ಗಿಟಾರ್ ಬ್ಯಾಗ್‌ಗೆ ಹೆಲ್ಮೆಟ್ ಇಲ್ಲ ಎಂದು ಗುರುತಿಸಿದ AI ವ್ಯವಸ್ಥೆ, ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಿ ₹500 ದಂಡ ವಿಧಿಸಿದೆ.
ಕೋಮುಲ್ ಅಧ್ಯಕ್ಷ ಕೆ.ವೈ ನಂಜುಂಡೇಗೌಡ, ಇವತ್ತು ಬೇರೆ ರಾಜ್ಯದ ರೈತರಿಗೂ ನಮ್ಮ ರೈತರಿಗೂ ಸಿಗ್ತಾ ಇರೋ ಬೆಲೆಯಲ್ಲಿ ವ್ಯತ್ಯಾಸ ಇದೆ. ಇವತ್ತು ನಮ್ಮ ರೈತರಿಗೆ 10 ರೂಪಾಯಿ ಕಡಿಮೆ ಕೊಡಲಾಗುತ್ತಿದೆ.
ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ 14 ನೇ ಆರೋಪಿ ಪ್ರದೋಶ್ ರಾವ್ ಪ್ರಕರಣದಲ್ಲಿ ಮಾಫಿಯಾದಾರನಾಗಲು ನ್ಯಾಯಾಲಯ ಅನುಮತಿ ನೀಡಿದ ನಂತರ, ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಆತನ ಬ್ಯಾರಕ್ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಇವತ್ತು ನಮ್ಮ ರೈತರಿಗೆ 10 ರೂಪಾಯಿ ಕಡಿಮೆ ಕೊಡಲಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಇದರಿಂದ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಬೇಕು.
Darshan Pavithra Gowda video viral : ವೈರಲ್ ಆದ ವಿಡಿಯೋದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಒಟ್ಟಿಗೆ ಕುಳಿತಿರುವುದು, ದರ್ಶನ್ ಅವರ ತಾಯಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದು ಇದೆ.
ಬೆಂಗಳೂರು, ಮೈಸೂರು ಟ್ರಾಫಿಕ್ ಸಿಗ್ನಲ್ ಎಎಂಸಿ ನವೀಕರಣಕ್ಕೆ ಒತ್ತಾಯಿಸಿ ಡಿಜಿಪಿಗೆ ಪೊಲೀಸ್ ಪ್ರಾಧಿಕಾರದ ಸದಸ್ಯರಿಂದಲೇ ಪತ್ರ ಬರೆಯಲಾಗಿದೆ.
ಹವಾಮಾನ ವರದಿಯ ಪ್ರಕಾರ, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಠಿಣ ಬರಗಾಲದಿಂದ ಕಂಗೆಟ್ಟಿರುವ ಕರ್ನಾಟಕದ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರ ಆಸರೆಯಾಗಿ ನಿಂತಿದೆ. ಕೇಂದ್ರದ ಪರಿಹಾರ ಧನಕ್ಕಾಗಿ ಕಾಯದೆ, ತಕ್ಷಣದ ನೆರವಿನಾಗಿ ಪ್ರತಿಯೊಬ್ಬ ಅರ್ಹ ರೈತನಿಗೆ ₹2,500 ಇನ್‌ಪುಟ್ ಸಬ್ಸಿಡಿ, ಕೃಷಿ ಸಾಲ ಮರುಪಾವತಿಗೆ ತಾತ್ಕಾಲಿಕ ತಡೆ ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಬ್ರೇಕ್ ಹಾಕುವ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ 20 ವರ್ಷಗಳ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಗನನ್ನ ಬರ್ಬರವಾಗಿ ಹ*ತ್ಯೆ ಮಾಡಲಾಗಿದೆ. ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ನಡೆದ ಈ ಜೋಡಿ ಕೊ*ಲೆ ಪ್ರಕರಣ ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯ ಕುಶಾಲತೋಪು ತಾಲೀಮಿಗೆ ಅಧಿಕೃತ ಚಾಲನೆ ದೊರೆತಿದ್ದು, ಅರಮನೆ ಆವರಣದಲ್ಲಿ ಫಿರಂಗಿ ಗಾಡಿಗಳಿಗೆ ಮೈಸೂರು ನಗರ ಪೊಲೀಸ್ ಇಲಾಖೆಯಿಂದ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ.. ಹೆಚ್ಚಿನ ವಿವರಗಳು ಇಲ್ಲಿವೆ.
ಕೊಡಗು ಮತ್ತು ನೆರೆ ರಾಜ್ಯವಾದ ಕೇರಳದ ಗಡಿ ಭಾಗಗಳಲ್ಲಿ ಈ ಹಿಂದೆ ಇಂತಹ ‘ಕೆಂಪು ಮಳೆ’ ಸಂಭವಿಸಿದಾಗ ವಿಜ್ಞಾನಿಗಳು ಸುದೀರ್ಘ ಸಂಶೋಧನೆ ನಡೆಸಿದ್ದರು. ವಿಜ್ಞಾನಿಗಳ ಪ್ರಕಾರ, ಇದು ಯಾವುದೇ ಪವಾಡವೂ ಅಲ್ಲ, ಅಶುಭ ಮುನ್ಸೂಚನೆಯೂ ಅಲ್ಲ. ಇದಕ್ಕೊಂದು ಸ್ಪಷ್ಟ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ.
