ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವಿಯ ಮೇರೆಗೆ ಕರ್ನಾಟಕದಲ್ಲಿ ರೈಲು ಸಂಪರ್ಕಕ್ಕೆ ಉತ್ತೇಜನ ಸಿಕ್ಕಿದ್ದು, ಮಡಗಾಂವ್-ಮಂಗಳೂರು ವಂದೇ ಭಾರತ್ ರೈಲು ಸೇವೆ ಹಾಸನ, ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಬೆಂಗಳೂರು ನಗರಕ್ಕೂ ವಿಸ್ತರಣೆ ಆಗಲಿದೆ.
ದಸರಾ, ದೀಪಾವಳಿ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ರೈಲ್ವೆ ಇಲಾಖೆ ವಿಶಾಖಪಟ್ಟಣ ಹಾಗೂ ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರವನ್ನು ಘೋಷಿಸಿದೆ.
ಪ್ರತಿ ಬಾರಿಯೂ ಹಬ್ಬ, ಹರಿದಿನಗಳು ಮತ್ತು ಸರಣಿ ರಜೆಗಳು ಇರುವಾಗ ಸಾರಿಗೆ ಇಲಾಖೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್‌ಗಳ ಮಾಡುತ್ತಿರುತ್ತದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಟೋಬರ್ 07ರಂದು ರಾಜ್ಯಾದ್ಯಂತ ಧರಣಿ ಸತ್ಯಾಗ್ರಹ ನಡೆಸಲು ಸಾರಿಗೆ ನೌಕರರ ಒಕ್ಕೂಟ ಮುಂದಾಗಿದೆ.
ಕರ್ನಾಟಕ ಕಾಡಿಗೆ ಬೆಲ್ಜಿಯಂ ಸ್ನಿಫರ್ ಡಾಗ್ ಕಾವಲು.. ಕರ್ನಾಟಕದ 5 ಹುಲಿ ರಕ್ಷಿತಾರಣ್ಯಗಳಿಗೆ ವಿಶೇಷ ಶ್ವಾನಗಳು ರವಾನೆ.
ಮುಂಬರುವ ಸಾಲು, ಸಾಲು ಹಬ್ಬಗಳ ಹಿನ್ನಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದ್ದು ಪರಿಷ್ಕೃತ ಸಮಯದೊಂದಿಗೆ ವಿಶೇಷ ರೈಲು ಸೇವೆಗಳನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಮೃಗಾಲಯ, ಸಾಕು ಪ್ರಾಣಿಗಳ ಮೂಲೆ, ಪ್ರಾಣಿಗಳ ರಕ್ಷಣಾ ಕೇಂದ್ರ, ಚಿಟ್ಟೆ ಆವರಣ, ಅಕ್ವೇರಿಯಂ, ಹಾವಿನ ಮನೆ, ಸಫಾರಿ ಉದ್ಯಾನ ಹೊಂದಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಉದ್ಯಾನದಲ್ಲಿ ಪ್ರಾಚೀನ ದೇವಾಲಯಗಳು ಇದ್ದು ಇದು ಚಾರಣ ಮತ್ತು ಪಾದಯಾತ್ರೆಯ ತಾಣವಾಗಿದೆ.
ಶಿವಮೊಗ್ಗ ಅನ್ನೋ ಹೆಸರು ಹೇಗೆ ಬಂತು: ಶಿವಮೊಗ್ಗ ಎಂದಾಕ್ಷಣ ಮಲೆನಾಡಿನ ಹಸಿರು, ತುಂಗಾ ನದಿ, ಜಲಪಾತಗಳು ಕಣ್ಣ ಮುಂದೆ ಬರುತ್ತವೆ. ಆದರೆ ಈ ನಗರದ ಹೆಸರಿನ ಹಿಂದೆ ಹಲವು ಕುತೂಹಲಕಾರಿ ಸ್ಥಳಪುರಾಣಗಳಿವೆ. ‘ಶಿವಮೊಗ್ಗ’ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಒಂದೇ ಒಂದು ವಿವರಣೆ ಇಲ್ಲ; ‘ಶಿವ-ಮುಖ’, ‘ಶಿವನ ಮೂಗು’, ‘ಶಿವನ ಮೊಗ್ಗು’ ಎಂಬ ವ್ಯುತ್ಪತ್ತಿಗಳ ಜೊತೆಗೆ ‘ಸಿಹಿ-ಮೊಗೆ’ ಎಂಬ ಮತ್ತೊಂದು ಜನಪ್ರಿಯ ದಂತಕಥೆಯೂ ಇದೆ.
