• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಚಿತ್ರಬ್ರಹ್ಮ ಮಣಿರತ್ನಂ ಜೀವನ : ತಮಿಳುನಾಡು ಕೈಬಿಟ್ಟರೂ ಕರುನಾಡಿನಲ್ಲಿ ಕನಸು ನನಸಾಗಿಸಿಕೊಂಡ ದೃಶ್ಯ ಮಾಂತ್ರಿಕ

ಚಿತ್ರಬ್ರಹ್ಮ ಮಣಿರತ್ನಂ ಜೀವನ : ತಮಿಳುನಾಡು ಕೈಬಿಟ್ಟರೂ ಕರುನಾಡಿನಲ್ಲಿ ಕನಸು ನನಸಾಗಿಸಿಕೊಂಡ ದೃಶ್ಯ ಮಾಂತ್ರಿಕ

ಎಂಬಿಎ ಮುಗಿಸಿ ಕಾರ್ಪೊರೇಟ್ ಕೆಲಸ ಬಿಟ್ಟು ಬಂದ ಯುವಕ, ಸತತ ತಿರಸ್ಕಾರಗಳ ಬಳಿಕ ಕನ್ನಡದ 'ಪಲ್ಲವಿ ಅನುಪಲ್ಲವಿ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು, 'ನಾಯಕನ್', 'ರೋಜಾ'ದಿಂದ 'ಪೊನ್ನಿಯಿನ್ ಸೆಲ್ವನ್'ವರೆಗೆ ದೇಶವೇ ಹೆಮ್ಮೆಪಡುವಂತಹ ಎಪಿಕ್ ಸಿನಿಮಾಗಳನ್ನು ನೀಡಿದ್ದು ಹೇಗೆ?.. ಇದು ‘ಪದ್ಮಶ್ರೀ’ ಮಣಿರತ್ನಂ ಅವರ ಜೀವನದ ರೋಚಕ ಕಥೆ..

Reported ByKrishna NKEdited ByKrishna NK
Published: Sep 26, 2026, 07:57 PM IST|Updated: Sep 26, 2026, 08:01 PM IST
joinshare
ಚಿತ್ರಬ್ರಹ್ಮ ಮಣಿರತ್ನಂ ಜೀವನ : ತಮಿಳುನಾಡು ಕೈಬಿಟ್ಟರೂ ಕರುನಾಡಿನಲ್ಲಿ ಕನಸು ನನಸಾಗಿಸಿಕೊಂಡ ದೃಶ್ಯ ಮಾಂತ್ರಿಕ
Image Credit: Director Maniratanm

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಸಿನಿಮಾ ಅಂದರೆ ಕೇವಲ ಮನರಂಜನೆಯಲ್ಲ, ಅದೊಂದು ಸುಂದರ ಕನಸು... ತೆರೆಯ ಮೇಲೆ ನಟರು ಪಾತ್ರಗಳಿಗೆ ಪ್ರಾಣ ತುಂಬಿದರೆ, ಆ ಬಣ್ಣದ ಲೋಕಕ್ಕೆ ತೆರೆಮರೆಯಲ್ಲಿ ಬೆಳಕಾಗುವವರು ಹಲವರು. ಕಥೆ, ನಿರ್ದೇಶನ, ಸಂಗೀತ, ಸಾಹಸ, ಛಾಯಾಗ್ರಹಣ ಸೇರಿದಂತೆ ನೂರಾರು ಕಲಾವಿದರ ಬೆವರಿನ ಹನಿಗಳೇ ಒಂದು ಯಶಸ್ವಿ ಸಿನಿಮಾ. ಇಂತಹ ತೆರೆಮರೆಯ ಸಾಧಕರ ಯಶೋಗಾಥೆಯನ್ನು ತೆರೆದಿಡುವ ವಿಶೇಷ ವರದಿ ಇಲ್ಲಿದೆ.

