• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಮೂಢನಂಬಿಕೆ ಬೇಡ, ಆತಂಕವೂ ಬೇಡ: ಕೊಡಗಿನ ‘ಕೆಂಪು ಮಳೆ’ ಹಿಂದಿನ ಅಸಲಿ ಸತ್ಯ ಇಲ್ಲಿದೆ!

ಮೂಢನಂಬಿಕೆ ಬೇಡ, ಆತಂಕವೂ ಬೇಡ: ಕೊಡಗಿನ ‘ಕೆಂಪು ಮಳೆ’ ಹಿಂದಿನ ಅಸಲಿ ಸತ್ಯ ಇಲ್ಲಿದೆ!

ಕೊಡಗು ಮತ್ತು ನೆರೆ ರಾಜ್ಯವಾದ ಕೇರಳದ ಗಡಿ ಭಾಗಗಳಲ್ಲಿ ಈ ಹಿಂದೆ ಇಂತಹ ‘ಕೆಂಪು ಮಳೆ’ ಸಂಭವಿಸಿದಾಗ ವಿಜ್ಞಾನಿಗಳು ಸುದೀರ್ಘ ಸಂಶೋಧನೆ ನಡೆಸಿದ್ದರು. ವಿಜ್ಞಾನಿಗಳ ಪ್ರಕಾರ, ಇದು ಯಾವುದೇ ಪವಾಡವೂ ಅಲ್ಲ, ಅಶುಭ ಮುನ್ಸೂಚನೆಯೂ ಅಲ್ಲ. ಇದಕ್ಕೊಂದು ಸ್ಪಷ್ಟ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ.

Reported ByManjunath NaragundEdited ByManjunath Naragund
Published: Sep 25, 2026, 07:47 PM IST|Updated: Sep 25, 2026, 08:02 PM IST
joinshare
ಮೂಢನಂಬಿಕೆ ಬೇಡ, ಆತಂಕವೂ ಬೇಡ: ಕೊಡಗಿನ ‘ಕೆಂಪು ಮಳೆ’ ಹಿಂದಿನ ಅಸಲಿ ಸತ್ಯ ಇಲ್ಲಿದೆ!
Image Credit: Kodagu

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

2

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

3

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

4

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

5

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಡಿಕೇರಿ:ಹಸಿರು ಕಾನನ, ತಂಪು ಹವಾಮಾನಕ್ಕೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಈಗ ಹೊಸದೊಂದು ಕೌತುಕದ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯ ಕೆಲ ಭಾಗಗಳಲ್ಲಿ ಸುರಿದ ಮಳೆಯ ನೀರು ಕೆಂಪು ಬಣ್ಣದಲ್ಲಿ ಕಂಡುಬಂದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ. ಮಳೆ ನೀರು ರಕ್ತದ ಬಣ್ಣಕ್ಕೆ ತಿರುಗಿರುವುದನ್ನು ನೋಡಿ ಸ್ಥಳೀಯರು ಹಾಗೂ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಎಮ್ಮೆಮಾಡು ಹಾಗೂ ಮರಗೋಡು ಸೇರಿದಂತೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಾದ ಬಳಿಕ ತಗ್ಗಿನ ಪ್ರದೇಶಗಳಲ್ಲಿ ನಿಂತ ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ಈ ಹಿಂದೆ ಕೂಡ ಜಿಲ್ಲೆಯ ಭಾಗಮಂಡಲ ಮತ್ತು ತಾಳತ್‌ಮನೆ ಭಾಗಗಳಲ್ಲಿ ಇಂತಹ ಕೆಂಪು ಬಣ್ಣದ ಮಳೆ ನೀರು ಸಂಗ್ರಹವಾಗಿದ್ದ ದಾಖಲೆಗಳಿವೆ. ಆದರೆ ಈಗ ಮತ್ತೆ ಈ ವಿದ್ಯಮಾನ ಮರುಕಳಿಸಿರುವುದು ಜನರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಹಲವಾರು ರೀತಿಯ ಚರ್ಚೆಗಳು ಶುರುವಾಗಿವೆ. ಕೆಲವರು ಇದು ಮೋಡ ಬಿತ್ತನೆ ಮಾಡಿದ್ದರಿಂದಲೇ ಮಳೆ ನೀರು ಕೆಂಪು ಬಣ್ಣಕ್ಕೆ ತಿರುಗಿರಬಹುದು ಎಂದು ಶಂಕಿಸುತ್ತಿದ್ದಾರೆ. ಇನ್ನು ಕೆಲವರು ಯಾವುದೋ ಅಶುಭ ಮುನ್ಸೂಚನೆ ಅಥವಾ ಪವಾಡ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಆದರೆ, ಹವಮಾನ ತಜ್ಞರು ಹಾಗೂ ಸ್ಥಳೀಯ ಆಡಳಿತ ಈ ಊಹಾಪೋಹಗಳನ್ನು ತಳ್ಳಿಹಾಕಿವೆ. ಮನೆಗಳ ಹೆಂಚಿನ ಮೇಲಿಂದ ಹರಿದುಬಂದ ನೀರು ಹೆಂಚಿನ ಬಣ್ಣವನ್ನು ಪಡೆದುಕೊಂಡಿರಬಹುದು ಅಥವಾ ವಾತಾವರಣದಲ್ಲಿದ್ದ ಕೆಂಪು ಧೂಳು ಮಳೆ ಹನಿಗಳೊಂದಿಗೆ ಬೆರೆತು ಹೀಗಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ವಿಜ್ಞಾನಿಗಳು ಹೇಳುವುದೇನು? ಅಸಲಿ ಸತ್ಯ ಇಲ್ಲಿದೆ:

ಕೊಡಗು ಮತ್ತು ನೆರೆ ರಾಜ್ಯವಾದ ಕೇರಳದ ಗಡಿ ಭಾಗಗಳಲ್ಲಿ ಈ ಹಿಂದೆ ಇಂತಹ ‘ಕೆಂಪು ಮಳೆ’ ಸಂಭವಿಸಿದಾಗ ವಿಜ್ಞಾನಿಗಳು ಸುದೀರ್ಘ ಸಂಶೋಧನೆ ನಡೆಸಿದ್ದರು. ವಿಜ್ಞಾನಿಗಳ ಪ್ರಕಾರ, ಇದು ಯಾವುದೇ ಪವಾಡವೂ ಅಲ್ಲ, ಅಶುಭ ಮುನ್ಸೂಚನೆಯೂ ಅಲ್ಲ. ಇದಕ್ಕೊಂದು ಸ್ಪಷ್ಟ ಹಾಗೂ ವೈಜ್ಞಾನಿಕ ಹಿನ್ನೆಲೆಯಿದೆ.

1. ಪಾಚಿಯ ಬೀಜಕಗಳ ಪ್ರಭಾವ

ಈ ಭಾಗದ ದಟ್ಟವಾದ ಅರಣ್ಯ ಹಾಗೂ ಮರಗಳ ಮೇಲೆ ’ಟ್ರೆಂಟೆಪೋಹ್ಲಿಯಾ’ ಎಂಬ ವಿಶೇಷ ಮಾದರಿಯ ಹಸಿರು ಪಾಚಿ ಬೆಳೆಯುತ್ತದೆ. ಈ ಪಾಚಿಯು ತನ್ನ ಸಂತಾನೋತ್ಪತ್ತಿಯ ಸಮಯದಲ್ಲಿ ಕೆಂಪು ಬಣ್ಣದ ಬೀಜಕಗಳನ್ನು ಗಾಳಿಗೆ ಬಿಡುಗಡೆ ಮಾಡುತ್ತದೆ. ಈ ಬೀಜಕಗಳು ಗಾಳಿಯಲ್ಲಿ ತೇಲುತ್ತಾ ವಾತಾವರಣದ ಮೇಲ್ಭಾಗದಲ್ಲಿರುತ್ತವೆ. ಮಳೆ ಸುರಿಯುವಾಗ ಇವು ಮಳೆ ಹನಿಗಳೊಂದಿಗೆ ಬೆರೆತು ಭೂಮಿಗೆ ಬಿದ್ದಾಗ ನೀರು ಸಂಪೂರ್ಣ ಕೆಂಪು ಬಣ್ಣದಲ್ಲಿ ಗೋಚರಿಸುತ್ತದೆ.

2. ವಾತಾವರಣದ ಧೂಳಿನ ಕಣಗಳು:

ಕೆಲವೊಮ್ಮೆ ಬಲವಾದ ಸುಂಟರಗಾಳಿ ಅಥವಾ ಚಂಡಮಾರುತ ಬೀಸಿದಾಗ ಭೂಮಿಯ ಮೇಲ್ಮೈನಲ್ಲಿರುವ ಕೆಂಪು ಮಣ್ಣು ಅಥವಾ ಕಬ್ಬಿಣದ ಆಕ್ಸೈಡ್ (Iron Oxide) ಭರಿತ ಧೂಳಿನ ಕಣಗಳು ವಾತಾವರಣದ ಮೇಲ್ಪದರಕ್ಕೆ ಸೇರಿಕೊಳ್ಳುತ್ತವೆ. ಮಳೆ ಬಿದ್ದಾಗ ಈ ಧೂಳು ನೀರಿನೊಂದಿಗೆ ಕೆಳಗೆ ಬರುವುದರಿಂದ ನೀರು ಕೆಂಪಾಗಿ ಕಾಣಿಸುತ್ತದೆ.

ಆತಂಕ ಬೇಡ, ಇದು ಸುರಕ್ಷಿತ!

ಕೆಂಪು ಮಳೆ ನೀರನ್ನು ನೋಡಿ ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಈ ಮಳೆ ನೀರು ಯಾವುದೇ ರೀತಿಯಲ್ಲೂ ಅಪಾಯಕಾರಿಯಲ್ಲ ಅಥವಾ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿಲ್ಲ. ಇದು ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಒಂದು ಜೈವಿಕ ಮತ್ತು ವಾತಾವರಣದ ಪ್ರಕ್ರಿಯೆಯಾಗಿದೆ.

ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡದೆ, ಪ್ರಕೃತಿಯ ಈ ಅಪರೂಪದ ವೈಜ್ಞಾನಿಕ ಕೌತುಕವನ್ನು ಕೇವಲ ನೈಸರ್ಗಿಕ ವಿದ್ಯಮಾನವಾಗಿಷ್ಟೇ ನೋಡಬೇಕು ಎಂಬುದು ತಜ್ಞರ ಸಲಹೆಯಾಗಿದೆ.

Add Zee News as a Preferred Source
TAGS:
Kannada News