tourist spots in Chikmagalur: ಮಲೆನಾಡಿನ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಚಿಕ್ಕಮಗಳೂರು ಪ್ರವಾಸಿಗರ ನೆಚ್ಚಿನ ತಾಣ. ಹಚ್ಚಹಸಿರಿನ ಬೆಟ್ಟಗಳು, ಮೈನವಿರೇಳಿಸುವ ಮಂಜು, ಧುಮ್ಮಿಕ್ಕುವ ಜಲಪಾತಗಳು, ಕಾಫಿ ತೋಟಗಳ ಪರಿಮಳ... ಹೀಗೆ ಪ್ರಕೃತಿಯ ಹಲವು ವೈಶಿಷ್ಟ್ಯಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳಬಹುದು. ಚಿಕ್ಕಮಗಳೂರಿಗೆ ಪ್ರವಾಸ ಪ್ಲಾನ್ ಮಾಡ್ತಿದ್ದರೆ ಈ ತಾಣಗಳಿಗೆ ಒಮ್ಮೆ ಭೇಟಿ ಕೊಡಿ...
ದಕ್ಷಿಣ ಕನ್ನಡ ತನ್ನ ಪ್ರಾಕೃತಿಕ ಸೌಂದರ್ಯದ ಜೊತೆ ಹಲವಾರು ಪೌರಾಣಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳನ್ನು ಒಡಲಿನಲ್ಲಿ ಅಡಗಿಸಿಕೊಂಡಿದೆ. ಸಮುದ್ರದ ಸದ್ದಿನ ನಡುವೆ, ಭಕ್ತಿಸಾರುವ ದೇಗುಲಗಳ ಘಂಟೆ ಸದ್ದು ಪ್ರವಾಸಿಗರನ್ನು ಆರ್ಷಿಸುತ್ತಿದೆ. ಬನ್ನಿ ಇಂದು ಕರಾವಳಿಯ ಸುತ್ತಲೂ ಇರುವ, ಭೇಟಿ ನೀಡಲೇಬೇಕಾದ ಪವಿತ್ರ ಪ್ರಸಿದ್ಧ ದೇವಸ್ಥಾನಗಳ ಬಗ್ಗೆ ತಿಳಿಯೋಣ..
ಮೈಸೂರಿನ ಇತಿಹಾಸವನ್ನು ಒಡೆಯರ್ ರಾಜವಂಶದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಕ್ರಿ.ಶ. 1399 ರಿಂದ 1950 ರವರೆಗಿನ ಒಡೆಯರ ಆಳ್ವಿಕೆಯ ಕಾಲವನ್ನು ಮೈಸೂರಿನ ಸುವರ್ಣಯುಗ ಎಂದೇ ಕರೆಯಲಾಗುತ್ತದೆ.