ಮಧುರೈನಿಂದ ಮುಂಬೈ ಕಾರ್ಪೊರೇಟ್ ಜಗತ್ತಿಗೆ
1956 ಜೂನ್ 2 ರಂದು ತಮಿಳುನಾಡಿನ ಮಧುರೈನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹುಡುಗನಿಗೆ ತಂದೆ-ತಾಯಿ ಇಟ್ಟ ಹೆಸರು ‘ಗೋಪಾಲ ರತ್ನಂ ಸುಬ್ರಮಣ್ಯಂ’. ಇವರ ಕುಟುಂಬಕ್ಕೆ ಸಿನಿಮಾ ಕ್ಷೇತ್ರ ಹೊಸದೇನಾಗಿರಲಿಲ್ಲ. ತಂದೆ ಎಸ್. ಗೋಪಾಲರತ್ನಂ ಅವರು ‘ವೀನಸ್ ಪಿಕ್ಚರ್ಸ್’ನ ಜನಪ್ರಿಯ ಸಿನಿಮಾ ವಿತರಕರಾಗಿದ್ದರೆ, ಚಿಕ್ಕಪ್ಪ ನಿರ್ಮಾಪಕರಾಗಿದ್ದರು. ಮನೆಯಲ್ಲಿ ಸಿನಿಮಾದ ವಾತಾವರಣವಿದ್ದರೂ, ಮಕ್ಕಳು ಸಿನಿಮಾ ಸೆಟ್‌ಗೆ ಹೋಗಬಾರದು, ಚೆನ್ನಾಗಿ ಓದಿ ದೊಡ್ಡ ಅಧಿಕಾರಿಗಳಾಗಬೇಕು ಎಂಬುದು ತಂದೆಯ ಖಡಕ್ ಆದೇಶವಾಗಿತ್ತು.

ಅಪ್ಪನ ಆಜ್ಞೆಯಂತೆ ಓದಿನಲ್ಲಿ ಸದಾ ಮುಂದಿದ್ದ ಮಣಿರತ್ನಂ, ಚೆನ್ನೈನ ಬೆಸೆಂಟ್ ಥಿಯಾಸಾಫಿಕಲ್ ಹೈಸ್ಕೂಲ್ ಹಾಗೂ ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಪದವಿ ಮುಗಿಸಿದರು. ಬಳಿಕ ಮುಂಬೈನ ಪ್ರತಿಷ್ಠಿತ ಜಮ್ನಾಲಾಲ್ ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂಬಿಎ ಪದವಿ ಪಡೆದು, ಪುಣೆಯಲ್ಲಿ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಪೊರೇಟ್ ರಂಗಕ್ಕೆ ಕಾಲಿಟ್ಟರು.

ವಿಶ್ವ ಸಿನಿಮಾದ ಗೀಳು ಮತ್ತು ಸತತ ತಿರಸ್ಕಾರಗಳು
ಮುಂಬೈನಲ್ಲಿದ್ದಾಗ ಮಣಿರತ್ನಂ ಅವರಿಗೆ ಜಾಗತಿಕ ಸಿನಿಮಾಗಳ ಗೀಳು ಅಂಟಿಕೊಂಡಿತು. ಅಕಿರಾ ಕುರೊಸಾವಾ, ಇಂಗ್ಮರ್ ಬರ್ಗ್‌ಮನ್ ಅವರಂತಹ ಮಹಾನ್ ನಿರ್ದೇಶಕರ ಚಿತ್ರಗಳನ್ನು ನೋಡಿ ಬೆರಗಾದ ಅವರಿಗೆ, ದೃಶ್ಯಗಳ ಮೂಲಕವೇ ಕಥೆ ಕಟ್ಟುವ ಆಸೆ ಚಿಗುರಿತು. ಕೈತುಂಬಾ ಸಂಬಳ ಕೊಡುತ್ತಿದ್ದ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ ಹೇಳಿ ಮದ್ರಾಸ್‌ಗೆ ವಾಪಸ್ಸಾದರು.

