• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಇಂದಿರಾನಗರ ಕೆಫೆಯಲ್ಲಿ ಸಿಂಪಲ್ ಆಗಿ ಕುಳಿತು ಕೆಲಸ ಮಾಡುತ್ತಿರುವ ‘ಕುನಾಲ್ ಶಾ’: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್!

ಇಂದಿರಾನಗರ ಕೆಫೆಯಲ್ಲಿ ಸಿಂಪಲ್ ಆಗಿ ಕುಳಿತು ಕೆಲಸ ಮಾಡುತ್ತಿರುವ ‘ಕುನಾಲ್ ಶಾ’: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್!

ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡಿದ ಯೂಸರ್‌ ಒಬ್ಬರು, "ವಾಟ್ಸಾಪ್ ಹಾಗೂ ಬೃಹತ್ ಸಂಸ್ಥೆಗಳನ್ನೇ ಬೆಂಗಳೂರಿನ ಯಾವುದೋ ಕೆಫೆಯಲ್ಲಿ ಕುಳಿತು ನಿರ್ವಹಿಸಬಹುದು ಎಂದಾದರೆ, ಕಂಪನಿಗಳು ಇನ್ಮುಂದೆ 'ವರ್ಕ್ ಫ್ರಮ್ ಆಫೀಸ್' ಅನ್ನು ಐಚ್ಛಿಕ (Optional) ಮಾಡುವುದು ಒಳಿತು!" ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

Reported ByManjunath NaragundEdited ByManjunath Naragund
Published: Sep 27, 2026, 12:57 PM IST|Updated: Sep 27, 2026, 01:03 PM IST
joinshare
ಇಂದಿರಾನಗರ ಕೆಫೆಯಲ್ಲಿ ಸಿಂಪಲ್ ಆಗಿ ಕುಳಿತು ಕೆಲಸ ಮಾಡುತ್ತಿರುವ ‘ಕುನಾಲ್ ಶಾ’: ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್!
Image Credit: Viral

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

 

ಬೆಂಗಳೂರು: ಭಾರತದ ತಂತ್ರಜ್ಞಾನ ಹಾಗೂ ಸ್ಟಾರ್ಟ್‌ಅಪ್ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಸಿಂಪಲ್ ಹಾಗೂ ಓಪನ್ ವರ್ಕ್ ಕಲ್ಚರ್  ಹೊಸದೇನಲ್ಲ. ಆದರೆ, ಕೋಟ್ಯಂತರ ರೂಪಾಯಿ ಮೌಲ್ಯದ ಕಂಪನಿಯ ನಾಯಕರು ಅತ್ಯಂತ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಕೆಲಸ ಮಾಡುವುದು ಕಂಡಾಗ ಸಾರ್ವಜನಿಕರಲ್ಲಿ ಕೌತುಕ ಮೂಡುವುದು ಸಹಜ. ಇದೀಗ ಅಂತಹದ್ದೇ ಒಂದು ಆಸಕ್ತಿದಾಯಕ ಘಟನೆ ಬೆಳಕಿಗೆ ಬಂದಿದ್ದು, ಬೆಂಗಳೂರಿನ ಇಂದಿರಾನಗರದ ಪ್ರಸಿದ್ಧ 'ಅರಾಕು ಕೆಫೆ'ಯಲ್ಲಿ (Araku Cafe) ಪ್ರಸಿದ್ಧ ಕ್ರೆಡ್ (CRED) ಸಂಸ್ಥೆಯ ಸಂಸ್ಥಾಪಕ ಹಾಗೂ ವಾಟ್ಸಾಪ್‌ನ ಜಾಗತಿಕ ಸಿಇಒ ಕುನಾಲ್ ಶಾ ಅತ್ಯಂತ ಸರಳವಾಗಿ ಕುಳಿತು ಕೆಲಸ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.

 

ನೆಟ್‌ವರ್ಕಿಂಗ್ ಪೋಸ್ಟ್‌ನಲ್ಲಿ ಬಯಲಾದ ಕೌತುಕ:

 

ಈ ಇಡೀ ಕೌತುಕಕ್ಕೆ ಕಾರಣವಾಗಿದ್ದು 'ಎಕ್ಸ್' (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿದ್ದ ಸಿಮ್ ಎನ್ನುವ ಯೂಸರ್ ಹಾಕಿದ ಒಂದು ಸಾಮಾನ್ಯ ಪೋಸ್ಟ್. ಇಂದಿರಾನಗರದ ಅರಾಕು ಕೆಫೆಯಲ್ಲಿದ್ದ ಸಿಮ್, ಅಲ್ಲಿನ ಒಂದು ಫೋಟೋವನ್ನು ಶೇರ್ ಮಾಡಿ, "ಪ್ರಸ್ತುತ ನಾನು ಇಂದಿರಾನಗರದ ಅರಾಕು ಕೆಫೆಯಲ್ಲಿದ್ದೇನೆ. ಇಲ್ಲಿ ಯಾರಾದರೂ ಸ್ಟಾರ್ಟ್‌ಅಪ್ ಸಂಸ್ಥಾಪಕರು ಅಥವಾ ಗ್ರೋತ್‌ ವಿಭಾಗದವರು ಫ್ರೀ ಇದ್ದೀರಾ? ಭೇಟಿಯಾಗಲು ಸಂತೋಷವಾಗುತ್ತದೆ," ಎಂದು ನೆಟ್‌ವರ್ಕಿಂಗ್‌ಗಾಗಿ ಬರೆದುಕೊಂಡಿದ್ದರು.

