• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಕನ್ನಡದ 'ಶಿವಮಣಿ' ಡ್ರಮ್ಮರ್ ದೇವ ಇನ್ನಿಲ್ಲ; 64ನೇ ವಯಸ್ಸಿನಲ್ಲಿ ವಿಧಿವಶ, ಸಂಗೀತ ಲೋಕದಲ್ಲಿ ಶೋಕ!

ಕನ್ನಡದ 'ಶಿವಮಣಿ' ಡ್ರಮ್ಮರ್ ದೇವ ಇನ್ನಿಲ್ಲ; 64ನೇ ವಯಸ್ಸಿನಲ್ಲಿ ವಿಧಿವಶ, ಸಂಗೀತ ಲೋಕದಲ್ಲಿ ಶೋಕ!

ಡ್ರಮ್ಮರ್ ದೇವ ಅವರು ಆರ್‌ಸಿಬಿಯ ಕಟ್ಟಾ ಅಭಿಮಾನಿಯಾಗಿದ್ದರು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಪಂದ್ಯಗಳಲ್ಲಿ ಡ್ರಮ್ ಬಾರಿಸಿ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಅವರ ಲೈವ್ ಬೀಟ್ಸ್‌ಗಳು ಪಂದ್ಯಗಳ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸುತ್ತಿದ್ದವು.

Written ByPuttaraj K Alur
Published: Sep 27, 2026, 06:41 AM IST|Updated: Sep 27, 2026, 09:05 AM IST
joinshare
ಕನ್ನಡದ 'ಶಿವಮಣಿ' ಡ್ರಮ್ಮರ್ ದೇವ ಇನ್ನಿಲ್ಲ; 64ನೇ ವಯಸ್ಸಿನಲ್ಲಿ ವಿಧಿವಶ, ಸಂಗೀತ ಲೋಕದಲ್ಲಿ ಶೋಕ!
Image Credit: Drummer Deva Passes Away

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Drummer Deva Passes Away: ಕನ್ನಡ ಸಂಗೀತ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಡ್ರಮ್ಮಿಂಗ್ ಶೈಲಿಯಿಂದ ಗುರುತಿಸಿಕೊಂಡಿದ್ದ ಖ್ಯಾತ ಡ್ರಮ್ಮರ್ ದೇವ (Drummer Deva) ಇನ್ನಿಲ್ಲ. 'ಕನ್ನಡದ ಶಿವಮಣಿ' ಎಂದೇ ಜನಪ್ರಿಯರಾಗಿದ್ದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿದೆ. ಅವರಿಗೆ 64 ವರ್ಷ ವಯಸ್ಸಾಗಿತ್ತು. ದೇವ ಅವರ ನಿಧನದ ಸುದ್ದಿ ಸಂಗೀತ ಕ್ಷೇತ್ರ ಹಾಗೂ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ.

ಕನ್ನಡ ಚಿತ್ರರಂಗದಲ್ಲಿ ಡ್ರಮ್ಮರ್ ಆಗಿ ಮಾತ್ರವಲ್ಲದೆ ಸಂಗೀತ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದ ದೇವ, ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಸಂಗೀತದ ಮೇಲಿನ ಅಪಾರ ಪ್ರೀತಿಯಿಂದಲೇ ಜನಪ್ರಿಯತೆ ಗಳಿಸಿದ್ದರು. ವೇದಿಕೆ ಕಾರ್ಯಕ್ರಮಗಳು, ಆರ್ಕೆಸ್ಟ್ರಾಗಳು ಹಾಗೂ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ತಮ್ಮ ಸಂಗೀತ ಸೇವೆ ಸಲ್ಲಿಸಿದ್ದರು.

ಡ್ರಮ್ ಒರೆಸುವ ಕೆಲಸದಿಂದ ಖ್ಯಾತ ಡ್ರಮ್ಮರ್‌ವರೆಗೆ!

ಡ್ರಮ್ಮರ್ ದೇವ ಅವರ ಸಂಗೀತ ಪಯಣ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಆರಂಭದ ದಿನಗಳಲ್ಲಿ ಅವರು ಡ್ರಮ್‌ಗಳನ್ನ ಒರೆಸುವ ಕೆಲಸ ಮಾಡುತ್ತಿದ್ದರು. ಆದರೆ ಸಂಗೀತದ ಮೇಲಿನ ಆಸಕ್ತಿ ಮತ್ತು ಕಲಿಯುವ ಹಂಬಲ ಅವರನ್ನ ಹಂತ ಹಂತವಾಗಿ ಸಂಗೀತ ಕ್ಷೇತ್ರದಲ್ಲಿ ಬೆಳೆಸಿತು. ಕಠಿಣ ಪರಿಶ್ರಮದ ಮೂಲಕ ಡ್ರಮ್ಮಿಂಗ್ ಕಲೆಯಲ್ಲಿ ಪರಿಣತಿ ಪಡೆದ ದೇವ, ಮುಂದೆ ಖ್ಯಾತ ಡ್ರಮ್ಮರ್ ಆಗಿ ಗುರುತಿಸಿಕೊಂಡರು. 

ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಡ್ರಮ್ ಬಾರಿಸುವ ಮೂಲಕ ಸಂಗೀತ ಪ್ರಿಯರ ಗಮನ ಸೆಳೆದರು. ಅವರ ವೇಗದ ಬೀಟ್ಸ್, ಲಯಬದ್ಧ ಪ್ರದರ್ಶನ ಮತ್ತು ಎಲೆಕ್ಟ್ರಿಕ್ ಡ್ರಮ್ಮಿಂಗ್ ಶೈಲಿ ಅಪಾರ ಅಭಿಮಾನಿಗಳನ್ನ ಗಳಿಸಿತ್ತು. ಸಂಗೀತ ದಿಗ್ಗಜ ಇಳಯರಾಜ ಸೇರಿದಂತೆ ಹಲವು ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶವೂ ಅವರಿಗೆ ದೊರಕಿತ್ತು. ಕನ್ನಡ ಚಿತ್ರರಂಗದ ಹಲವು ಸಂಗೀತ ನಿರ್ದೇಶಕರ ತಂಡದಲ್ಲಿ ಕಾರ್ಯನಿರ್ವಹಿಸಿ, ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದ್ದರು.

