Sidhu Moose Wala Life Story : ಶುಭದೀಪ್ ಸಿಂಗ್ ಸಿಧು 1993ರ ಜೂನ್ 11ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದಲ್ಲಿ ಜನಿಸಿದರು.. ಜಗತ್ತಿಗೆ ಅವರು ಪರಿಚಿತರಾದಗಿದ್ದು, ಸಿಧು ಮೂಸೆವಾಲಾ ಎಂಬ ಹೆಸರಿನಿಂದ. ಆರನೇ ತರಗತಿಯಗತಿಯಲ್ಲಿ ಇರುವಾಗ್ಲೇ ಸಿಧು ಮೂಸೆವಾಲಾ, ಹಿಪ್-ಹಾಪ್ ಸಂಗೀತವನ್ನು ಕೇಳಲು ಪ್ರಾರಂಭಿಸಿದರು. ಈ ನಡುವೆ ಹರ್ವಿಂದರ್ ಬಿಟ್ಟು ಅವರಿಂದ ಸಂಗೀತಾ ತರಬೇತಿ ಪಡೆಯಲು ಶುರು ಮಾಡಿದ್ರು... ರ‍್ಯಾಪರ್ ಟುಪಕ್ ಶಕುರ್ ಗಾಯನದಿಂದ ಪ್ರೇರಿತರಾಗಿ, ಸಿಧು ಮೂಸೆವಾಲಾ ತಮ್ಮ ಕನಸುಗಳನ್ನು ಬೆನ್ನತ್ತಿ ಕೆನಡಾಗೆ ತೆರಳಿದರು..
ವಿದೇಶದಲ್ಲಿದ್ದರೂ ಸಿಧು ಮೂಸೆವಾಲಾ ಊರು ಮತ್ತು ಪಂಜಾಬಿನ ಸಂಸ್ಕೃತಿಯೊಂದಿಗಿನ ನಂಟನ್ನು ತಮ್ಮ ಸಂಗೀತದಲ್ಲಿ ಉಳಿಸಿಕೊಂಡರು. 2017ರಲ್ಲಿ ಸಿಧು ಮೂಸೆವಾಲಾ ಅವರ ಸಂಗೀತ ಪಯಣ ಹೊಸ ತಿರುವು ಪಡೆದುಕೊಂಡಿತು. ‘So High’ ಸೇರಿದಂತೆ ಅವರ ಆರಂಭಿಕ ಹಾಡುಗಳು ಯುವಜನರಲ್ಲಿ ವೇಗವಾಗಿ ಜನಪ್ರಿಯವಾದವು. ವಿಭಿನ್ನ ಧ್ವನಿ… ವಿಭಿನ್ನ ಶೈಲಿ… ಮತ್ತು ಪಂಜಾಬಿನ ಬದುಕಿನೊಂದಿಗೆ ಬೆಸೆದುಕೊಂಡ ಸಂಗೀತ. ಇವೆಲ್ಲವೂ ಸಿಧು ಅವರನ್ನು ವಿಶಿಷ್ಟ ಕಲಾವಿದನಾಗಿ ಗುರುತಿಸುವಂತೆ ಮಾಡಿತು. ಕೆಲವೇ ವರ್ಷಗಳಲ್ಲಿ ಅವರ ಹೆಸರು ಪಂಜಾಬಿನ ಗಡಿದಾಟಿ ಅಂತಾರಾಷ್ಟ್ರೀಯ ಸಂಗೀತ ಪ್ರೇಕ್ಷಕರಿಗೂ ತಲುಪಿತು.
