• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ದರ್ಶನ್‌ಗೆ "ಪ್ರದೋಷ್‌" ಕಂಟಕ : ಸೆ.28ಕ್ಕೆ ಕೋರ್ಟ್‌ ಮುಂದೆ ಅಸಲಿ ಸತ್ಯ ಬಿಚ್ಚಿಡಲಿರುವ ಆರೋಪಿ

ದರ್ಶನ್‌ಗೆ "ಪ್ರದೋಷ್‌" ಕಂಟಕ : ಸೆ.28ಕ್ಕೆ ಕೋರ್ಟ್‌ ಮುಂದೆ ಅಸಲಿ ಸತ್ಯ ಬಿಚ್ಚಿಡಲಿರುವ ಆರೋಪಿ

ನಟ ದರ್ಶನ್‌ಗೆ ಮತ್ತೊಮ್ಮೆ ಪ್ರಮುಖ ಕಾನೂನು ಸಂಕಷ್ಟ ಎದುರಾಗಿದೆ. ಆರೋಪಿ ಪ್ರದೋಷ್‌ 'ಮಾಫಿ ಸಾಕ್ಷಿ' (ಅಪ್ರೂವರ್) ಆಗಲು ನಿರ್ಧರಿಸಿದ್ದು, ಅವರ ಅಧಿಕೃತ ಹೇಳಿಕೆ ದಾಖಲಿಸಲು 59ನೇ ಸಿಸಿಹೆಚ್ ನ್ಯಾಯಾಲಯವು ದಿನಾಂಕ ನಿಗದಿಪಡಿಸಿ ಸಮನ್ಸ್ ನೀಡಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Sep 24, 2026, 04:20 PM IST|Updated: Sep 24, 2026, 04:24 PM IST
joinshare
ದರ್ಶನ್‌ಗೆ "ಪ್ರದೋಷ್‌" ಕಂಟಕ : ಸೆ.28ಕ್ಕೆ ಕೋರ್ಟ್‌ ಮುಂದೆ ಅಸಲಿ ಸತ್ಯ ಬಿಚ್ಚಿಡಲಿರುವ ಆರೋಪಿ
Image Credit: Actor Darshan Case

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಇದೀಗ ಈ ಕೇಸ್‌ಗೆ ಸಂಬಂಧಿಸಿ ನಟ ದರ್ಶನ್‌ಗೆ ಮತ್ತೊಂದು ಪ್ರಮುಖ ಕಾನೂನು ಸಂಕಷ್ಟ ಎದುರಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರದೋಶ್ 'ಮಾಫಿ ಸಾಕ್ಷಿ' (ಅಪ್ರೂವರ್) ಆಗಿ ಬದಲಾಗಲು ನಿರ್ಧರಿಸಿದ್ದು, ಅವರ ಹೇಳಿಕೆ ದಾಖಲಿಸಲು ನ್ಯಾಯಾಲಯವು ಸೆಪ್ಟೆಂಬರ್ 28ಕ್ಕೆ ದಿನಾಂಕ ನಿಗದಿಪಡಿಸಿ ಸಮನ್ಸ್ ಜಾರಿಗೊಳಿಸಿದೆ.

ಹೌದು.. ಪ್ರಕರಣದ ಆರಂಭದಿಂದ ಅಂತ್ಯದವರೆಗಿನ ಸಂಪೂರ್ಣ ಘಟನೆಗೆ ಪ್ರದೋಶ್ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ (ಐ-ವಿಟ್ನೆಸ್). ಹೀಗಾಗಿ, ಅವರ ಮಾಫಿ ಸಾಕ್ಷಿ ಹೇಳಿಕೆಯು ನ್ಯಾಯಾಲಯದಲ್ಲಿ ದಾಖಲಾದರೆ ದರ್ಶನ್ ಸೇರಿದಂತೆ ಪ್ರಕರಣದ ಇತರ ಪ್ರಮುಖ ಆರೋಪಿಗಳಿಗೆ ದೊಡ್ಡ ಉರುಳಾಗುವುದು ಖಚಿತ ಎನ್ನಲಾಗಿದೆ. ಈ ಹೇಳಿಕೆಯು ಇಡೀ ಪ್ರಕರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುವುದರಿಂದ, ದರ್ಶನ್ ಅವರ ಕಾನೂನು ಭವಿಷ್ಯದ ಮೇಲೆಯೂ ಇದು ತೀವ್ರ ಪ್ರಭಾವ ಬೀರಲಿದೆ.

