• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ನಾನು ಆ ದೊಡ್ಡ ತಪ್ಪು ಮಾಡಿಬಿಟ್ಟೆ..! ನಟಿ ದಿವ್ಯ ಭಾರತಿ ಮಾತು ಕೇಳಿ ಫ್ಯಾನ್ಸ್‌ ಭಾವುಕ

ನಾನು ಆ ದೊಡ್ಡ ತಪ್ಪು ಮಾಡಿಬಿಟ್ಟೆ..! ನಟಿ ದಿವ್ಯ ಭಾರತಿ ಮಾತು ಕೇಳಿ ಫ್ಯಾನ್ಸ್‌ ಭಾವುಕ

Reported ByKrishna NKEdited ByKrishna NK
Published: Sep 25, 2026, 09:06 PM IST|Updated: Sep 25, 2026, 09:12 PM IST
joinshare

Actress Divya Bharathi : ಯುವ ನಟಿ ದಿವ್ಯ ಭಾರತಿ ಅವರ ಇತ್ತೀಚಿನ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತಮ್ಮ ಕೆರಿಯರ್ ಆರಂಭದ ತಪ್ಪಿನ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ, ತಾವು ಮಾಡಿದ ಒಂದು ದೊಡ್ಡ ತಪ್ಪಿನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.. ಅಸಲಿಲಗೆ ದಿವ್ಯ ಮಾಡಿದ ಆ ತಪ್ಪೇನು..? ಇಲ್ಲಿದೆ ಒಂದು ವರದಿ.

actress1/6

ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ದಿವ್ಯ ಭಾರತಿ ಅವರಿಗೆ ತಡವಾಗಿ ತಪ್ಪಿನ ಅರಿವಾಗಿದ್ದರೂ, ಈಗ ದಿವ್ಯ ಭಾರತಿ ಸೌತ್‌ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ 'ಮಹಾರಾಜ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರು, ಪ್ರಸ್ತುತ 'ಕಿಂಗ್ಸ್‌ಟನ್' ಹಾಗೂ ಕೆಲವು ತೆಲುಗು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ.
actress2/6

ಕಾಯುವಿಕೆಯಲ್ಲೇ ಕಳೆದುಹೋಯ್ತು ಅಮೂಲ್ಯ ಸಮಯ

ಕೆರಿಯರ್‌ ಆರಂಭದಲ್ಲಿ ಕಾಯುತ್ತಾ ಸಮಯ ಹಾಳು ಮಾಡಿಕೊಂಡೆ ಎಂದ ದಿವ್ಯ ಭಾರತಿ.. "ಉತ್ತಮ ಅವಕಾಶಗಳು ಸಿಗುತ್ತವೆ ಎಂದು ನಾನು ಕಾಯುತ್ತಲೇ ಕುಳಿತೆ. ಈಗ ಹಿಂತಿರುಗಿ ನೋಡಿದರೆ, ನಾನು ಅನಗತ್ಯವಾಗಿ ತುಂಬಾ ಸಮಯ ಕಾದೆ ಎನಿಸುತ್ತದೆ. ಇದರಿಂದಾಗಿ ನನ್ನ ಸಿನಿ ಪಯಣ ಕೂಡ ಕೊಂಚ ತಡವಾಯಿತು," ಎಂದು ಅವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
Actress3/6

ಅತಿಯಾದ ಆತ್ಮವಿಶ್ವಾಸವಲ್ಲ, ತಿಳಿವಳಿಕೆಯ ಕೊರತೆ

ಯಾವುದೇ ಗಾಡ್‌ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದ ಅನುಭವ ಹಂಚಿಕೊಂಡ ನಟಿ.. "ನನಗೆ ಚಿತ್ರರಂಗದ ಯಾವುದೇ ಹಿನ್ನೆಲೆ ಇರಲಿಲ್ಲ. ಸಿನಿಮಾ ಇಂಡಸ್ಟ್ರಿ ಹೀಗೆಯೇ ಕೆಲಸ ಮಾಡುತ್ತದೆ ಎಂದು ನಾನು ನಂಬಿದ್ದೆ. ಅದು ನನ್ನ ಪ್ರತಿಭೆಯ ಮೇಲಿನ ಅತಿಯಾದ ಆತ್ಮವಿಶ್ವಾಸವಾಗಿರಲಿಲ್ಲ, ಬದಲಿಗೆ ಸಿನಿ ರಂಗದ ಬಗ್ಗೆ ಇದ್ದ ಅರಿವಿನ ಕೊರತೆ. ನಾನೇ ಮುಂದೆ ನಿಂತು ಜನರನ್ನು ಭೇಟಿಯಾಗಬೇಕಿತ್ತು," ಎಂದು ದಿವ್ಯ ಸ್ಪಷ್ಟಪಡಿಸಿದ್ದಾರೆ.
Actress4/6

ಅಂದುಕೊಂಡಿದ್ದೇ ತಪ್ಪು

ತಮ್ಮ ಸಿನಿ ಪಯಣದಲ್ಲಿ ಮಾಡಿಕೊಂಡ ದೊಡ್ಡ ತಪ್ಪಿನ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡ ದಿವ್ಯ. "'ಬ್ಯಾಚುಲರ್' ಸಿನಿಮಾ ಸೂಪರ್ ಹಿಟ್ ಆದ ಮೇಲೆ ಅವಕಾಶಗಳು ನನ್ನನ್ನು ಹುಡುಕಿಕೊಂಡು ತಾನಾಗಿಯೇ ಬರುತ್ತವೆ ಎಂದು ಭಾವಿಸಿದ್ದೆ. ಆದರೆ, ಸಿನಿಮಾ ರಂಗದಲ್ಲಿ ಸಂಪರ್ಕ ಬೆಳೆಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ನನಗೆ ಆಗ ತಿಳಿಯಲಿಲ್ಲ," ಎಂದಿದ್ದಾರೆ.
actress5/6

ದಿವ್ಯ ಕೇರಿಯರ್‌ ಹೈಪ್‌ ನೀಡಿದ "ಬ್ಯಾಚುಲರ್‌"

ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಿವ್ಯ ಭಾರತಿ, 2017ರಲ್ಲಿ 'ಮುಪ್ಪರಿಮಾನಮ್' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಆದರೆ, ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಜಿ.ವಿ. ಪ್ರಕಾಶ್ ಕುಮಾರ್ ನಟನೆಯ 'ಬ್ಯಾಚುಲರ್' ಸಿನಿಮಾ.
Actress6/6

'ಬ್ಯಾಚುಲರ್' ಬ್ಯೂಟಿ ದಿವ್ಯ ಭಾರತಿ

ತಮಿಳು ಸುಂದರಿ ಧಿವ್ಯ 'Bachelor' ಸಿನಿಮಾ ಮೂಲಕ ನಾಯಕಿಯಾಗಿ ಸೌತ್‌ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದರು. ತಮ್ಮ ನಟನೆ, ಅದ್ಭುತ ಸೌಂದರ್ಯದ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದರು.
TAGS:
Cinema

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.