ಮೇ 2022ರಲ್ಲಿ ಆರಂಭವಾದ ಈ ಬೃಹತ್ ಅಭಿಯಾನದಲ್ಲಿ ಸಾರ್ವಜನಿಕರ ಉತ್ಸಾಹಭರಿತ ಮತದಾನ ಮತ್ತು ನಿಪುಣ ತಜ್ಞರ ಸಮಿತಿಯ ಆಳವಾದ ಪರಿಶೀಲನೆಯ ನಂತರ, ಫೆಬ್ರವರಿ 25, 2023 ರಂದು ಅಧಿಕೃತವಾಗಿ ಕರ್ನಾಟಕದ ಏಳು ಅದ್ಭುತಗಳನ್ನು ಪ್ರಕಟಿಸಲಾಯಿತು. ರಾಜ್ಯದ ಮೂಲೆ ಮೂಲೆಯ ಪ್ರವಾಸಿಗರನ್ನು ತನ್ನತ್ತ ಸೆಳೆಯುವ, ಒಮ್ಮೆ ನೋಡಿದರೆ ಸಾಲದು ಎನಿಸುವ ಆ ಏಳು ಅನರ್ಘ್ಯ ರತ್ನಗಳ ವಿವರವಾದ ನೋಟ ಇಲ್ಲಿದೆ:
ಉತ್ತರ ಕರ್ನಾಟಕದ ಅವಳಿ ನಗರಗಳಾದ ಹುಬ್ಬಳ್ಳಿ ಮತ್ತು ಧಾರವಾಡವು ಕೇವಲ ವಾಣಿಜ್ಯ ಹಾಗೂ ಶಿಕ್ಷಣ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ತನ್ನದೇ ಆದ ಶ್ರೀಮಂತ ಇತಿಹಾಸ, ಅದ್ಭುತ ವಾಸ್ತುಶಿಲ್ಪದ ದೇವಾಲಯಗಳು, ಹಸಿರಿನಿಂದ ಕಂಗೊಳಿಸುವ ಉದ್ಯಾನಗಳು ಹಾಗೂ ಆಹ್ಲಾದಕರ ಕೆರೆಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಈ ನಗರಗಳು ಪ್ರವಾಸಿಗರ ಪಾಲಿಗೆ ಅಚ್ಚರಿಯ ತಾಣಗಳಾಗಿವೆ.. ಬನ್ನಿ ಆ ತಾಣಗಳು ಯಾವುವು ಅಂತ ನೋಡೋಣ ಬನ್ನಿ..
ಅರಮನೆ ಎಂದರೆ ಕೇವಲ ಮೈಸೂರು ನೆನಪಾಗುವುದು ಸಹಜ. ಆದರೆ ನಮ್ಮ ಬೆಂಗಳೂರಿನ ಹೃದಯಭಾಗದಲ್ಲೂ ಒಂದು ಭವ್ಯವಾದ ರಾಜಮನೆತನದ ಅರಮನೆ ಇದೆ.
ಮಂಗಳೂರು ಪ್ರವಾಸಿ ತಾಣಗಳಲ್ಲಿ ಜಿಪ್ ಲೈನ್, ಜೆಟ್ ಸ್ಕೀಯಿಂಗ್‌ನಂತಹ ವಾಟರ್ ಸ್ಪೋರ್ಟ್ಸ್, ಒಂಟೆ, ಕುದುರೆ ಸವಾರಿ, ಡಾಲ್ಫಿನ್ ನೋಡುವುದು, ರುಚಿಕರವಾದ ಕರಾವಳಿ ಆಹಾರದ ಮಳಿಗೆಗಳು ಟೂರಿಸ್ಟ್‌ಗಳನ್ನು ಸೆಳೆಯುತ್ತವೆ.
ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತಿಹಾಸ, ಧಾರ್ಮಿಕ ಪರಂಪರೆ ಮತ್ತು ಪ್ರಕೃತಿ ಸೌಂದರ್ಯವನ್ನು ಒಟ್ಟಿಗೆ ಅನುಭವಿಸಬಹುದು. ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮ, ಬೃಂದಾವನ ಉದ್ಯಾನ, ಚಾಮುಂಡಿ ಬೆಟ್ಟ, ಸೋಮನಾಥಪುರ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣಗಳಾಗಿವೆ.
ಬೆಂಗಳೂರುದಿಂದ ಪಾಂಡಿಚೇರಿಗೆ ಪ್ರವಾಸ ಹೋಗಲು ಬಯಸುವವರಿಗೆ KSTDC ವಿಶೇಷ ಅವಕಾಶ ನೀಡಿದೆ. 4 ದಿನ 3 ರಾತ್ರಿಗಳ ಈ ಪ್ಯಾಕೇಜ್‌ನಲ್ಲಿ ಪಾಂಡಿಚೇರಿ ಹಾಗೂ ಮಹಾಬಲಿಪುರಂನ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. A/C Deluxe Coach, ಹೋಟೆಲ್ ವಸತಿ, ಉಪಾಹಾರ ಹಾಗೂ ಗೈಡ್ ಸೌಲಭ್ಯವಿದ್ದು, ಪ್ಯಾಕೇಜ್ ದರ ₹5,195ರಿಂದ ಆರಂಭವಾಗುತ್ತದೆ.