• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಸಿದ್ದರಾಮಯ್ಯ ನಮಗೆ ಎಂದಿಗೂ ಕ್ಯಾಪ್ಟನ್: 2028ಕ್ಕೂ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ!

ಸಿದ್ದರಾಮಯ್ಯ ನಮಗೆ ಎಂದಿಗೂ ಕ್ಯಾಪ್ಟನ್: 2028ಕ್ಕೂ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ!

ಇಡಿಯಿಂದ ಯಾವುದೇ ಕ್ಷಣದಲ್ಲಿ ನನಗೆ ನೋಟಿಸ್ ಬರಬಹುದು. ನೋಟಿಸ್ ಬಂದೇ ಬರುತ್ತದೆ ಎಂಬ ಭರವಸೆಯಿದೆ. ಅದು ಬಂದಾಗ ಕಾನೂನಾತ್ಮಕವಾಗಿಯೇ ಹೋಗಿ ಸೂಕ್ತ ಉತ್ತರ ನೀಡುತ್ತೇನೆ.

Reported ByManjunath NaragundEdited ByManjunath Naragund
Published: Sep 25, 2026, 04:11 PM IST|Updated: Sep 25, 2026, 04:21 PM IST
joinshare
ಸಿದ್ದರಾಮಯ್ಯ ನಮಗೆ ಎಂದಿಗೂ ಕ್ಯಾಪ್ಟನ್: 2028ಕ್ಕೂ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ!
Image Credit: File Photo

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಇಡಿ ದಾಳಿ, ಆರ್ಥಿಕ ಇಲಾಖೆಯ ಬಹಿರಂಗ ಪತ್ರ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಸಂಬಂಧದ ಕುರಿತಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ. ಆರ್ಥಿಕ ಇಲಾಖೆಯ ಪತ್ರದಿಂದ ಹಿಡಿದು ನಾಯಕತ್ವದವರೆಗಿನ ಹಲವು ವಿಷಯಗಳ ಕುರಿತು ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, "ಆರ್ಥಿಕ ಇಲಾಖೆಯ ಪತ್ರ ಬಹಿರಂಗಗೊಂಡ ತಕ್ಷಣ ಸರ್ಕಾರ ಬೊಕ್ಕಸ ಖಾಲಿಯಾಗಿದೆ ಅಥವಾ ದಿವಾಳಿಯಾಗಿದೆ ಎಂದು ಅರ್ಥವಲ್ಲ. ಬಜೆಟ್‌ನಲ್ಲಿ ನಾವು ಘೋಷಣೆ ಮಾಡಿರುವ ಯೋಜನೆಗಳಿಗೆ ಸಂಪೂರ್ಣ ಹಣವಿದೆ. ಆದರೆ, ಹೊಸ ಘೋಷಣೆಗಳಿಗೆ ತಕ್ಷಣ ಹಣ ಹೊಂದಿಸುವುದು ಕಷ್ಟ ಎಂಬ ಎಚ್ಚರಿಕೆಯನ್ನು ಮಾತ್ರ ಇಲಾಖೆ ನೀಡಿದೆ" ಎಂದು ಸ್ಪಷ್ಟಪಡಿಸಿದರು. ಪ್ರತಿಯೊಂದು ಸರ್ಕಾರದ ಅವಧಿಯಲ್ಲೂ ಆರ್ಥಿಕ ಇಲಾಖೆ ಈ ರೀತಿಯ ಸುಸೂತ್ರ ನಿರ್ವಹಣೆಯ ಸಲಹೆ ನೀಡುತ್ತದೆ. ಕೆಲವೊಂದು ಇಲಾಖೆಗಳಲ್ಲಿ ಖರ್ಚಾಗದೇ ಉಳಿಯುವ ಹಣವನ್ನು ಹೊಸ ಯೋಜನೆಗಳಿಗೆ ಮರುಬಳಕೆ ಮಾಡಲಾಗುವುದು ಎಂದು ಅವರು ಹೇಳಿದರು.

ಇಡಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತ

ತಮ್ಮ ನಿವಾಸದ ಮೇಲಿನ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಸಚಿವರು, "ಇಡಿಯಿಂದ ಯಾವುದೇ ಕ್ಷಣದಲ್ಲಿ ನನಗೆ ನೋಟಿಸ್ ಬರಬಹುದು. ನೋಟಿಸ್ ಬಂದೇ ಬರುತ್ತದೆ ಎಂಬ ಭರವಸೆಯಿದೆ. ಅದು ಬಂದಾಗ ಕಾನೂನಾತ್ಮಕವಾಗಿಯೇ ಹೋಗಿ ಸೂಕ್ತ ಉತ್ತರ ನೀಡುತ್ತೇನೆ. ವಿದೇಶಿ ಹೂಡಿಕೆ ಅಥವಾ ಕಮಿಷನ್ ವಿಚಾರಗಳ ಬಗ್ಗೆ ಏನೇ ಪ್ರಶ್ನೆಗಳಿದ್ದರೂ ಇಡಿ ಅಧಿಕಾರಿಗಳ ಮುಂದೆಯೇ ಉತ್ತರಿಸುತ್ತೇನೆ" ಎಂದರು.

