂಗ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಕಣ್ಣೀಟ್ಟಿರಿದ್ದಾರೆ. ಅತ್ತ ಪ್ರದೋಷ್ ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮೂಲಕ ಈ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಬಾಲಿವುಡ್‌ನ ಖ್ಯಾತ ನಟಿ ರಾಣಿ ಮುಖರ್ಜಿ ಅವರಿಗೆ ಮಾತೃ ವಿಯೋಗವಾಗಿದೆ.