ಮೂಸ್ ವಾಲಾ 2017 ರಲ್ಲಿ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದಾಗ ತಮ್ಮ ಮೊದಲ ಹಾಡು "ಜಿ ವ್ಯಾಗನ್" ಅನ್ನು ಬಿಡುಗಡೆ ಮಾಡಿದರು. ಬಳಿಕ ಸಂಗೀತ ನಿರ್ಮಾಪಕ ಬೈಗ್ ಬೈರ್ಡ್ ಅವರೊಂದಿಗೆ ಗ್ಯಾಂಗ್‌ಸ್ಟರ್ ರಾಪ್ "ಸೋ ಹೈ" ಹಾಡಿನೊಂದಿಗೆ ಸಿಧು ಮೂಸೆವಾಲಾ ಮತ್ತಷ್ಟು ಫೇಮಸ್ ಆದರು... ಈ ಹಾಡು ಅವರಿಗೆ ಬ್ರಿಟ್ ಏಷ್ಯಾ ಟಿವಿ ಸಂಗೀತ ಪ್ರಶಸ್ತಿ 2017 ರಲ್ಲಿ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಯನ್ನು ತಂದುಕೊಟ್ಟಿತು. ಇದರ ನಂತರ, ಅವರು ಸನ್ನಿ ಮಾಲ್ಟನ್ ಮತ್ತು ಬೈಗ್ ಬೈರ್ಡ್ ಅವರೊಂದಿಗೆ ಬ್ರೌನ್ ಬಾಯ್ಸ್ ರೆಕಾರ್ಡ್ಸ್‌ಗೆ ಸೇರಿದರು .
ಸಿಧು ಅವರು ಅಕ್ಟೋಬರ್ 2018 ರಲ್ಲಿ ತಮ್ಮ ಮೊದಲ ಆಲ್ಬಂ PBX 1 ಅನ್ನು ಬಿಡುಗಡೆ ಮಾಡಿದ್ದರು. ಇದು ಹಿಪ್-ಹಾಪ್ ಪ್ರಭಾವಗಳೊಂದಿಗೆ ಪಾಪ್ ಸಂಗೀತ ಪ್ರಕಾರವಾಗಿದೆ. ಈ ಆಲ್ಬಮ್ ಬಿಲ್ಬೋರ್ಡ್ ಕೆನಡಿಯನ್ ಆಲ್ಬಮ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 2019 ರ ಬ್ರಿಟ್ ಏಷ್ಯಾ ಟಿವಿ ಸಂಗೀತ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಆಲ್ಬಮ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಟ್ಟಿಗೆ ಮೂಸ್‌ಟೇಪ್ ಸೇರಿದಂತೆ ಅನೇಕ ಸಂಗೀತ ಕೃತಿಗಳು ವಿಶ್ವದಾದ್ಯಂತ ಪೇಮಸ್ ಆದವು...
ಫೆಬ್ರವರಿ 2019 ರಲ್ಲಿ ಮೂಸ್ ವಾಲಾ ತಮ್ಮದೇ ಆದ ರೆಕಾರ್ಡ್ ಲೇಬಲ್ ಅಡಿಯಲ್ಲಿ "ಲೆಜೆಂಡ್" ಅನ್ನು ಬಿಡುಗಡೆ ಮಾಡಿದರು. ಅದು ಆ ವರ್ಷ ಬ್ರಿಟ್ ಏಷ್ಯಾ ಟಿವಿ ಕುಫ್ಲಿಂಕ್ ಬೆಸ್ಟ್ ಟ್ರ್ಯಾಕ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅದೇ ತಿಂಗಳಲ್ಲಿ, ಅವರು "ಚೋಸೆನ್" ಮತ್ತು "ಔಟ್ಲಾ" ಆಲ್ಬಂಗಳನ್ನು ಬಿಡುಗಡೆ ಮಾಡಿದರು.. ಏಪ್ರಿಲ್‌ನಲ್ಲಿ "ಈಸ್ಟ್ ಸೈಡ್ ಫ್ಲೋ" ಅನ್ನು ಬಿಡುಗಡೆ ಮಾಡಿದರು, ಅದರ ನಂತರ ಅಮನ್ ಹೇಯರ್ ಅವರೊಂದಿಗೆ "ಮಾಫಿಯಾ ಸ್ಟೈಲ್" ಬಿಡುಗಡೆ ಮಾಡಿದರು. ಇದೇ ರೀತಿ ಮೂಸ್ ವಾಲಾ ಅವರು ಆಗಸ್ಟ್‌ನಲ್ಲಿ, ಬೊಹೆಮಿಯಾ ಜೊತೆ ಸೇರಿ "ಸೇಮ್ ಬೀಫ್" ಹಾಡನ್ನು ಬಿಡುಗಡೆ ಮಾಡಿದರು, ಇದು ನಿರೀಕ್ಷೆಗೂ ಮೀರಿದ ಭಾರೀ ಯಶಸ್ಸನ್ನು ಕಂಡಿತು.
