• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಪವಿತ್ರಾಗೌಡಗೆ ಜೀವ ಬೆದರಿಕೆ ಆ ಗ್ಯಾಂಗ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಕಣ್ಣೀರು

ಪವಿತ್ರಾಗೌಡಗೆ ಜೀವ ಬೆದರಿಕೆ ಆ ಗ್ಯಾಂಗ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಕಣ್ಣೀರು

Pavithra gowda threat: ವಿಚಾರಣೆ ವೇಳೆ ಜೈಲಿನಲ್ಲಿ ಆ ಗ್ಯಾಂಗ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಕಣ್ಣೀಟ್ಟಿರಿದ್ದಾರೆ. ಅತ್ತ‌ ಪ್ರದೋಷ್ ಮಾಫಿ‌ ಸಾಕ್ಷಿ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Written ByRamya. R. Gowda
Published: Sep 22, 2026, 05:33 PM IST|Updated: Sep 22, 2026, 05:37 PM IST
joinshare
ಪವಿತ್ರಾಗೌಡಗೆ ಜೀವ ಬೆದರಿಕೆ ಆ ಗ್ಯಾಂಗ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಕಣ್ಣೀರು

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

 Pavithra gowda threat: ಪರಪ್ಪನ ಅಗ್ರಹಾರದಲ್ಲಿರೋ ಪವಿತ್ರಾ ಗೌಡ ಬೇಲ್ ಹಾಕಿ ಅರ್ಜಿ ಹಾಕಿದ್ದಾರೆ. ವಿಚಾರಣೆ ವೇಳೆ ಜೈಲಿನಲ್ಲಿ ಆ ಗ್ಯಾಂಗ್ ಕಾಟಕ್ಕೆ ಬೇಸತ್ತು ಜಡ್ಜ್ ಮುಂದೆ ಕಣ್ಣೀಟ್ಟಿರಿದ್ದಾರೆ. ಅತ್ತ‌ ಪ್ರದೋಷ್  ಮಾಫಿ‌ ಸಾಕ್ಷಿ ಆದೇಶ ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ ಪವಿತ್ರಾಗೌಡಗೆ ಜೀವ ಬೆದರಿಕೆ ಹಾಕಲಾಗ್ತಿದೆಯಂತೆ. ಕಳೆದ ಕೆಲ ತಿಂಗಳಿಂದ ಪವಿತ್ರಾಗೌಡ 30 ಮಂದಿ ಕೈದಿಗಳಿರುವ ಬ್ಯಾರಕ್ ನಲ್ಲಿದ್ದಾರೆ. ಇದೇ ಬ್ಯಾರಕ್ ನಲ್ಲಿ ನೈಜೀರಿಯಾ ಮೂಲದ ಆರೋಪಿಗಳು ಸಹ ಇದ್ದು, ಅವರ ಕಾಟಕ್ಕೆ ಪವಿತ್ರಾಗೌಡ ರೋಸಿ ಹೋಗಿದ್ದಾರೆ. ಪ್ರತ್ಯೇಕ ಬ್ಯಾರಕ್ ಗೆ ಶಿಫ್ಟ್ ಮಾಡಿ ಅಂತ ಜಡ್ಜ್ ಮುಂದೆ ಗಳಗಳನೇ ಅತ್ತಿದ್ದಾರೆ.

ಇವತ್ತು 59ನೇ ಸಿಸಿಹೆಚ್ ಕೋರ್ಟ್ ನಲ್ಲಿ ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಪರಪ್ಪನ ಅಗ್ರಹಾರದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಪವಿತ್ರಾ ಗೌಡ ಹಾಜರಾಗಿದ್ರು. ಜಡ್ಜ್ ಮುಂದೆ ಹಾಜರಾದ ಪವಿತ್ರಾ ಗೌಡ ಗಳಗಳನೇ ಕಣ್ಣೀರಿಟ್ಟಿದ್ದಾರೆ. ದಯಮಾಡಿ ಪ್ರತ್ಯೇಕ ಬ್ಯಾರಕ್ ನೀಡುವಂತೆ ಮನವಿ ಮಾಡಿದರು.

ಪವಿತ್ರಾಗೌಡ ಪರ ವಾದ ಮಾಡಿ ವಕೀಲ ನಾರಾಯಣಸ್ವಾಮಿ, ಜೈಲಿನಲ್ಲಿ ಪವಿತ್ರಾಗೌಡಗೆ ನೀಡುತ್ತಿರುವ ಕಿರುಕುಳ ಬಗ್ಗೆ ವಕೀಲರು ಕೋರ್ಟ್ ಗಮನಕ್ಕೆ ತಂದರು. ಪವಿತ್ರಾಗೌಡಗೆ ಪ್ರತ್ಯೇಕ ಬ್ಯಾರಕ್ ಕೇಳಲಾಗಿತ್ತು. ಕೋರ್ಟ್ ಸೂಚನೆ ಬಳಿಕ ಅಧಿಕಾರಿಗಳು ನೈಜೀರಿಯಾ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅದ್ರೆ ಈಗಬೆದರಿಕೆಯ ನೈಜೀರಿಯಾ ಆರೋಪಿಗಳು ಪವಿತ್ರಗೌಡಗೆ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲರೆ  ಜೈಲಿನಲ್ಲಿ ಭೇಟಿಗೆ ತೆರಳಿದ್ದ ವೇಳೆ ಜೈಲಿನ ವ್ಯವಸ್ಥೆ ಬಗ್ಗೆ ಬೇಸತ್ತು ತೊಟ್ಟು ವಿಷ ಕೊಡಿ ಅಂತಿದ್ದಾರೆ ಅಂತಾ ಕೋರ್ಟ್ ಗೆ ಮಾಹಿತಿ ನೀಡಿದರು.


