• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಇದೇ ವಾರ ಬೆಳ್ಳಿತೆರೆಗೆ ಅಪ್ಪಳಿಸಲಿರೋ ಸ್ಪಾರ್ಕ್.. ಮೊದಲ ಸಲ ಲವ್ಲಿ ಸ್ಟಾರ್‌ ಪ್ರೇಮ್ ವಿಲನ್‌

ಇದೇ ವಾರ ಬೆಳ್ಳಿತೆರೆಗೆ ಅಪ್ಪಳಿಸಲಿರೋ ಸ್ಪಾರ್ಕ್.. ಮೊದಲ ಸಲ ಲವ್ಲಿ ಸ್ಟಾರ್‌ ಪ್ರೇಮ್ ವಿಲನ್‌

ನಿರ್ಮಾಪಕರ ಪುತ್ರ, ಸ್ಪುರದ್ರೂಪಿ, ಪ್ರತಿಭಾವಂತ. ಆದರೆ ನಾಯಕ‌ ನಟನಾಗಲು ಬಯಸದೆ ಖಳನಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಭಯ್, ತಾವು ವಿದೇಶದಲ್ಲೇ ಹುಟ್ಟಿ ಬೆಳೆದ ಕಾರಣ ಕನ್ನಡ ಭಾಷೆ ಅರಿತಿಲ್ಲ.

Written ByBhimappa
Published: Sep 22, 2026, 08:22 PM IST|Updated: Sep 22, 2026, 08:28 PM IST
joinshare
ಇದೇ ವಾರ ಬೆಳ್ಳಿತೆರೆಗೆ ಅಪ್ಪಳಿಸಲಿರೋ ಸ್ಪಾರ್ಕ್.. ಮೊದಲ ಸಲ ಲವ್ಲಿ ಸ್ಟಾರ್‌ ಪ್ರೇಮ್ ವಿಲನ್‌
Image Credit: Spark_movie_starring

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Spark movie starring Lovely Star Prem as villain: ಇದೇ ವಾರ ಅಂದರೆ ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾ ಎಂದರೆ ಅದು ಸ್ಪಾರ್ಕ್. ಈ ಸಿನಿಮಾ ಕುರಿತು ಚಿತ್ರತಂಡಕ್ಕೆ ಸಾಕಷ್ಟು ನಿರೀಕ್ಷೆಗಳು ಇವೆ. ಈಗಾಗಲೇ ಎಲ್ಲ ಹಂತದಲ್ಲೂ ಸಿನಿಮಾ ಕೆಲಸ, ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿರುವುದು ಸ್ಪಾರ್ಕ್ ಚಿತ್ರತಂಡದ ಸಂತಸವಾಗಿದೆ. ಇನ್ನೇನು ಇನ್ನು ಎರಡು ದಿನಗಳಲ್ಲಿ ಬಿಡುಗಡೆಯಾಗಲಿರುವ ಸ್ಪಾರ್ಕ್ ಸಿನಿಮಾ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಖುಷಿಯನ್ನು ಹಂಚಿಕೊಂಡಿದೆ. ಅವರು ಏನೇನು ಹೇಳಿದ್ದಾರೆ ಎನ್ನುವ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ.

ನಿರಂಜನ್ ಸುಧೀಂಧ್ರ ನಾಯಕರಾಗಿ ಒಂದಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಆದರೆ ಅವೆಲ್ಲವನ್ನು ಮೀರಿಸುವಂಥ ಸಿನಿಮಾ ಈ ಸ್ಪಾರ್ಕ್ ಚಿತ್ರವಾಗಿದೆ. ಈ ಮಾತನ್ನು ಚಿತ್ರತಂಡ ಹೇಳಿಕೊಂಡೇ ಬರುತ್ತಿದೆ. ಇದೀಗ ಚಿತ್ರದ ಟ್ರೇಲರ್ ಕೂಡ ಅದನ್ನೇ ಸಾರುತ್ತಿದೆ. ಇತ್ತೀಚೆಗಷ್ಟೇ ಉಪೇಂದ್ರ ಅವರಿಂದ ಗದಗದಲ್ಲಿ ಬಿಡುಗಡೆಗೊಂಡ ಸ್ಪಾರ್ಕ್ ಸಿನಿಮಾದ ಟ್ರೇಲರ್ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಸೋಮವಾರ ಬೆಂಗಳೂರಿನ ಮಾಧ್ಯಮದ ಮುಂದೆ ಟ್ರೇಲರ್ ಪ್ರದರ್ಶಿಸಿದ ಚಿತ್ರತಂಡ, ಹೊಸ ಕಲಾವಿದ ಅಭಯ್ ವಸಿಷ್ಠ ಅವರನ್ನು ಪರಿಚಯಿಸಿತು.