ಆದರೆ 80ರ ದಶಕದ ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಅಬ್ಬರದ ಸಂಭಾಷಣೆ ಹಾಗೂ ಫೈಟ್‌ಗಳಿಗೆ ಮಾತ್ರ ಬೇಡಿಕೆಯಿತ್ತು. ಮಣಿರತ್ನಂ ಅವರ ಸೂಕ್ಷ್ಮ ಹಾಗೂ ನ್ಯಾಚುರಲ್ ಕಥೆಗಳನ್ನು ಕೇಳಿದ ನಿರ್ಮಾಪಕರು, "ಈ ಕಥೆಗಳು ವರ್ಕೌಟ್ ಆಗಲ್ಲ" ಎಂದು ಮುಖದ ಮೇಲೆಯೇ ತಿರಸ್ಕರಿಸಿದರು. ತಂದೆ ದೊಡ್ಡ ವಿತರಕರಾಗಿದ್ದರೂ ಅವರ ಪ್ರಭಾವವನ್ನು ಬಳಸದೆ, ಸ್ವಂತ ಪರಿಶ್ರಮವನ್ನೇ ನಂಬಿ ಸತತ ತಿರಸ್ಕಾರಗಳನ್ನು ಎದುರಿಸಿದರು.

ಕರುನಾಡಿನಲ್ಲಿ ಅರಳಿದ ದೃಶ್ಯ ಮಾಂತ್ರಿಕ
ತಮಿಳು ನಿರ್ಮಾಪಕರು ಕೈಬಿಟ್ಟಾಗ ಮಣಿರತ್ನಂ ಅವರ ಬೆನ್ನಿಗೆ ನಿಂತಿದ್ದು ಅವರ ಸ್ನೇಹಿತ ಎಸ್. ರವಿ. ತಮಿಳಿನಲ್ಲಿ ಈ ಪ್ರಯೋಗ ಕಷ್ಟವೆಂದು ಅರಿತ ರವಿ, ಕನ್ನಡಿಗರು ಹೊಸತನವನ್ನು ಸದಾ ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆಯಿಂದ ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾದರು.

ಹೀಗೆ 1983ರಲ್ಲಿ ಮಣಿರತ್ನಂ ನಿರ್ದೇಶನದ ಚೊಚ್ಚಲ ಚಿತ್ರ ‘ಪಲ್ಲವಿ ಅನುಪಲ್ಲವಿ’ ಸೆಟ್ಟೇರಿತು. ಅನಿಲ್ ಕಪೂರ್ ನಾಯಕನಾಗಿ, ಲಕ್ಷ್ಮಿ ನಾಯಕಿಯಾಗಿ ನಟಿಸಿದ ಈ ಚಿತ್ರಕ್ಕೆ ಬಾಲು ಮಹೇಂದ್ರ ಛಾಯಾಗ್ರಹಣ ಹಾಗೂ ಇಳಯರಾಜ ಸಂಗೀತ ನೀಡಿದ್ದರು. ವಿವಾಹಿತ ಮಹಿಳೆ ಹಾಗೂ ಯುವಕನ ನಡುವಿನ ಪ್ಲಾಟೋನಿಕ್ ಸಂಬಂಧವನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ತಂದ ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ‘ಅತ್ಯುತ್ತಮ ಚಿತ್ರಕಥೆ’ ಪ್ರಶಸ್ತಿ ಒಲಿಯಿತು. ಕರುನಾಡಿನ ನೆಲದಲ್ಲಿ ಶುರವಾದ ಈ ಪಯಣ, ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯಿತು.

ಚಿತ್ರರಂಗದ ವ್ಯಾಕರಣ ಬದಲಿಸಿದ ಸಾಲು ಸಾಲು ಹಿಟ್‌ಗಳು
ಕನ್ನಡದ ಯಶಸ್ಸಿನ ನಂತರ ಮಲಯಾಳಂನಲ್ಲಿ ಮೋಹನ್‌ಲಾಲ್ ಜೊತೆ ‘ಉಣರು’ (1984) ನಿರ್ದೇಶಿಸಿದ ಮಣಿರತ್ನಂ, ಬಳಿಕ ತಮಿಳು ಚಿತ್ರರಂಗಕ್ಕೆ ಹೆಜ್ಜೆ ಇಟ್ಟರು. 1986ರಲ್ಲಿ ತೆರೆಕಂಡ ‘ಮೌನ ರಾಗಂ’ ಚಿತ್ರ ತಮಿಳು ಸಿನಿಮಾದ ವ್ಯಾಕರಣವನ್ನೇ ಬದಲಿಸಿತು. ಅಬ್ಬರದ ಮಾತುಗಳಿಲ್ಲದೆ, ದೃಶ್ಯ ಹಾಗೂ ಮೌನದಲ್ಲೇ ದಾಂಪತ್ಯದ ತೊಳಲಾಟವನ್ನು ಕಟ್ಟಿಕೊಟ್ಟ ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.

