• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಿ.. ಸಿಎಂಗೆ ಕೋಮುಲ್ ಅಧ್ಯಕ್ಷ KY ನಂಜುಂಡೇಗೌಡ ಮನವಿ

ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಿ.. ಸಿಎಂಗೆ ಕೋಮುಲ್ ಅಧ್ಯಕ್ಷ KY ನಂಜುಂಡೇಗೌಡ ಮನವಿ

ಕೋಮುಲ್ ಅಧ್ಯಕ್ಷ ಕೆ.ವೈ ನಂಜುಂಡೇಗೌಡ, ಇವತ್ತು ಬೇರೆ ರಾಜ್ಯದ ರೈತರಿಗೂ ನಮ್ಮ ರೈತರಿಗೂ ಸಿಗ್ತಾ ಇರೋ ಬೆಲೆಯಲ್ಲಿ ವ್ಯತ್ಯಾಸ ಇದೆ. ಇವತ್ತು ನಮ್ಮ ರೈತರಿಗೆ 10 ರೂಪಾಯಿ ಕಡಿಮೆ ಕೊಡಲಾಗುತ್ತಿದೆ.

Written ByBhimappa
Published: Sep 26, 2026, 01:15 PM IST|Updated: Sep 26, 2026, 01:24 PM IST
joinshare
ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಿ.. ಸಿಎಂಗೆ ಕೋಮುಲ್ ಅಧ್ಯಕ್ಷ KY ನಂಜುಂಡೇಗೌಡ ಮನವಿ
Image Credit: nandini_milk_price

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Komul President meets CM D.K. Shivakumar: ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಹಾಲಿನ ಮಾರಾಟ ಒಕ್ಕೂಟಗಳ ಅಧ್ಯಕ್ಷರು ಇವತ್ತು ಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ. ಶೀಘ್ರವೇ ಕ್ಯಾಬಿನೆಟ್‌ನಲ್ಲಿ ಹಾಲಿನ ದರ ಹೆಚ್ಚಳ ಕುರಿತು ಸರ್ಕಾರ ಪ್ರಕಟಿಸಲು ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ನಂದಿನಿ ಹಾಲು ದರ ಏರಿಕೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಜೊತೆ ಸಿಎಂ ಡಿ.ಕೆ ಶಿವಕುಮಾರ್‌ ಅವರು ಚರ್ಚೆ ಮಾಡಿದರು. ಸಿಎಂ ನಿವಾಸಕ್ಕೆ ಆಗಮಿಸಿದ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿ ರಾಜ್ ಹೆಗ್ಡೆ, ಡಿ.ಕೆ ಸುರೇಶ್, ಕೆ.ವೈ ನಂಜೇಗೌಡ ಅವರು ಆಗಮಿಸಿ ಚರ್ಚೆ ನಡೆಸಿದರು.

ನಂದಿನಿ ಹಾಲು ದರ ಏರಿಕೆ ವಿಚಾರ ಸಂಬಂದಿಸಿದಂತೆ ಇಂದು ಹಾಲು ಒಕ್ಕೂಟದ ಅಧ್ಯಕ್ಷರ ಜೊತೆ ಸಿಎಂ ಚರ್ಚೆ ಮಾಡಿದರು. ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿವ ಕೊಟ್ಟ ಹಾಲು ಒಕ್ಕೂಟದ ಅಧ್ಯಕ್ಷರು ಹಾಲಿನ ದರ 10 ರೂಪಾಯಿ ಹೆಚ್ಚಿಸುವಂತೆ ಮನವಿ ಮಾಡಿದರು.