ಅಭಯ್ ವಸಿಷ್ಠ ಸ್ಪಾರ್ಕ್ ಸಿನಿಮಾದ ನಿರ್ಮಾಪಕರ ಪುತ್ರ. ಘರೀಮಾ ಅವಿನಾಶ್ ವಸಿಷ್ಠ ದಂಪತಿ ನಿರ್ಮಾಣದ ಈ ಚಿತ್ರದಲ್ಲಿ ಪುತ್ರ ಅಭಯ್ ವಸಿಷ್ಠ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕರ ಪುತ್ರ, ಸ್ಪುರದ್ರೂಪಿ, ಪ್ರತಿಭಾವಂತ. ಆದರೆ ನಾಯಕ‌ ನಟನಾಗಲು  ಬಯಸದೆ ಖಳನಾಗಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಭಯ್, ತಾವು ವಿದೇಶದಲ್ಲೇ ಹುಟ್ಟಿ ಬೆಳೆದ ಕಾರಣ ಕನ್ನಡ ಭಾಷೆ ಅರಿತಿಲ್ಲ. ವಿದೇಶಿ ರಂಗಭೂಮಿಯ ಅನುಭವ ಮಾತ್ರ ಇದೆ. ಅದು ಈ ಸಿನೆಮಾ ಕ್ಷೇತ್ರಕ್ಕಿಂತ ತುಂಬಾ ವಿಭಿನ್ನ. ಮುಂದೆ ಕನ್ನಡ ಭಾಷೆ ಮತ್ತು ಸಿನೆಮಾ‌ ಬಗ್ಗೆ ಹೆಚ್ಚು ಕಲಿತ ಬಳಿಕ‌ ಕನ್ನಡದಲ್ಲಿ ನಾಯಕನಾಗುವ ಕನಸಿದೆ. ಸದ್ಯಕ್ಕೆ ಸ್ಪಾರ್ಕ್ ಸಿನಿಮಾದಲ್ಲಿ ಖಳನ ಪಾತ್ರವಾದರೂ ತುಂಬಾ ಚೆನ್ನಾಗಿದೆ. ಹಾಗಾಗಿಯೇ ಒಪ್ಪಿಕೊಂಡೆ ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು.