ಬಳಿಕ ಬಂದ ‘ನಾಯಕನ್’ (1987) ಭಾರತೀಯ ಸಿನಿಮಾದ ಮಾಸ್ಟರ್ ಪೀಸ್ ಆಗಿ ಹೊರಹೊಮ್ಮಿತು. ಕಮಲ್ ಹಾಸನ್ ಅಭಿನಯದ ಈ ಚಿತ್ರ ಆಸ್ಕರ್ ಅಂಗಳಕ್ಕೂ ಪ್ರವೇಶ ಪಡೆಯಿತು. ನಂತರ ‘ಅಗ್ನಿ ನಕ್ಷತ್ರಂ’, ತೆಲುಗಿನ ಬ್ಲಾಕ್‌ಬಸ್ಟರ್ ‘ಗೀತಾಂಜಲಿ’ ಹಾಗೂ ಮಕ್ಕಳ ಮನಸ್ಸನ್ನು ಗೆದ್ದ ‘ಅಂಜಲಿ’ ಚಿತ್ರಗಳು ಮೂಡಿಬಂದವು. 1991ರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಮಮ್ಮೂಟ್ಟಿ ಅಭಿನಯದ ‘ದಳಪತಿ’ ಚಿತ್ರದ ಮೂಲಕ ಮಹಾಭಾರತದ ಕರ್ಣ-ದುರ್ಯೋಧನರ ಕಥೆಯನ್ನು ಅಂಡರ್‌ವರ್ಲ್ಡ್ ಹಿನ್ನೆಲೆಯಲ್ಲಿ ಅತ್ಯಂತ ಕ್ಲಾಸಿಕ್ ಆಗಿ ಮೂಡಿಸಿದರು.

ರಾಷ್ಟ್ರೀಯ ವಿಚಾರಗಳು ಮತ್ತು ಐಕಾನಿಕ್ ಟ್ರೈಲಾಜಿ : 90ರ ದಶಕದ ದೇಶದ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಮಣಿರತ್ನಂ ಧೈರ್ಯವಾಗಿ ಬೆಳ್ಳಿತೆರೆಯ ಮೇಲೆ ತಂದರು.

ರೋಜಾ (1992): ಕಾಶ್ಮೀರದ ಭಯೋತ್ಪಾದನೆಯ ಹಿನ್ನೆಲೆಯ ಪ್ರೇಮಕಥೆ. ಈ ಚಿತ್ರದ ಮೂಲಕವೇ ಸಂಗೀತ ಗಂಧರ್ವ ಎ.ಆರ್. ರೆಹಮಾನ್ ಚಿತ್ರರಂಗಕ್ಕೆ ಪರಿಚಯವಾದರು.
ಬಾಂಬೆ (1995): ಕೋಮು ಗಲಭೆಯ ನಡುವಿನ ಪ್ರೇಮಿಗಳ ಕಥೆಯನ್ನು ಪ್ರೇಕ್ಷಕರ ಕಣ್ಣೀರು ತರಿಸುವಂತೆ ಕಟ್ಟಿಕೊಟ್ಟರು.
ದಿಲ್ ಸೇ.. (1998): ಶಾರುಖ್ ಖಾನ್ ಅಭಿನಯದ ಈ ಚಿತ್ರ ಈಶಾನ್ಯ ಭಾರತದ ಉಗ್ರವಾದದ ಹಿನ್ನೆಲೆಯಲ್ಲಿ ಮೂಡಿಬಂತು.

