• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮಂಗಳೂರು
  • /ಪ್ರಸಿದ್ಧ ಪ್ರವಾಸಿ ತಾಣಗಳ ವೈಭೋಗ ಈ ಕಡಲ ನಗರಿ.. ಪ್ರವಾಸಕ್ಕೆ ಹೋದವರು ನೋಡಲೇಬೇಕಾದ ಸ್ಥಳಗಳು

ಪ್ರಸಿದ್ಧ ಪ್ರವಾಸಿ ತಾಣಗಳ ವೈಭೋಗ ಈ ಕಡಲ ನಗರಿ.. ಪ್ರವಾಸಕ್ಕೆ ಹೋದವರು ನೋಡಲೇಬೇಕಾದ ಸ್ಥಳಗಳು

ಮಂಗಳೂರು ಪ್ರವಾಸಿ ತಾಣಗಳಲ್ಲಿ ಜಿಪ್‌ ಲೈನ್‌, ಜೆಟ್‌ ಸ್ಕೀಯಿಂಗ್‌ನಂತಹ ವಾಟರ್‌ ಸ್ಪೋರ್ಟ್ಸ್‌, ಒಂಟೆ, ಕುದುರೆ ಸವಾರಿ, ಡಾಲ್ಫಿನ್‌ ನೋಡುವುದು, ರುಚಿಕರವಾದ ಕರಾವಳಿ ಆಹಾರದ ಮಳಿಗೆಗಳು ಟೂರಿಸ್ಟ್‌ಗಳನ್ನು ಸೆಳೆಯುತ್ತವೆ.

Reported ByBhimappaEdited ByBhimappa
Published: Sep 14, 2026, 04:31 PM IST|Updated: Sep 17, 2026, 03:24 PM IST
joinshare
ಪ್ರಸಿದ್ಧ ಪ್ರವಾಸಿ ತಾಣಗಳ ವೈಭೋಗ ಈ ಕಡಲ ನಗರಿ.. ಪ್ರವಾಸಕ್ಕೆ ಹೋದವರು ನೋಡಲೇಬೇಕಾದ ಸ್ಥಳಗಳು
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮಂಗಳೂರು ಎಂದರೆ ಮೊದಲು ಎಲ್ಲರಿಗೂ ನೆನಪಾಗುವುದು ಸಮುದ್ರ, ಮೀನು, ಬೀಚ್‌ ಸೇರಿದಂತೆ ಅಲ್ಲಿನ ಸುಂದರ ತಾಣಗಳು. ಕರ್ನಾಟಕದ ಪ್ರಮುಖ ಕರಾವಳಿ ನಗರಿ ಮತ್ತು ಸಾಂಸ್ಕೃತಿಕ ಕೇಂದ್ರವಾಗಿರುವ ಮಂಗಳೂರು ತನ್ನ ಸುಂದರವಾದ ಕಡಲ ತೀರಗಳು, ಐತಿಹಾಸಿಕವಾದ ದೇವಾಲಯಗಳು ಮತ್ತು ಸಮೃದ್ಧ ಪ್ರಕೃತಿ ಸೌಂದರ್ಯಕ್ಕೆ ಹೆಸರು ವಾಸಿಯಾಗಿದೆ. ಒಂದು ವೇಳೆ ನೀವು ಮಂಗಳೂರಿಗೆ ಭೇಟಿ ನೀಡಿದರೆ ಈ ಪ್ರಸಿದ್ಧ ತಾಣಗಳನ್ನು ನೋಡದೇ ವಾಪಸ್‌ ಆಗಲೇ ಬೇಡಿ.   