ಸಂಗೀತ ಪ್ರಕಾಶಕರಾದ ಹಂಬಲ್ ಮ್ಯೂಸಿಕ್‌ನೊಂದಿಗೆ ಹಲವಾರು ಯಶಸ್ವಿ ಹಾಡುಗಳನ್ನು ಮೂಸ್ ವಾಲಾ ಬಿಡುಗಡೆ ಮಾಡಿದರು. ಇದಾದ ನಂತರ 2018 ರಲ್ಲಿ ಸ್ವತಂತ್ರವಾಗಿ ಹಾಡುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದರು... ಈ ಮಧ್ಯೆ ಗಾಯಕ ಸಿಧು ಮೂಸೆವಾಲಾ ಅವರಿಗೆ ನಟನೆಯಲ್ಲೂ ಹಲವು ಅವಕಾಶಗಳು ಸಿಕ್ಕಿತು.. ಆದ್ರೆ ಅವರ ರಾಜಕೀಯ ಪ್ರವೇಶವೇ ಜೀವನಕ್ಕೆ ದುರಂತ ತಿರುವು ತಂದುಕೊಟ್ಟಿತು..
ಸಂಗೀತಾ ಕ್ಷೇತ್ರದ ಉದಯೋನ್ಮಖ ಪ್ರತಿಭೆ ಸಿಧು ಮೂಸೆವಾಲಾ ಅವರು ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟರು. ಇದರ ಜೊತೆಗೆ ಸಿಧು ಸಾರ್ವಜನಿಕ ಜೀವನದಲ್ಲೂ ಹೆಜ್ಜೆ ಇಟ್ಟರು. 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನ್ಸಾ ಕ್ಷೇತ್ರದಿಂದ ಸಿಧು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಇದು ಅವರ ಜೀವನದ ಮತ್ತೊಂದು ಹೊಸ ಅಧ್ಯಾಯವಾಗಿತ್ತು. ಆದರೆ ಈ ಅಧ್ಯಾಯ ಹೆಚ್ಚು ಕಾಲ ಮುಂದುವರಿಯಲಿಲ್ಲ. ಅವರ ರಾಜಕೀಯ ಪ್ರವೇಶವೇ ದುರಂತ ಅಂತ್ಯಕ್ಕೆ ಕಾರಣವಾಯ್ತು...
ಮೂಸ್ ವಾಲಾ ತಮ್ಮದೇ ನಿರ್ಮಾಣ ಸಂಸ್ಥೆ ಜಾಟ್ ಲೈಫ್ ಸ್ಟುಡಿಯೋಸ್ ಅಡಿಯಲ್ಲಿ ಯೆಸ್ ಐ ಆಮ್ ಸ್ಟೂಡೆಂಟ್ ಚಿತ್ರದ ಮೂಲಕ ಪಂಜಾಬಿ ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ತರ್ಣ್‌ವೀರ್ ಸಿಂಗ್ ಜಗ್ಪಾಲ್ ನಿರ್ದೇಶಿಸಿದ್ದಾರೆ ಮತ್ತು ಗಿಲ್ ರೌಂಟಾ ಬರೆದಿದ್ದಾರೆ. ಗಾಯನದ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಮೂಸೆವಾಲಾ ತಮ್ಮ ಜರ್ನಿಯನ್ನ ಪ್ರಾರಂಭಿಸಿದರು..