ಹಂಸಲೇಖ, ಸಾಧು ಕೋಕಿಲ, ಗುರುಕಿರಣ್ ಜೊತೆ ಕೆಲಸ

ಡ್ರಮ್ಮರ್ ದೇವ ಕನ್ನಡ ಚಿತ್ರರಂಗದ ಹಲವು ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಹಂಸಲೇಖ, ಸಾಧು ಕೋಕಿಲ ಮತ್ತು ಗುರುಕಿರಣ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರ ಆರ್ಕೆಸ್ಟ್ರಾ ಹಾಗೂ ಸಂಗೀತ ಕಾರ್ಯಕ್ರಮಗಳಲ್ಲಿ ಡ್ರಮ್ ಬಾರಿಸಿದ್ದಾರೆ. ಸಿನಿಮಾ ಸಂಗೀತದ ಜೊತೆಗೆ ಲೈವ್ ಸ್ಟೇಜ್ ಶೋಗಳಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದರು. 

ವಿವಿಧ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಡ್ರಮ್ಮಿಂಗ್ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು. ಡ್ರಮ್ಮರ್ ಆಗಿ ಗುರುತಿಸಿಕೊಂಡಿದ್ದ ದೇವ, ಸಂಗೀತ ನಿರ್ದೇಶನದಲ್ಲಿಯೂ ತೊಡಗಿಸಿಕೊಂಡಿದ್ದರು. '5 ಈಡಿಯಟ್ಸ್' ಮತ್ತು 'ಪ್ರೀತಿ ನೀ ಹಿಂಗ್ಯಾಕೆ' ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಹೀಗೆ ವಾದ್ಯ ಸಂಗೀತದಿಂದ ಚಿತ್ರಗಳ ಸಂಗೀತ ನಿರ್ದೇಶನದವರೆಗೆ ತಮ್ಮ ಕಲಾ ಪಯಣವನ್ನ ವಿಸ್ತರಿಸಿಕೊಂಡಿದ್ದರು.

ಆರ್‌ಸಿಬಿ ಪಂದ್ಯಗಳಲ್ಲಿ ಡ್ರಮ್ಮಿಂಗ್ ಮೂಲಕ ರಂಜನೆ

ಡ್ರಮ್ಮರ್ ದೇವ ಅವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೇಲೆ ವಿಶೇಷ ಅಭಿಮಾನವಿತ್ತು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಪಂದ್ಯಗಳ ಸಂದರ್ಭದಲ್ಲಿ ಡ್ರಮ್ ಬಾರಿಸಿ ತಂಡವನ್ನ ಹುರಿದುಂಬಿಸುತ್ತಿದ್ದರು. ತಮ್ಮ ಎಲೆಕ್ಟ್ರಿಕ್ ಬೀಟ್ಸ್ ಮತ್ತು ಡ್ರಮ್ಮಿಂಗ್ ಮೂಲಕ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು.

ಆರ್‌ಸಿಬಿ ಪಂದ್ಯಗಳ ಸಂದರ್ಭದಲ್ಲಿ ಅವರ ಲೈವ್ ಡ್ರಮ್ಮಿಂಗ್ ಪ್ರದರ್ಶನಗಳು ಕ್ರಿಕೆಟ್ ಅಭಿಮಾನಿಗಳಿಗೂ ಚಿರಪರಿಚಿತವಾಗಿದ್ದವು. ಸಂಗೀತ ಮತ್ತು ಕ್ರಿಕೆಟ್ ಮೇಲಿನ ಅಭಿಮಾನವನ್ನ ಒಟ್ಟಿಗೆ ಬೆಸೆದಿದ್ದ ದೇವ, ಕ್ರೀಡಾಂಗಣದಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ದೇವ

ಕಳೆದ ಕೆಲವು ತಿಂಗಳುಗಳಿಂದ ಡ್ರಮ್ಮರ್ ದೇವ ಅವರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಕಳೆದ ಜೂನ್‌ನಲ್ಲಿ ಅವರಿಗೆ ಸ್ಟ್ರೋಕ್ ಆಗಿತ್ತು ಎಂದು ವರದಿಯಾಗಿದೆ. ಸ್ಟ್ರೋಕ್‌ನ ಪರಿಣಾಮ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ಕಂದಶ್ರೀ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.

ಸಂಗೀತ ಲೋಕಕ್ಕೆ ನಷ್ಟ

ಡ್ರಮ್ಮಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದ ದೇವ ಅವರ ನಿಧನದಿಂದ ಕನ್ನಡ ಸಂಗೀತ ಲೋಕಕ್ಕೆ ನಷ್ಟವಾಗಿದೆ. ಸಂಗೀತ ಕಾರ್ಯಕ್ರಮಗಳು, ಸಿನಿಮಾ ಸಂಗೀತ ಮತ್ತು ಆರ್‌ಸಿಬಿ ಪಂದ್ಯಗಳ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದ ಅವರ ಕಲಾ ಪಯಣವನ್ನ ಸಂಗೀತ ಪ್ರಿಯರು ಸ್ಮರಿಸುತ್ತಿದ್ದಾರೆ.

Add Zee News as a Preferred Source
TAGS:
Cinema
Kannada News