ಇದೇ ವೇಳೆ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಅವರು, ಕೊಮುಲ್ ಅಧ್ಯಕ್ಷ ನಂಜೇಗೌಡ ಸೇರಿ ಹಲವು ಜಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಿಂದ ದರ ಏರಿಕೆ ಪ್ರಸ್ತಾವ ಸಲ್ಲಿಕೆ ಮಾಡಿದರು. ಸಭೆ ಬಳಿಕ ಮಾತನಾಡಿದ ಡಿಕೆ ಸುರೇಶ್ ಅವರು, ಇವತ್ತು ಬೇರೆ ರಾಜ್ಯ ರೈತರಿಗೆ 35 ರೂಪಾಯಿ ಕೊಡುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ರೈತರಿಗೆ 41 ರೂಪಾಯಿ ಇದೆ. ಉತ್ಪಾದನಾ ವೆಚ್ಚ ಹೆಚ್ಚಳ ಆಗಿ ಒಕ್ಕೂಟ ನಷ್ಟದಲ್ಲಿದೆ. 10 ರೂಪಾಯಿ ಹೆಚ್ಚಳ ಮಾಡಿದರೆ, 7 ರೂಪಾಯಿ ರೈತರಿಗೆ ಹಾಗು 3 ರೂಪಾಯಿ ಒಕ್ಕೂಟಗಳಿಗೆ ಸಿಗುತ್ತದೆ. ಇದಕ್ಕೆ ಸಿಎಂ ಡಿ.ಕೆ ಶಿವಕುಮಾರ್‌ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕ್ಯಾನಿನೆಟ್‌ನಲ್ಲಿ ರೈತರ ಪರ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಕೋಮೂಲ್ ಅಧ್ಯಕ್ಷ ಕೆ.ವೈ ನಂಜುಂಡೇಗೌಡ, ಇವತ್ತು ಬೇರೆ ರಾಜ್ಯದ ರೈತರಿಗೂ ನಮ್ಮ ರೈತರಿಗೂ ಸಿಗ್ತಾ ಇರೋ ಬೆಲೆಯಲ್ಲಿ ವ್ಯತ್ಯಾಸ ಇದೆ. ಇವತ್ತು ನಮ್ಮ ರೈತರಿಗೆ 10 ರೂಪಾಯಿ ಕಡಿಮೆ ಕೊಡಲಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು ಇದರಿಂದ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಬೇಕು. ಈ ಕುರಿತು ಸಿಎಂ ಡಿ.ಕೆ ಶಿವಕುಮಾರ್‌ಗೆ ಮನವಿ ಮಾಡಿದ್ದೇವೆ. ಸಿಎಂ ಡಿ.ಕೆ ಶಿವಕುಮಾರ್‌ ಅವರು ಶೀಘ್ರವೇ ನಮ್ಮ ಬೇಡಿಕೆ ಈಡೇರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ. ಕೋಮುಲ್ ಅಧ್ಯಕ್ಷ ಕೆ.ವೈ ನಂಜುಂಡೇಗೌಡ, ಇವತ್ತು ಬೇರೆ ರಾಜ್ಯದ ರೈತರಿಗೂ ನಮ್ಮ ರೈತರಿಗೂ ಕೊಡುವ ಹಣದಲ್ಲಿ ಜಾಸ್ತಿ ವ್ಯತ್ಯಾಸ ಇದೆ. ಬೇರೆ ರಾಜ್ಯದಂತೆ ನಮ್ಮ ರಾಜ್ಯದಲ್ಲೂ ರೈತರಿಗೆ ಹಣ ಸಿಗಬೇಕು. ಎಲ್ಲ ರೇಟ್‌ ಜಾಸ್ತಿ ಆಗುತ್ತಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ರೈತರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.

ಹಾಲು ಒಕ್ಕೂಟಗಳು ಹಾಗು ರೈತರ ನಿರಂತರ ಹೋರಾಟದ ಫಲವಾಗಿ ಶೀಘ್ರವೇ ಸರ್ಕಾರ ಹಾಲಿನ ದರ ಹೆಚ್ಚಿಸಿ ರೈತರಿಗೆ ಗುಡ್ ನ್ಯೂಸ್ ಕೊಡುವ ನಿರೀಕ್ಷೆ ಇದೆ. ಬೆಲೆ ಏರಿಕೆಯ ಬರೆ ಮಾತ್ರ ಜನಸಾಮಾನ್ಯರಿಗೆ ಬೀಳುವುದು ಖಚಿತವಾಗಿದೆ. ಅದರಲ್ಲಿ ನಗರದಲ್ಲಿ ವಾಸಿಸುವ ಜನರು ದುಬಾರಿ ಆಗುವ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿ ಮಾಡಲೇಬೇಕಾಗುತ್ತದೆ. ಸಿಲಿಕಾನ್‌ ಸಿಟಿ ಜನರಂತೂ ಹಿಂದಿಗಿಂತಲೂ ಹೆಚ್ಚು ಹಣ ಕೊಟ್ಟು ನಂದಿನ ಹಾಲನ್ನು ಖರೀದಿ ಮಾಡುವಂತೆ ಆಗಲಿದೆ. ಒಂದು ಕಡೆ ರೈತರಿಗೆ ಅನುಕೂಲವಾದರೆ, ಇನ್ನೊಂದು ಕಡೆ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. 

Add Zee News as a Preferred Source
TAGS:
Kannada News