ಜನರಿಗೆ ಬಿಗ್ ಶಾಕ್ ನೀಡಲಾಗಿದ್ದು ಎಲೆಕ್ಟ್ರಾನಿಕ್ಸ್ ತಯಾರಕರು ಅಕ್ಟೋಬರ್ 1 ರಿಂದ ಎಸಿಗಳು, ಟಿವಿಗಳು, ವಾಷಿಂಗ್ ಮೆಷಿನ್‌ಗಳು ಮತ್ತು ರೆಫ್ರಿಜರೇಟರ್‌ಗಳ ಅಥವಾ ಬ್ರಿಡ್ಜ್‌ಗಳು ಬೆಲೆಗಳಲ್ಲಿ ಭಾರೀ ಏರಿಕೆ
ಶನಿವಾರ ಬೆಳಿಗ್ಗೆ ಆಸ್ಪತ್ರೆಯ ಬಾಣಂತಿಯರು ಹಾಗೂ ರೋಗಿಗಳಿಗೆ ಆಸ್ಪತ್ರೆ ಕ್ಯಾಂಟೀನ್‌ನಿಂದ ಉಪಹಾರವಾಗಿ ಶೀರವನ್ನು ನೀಡಲಾಗಿತ್ತು. ರೋಗಿಗಳು ಆಹಾರ ಸೇವಿಸುವ ವೇಳೆಯಲ್ಲಿ ಶೀರದೊಳಗೆ ತುಂಡು ತುಂಡಾಗಿ ಸತ್ತು ಬಿದ್ದಿದ್ದ ಹಲ್ಲಿಯ ದೇಹದ ಭಾಗಗಳು ಕಾಣಿಸಿಕೊಂಡಿವೆ.
ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭಾಗವಹಿಸಿದ್ದರು
ಇಡೀ ಕೃಷಿ ಮೇಳಕ್ಕೆ ಒಂದು ಬಗೆಯ ಆಕರ್ಷಣೆ ಇದ್ದರೆ, ಅದೆಲ್ಲಕ್ಕಿಂತ ದೊಡ್ಡದಾದ ಆಕರ್ಷಣೆ ಈ ಫಲ-ಪುಷ್ಪ ಪ್ರದರ್ಶನಕ್ಕೆ ಇರುತ್ತೆ. ಕೃಷಿ ಮೇಳಕ್ಕೆ ಬರೋ ಬಹುತೇಕರು ಮರೆಯದೇ ಭೇಟಿ ಕೊಡೋದು ಈ ಫಲ-ಪುಷ್ಪ ಪ್ರದರ್ಶನದ ಸ್ಥಳಕ್ಕೆ.
ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡಿದ ಯೂಸರ್ ಒಬ್ಬರು, ವಾಟ್ಸಾಪ್ ಹಾಗೂ ಬೃಹತ್ ಸಂಸ್ಥೆಗಳನ್ನೇ ಬೆಂಗಳೂರಿನ ಯಾವುದೋ ಕೆಫೆಯಲ್ಲಿ ಕುಳಿತು ನಿರ್ವಹಿಸಬಹುದು ಎಂದಾದರೆ, ಕಂಪನಿಗಳು ಇನ್ಮುಂದೆ ವರ್ಕ್ ಫ್ರಮ್ ಆಫೀಸ್ ಅನ್ನು ಐಚ್ಛಿಕ (Optional) ಮಾಡುವುದು ಒಳಿತು! ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಬೆಂಗಳೂರಿನ ಯಶವಂತಪುರ, ದಾಸನಪುರ ಹಾಗೂ ಕೆ.ಆರ್. ಮಾರುಕಟ್ಟೆಗಳಿಗೆ ಪ್ರತಿದಿನ ನೆರೆ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಬರುತ್ತಿದ್ದ ತರಕಾರಿ ಪೂರೈಕೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.
Satyathma Tirtha Swamiji car accident: ಧಾರವಾಡದಿಂದ ಸವಣೂರಿನ ಸತ್ಯಬೋಧ ಮಠದ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮೈಸೂರು ದಸರಾ ಉದ್ಘಾಟನೆಗೆ ಒಪ್ಪಿಗೆ ಸೂಚಿಲ್ಲ ಎಂದು ಎಲ್ಲೆಡೆ ವಂದತಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.
ವಿಶೇಷವಾಗಿ ಸೆಪ್ಟೆಂಬರ್ 28ರಂದು ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ ಮತ್ತು ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಹಾಗೂ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಮೂವರು ಗುತ್ತಿಗೆದಾರರಿಗೆ ಒಟ್ಟು ₹13 ಲಕ್ಷ ದಂಡ ವಿಧಿಸಲಾಗಿದೆ. ಸಹಾಯ ಆ್ಯಪ್ ದೂರುಗಳು ಹಾಗೂ ರಾತ್ರಿ ತಪಾಸಣೆಯಲ್ಲಿ ಹಲವು ಬೀದಿದೀಪಗಳು ಕಾರ್ಯನಿರ್ವಹಿಸದಿರುವುದು ಪತ್ತೆಯಾಗಿದೆ. ಹಾಳಾದ ದೀಪಗಳನ್ನು ತಕ್ಷಣ ದುರಸ್ತಿಪಡಿಸುವಂತೆ ಆಯುಕ್ತ ಕೆ.ಎನ್.ರಮೇಶ್ ಸೂಚಿಸಿದ್ದು, ನಿರ್ಲಕ್ಷ್ಯ ಮುಂದುವರಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಮುಷ್ಕರಕ್ಕೆ UFBU ಕರೆ ನೀಡಿದೆ. ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿ, ಕಾರ್ಯಕ್ಷಮತೆ ಪ್ರೋತ್ಸಾಹ ಯೋಜನೆ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟಿದ್ದು, ಬೇಡಿಕೆ ಈಡೇರದಿದ್ದರೆ ಅಕ್ಟೋಬರ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದೆ. ಮುಷ್ಕರದಿಂದ ಬ್ಯಾಂಕ್‌ಗಳ ನೇರ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡದೊಂದಿಗೆ ಭಾರತ ಒಟ್ಟು 8 ವೈಟ್‌ಬಾಲ್ ಪಂದ್ಯಗಳನ್ನ ಆಡಲಿದೆ. ಸೆಪ್ಟೆಂಬರ್ 27ರಿಂದ 3 ಏಕದಿನ ಪಂದ್ಯಗಳು ಹಾಗೂ ಅಕ್ಟೋಬರ್ 6ರಿಂದ 5 ಟಿ20 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಿಮ ಟಿ20 ಪಂದ್ಯ ನಡೆಯಲಿದೆ.