ಕಳೆದ 14 ವರ್ಷಗಳಿಂದ ಬಿಜೆಪಿ ಹಾಗೂ ಅವರ ಮಿತ್ರ ಪಕ್ಷಗಳ ನಾಯಕರ ಮೇಲೆ ಒಂದೇ ಒಂದು ಇಡಿ ದಾಳಿಯೂ ನಡೆದಿಲ್ಲ ಎಂಬುದನ್ನು ಬೆಟ್ಟು ಮಾಡಿದ ಅವರು, "ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ದಾಳಿ. ನನ್ನ ವಿರುದ್ಧ ದೂರು ನೀಡಿದವರು ಯಾರು, ಅವರ ಹಿನ್ನೆಲೆ ಏನು ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆದರೆ ಈ ದಾಳಿಯಿಂದ ನಾನು ಮಾನಸಿಕವಾಗಿ ಕುಗ್ಗುವುದಿಲ್ಲ, ರಾಜಕೀಯವಾಗಿಯೇ ಎದುರಿಸುತ್ತೇನೆ" ಎಂದು ಸವಾಲೆಸೆದರು.

‘ಸಿದ್ದರಾಮಯ್ಯ ಆರ್ಮಿ ಚಿದ್ರವಾಗಿಲ್ಲ, ನಾನೇ ವೈಸ್ ಕ್ಯಾಪ್ಟನ್’

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳನ್ನು ಸತೀಶ್ ಜಾರಕಿಹೊಳಿ ಸಂಪೂರ್ಣವಾಗಿ ತಳ್ಳಿಹಾಕಿದರು. "ಸಿದ್ದರಾಮಯ್ಯ ಆರ್ಮಿ ಚಿದ್ರವಾಗಿಲ್ಲ. ಈಗಲೂ ಸಿದ್ದರಾಮಯ್ಯನವರೇ ನಮಗೆ ಕ್ಯಾಪ್ಟನ್, ನಾನು ಅದರ ವೈಸ್ ಕ್ಯಾಪ್ಟನ್. ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ. ನಾವು ನಿತ್ಯ ಭೇಟಿಯಾಗಬೇಕಾದ ಅಗತ್ಯವಿಲ್ಲ, ಕೆಲಸ ಇದ್ದಾಗ ಭೇಟಿಯಾಗುತ್ತೇವೆ. ಇಡಿ ದಾಳಿ ನಡೆದಾಗ ಯತೀಂದ್ರ ಸಿದ್ದರಾಮಯ್ಯನವರು ಬಂದು ಭೇಟಿಯಾಗಿದ್ದಾರೆ.ಮನೆಯಲ್ಲೊಬ್ಬರು ಸಾಂತ್ವನ ಹೇಳಿದರೆ ಸಾಕು, ಇಡೀ ಕುಟುಂಬವೇ ಬರಬೇಕೆಂದಿಲ್ಲ" ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದದ್ದು ಕೇವಲ ಹಿಂದುಳಿದವರ ಸಮಾವೇಶವೇ ಹೊರತು ಅಹಿಂದ ಸಮಾವೇಶವಲ್ಲ ಎಂದ ಅವರು, ಅಹಿಂದ ಸಂಘಟನೆ ಎಂದಿಗೂ ಭದ್ರವಾಗಿದೆ ಎಂದರು.

ಇದೇ ವೇಳೆ ಮುಂದಿನ ಸಿಎಂ ರೇಸ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ಸಚಿವರು, 'ಈ ಹಿಂದೆ ನನಗೆ ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದು ಹೇಳಿದ್ದೆ. ಆದರೆ ಈಗ ಸಿಎಂ ಡಿ.ಕೆ. ಶಿವಕುಮಾರ್ ಅವರೇ 'ಮುಂದೆಯೂ ನಾನೇ ಸಿಎಂ' ಎಂದು ಹೇಳುತ್ತಿದ್ದಾರೆ.ಇದರಿಂದ ನನಗೆ ಬಹಳ ಸಂತೋಷವಾಗಿದೆ. 2028ಕ್ಕೂ ಡಿ.ಕೆ. ಶಿವಕುಮಾರ್ ಅವರೇ ಸಿಎಂ ಆಗಲಿ, ಅವರ ನೇತೃತ್ವದಲ್ಲೇ ಪಕ್ಷ ಅಧಿಕಾರಕ್ಕೆ ಬರಲಿ. ನನಗೆ ಇನ್ನೂ ವಯಸ್ಸಿದೆ, ನಾನು ಕಾಯುತ್ತೇನೆ" ಎಂದು ಹೊಸ ರಾಜಕೀಯ ಸಂಚಲನ ಮೂಡಿಸಿದರು.

Add Zee News as a Preferred Source
TAGS:
Kannada News