ಸಂಗೀತದ ಜೊತೆಗೆ ಸಿಧು ಮೂಸ್ ವಾಲಾ ಅವರು ಸಿನಿ ರಂಗಕ್ಕೂ ಪಾದಾರ್ಪಣೆ ಮಾಡಿದ್ದರು.. 2019 ರಲ್ಲಿ ತೇರಿ ಮೇರಿ ಜೋಡಿ ಸಿನಿಮಾದಲ್ಲಿ ಸಿಧು ಅತಿಥಿ ಪಾತ್ರದಲ್ಲಿ ನಟಿಸಿದರು. ಬಳಿಕ 2021ರಲ್ಲಿ ಯೆಸ್ ಐ ಆಮ್ ಸ್ಟೂಡೆಂಟ್ ಚಿತ್ರದ ಮೂಲಕ ನಟನಾಗಿ ಪಂಜಾಬಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು.. ಅದೇ ವರ್ಷ ಮೂಸಾ ಜಾಟ್ ಸಿನಿಮಾದಲ್ಲೂ ಸಿಧು ಕಾಣಿಸಿಕೊಂಡಿದ್ದಾರೆ.. 2022ರಲ್ಲಿ ಜತ್ತನ್ ದ ಮುಂಡಾ ಗೌನ್ ಲಗ್ಯಾಎಂಬ ಸಿನಿಮಾದಲ್ಲಿ ಸಿಧು ಮೂಸ್ ವಾಲಾ ನಟಿಸಿದ್ದಾರೆ..
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ವಿಶಿಷ್ಟ ಹಾಡುಗಾರಿಕೆ ಅನೇಕ ಪ್ರಶಸ್ತಿಗಳು ಲಭಿಸಿದೆ... ಬ್ರಿಟ್ ಏಷ್ಯಾ ಟಿವಿ ಮ್ಯೂಸಿಕ್ ಪ್ರಶಸ್ತಿ, Best Newcomer Male award, ಪಿಟಿಸಿ ಪಂಜಾಬಿ ಮ್ಯೂಸಿಕ್ ಪ್ರಶಸ್ತಿ, ಅತ್ಯುತ್ತಮ ಪುರುಷ ಗಾಯಕ ಪ್ರಶಸ್ತಿ ಹಾಗೂ MTV ಯುರೋಪ್ ಮ್ಯೂಸಿಕ್ ಪ್ರಶಸ್ತಿ ಲಭಿಸಿದೆ.. ಇದರೊಟ್ಟಿಗೆ ಅವರ ಸಂಗೀತಾ ಸಾಧನೆ ಸ್ಮರಣೆಯಾಗಿ ಮರಣೋತ್ತರ ದಾದಾಸಾಹೇಬ್ ಫಾಲ್ಕೆ ಐಕಾನಿಕ್ ಅವಾರ್ಡ್ ಹಾಗೂ ವಾರಿಸ್ ಶಾ ಅಂತರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ
ಸಿಧು ಮೂಸೆವಾಲಾ ಅವರ ಸಾರ್ವಜನಿಕ ಚಿತ್ರಣವು ಸಂಕೀರ್ಣ ಮತ್ತು ವಿವಾದಾತ್ಮಕವಾಗಿತ್ತು. ಪ್ರಸಿದ್ಧ ಸಂಗೀತ ಐಕಾನ್ ಆಗಿ, ಅವರು ತಮ್ಮ ವಿಶಿಷ್ಟ ಶೈಲಿ ಮತ್ತು ವಿಶ್ವಾಸಾರ್ಹತೆಗಾಗಿ ಮೆಚ್ಚುಗೆ ಪಡೆದರು. ಆದಾಗ್ಯೂ, ಅವರ ಸಾಹಿತ್ಯವು ಆಗಾಗ್ಗೆ ವಿವಾದವನ್ನು ಹುಟ್ಟುಹಾಕಿತು. ಅವರ ಹಾಡುಗಳನ್ನ ವಿಮರ್ಶಕರು ಹಿಂಸೆಯನ್ನು ಉತ್ತೇಜಿಸುತ್ತಿದ್ದಾರೆ ಅಂತ ಆರೋಪಿಸಿದರು. ಇದರ ಹೊರತಾಗಿಯೂ, ಸಿಧು ಮೂಸ್ ವಾಲಾ ದೃಢವಾಗಿ ಉಳಿದರು ಮತ್ತು ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಂಡರು. ತರುವಾಯ ಪಂಜಾಬಿ ಸಂಗೀತದ ಮೇಲೆ ಶಾಶ್ವತವಾದ ಪ್ರಭಾವ ಬೀರಿದರು.
