• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /‘ದಿ ಪ್ಯಾರಡೈಸ್’ ಬಗ್ಗೆ ನೆಗೆಟಿವ್ ರಿವ್ಯೂಸ್, ಟ್ರೋಲ್ಸ್..! ನಟ ನಾನಿ ಸಂಚಲನ ಪೋಸ್ಟ್‌

‘ದಿ ಪ್ಯಾರಡೈಸ್’ ಬಗ್ಗೆ ನೆಗೆಟಿವ್ ರಿವ್ಯೂಸ್, ಟ್ರೋಲ್ಸ್..! ನಟ ನಾನಿ ಸಂಚಲನ ಪೋಸ್ಟ್‌

ನಟ ನಾನಿ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಸಿನಿಮಾ ‘ದಿ ಪ್ಯಾರಡೈಸ್’ ಇತ್ತೀಚೆಗೆ ತೆರೆಕಂಡಿದ್ದು, ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗಳನ್ನು ಎದುರಿಸುತ್ತಿದೆ. ಈ ಎಲ್ಲ ನೆಗೆಟಿವ್ ರಿವ್ಯೂಸ್ ಹಾಗೂ ಆನ್‌ಲೈನ್ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿ ನಾನಿ ಪೋಸ್ಟ್‌ ಹಾಕಿದ್ದು ಸಖತ್‌ ವೈರಲ್‌ ಆಗುತ್ತಿದೆ..

Reported ByKrishna NKEdited ByKrishna NK
Published: Sep 25, 2026, 07:33 PM IST|Updated: Sep 25, 2026, 07:35 PM IST
joinshare
‘ದಿ ಪ್ಯಾರಡೈಸ್’ ಬಗ್ಗೆ ನೆಗೆಟಿವ್ ರಿವ್ಯೂಸ್, ಟ್ರೋಲ್ಸ್..! ನಟ ನಾನಿ ಸಂಚಲನ ಪೋಸ್ಟ್‌
Image Credit: The Paradise movie

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Nani on the Paradise Movie : ಕೌಟುಂಬಿಕ ಹಾಗೂ 'ಲವ್ವರ್ ಬಾಯ್' ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ತೆಲುಗಿನ ಸ್ಟಾರ್ ನಟ ನಾನಿ, ಇತ್ತೀಚೆಗೆ ಬಿಡುಗಡೆಯಾದ ‘ದಿ ಪ್ಯಾರಡೈಸ್’ ಸಿನಿಮಾದಲ್ಲಿ ಪಕ್ಕಾ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶರ್ಟ್‌ಲೆಸ್ ಆಗಿ, ಎರಡು ಜಡೆ ಹೆಣೆದುಕೊಂಡ ವಿಭಿನ್ನ ಲುಕ್‌ನಲ್ಲಿ ಅಬ್ಬರಿಸಿರುವ ನಾನಿ ಅವರ ಈ ಸಿನಿಮಾ, ವಿಪರೀತ ಹಿಂಸೆ ಮತ್ತು ಆಕ್ಷನ್ ದೃಶ್ಯಗಳಿಂದ ಕೂಡಿದೆ. ಆದರೆ, ಪ್ರೇಕ್ಷಕರಿಂದ ಈ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಬೆಂಬಲ ಸಿಕ್ಕಿಲ್ಲ.

ಚಿತ್ರದಲ್ಲಿದ್ದ ಅತಿಯಾದ ಹಿಂಸಾಚಾರ ಹಾಗೂ ಅನಗತ್ಯ ಆಕ್ಷನ್ ದೃಶ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಆನ್‌ಲೈನ್‌ನಲ್ಲಿ ಭಾರೀ ಟ್ರೋಲ್ ಮಾಡಲಾಗಿದೆ. ನಾನಿ ಅಭಿನಯದ ಇತ್ತೀಚಿನ ಯಾವುದೇ ಚಿತ್ರಕ್ಕೂ ಬರದ ರೀತಿಯಲ್ಲಿ ಈ ಸಿನಿಮಾಗೆ ಋಣಾತ್ಮಕ (ನೆಗೆಟಿವ್) ವಿಮರ್ಶೆಗಳು ಬಂದಿವೆ.