ನಂತರ ರಾಜಕೀಯ-ಸಿನಿಮಾ ನಂಟಿನ ‘ಇರುವರ್’, ಯುವಜನತೆಯ ನೆಚ್ಚಿನ ‘ಅಲೈಪಾಯುತೆ’, ಶ್ರೀಲಂಕಾ ಯುದ್ಧದ ಬಿಸಿ ಮುಟ್ಟಿಸಿದ ‘ಕನ್ನತಿಲ್ ಮುತ್ತಮಿಟ್ಟಾಲ್’, ಉದ್ಯಮಿ ಧೀರೂಭಾಯಿ ಅಂಬಾನಿ ಬದುಕಿನಿಂದ ಪ್ರೇರಿತ ‘ಗುರು’, ‘ರಾವಣನ್’, ‘ಓಕೆ ಕಣ್ಮಣಿ’ ಹಾಗೂ ಇತ್ತೀಚೆಗೆ ಮಹಾಕಾವ್ಯ ‘ಪೊನ್ನಿಯಿನ್ ಸೆಲ್ವನ್’ (ಭಾಗ 1 ಮತ್ತು 2) ವರೆಗೆ ಅವರ ಗೆಲುವಿನ ಓಟ ಮುಂದುವರಿಯಿತು.

5 ಭಾಷೆಗಳಲ್ಲಿ ನಿರ್ದೇಶನ ಮತ್ತು ವೈಯಕ್ತಿಕ ಬದುಕು
ಪ್ಯಾನ್ ಇಂಡಿಯಾ ಎಂಬ ಪದ ಹುಟ್ಟುವ ಮುನ್ನವೇ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಹೀಗೆ ಐದು ಭಾಷೆಗಳಲ್ಲಿ ಸಿನಿಮಾಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಮಣಿರತ್ನಂ ಅವರದ್ದು. 4 ದಶಕಗಳ ಸುದೀರ್ಘ ಪಯಣದಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಇವರು, ‘ಮದ್ರಾಸ್ ಟಾಕೀಸ್’ ನಿರ್ಮಾಣ ಸಂಸ್ಥೆಯ ಮೂಲಕ ಹಲವು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದಾರೆ.

1988ರಲ್ಲಿ ಖ್ಯಾತ ನಟಿ, ನಿರ್ದೇಶಕಿ ಹಾಗೂ ಬರಹಗಾರ್ತಿ ಸುಹಾಸಿನಿ ಅವರನ್ನು ವಿವಾಹವಾದರು. ಸುಹಾಸಿನಿ ಅವರು ಮಣಿರತ್ನಂ ಅವರ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದು ಕ್ರಿಯೇಟಿವ್ ಪಾರ್ಟ್ನರ್ ಆಗಿಯೂ ಸಾಥ್ ನೀಡಿದ್ದಾರೆ. ಈ ದಂಪತಿಗೆ ನಂದನ್ ಎಂಬ ಮಗನಿದ್ದು, ಅವರು ಚಿತ್ರರಂಗದಿಂದ ದೂರ ಉಳಿದು ತತ್ವಶಾಸ್ತ್ರ ಮತ್ತು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಭಾರತ ಸರ್ಕಾರ 2002ರಲ್ಲಿ ಇವರಿಗೆ ‘ಪದ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಿದೆ. ಯಾವುದೇ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯದೆ, ಕೇವಲ ದೃಶ್ಯಗಳ ಮೂಲಕವೇ ಕಾವ್ಯ ಬರೆದು ಇಡೀ ಭಾರತೀಯ ಸಿನಿಮಾದ ದಿಕ್ಸೂಚಿಯಾಗಿ ಬೆಳೆದ ಲೆಜೆಂಡರಿ ನಿರ್ದೇಶಕ ಮಣಿರತ್ನಂ ಅವರ ಶ್ರಮ ಮತ್ತು ಸಾಧನೆ ಮುಂಬರುವ ಪೀಳಿಗೆಗೆ ಸದಾ ಸ್ಪೂರ್ತಿ.

Add Zee News as a Preferred Source
TAGS:
Cinema