ನನಗೆ ಖಳನಾಗಲು ತಕ್ಕ ಎದುರಾಳಿಯಂತೆ ಅಭಯ್ ಇದ್ದರು. ಅವರ ಎತ್ತರ ನನಗೆ ಹೊಂದಿಕೊಳ್ಳುವ ಹಾಗೆ ಇತ್ತು. ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಮುಖ ಟೊಮೆಟೊ‌ ಹಣ್ಣಂತೆ ಕೆಂಪಾಗುತ್ತಿತ್ತು. ವಿದೇಶದಿಂದ ಬಂದರೂ ಚೆನ್ನಾಗಿ ನಟನೆ ಮಾಡಿದ್ದಾರೆ. ಪರದೆ ಮೇಲೆ ಕಂಡಾಗ ನಿಜಕ್ಕೂ ನಿಮಗೆ ಒಬ್ಬ ಒಳ್ಳೆಯ ನಟನ ದರ್ಶನವಾಗಲಿದೆ ಎಂದು ನಿರಂಜನ್ ಸುಧೀಂದ್ರ ಹೇಳಿದರು. ತಮ್ಮ‌ ಪಾತ್ರ ಸೇರಿದಂತೆ ಒಟ್ಟು ಚಿತ್ರವನ್ನು ನೋಡಿದಾಗ ಇದು ನನ್ನ ವೃತ್ತಿ ಬದುಕಿನಲ್ಲಿ ದೊಡ್ಡ ಯಶಸ್ಸು ತರುವ ಭರವಸೆ ಮೂಡಿಸಿದೆ ಎಂದು ಹೇಳಿದರು. ಭ್ರಷ್ಟಾಚಾರದ ವಿರುದ್ಧದ ಚಿತ್ರವಾದರೂ ಕಥೆ ಮನರಂಜನಾತ್ಮಕವಾಗಿ ಸಾಗುತ್ತದೆ. ತಾತಂದಿರಿಂದ ಚಿಕ್ಕ‌ ಮಕ್ಕಳವರೆಗೂ ಇಷ್ಟವಾಗುವಂಥ ವಿಷಯಗಳು ಸಿನಿಮಾದಲ್ಲಿ ಅಡಗಿವೆ. ಅದನ್ನು ಸಿನಿಮಾ ನೋಡದರೆ ಗೊತ್ತಾಗುತ್ತದೆ ಎಂದು ನಿರಂಜನ್ ಅವರು ಹೇಳಿದರು.

ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, ನಿರ್ಮಾಪಕರು ಚಿತ್ರಕ್ಕಾಗಿ ನಾನು ಕೇಳಿದ ಎಲ್ಲ ಕಲಾವಿದರನ್ನು ಕೊಟ್ಟು ಸಹಕರಿಸಿದ್ದಾರೆ. ಅವರ ಸಹಕಾರದಿಂದಾಗಿಯೇ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ. ಲವ್ಲಿ ಸ್ಟಾರ್ ಪ್ರೇಮ್ ಮೊದಲ ಬಾರಿಗೆ ಖಳನಾಗಿ ನಟಿಸಿರುವ ಸಿನಿಮಾ ಇದು. ನಿರ್ಮಾಪಕರ ಗುಣಗಾನ ಮಾಡಿದ ಅವರು, ಸ್ಟಾರ್ ಸಿನೆಮಾ ಹಿಂದೆ ಹೋಗದೆ ಹೊಸಬರ ಚಿತ್ರ‌‌ಮಾಡಿದ್ದಾರೆ. ಒಳ್ಳೆಯ ಚಿತ್ರವನ್ನೇ ಮಾಡಿದ್ದಾರೆ. ನನ್ನದು ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ. ಆದರೆ ಅದೇ ಪೊಲೀಸ್ ವೈಯಕ್ತಿಕವಾಗಿ ಸ್ಟೈಲಿಷ್ ಆಗಿ ಕಾಣಿಸುವಂಥ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಹಾಸ್ಯನಟ ಧರ್ಮಣ್ಣ ಕಡೂರು ಅವರು ಮಾತನಾಡಿ, ನಿರಂಜನ್ ಮತ್ತು ಪ್ರೇಮ್ ಚಿತ್ರದ ಕೇಂದ್ರ ಬಿಂದುಗಳು ಅಂದರು. ನಿರಂಜನ್ ಜೊತೆ ತಾವು ಕೂಡ ಪತ್ರಕರ್ತರಾಗಿ ಕಾಣಿಸಲಿದ್ದು, ತಂಬ್ ನೇಲ್ ಪತ್ರಕರ್ತನಾಗಿ ನಗಿಸುವ ಭರವಸೆ ನೀಡಿದರು. ಇದೇ ವೇಳೆ ಕಾರ್ಯಕಾರಿ ನಿರ್ಮಾಪಕ ವಿಶ್ವಾಸ್ ಎಂ. ನಾಯರ್ ಭಾಗಿಯಾಗಿದ್ದರು. 
 

Add Zee News as a Preferred Source
TAGS:
Cinema