ಅಕ್ರಮದಲ್ಲಿ ಭಾಗಿಯಾಗಿರುವವರು ಅಥವಾ ನಿಯಮ ಉಲ್ಲಂಘಿಸಿರುವವರು ಇದ್ದರೆ, ಅವರನ್ನು ತನಿಖೆಯ ಮೂಲಕ ಪ್ರತ್ಯೇಕವಾಗಿ ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ವೇಳೆ ಯಾವುದೇ ತಪ್ಪಿಲ್ಲದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಒಟ್ಟಾಗಿ ಅನುಮಾನಿಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸುತ್ತಿದ್ದಾರೆ.
ಬಿಸಿ ಅನ್ನಕ್ಕೆ ಸ್ವಲ್ಪ ತುಪ್ಪ ಸೇರಿಸಿ ಸೇವಿಸುವುದು ರುಚಿಯ ಜೊತೆಗೆ ಕೆಲವು ಪೌಷ್ಟಿಕ ಪ್ರಯೋಜನಗಳನ್ನ ನೀಡಬಹುದು. ಆದರೆ ತುಪ್ಪದಲ್ಲಿ ಕ್ಯಾಲೊರಿ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಹೆಚ್ಚಿರುವುದರಿಂದ ಮಿತವಾಗಿ ಸೇವಿಸುವುದು ಮುಖ್ಯ. ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದಯ ಸಂಬಂಧಿತ ಸಮಸ್ಯೆ ಇರುವವರು ತುಪ್ಪದ ಪ್ರಮಾಣದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು.
ಡಾ.ವಿಷ್ಣುವರ್ಧನ್ ಅವರ 75ನೇ ಅಮೃತ ಮಹೋತ್ಸವವನ್ನ ಬೆಂಗಳೂರಿನ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ನಿರೀಕ್ಷೆಯೊಂದಿಗೆ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಮೆರವಣಿಗೆ, ಸಂಗೀತ, ಕಲಾ ಕಾರ್ಯಕ್ರಮ, ಗಣ್ಯರ ಸನ್ಮಾನ ಹಾಗೂ ಲೇಸರ್ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಸೆಪ್ಟೆಂಬರ್ 27ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದೇ ವೇಳೆ ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಕಡೆ ಹಗುರ ಮಳೆಯಾಗಬಹುದು.
ಇಂದಿನ ದಿನ ಭವಿಷ್ಯದಲ್ಲಿ 12 ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು, ಪ್ರೀತಿ, ಆರೋಗ್ಯ ಹಾಗೂ ಕುಟುಂಬ ಜೀವನದ ಕುರಿತ ರಾಶಿಫಲ ಇಲ್ಲಿದೆ.
ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಒಟ್ಟು 3,991 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ.
ಡ್ರಮ್ಮರ್ ದೇವ ಅವರು ಆರ್‌ಸಿಬಿಯ ಕಟ್ಟಾ ಅಭಿಮಾನಿಯಾಗಿದ್ದರು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್‌ಸಿಬಿ ಪಂದ್ಯಗಳಲ್ಲಿ ಡ್ರಮ್ ಬಾರಿಸಿ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಅವರ ಲೈವ್ ಬೀಟ್ಸ್‌ಗಳು ಪಂದ್ಯಗಳ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸುತ್ತಿದ್ದವು.
ರಾಜ್ಯದ ವಿವಿಧ ಹಾಲು ಒಕ್ಕೂಟಗಳ ಅಧ್ಯಕ್ಷರು ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿ ಹಾಲಿನ ದರ ಹೆಚ್ಚಳದ ಕುರಿತು ತಮ್ಮ ಬೇಡಿಕೆಗಳನ್ನ ಮುಂದಿಟ್ಟಿದ್ದಾರೆ. ಪ್ರತಿ ಲೀಟರ್ ಹಾಲಿಗೆ ₹12 ಹೆಚ್ಚಳ ಮಾಡುವಂತೆ ಒಕ್ಕೂಟಗಳು ಮನವಿ ಮಾಡಿವೆ. ಈ ಹೆಚ್ಚಳದಲ್ಲಿ ₹2 ಅನ್ನ ಒಕ್ಕೂಟಗಳಿಗೆ ನೀಡುವಂತೆ ಬೇಡಿಕೆ ಸಲ್ಲಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.