ಹೇಳಿಕೆ ತಡೆಯಲು ನಾನಾ ಕಸರತ್ತು, ಸಿಗದ ಸಮಾಧಾನ
ಪ್ರದೋಶ್ ನೀಡಲಿರುವ ಹೇಳಿಕೆಯ ತೀವ್ರತೆಯನ್ನು ಅರಿತಿರುವ ದರ್ಶನ್ ಪರ ವಕೀಲರು, ಅದನ್ನು ಯಾವುದೇ ರೀತಿಯಲ್ಲಿ ತಡೆಯಲು ಸತತ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಆದರೆ, ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯವಾಗಲಿ ಅಥವಾ ಹೈಕೋರ್ಟ್ ಆಗಲಿ ಮನ್ನಿಸಿಲ್ಲ. ದರ್ಶನ್ ಪರ ವಕೀಲರ ಎಲ್ಲಾ ಪ್ರಯತ್ನಗಳ ನಡುವೆಯೂ ನ್ಯಾಯಾಲಯವು ಪ್ರದೋಶ್ ಹೇಳಿಕೆಗೆ ಅಂತಿಮ ಮುದ್ರೆ ಒತ್ತಿದೆ. ಮೂಲಗಳ ಪ್ರಕಾರ, ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ.

ಸೆಪ್ಟೆಂಬರ್ 28ರಂದು ಮಹತ್ವದ ಹಂತ
59ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಪ್ರದೋಶ್‌ಗೆ ಸಮನ್ಸ್ ಜಾರಿ ಮಾಡಿದ್ದು, ಮುಂಬರುವ ಸೋಮವಾರ (ಸೆಪ್ಟೆಂಬರ್ 28) ನ್ಯಾಯಾಲಯದ ಮುಂದೆ ಹಾಜರಾಗಿ ಅಧಿಕೃತವಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವಂತೆ ಆದೇಶಿಸಿದ್ದಾರೆ. ಈ ಹಿಂದೆ ಕೆಲವು ಬಾರಿ ಪ್ರದೋಶ್ ಹೇಳಿಕೆ ನೀಡಲು ಸಿದ್ಧರಾಗಿ ನ್ಯಾಯಾಲಯಕ್ಕೆ ಬಂದಿದ್ದರೂ, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ದಿನಾಂಕ ಬದಲಾಗುವ ಸಾಧ್ಯತೆ ತೀರಾ ವಿರಳವಾಗಿದೆ.

ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಾಫಿ ಸಾಕ್ಷಿಯ ಹೇಳಿಕೆಗೆ ಅತ್ಯಂತ ಹೆಚ್ಚಿನ ಮೌಲ್ಯ ಮತ್ತು ಪ್ರಾಮುಖ್ಯತೆ ಇರುತ್ತದೆ. ಕೊಲೆ ಪ್ರಕರಣದ ತೀರ್ಪಿನಲ್ಲಿ ಪ್ರದೋಶ್ ಅವರ ನುಡಿಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಹೀಗಾಗಿ ಸೆಪ್ಟೆಂಬರ್ 28ರಂದು ನ್ಯಾಯಾಲಯದಲ್ಲಿ ನಡೆಯುವ ಪ್ರಕ್ರಿಯೆಯು ದರ್ಶನ್ ಅವರ ಭವಿಷ್ಯವನ್ನು ಭಾಗಶಃ ನಿರ್ಧರಿಸಲಿದ್ದು, ಪ್ರಕರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Add Zee News as a Preferred Source
TAGS:
Cinema