 

ಆದರೆ ಪೋಸ್ಟ್ ನೋಡಿದ ನೆಟ್ಟಿಗರ ಕಣ್ಣು ಬಿದ್ದದ್ದು ಆ ಫೋಟೋದ ಹಿನ್ನೆಲೆಯಲ್ಲಿ ಏಕಾಂಗಿಯಾಗಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಮಗ್ನರಾಗಿದ್ದ ಒಬ್ಬ ವ್ಯಕ್ತಿಯ ಮೇಲೆ. ಜೂಮ್ ಮಾಡಿ ನೋಡಿದಾಗ, ಆ ವ್ಯಕ್ತಿಯ ಮುಖಚರ್ಯೆ ಹಾಗೂ ಕೆಲಸದ ಶೈಲಿ 'ಕ್ರೆಡ್' ಸಂಸ್ಥಾಪಕ ಕುನಾಲ್ ಶಾ ಅವರನ್ನೇ ಹೋಲುತ್ತಿದ್ದುದ್ದು ಕಂಡುಬಂದಿದೆ. ತಕ್ಷಣವೇ ನೆಟ್ಟಿಗರು ಆ ಫೋಟೋವನ್ನು ಶೇರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲು ಪ್ರಾರಂಭಿಸಿದರು.


ಬೆಂಗಳೂರಿನ ವರ್ಕ್ ಕಲ್ಚರ್‌ಗೆ ನೆಟ್ಟಿಗರು ಫಿದಾ:

 

ಫೋಟೋ ವೈರಲ್ ಆಗುತ್ತಿದ್ದಂತೆಯೇ ಎಕ್ಸ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಕಮೆಂಟ್‌ಗಳು ಹಾಗೂ ಜಾಲತಾಣ ಮೀಮ್‌ಗಳು ಹರಿದುಬರತೊಡಗಿವೆ. ಜಾಗತಿಕ ಮಟ್ಟದ ಪ್ರಮುಖ ತಂತ್ರಜ್ಞಾನ ನಾಯಕರು ಹಾಗೂ ಪ್ರಸಿದ್ಧ ಉದ್ಯಮಿಗಳು ಯಾವುದೇ ಹಮ್ಮು-ಬಿಮ್ಮಿಲ್ಲದೆ, ಬಾಡಿಗಾರ್ಡ್‌ಗಳ ಹಾವಳಿಯಿಲ್ಲದೆ ಸಾರ್ವಜನಿಕ ಕೆಫೆಗಳಲ್ಲಿ ಕುಳಿತು ಕೆಲಸ ಮಾಡುವ ಬೆಂಗಳೂರಿನ ಈ ಸಂಸ್ಕೃತಿಗೆ ನೆಟ್ಟಿಗರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡಿದ ಯೂಸರ್‌ ಒಬ್ಬರು, "ವಾಟ್ಸಾಪ್ ಹಾಗೂ ಬೃಹತ್ ಸಂಸ್ಥೆಗಳನ್ನೇ ಬೆಂಗಳೂರಿನ ಯಾವುದೋ ಕೆಫೆಯಲ್ಲಿ ಕುಳಿತು ನಿರ್ವಹಿಸಬಹುದು ಎಂದಾದರೆ, ಕಂಪನಿಗಳು ಇನ್ಮುಂದೆ 'ವರ್ಕ್ ಫ್ರಮ್ ಆಫೀಸ್' ಅನ್ನು ಐಚ್ಛಿಕ (Optional) ಮಾಡುವುದು ಒಳಿತು!" ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಮತ್ತೊಬ್ಬ ಯೂಸರ್, "ಇಂದಿರಾನಗರದ ಅರಾಕು ಕೆಫೆಗೆ ಹೋದರೆ ಸಾಕು, ಅಲ್ಲಿ ಎಷ್ಟೋ ಯುನಿಕಾರ್ನ್ ಕಂಪನಿಗಳ ಸಂಸ್ಥಾಪಕರು ಕ್ಯಾಶುಯಲ್ ಆಗಿ ಕುಳಿತು ಕೆಲಸ ಮಾಡುತ್ತಿರುವುದು ಕಾಣಿಸುತ್ತದೆ, ಇದು ನಿಜಕ್ಕೂ ಅದ್ಭುತ ಹಾಗೂ ಪ್ರೇರಣಾದಾಯಿ ವಾತಾವರಣ," ಎಂದು ಅಭಿಪ್ರಾಯಪಟ್ಟಿದ್ದಾರೆ.

 

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ಗಳ ಜಾಲ ಹಾಗೂ ಇಲ್ಲಿನ ಸರಳ ಕೆಲಸದ ವಾತಾವರಣ ಯಾವ ಮಟ್ಟಿಗೆ ಬೆಳೆದಿದೆ ಎಂಬುದಕ್ಕೆ ಈ ವೈರಲ್ ಫೋಟೋ ಮತ್ತೊಮ್ಮೆ ಸಾಕ್ಷಿಯಾಗಿದೆ.

 

Add Zee News as a Preferred Source
TAGS:
Kannada News