ರಾಜ್ಯ ವಿವಿಧ ಜಿಲ್ಲೆಗಳಿಂದ ಧಾರವಾಡಕ್ಕೆ ಆಗಮಿಸಿ ಇಂದಿನಿಂದ ನಾಲ್ಕು ದಿನಗಳ ಕಾಲ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿಮೇಳ ನಡೆಯುತ್ತಿದೆ. ಈ ಮೇಳಕ್ಕೆ ಬರುವ ಬಹುತೇಕ ರೈತರು ಮೊದಲಿಗೆ ಖರೀದಿಸುವುದು ಬಿತ್ತನೆ ಬೀಜ.
ಮೈಸೂರು ದಸರಾ ಜಂಬೂಸವಾರಿಯ ಸಂದರ್ಭದಲ್ಲಿ 21 ಕುಶಾಲತೋಪುಗಳನ್ನ ಸಿಡಿಸುವುದು ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ. ರಾಷ್ಟ್ರಗೀತೆ ನುಡಿಸುವ ವೇಳೆ ಗೌರವ ಸೂಚಕವಾಗಿ ಈ ಕುಶಾಲತೋಪುಗಳನ್ನ ಸಿಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಫಿರಂಗಿಗಳ ತಾಲೀಮು ಆರಂಭಿಸುವ ಮುನ್ನ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹೆಸ್ಕಾಂ ಸಿಬ್ಬಂದಿ ಬಾಕಿ ವಿದ್ಯುತ್ ಬಿಲ್ ವಸೂಲಿ ಮಾಡುವುದು ಅಗತ್ಯವಾಗಿದೆ ಹಾಗೂ ಕಟ್ ಮಾಡುವುದು ತಪ್ಪಲ್ಲ, ಅದು ಅವರ ಕರ್ತವ್ಯ. ಈ ಘಟನೆಯಿಂದ ಹೆಸ್ಕಾಂ ಸಿಬ್ಬಂದಿ ಯೂನಿಯನ್‌ನವರು ಹೋರಾಟ ಮಾಡಲು ಮುಂದಾಗಿರುವುದು ಸಹಜ.
ಮೈಸೂರು ದಸರಾ ಕುಸ್ತಿಯಲ್ಲಿ ತೀರ್ಪಿನ ಗೊಂದಲ ನಿವಾರಿಸಲು ಈ ಬಾರಿ ವಿಡಿಯೋ ಅನಾಲಿಸಿಸ್ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ಪ್ರಮುಖ ಕ್ಷಣಗಳನ್ನ ವಿಡಿಯೋದಲ್ಲಿ ದಾಖಲಿಸಿ, ಅನುಮಾನ ಮೂಡಿದರೆ ತಜ್ಞರ ತಂಡ ಮರುಪರಿಶೀಲಿಸಿ ತೀರ್ಪು ನೀಡಲಿದೆ.
ಕಾಂಗ್ರೆಸ್ ಸರ್ಕಾರ ಹಾಗೂ ಪೌರ ಕಾರ್ಮಿಕರ ನಡುವೆ ಭಕ್ತ-ಭಗವಂತನ ಸಂಬಂಧ. ಶೀಘ್ರದಲ್ಲೇ ಪೌರಕಾರ್ಮಿಕರ ಭತ್ಯೆಗಳನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ತಮ್ಮ ವಿರುದ್ಧ ಯಾರು ದೂರು ನೀಡಿದ್ದಾರೆ ಎಂಬುದಕ್ಕಿಂತ, ದಾಳಿಯ ಹಿಂದಿನ ಉದ್ದೇಶವೇನು ಎಂಬುದನ್ನ ಗಮನಿಸುತ್ತಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ವಿಚಾರದಲ್ಲಿ ಎಲ್ಲವನ್ನೂ ಗಮನಿಸುತ್ತಿದ್ದು, ತನಗೆ ಹಲವು ವಿಷಯಗಳು ಅರ್ಥವಾಗುತ್ತಿವೆ ಎಂದು ತಿಳಿಸಿದ್ದಾರೆ.
ಇಡಿಯಿಂದ ಯಾವುದೇ ಕ್ಷಣದಲ್ಲಿ ನನಗೆ ನೋಟಿಸ್ ಬರಬಹುದು. ನೋಟಿಸ್ ಬಂದೇ ಬರುತ್ತದೆ ಎಂಬ ಭರವಸೆಯಿದೆ. ಅದು ಬಂದಾಗ ಕಾನೂನಾತ್ಮಕವಾಗಿಯೇ ಹೋಗಿ ಸೂಕ್ತ ಉತ್ತರ ನೀಡುತ್ತೇನೆ.
ಕೆಲವರು ಚಿತ್ರದ ಆಕ್ಷನ್ ದೃಶ್ಯಗಳನ್ನ ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಸಿನಿಮಾದಲ್ಲಿ ಅಗತ್ಯಕ್ಕಿಂತ ಹೆಚ್ಚು ಹಿಂಸಾತ್ಮಕ ದೃಶ್ಯಗಳಿವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಚಿತ್ರದ ಕಥೆ ಮತ್ತು ನಿರೂಪಣೆಯ ಬಗ್ಗೆಯೂ ಪ್ರೇಕ್ಷಕರಿಂದ ಟೀಕೆಗಳು ಕೇಳಿಬಂದಿವೆ. ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಬರುವ ಕೆಲವು ಸನ್ನಿವೇಶಗಳು ಕಥೆಗೆ ಅಗತ್ಯವಿತ್ತೇ ಎಂಬ ಪ್ರಶ್ನೆಯನ್ನ ಪ್ರೇಕ್ಷಕರು ಎತ್ತಿದ್ದಾರೆ.