I have seen all your reactions and responses. I’ve received all your love and equally enjoyed your hilarious trolls. I’m heartwarmed by the way audience have owned the film, and also learnt from the flaws that critics and reviewers have pointed out.

Thank you for everything is…

— Nani (@NameisNani) September 25, 2026

 ನೆಗೆಟಿವ್ ಟೀಕೆಗಳಿಗೆ ನಾನಿ ನೀಡಿದ ಉತ್ತರ: "ನಿಮ್ಮ ಎಲ್ಲಾ ಪ್ರತಿಕ್ರಿಯೆಗಳು ಮತ್ತು ಅಭಿಪ್ರಾಯಗಳನ್ನು ನಾನು ಗಮನಿಸಿದ್ದೇನೆ. ನಿಮ್ಮ ಪ್ರೀತಿಯನ್ನು ಸ್ವೀಕರಿಸಿದ್ದೇನೆ ಹಾಗೂ ನಿಮ್ಮ ತಮಾಷೆಯ ಟ್ರೋಲ್‌ಗಳನ್ನು ಸಹ ಆನಂದಿಸಿದ್ದೇನೆ. ಪ್ರೇಕ್ಷಕರು ಈ ಚಿತ್ರವನ್ನು ತಮ್ಮದೆಂದು ಭಾವಿಸಿ ಸ್ವೀಕರಿಸಿರುವುದು ನನಗೆ ಸಂತಸ ತಂದಿದೆ. ಹಾಗೆಯೇ, ವಿಮರ್ಶಕರು ಎತ್ತಿ ತೋರಿಸಿದ ಲೋಪದೋಷಗಳಿಂದಲೂ ನಾನು ಪಾಠ ಕಲಿತಿದ್ದೇನೆ. ಎಲ್ಲಕ್ಕೂ ನನ್ನ ಧನ್ಯವಾದಗಳು.

ನಿಮಗೆ ಒಂದು ವಿಶಿಷ್ಟ ಸಿನಿಮಾ ಅನುಭವ ನೀಡುವ ಉದ್ದೇಶದಿಂದ ನಾವೆಲ್ಲರೂ ಅಪಾರ ಶ್ರಮವಹಿಸಿ ‘ದಿ ಪ್ಯಾರಡೈಸ್’ ಚಿತ್ರವನ್ನು ರೂಪಿಸಿದ್ದೇವೆ. ಇದನ್ನು ಸಂಭ್ರಮಿಸುವುದು ಅಥವಾ ಇದರ ಬಗ್ಗೆ ತೀರ್ಪು ನೀಡುವುದು ಈಗ ಸಂಪೂರ್ಣವಾಗಿ ನಿಮ್ಮ ಕೈಯಲ್ಲಿದೆ. ಈ ಚಿತ್ರದ ಬಗ್ಗೆ ನೀವು ತೋರಿದ ಉತ್ಸಾಹ ಮತ್ತು ನನ್ನ ಮೇಲಿಟ್ಟಿರುವ ಪ್ರೀತಿಗೆ ನಾನು ಸದಾ ಕೃತಜ್ಞ" ಎಂದು ಬರೆದುಕೊಂಡಿದ್ದಾರೆ.

ಶ್ರೀಕಾಂತ್ ಒಡೆಲ ನಿರ್ದೇಶನದ ಈ ಚಿತ್ರದಲ್ಲಿ ನಾನಿಗೆ ಜೋಡಿಯಾಗಿ ಖಯಾದು ಲೋಹರ್ ನಟಿಸಿದ್ದರೆ, ಪ್ರಮುಖ ಖಳನಾಯಕರ ಪಾತ್ರಗಳಲ್ಲಿ ಹಿರಿಯ ನಟ ಮೋಹನ್‌ಬಾಬು ಹಾಗೂ ಬಾಲಿವುಡ್ ನಟ ರಾಘವ್ ಜುರೆಲ್ ಕಾಣಿಸಿಕೊಂಡಿದ್ದಾರೆ.

Add Zee News as a Preferred Source
TAGS:
Cinema