ಸಂಗೀತದ ನಂತರ ಸಿಧು ಸಾರ್ವಜನಿಕ ಜೀವನದಲ್ಲೂ ಹೆಜ್ಜೆ ಇಟ್ಟರು. ಡಿಸೆಂಬರ್ 2018ರಲ್ಲಿ ಮೂಸಾ ಅವರು ಸರ್ಪಂಚ್ ಚುನಾವಣೆಯಲ್ಲಿ ಗೆದ್ದ, ತಮ್ಮ ತಾಯಿ ಚರಣ್ ಕೌರ್ ಪರವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದರು. ಬಳಿಕ ಮೂಸ್ ವಾಲಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಮೂಸ್ ವಾಲಾ ಅವರು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು INC ಸೇರಿದರು. ಆದ್ರೆ ಸಿಧು ಮಾನ್ಸಾ ಕ್ಷೇತ್ರದಲ್ಲಿ ಕೇವಲ 20.52% ಮತಗಳನ್ನ ಪಡೆದು ಆಮ್ ಆದ್ಮಿ ಪಕ್ಷದ ವಿಜಯ್ ಸಿಂಗ್ಲಾ ವಿರುದ್ಧ 63,323 ಮತಗಳ ಅಂತರದಿಂದ ಸೋತರು.. ಬಳಿಕ ಮೂಸ್ ವಾಲಾ "ಸ್ಕೇಪ್‌ಗೋಟ್" ಎಂಬ ಹಾಡನ್ನು ಬಿಡುಗಡೆ ಮಾಡಿದರು, ಅದರಲ್ಲಿ ಅವರು 2022 ರ ಚುನಾವಣೆಯಲ್ಲಿನ ತಮ್ಮ ವೈಫಲ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು.
2022ರ ಮೇ 29... ಗಾಯಕ ಸಿಧು ಮೂಸೆವಾಲಾ ಬದುಕಿನ ಕರಾಳ ದಿನವಾಗಿತ್ತು... ಪಂಜಾಬಿ ಸಂಗೀತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಗಾಯಕ ಸಿಧು ಮೂಸೆವಾಲಾ ಅವರ ಬದುಕು 2022ರ ಮೇ 29ರಂದು ದುರಂತ ಅಂತ್ಯ ಕಂಡಿತು. 28ನೇ ವಯಸ್ಸಿನ ಯುವಕ ಸಿಧು ಹತ್ಯೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಸಿಧು ಹತ್ಯೆಗೆ ಹಲವು ವರ್ಷಗಳಾದರೂ ಪ್ರಕರಣದ ಕಾನೂನು ಪ್ರಕ್ರಿಯೆ ಇನ್ನೂ ಮುಂದುವರಿಯುತ್ತಿದೆ. 2026ರ ಸೆಪ್ಟೆಂಬರ್‌ನಲ್ಲಿಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗಳು ನಡೆಯುತ್ತಲೇ ಇವೆ....
ಪಂಜಾಬಿ ಸಂಗೀತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಗಾಯಕ ಸಿಧು ಮೂಸೆವಾಲಾ ಬದುಕು 2022ರ ಮೇ 29ರಂದು ದುರಂತ ಅಂತ್ಯ ಕಂಡಿತು. ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಸಮೀಪ ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ ದುರಂತ ಅಂತ್ಯ ಕಂಡಿದ್ದಾರೆ..
