IRCTC Smart locker : ಭಾರತೀಯ ರೈಲ್ವೆಯು ಪ್ರಯಾಣಿಕರ ಪ್ರಯಾಣವನ್ನು ಮತ್ತಷ್ಟು ಸುಲಭ ಹಾಗೂ ಅನುಕೂಲಕರವಾಗಿಸಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಕುಟುಂಬದೊಂದಿಗೆ ದೀರ್ಘ ಪ್ರಯಾಣ ಮಾಡುವಾಗ ಭಾರವಾದ ಬ್ಯಾಗ್‌ಗಳನ್ನು ಹೊತ್ತುಕೊಂಡು ಓಡಾಡುವುದು ಹಾಗೂ ರೈಲು ನಿಲ್ದಾಣಗಳಲ್ಲಿ ಕಾಯುವುದು ದೊಡ್ಡ ಸಮಸ್ಯೆಯಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಉತ್ತರ ರೈಲ್ವೆಯು ದೆಹಲಿಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಟಿಪಿ ಆಧಾರಿತ ಆಧುನಿಕ ಡಿಜಿಟಲ್ ಲಾಕರ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
1/7
ಚಿಂತೆಯಿಲ್ಲದ ಹ್ಯಾಂಡ್ಸ್-ಫ್ರೀ ರೈಲು ಪ್ರಯಾಣ
ನಗರಕ್ಕೆ ಯಾವುದಾದರೂ ತುರ್ತು ಕೆಲಸಕ್ಕೆ ಅಥವಾ ಶಾಪಿಂಗ್‌ಗೆ ತೆರಳಬೇಕಾದ ಸಂದರ್ಭಗಳಲ್ಲಿ ಲಗೇಜ್‌ಗಳನ್ನು ನಿಲ್ದಾಣದ ಸುರಕ್ಷಿತ ಲಾಕರ್‌ನಲ್ಲಿ ಇಟ್ಟು ಪ್ರಯಾಣಿಕರು ನೆಮ್ಮದಿಯಿಂದ ತೆರಳಬಹುದು.
2/7
'Release' ಕ್ಲಿಕ್ ಮಾಡಿ, ಲಗೇಜ್ ವಾಪಸ್ ಪಡೆಯಿರಿ
ಕೆಲಸ ಮುಗಿದ ನಂತರ ಲಗೇಜ್ ಪಡೆಯಲು ಅದೇ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ನಮೂದಿಸಿ ಸ್ಕ್ರೀನ್ ಮೇಲಿನ 'Release' ಬಟನ್ ಕ್ಲಿಕ್ ಮಾಡಿದ ತಕ್ಷಣ ಲಾಕರ್ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ.
3/7
ಯುಪಿಐ (UPI) ಮೂಲಕ ತಕ್ಷಣವೇ ನಗದುರಹಿತ ಪಾವತಿ
ಮೊಬೈಲ್ ಒಟಿಪಿ ಪರಿಶೀಲನೆಯ ನಂತರ ಲಗೇಜ್ ಗಾತ್ರ ಹಾಗೂ ಬೇಕಾದ ಸಮಯವನ್ನು ಆಯ್ಕೆ ಮಾಡಿ, ಗೂಗಲ್ ಪೇ, ಪೇಟಿಎಂ ಅಥವಾ ಫೋನ್ ಪೇ ಮೂಲಕ ತಕ್ಷಣವೇ ಹಣ ಪಾವತಿಸಿ ಲಾಕರ್ ಅನ್ನು ಲಾಕ್ ಮಾಡಬಹುದು.
4/7
ಸಂಪೂರ್ಣ ಸಿಬ್ಬಂದಿ ರಹಿತ ಸ್ವಯಂಚಾಲಿತ ವ್ಯವಸ್ಥೆ
ಲಾಕರ್ ಬಳಿ ಇರುವ ಮಾನಿಟರ್ ಪ್ಯಾನಲ್‌ನಲ್ಲಿ ಯಾವುದೇ ರೈಲ್ವೆ ಸಿಬ್ಬಂದಿಯ ಸಹಾಯವಿಲ್ಲದೆ ಪ್ರಯಾಣಿಕರೇ ಸ್ವತಃ ತಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ (OTP) ಬಳಸಿ ಲಗೇಜ್‌ಗಳನ್ನು ಸುರಕ್ಷಿತವಾಗಿ ಇಡಬಹುದು.
5/7
ಪ್ಲಾಟ್‌ಫಾರ್ಮ್ ಬಳಿಯಲ್ಲೇ ಸ್ಮಾರ್ಟ್ ಲಾಕರ್‌ಗಳು
ನವದೆಹಲಿ ನಿಲ್ದಾಣದ ಪ್ಲಾಟ್‌ಫಾರ್ಮ್ 16 ರ ಮುಖ್ಯ ಹಾಲ್‌ನಲ್ಲಿ ಹಾಗೂ ಹಜರತ್ ನಿಜಾಮುದ್ದೀನ್ ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಮೆಟ್ಟಿಲುಗಳ ಪಕ್ಕದಲ್ಲಿ ಪ್ರಯಾಣಿಕರ ಸುಲಭ ತಲುಪುವಿಕೆಗೆ ಅನುಕೂಲವಾಗುವಂತೆ ಈ ಲಾಕರ್‌ಗಳನ್ನು ಅಳವಡಿಸಲಾಗಿದೆ.
6/7
ಪ್ರಸ್ತುತ ನಾಲ್ಕು ಪ್ರಮುಖ ನಿಲ್ದಾಣಗಳಲ್ಲಿ ಸೇವೆ
ಹೊಸ ದೆಹಲಿ (NDLS), ಹಜರತ್ ನಿಜಾಮುದ್ದೀನ್ (NZM), ದೆಹಲಿ ಜಂಕ್ಷನ್ (DLI) ಮತ್ತು ಆನಂದ್ ವಿಹಾರ್ ಟರ್ಮಿನಲ್ (ANVT) ನಿಲ್ದಾಣಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಸದ್ಯ NDLS ಮತ್ತು NZM ನಲ್ಲಿ ವಾರದ ಏಳೂ ದಿನವೂ ೨೪ ಗಂಟೆಗಳ ಕಾಲ ಈ ಸೇವೆ ಲಭ್ಯವಿದೆ.
7/7
ಪ್ರಯಾಣಿಕರ ಲಗೇಜ್ ಸಮಸ್ಯೆಗೆ ಆಧುನಿಕ ಪರಿಹಾರ
ದೀರ್ಘ ಪ್ರಯಾಣದ ವೇಳೆ ಅಥವಾ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಾಗ ಭಾರವಾದ ಬ್ಯಾಗ್‌ಗಳನ್ನು ಹೊತ್ತುಕೊಂಡು ಓಡಾಡುವ ಕಿರಿಕಿರಿ ತಪ್ಪಿಸಲು ಉತ್ತರ ರೈಲ್ವೆಯು ಒಟಿಪಿ (OTP) ಆಧಾರಿತ ಆಧುನಿಕ ಡಿಜಿಟಲ್ ಲಾಕರ್ ಸೌಲಭ್ಯವನ್ನು ಪರಿಚಯಿಸಿದೆ.