ಪವಿತ್ರಾಗೌಡ ಮನವಿ ಹಿನ್ನೆಲೆ, ಜೈಲಾಧಿಕಾರಿಗಳಿಗೆ  ಸೆ.26ರ ಒಳಗೆ ವರದಿ ನೀಡಲು ಕೋರ್ಟ್ ಸೂಚನೆ ನೀಡಿದೆ. ವರದಿ ಬಳಿಕ ಕ್ರಮನಾಳೆ ತೆಗೆದುಕೊಳ್ಳುವುದಾಗಿ ನ್ಯಾಯಾಧೀಶರು ತಿಳಿಸಿದ್ರು .ಅಲ್ಲದೆ ಪವಿತ್ರಾ ಗೌಡ ಜಾಮೀನು ಅರ್ಜಿ ವಾದ ಆಲಿಸಿದ ಕೋರ್ಟ್ ನಾಳೆಗೆ ಮುಂದೂಡಿದೆ.

ಕೊಲೆ ಪ್ರಕರಣದಲ್ಲಿ ಮಾಫಿಸಾಕ್ಷಿ ತನಿಖೆಗೆ ಸಾಕ್ಷಿ ಹೇಳಿಕೆ ದಾಖಲು ಮಾಡದಂತೆ ತಡೆ ಕೋರಿ ದರ್ಶನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಫಿ ಸಾಕ್ಷಿತನಿಖೆಗೆ ಪ್ರದೂಷ್ ಮೇಲೆ ಆರೋಪ ಕೇಳಿ ಬಂದಿದೆ. ಜೈಲಾಧಿಕಾರಿಗಳ ಬಳಿ ಬದಲಿ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಮಾಫಿ ಸಾಕ್ಷಿಗೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದು, ತನಿಖೆ ಮುಕ್ತಾಯ ಆಗುವವರೆಗೂ ಮಾಫಿ ಸಾಕ್ಷಿ ದಾಖಲು ಮಾಡದಂತೆ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ದರ್ಶನ್ ಹೈಕೊರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ದರ್ಶನ್ ಅರ್ಜಿ ನಾಳೆ ವಿಚಾರಣೆಗೆ ಬರಲಿದ್ದು, ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮತ್ತೊಂದು ಬ್ಯಾರಕ್‌ಗೆ ಸ್ಥಳಾಂತರ
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ, ತನ್ನನ್ನು ಬೇರೆ ಸೆಲ್ ಮತ್ತು ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಸಲ್ಲಿಸಿದ ಇತ್ತೀಚಿನ ಮನವಿಯ ಮೇರೆಗೆ , ನ್ಯಾಯಾಲಯವು ಅವರ ಕೋರಿಕೆಯನ್ನು ಪುರಸ್ಕರಿಸಿದೆ. ಜೈಲು ಅಧಿಕಾರಿಗಳು ಆಕೆಯನ್ನು ಬೇರೆ ನಾಲ್ಕು ಕೈದಿಗಳಿರುವ ಮತ್ತೊಂದು ಬ್ಯಾರಕ್‌ಗೆ ಸ್ಥಳಾಂತರಿಸಿದ್ದಾರೆ.

ಆಕೆಯನ್ನು ಮೊದಲು 30 ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿತ್ತು. ಆಕೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನೂ ಸಲ್ಲಿಸಿದ್ದರು, ಮತ್ತು ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಪ್ರದೋಷ್ ಎಸ್ ರಾವ್ ಅವರ ಅನುಮೋದನಾ ಹೇಳಿಕೆಯನ್ನು ದಾಖಲಿಸುವ ದಿನಾಂಕವನ್ನು ನ್ಯಾಯಾಲಯವು ಮಂಗಳವಾರಕ್ಕೆ ಮುಂದೂಡಿತು. ಪವಿತ್ರಾ ನಾಲ್ಕನೇ ಬಾರಿಗೆ ಜಾಮೀನಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇತ್ತೀಚಿನ ಅರ್ಜಿಯನ್ನು ಸೆಪ್ಟೆಂಬರ್ 16 ರಂದು ಸಲ್ಲಿಸಲಾಗಿದೆ.
 

Add Zee News as a Preferred Source
TAGS:
Cinema