ತನ್ನ ಸೋದರ ಸಂಬಂಧಿಯೊಂದಿಗೆ ಬರ್ನಾಲಾದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೊರಟ್ಟಿದ್ದರು.. ಡ್ರೈವಿಂಗ್ ಸೀಟಿನಲ್ಲಿದ್ದರು. ಜವಾಹರ್ಕೆ ತಲುಪಿದಾಗ, ದಿಢೀರ್ ಎರಡು ಕಾರುಗಳು ಇವರ ಕಾರನ್ನ ಅಡ್ಡಗಟ್ಟಿದವು. ಬಳಿಕ ದುಷ್ಕರ್ಮಿಗಳು ಮೂವತ್ತು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡಿನ ಚಕಮಕಿ ನಂತರ, ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸಿಧು ಮೂಸೆವಾಲಾರನ್ನ ಆಸ್ಪತ್ರೆಗೆ ದಾಖಲಿಸಲಾಯ್ತು.. ಆದ್ರೆ ದುರಾದೃಷ್ಟವಶಾತ್ ಗಾಯಕ ಸಿಧು ಸಾವನ್ನಪ್ಪಿದ್ದಾರೆ ಅಂತ ವೈದ್ಯರು ದೃಢಪಡಿಸಿದರು.
ವರದಿಗಳ ಪ್ರಕಾರ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ಮೂಸೆವಾಲಾ ಸೇರಿದಂತೆ, 424 ಜನರ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು.. ಭದ್ರತೆ ಹಿಂಪಡೆದ ಕೇವಲ ಒಂದು ದಿನದ ನಂತರ ಸಿಧು ಮೂಸೆವಾಲಾ ಮೇಲೆ ಭೀಕರ ದಾಳಿ ನಡೆದಿದೆ ಅಂತ ಹೇಳಲಾಗ್ತಿದೆ... ಆಪರೇಷನ್ ಬ್ಲೂ ಸ್ಟಾರ್ ವಾರ್ಷಿಕೋತ್ಸವದ ತಯಾರಿಯಲ್ಲಿ ಪೊಲೀಸ್ ಭದ್ರತೆಯನ್ನು ಕಡಿಮೆ ಮಾಡಲಾಗಿತ್ತು.. ಸಂಪೂರ್ಣವಾಗಿ ಭದ್ರತೆಯನ್ನ ತೆಗೆದುಹಾಕಲಾದ 424 ಜನರಲ್ಲಿ ಮೂಸೆವಾಲಾ ಕೂಡ ಇದ್ದರು. ಇದರಿಂದಾಗಿ ಅವರಿಗೆ ಹಿಂದಿನ ನಾಲ್ವರು ಬದಲಿಗೆ ಇಬ್ಬರು ಕಮಾಂಡೋಗಳು ಇದ್ದರು. ಘಟನೆಯ ಸಮಯದಲ್ಲಿ, ಮೂಸ್ ವಾಲಾ ಕಮಾಂಡೋಗಳು ತನ್ನ ಗುಂಡು ನಿರೋಧಕ ವಾಹನದ ಬದಲಿಗೆ ತಮ್ಮ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಅಂತ ಹೇಳಲಾಗಿದೆ...
ಸಿಧು ಮೂಸೆವಾಲಾ ಅವರ ಶವಪರೀಕ್ಷೆಯನ್ನ ಐವರು ವೈದ್ಯರ ತಂಡ ನಡೆದಿದೆ. ಮರಣೋತ್ತರ ವರದಿಗಳ ಪ್ರಕಾರ, ಮೂಸ್ ವಾಲಾ ಅವರ ದೇಹದಲ್ಲಿ 19 ಗುಂಡುಗಳ ಗಾಯಗಳಾಗಿತ್ತು... ಗುಂಡೇಟಿನಿಂದ ಗಾಯಗೊಂಡ 15 ನಿಮಿಷಗಳಲ್ಲಿ ಅವರು ಸಾವನ್ನಪ್ಪಿದರು ಅಂತ ತಿಳಿದುಬಂದಿದೆ... ಬಳಿಕ ಮೂಸ್ ವಾಲಾ ಅವರನ್ನು ಪೂರ್ವಜರ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಅವರ ಕೃಷಿಭೂಮಿಯಲ್ಲಿ ಅವರ ಅಂತ್ಯಕ್ರಿಯೆಯನ್ನ ನಡೆಸಲಾಯಿತು.
ಇನ್ನು ಪಂಜಾಬಿ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳನ್ನ ಬಂಧಿಸಲಾಗಿದೆ. ದೆಹಲಿ ಪೊಲೀಸರು ಆರೋಪಿ ಅಂಕಿತ್ ಸಿರ್ಸಾನನ್ನ ಬಂಧಿಸಿದ್ದಾರೆ. ಇತ್ತ ಮನ್ಪ್ರೀತ್ ಮನ್ನು ಮತ್ತು ಜಗೃಪ್ ರೂಪಾ ಅವರನ್ನು ಪಂಜಾಬ್ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.. ಮತ್ತೋರ್ವ ತಲೆಮರೆಸಿಕೊಂಡಿದ್ದ ಶೂಟರ್ ದೀಪಕ್ ಮುಂಡಿಯನ್ನು ಕೂಡ ಅರೆಸ್ಟ್ ಮಾಡ್ಲಾಗಿದೆ...
2022ರ ಮೇ 29ರಂದು ಸಿಧು ಮೂಸೆವಾಲಾ ಅವರ ಜೀವನದಲ್ಲಿ ನಡೆದ ಘಟನೆ ದೇಶಾದ್ಯಂತ ಸುದ್ದಿಯಾಯಿತು. ಸಂಗೀತ ಕ್ಷೇತ್ರದಲ್ಲಿ ಇನ್ನೂ ಹಲವು ಅಧ್ಯಾಯಗಳನ್ನು ಬರೆಯಬೇಕಿದ್ದ ಯುವ ಕಲಾವಿದನ ಜೀವನ ಅಕಾಲಿಕವಾಗಿ ಅಂತ್ಯಗೊಂಡಿತು. ಆದರೆ ಅವರ ನಿಧನದೊಂದಿಗೆ ಅವರ ಸಂಗೀತ ನಿಲ್ಲಲಿಲ್ಲ.ಅವರ ಹಾಡುಗಳು ಮುಂದುವರಿದವು.ಅವರ ಧ್ವನಿ ಅಭಿಮಾನಿಗಳ ನಡುವೆ ಉಳಿಯಿತು. ಮೂಸಾ ಗ್ರಾಮದ ಮಣ್ಣಿನಿಂದ ಆರಂಭವಾದ ಅವರ ಪಯಣ, ವಿಶ್ವದ ವಿವಿಧ ಭಾಗಗಳಲ್ಲಿರುವ ಅಭಿಮಾನಿಗಳವರೆಗೆ ತಲುಪಿತು.. ಆದ್ರೆ ಸಿಧು ಹತ್ಯೆ ನಡೆದು ಹಲವು ವರ್ಷಗಳಾದರೂ ಪ್ರಕರಣದ ಕಾನೂನು ಪ್ರಕ್ರಿಯೆ ಇನ್ನೂ ಕೂಡ ಮುಂದುವರಿಯುತ್ತಿದೆ...
ಒಬ್ಬ ಯುವಕನ ಕನಸು… ಒಬ್ಬ ಕಲಾವಿದನ ಧ್ವನಿ ಮತ್ತು ಅಪೂರ್ಣವಾಗಿ ಉಳಿದ ಒಂದು ಪಯಣ... ಇದು ಸಿಧು ಮೂಸೆವಾಲಾ ಅವರ ಜೀವನವನ್ನ ನಮಗೆ ನೆನಪಿಸುತ್ತದೆ. ಸಮಯ ಕಡಿಮೆಯಾದರೂ, ಒಬ್ಬ ಕಲಾವಿದ ತನ್ನ ಕಲೆ ಮೂಲಕ ದೀರ್ಘಕಾಲದ ಗುರುತು ಮೂಡಿಸಬಹುದು ಎಂಬುದನ್ನ ಸಿಧು ತೋರಿಸಿದ್ದಾರೆ.. ಅವರ ಜೀವನ ಚಿಕ್ಕದಾಗಿದ್ದರೂ, ಸಂಗೀತ ಕ್ಷೇತ್ರದಲ್ಲಿ ಅವರು ಮೂಡಿಸಿದ ಗುರುತು ಇಂದಿಗೂ ಉಳಿದಿದೆ..