ಪನಂಬೂರ್‌ ಬೀಚ್‌: ಪನಂಬೂರ್‌ ಬೀಚ್‌ ಎಂದರೆ ಇಷ್ಟ ಪಡದವರೇ ಇಲ್ಲ. ನವ ಮಂಗಳೂರು ಬಂದರಿನ ಸಮೀಪ ಇರುವ ಪನಂಬೂರ್‌ ಬೀಚ್‌ ಅತ್ಯಂತ ಜನಪ್ರಿಯ ಮತ್ತು ಬ್ಯೂಟಿಫುಲ್‌ವಾದ ಕಡಲ ತೀರವಾಗಿದೆ. ಇಲ್ಲಿ ಜಿಪ್‌ ಲೈನ್‌, ಜೆಟ್‌ ಸ್ಕೀಯಿಂಗ್‌ನಂತಹ ವಾಟರ್‌ ಸ್ಪೋರ್ಟ್ಸ್‌, ಒಂಟೆ, ಕುದುರೆ ಸವಾರಿ, ಡಾಲ್ಫಿನ್‌ ನೋಡುವುದು, ರುಚಿಕರವಾದ ಕರಾವಳಿ ಆಹಾರದ ಮಳಿಗೆಗಳು ಟೂರಿಸ್ಟ್‌ಗಳನ್ನು ಸೆಳೆಯುತ್ತವೆ. ಮಂಗಳೂರು ನಗರದ ಉತ್ತರ ಭಾಗದಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿ ಪನಂಬೂರ್‌ ಬೀಚ್‌ ಇದೆ. ಇಲ್ಲಿನ ಸೂರ್ಯನ ಸುಂದರ ನೋಟವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. 

ತಣ್ಣೀರುಬಾವಿ ಬೀಚ್:‌ ಪ್ರಶಾಂತತೆ ಬಯಸುವವರಿಗೆ ತಣ್ಣೀರುಬಾವಿ ಬೀಚ್ ಒಂದು ರೀತಿಯಲ್ಲಿ ನೆಮ್ಮದಿ ತಾಣವಾಗಿದೆ. ಸುಲ್ತಾನ್‌ ಬತ್ತೇರಿಯಿಂದ ದೋಣಿ ಮೂಲಕ ಇಲ್ಲಿಗೆ ಹೋಗಬಹುದು. ದೋಣಿಯಲ್ಲಿ ಹೋಗುವಾಗ ರೋಮಾಂಚಕ ಅನುಭವ ನೀಡುತ್ತದೆ. ಇದರ ಸಮೀಪದಲ್ಲೇ 15 ಎಕರೆಯ ವಿಸ್ತೀರ್ಣದ ತಣ್ಣೀರುಬಾವಿ ಟ್ರೀ ಪಾರ್ಕ್‌ ಔಷಧೀಯ ಸಸ್ಯಗಳು ಮತ್ತು ಪಶ್ಚಿಮ ಘಟ್ಟದ ಮರಗಳನ್ನು ಇಲ್ಲಿ ನೀವು ಕಾಣಬಹುದು. ಇದರ ಹತ್ತಿರದಲ್ಲೇ ಐತಿಹಾಸಿಕವಾದ ಸುಲ್ತಾನ್‌ ಬತ್ತೇರಿ ಪ್ರವಾಸಿಗರು ನೋಡಬಹುದು. ತಣ್ಣೀರುಬಾವಿ ಬೀಚ್ ಮಂಗಳೂರಿನಿಂದ 12 ಕಿಲೋ ಮೀಟರ್‌ ದೂರದಲ್ಲಿದೆ. ಇಲಿನ ಸಮುದ್ರ ಹೆಚ್ಚು ಆಳವಿಲ್ಲದ ಕಾರಣ ಮಕ್ಕಳು ಕೂಡ ಈಜಾಡಾಬಹದು. 

ಸೋಮೇಶ್ವರ ಬೀಚ್‌; ಕಡಲ ದಡದ ಬಳಿಯೇ ಐತಿಹಾಸಿಕವಾದ ಪ್ರಸಿದ್ಧವಾದ ಸೋಮೇಶ್ವರ ಶಿವನ ದೇವಾಲಯ ಎಲ್ಲರ ಗಮನವನ್ನು ಸೆಳೆಯುತ್ತದೆ. ಮಂಗಳೂರಿನ ಉಳ್ಳಾಲದ ಸಮೀಪ ಇರುವ ಈ ಬೀಚ್‌ ತನ್ನ ದಡದಲ್ಲಿರುವ ಬೃಹತ್‌ ಬಂಡೆಕಲ್ಲುಗಳಿಗೆ ಖ್ಯಾತಿ ಪಡೆದಿದೆ. ಅಂದರೆ ರುದ್ರ ಶಿಲೆಗಳು ಇವೆ. ಸಮುದ್ರದಲ್ಲಿ ಅಲೆಗಳು ದೊಡ್ಡ ಮಟ್ಟದಲ್ಲಿ ಏಳುವುದರಿಂದ ಈಜಾಡುವುದು ಸುರಕ್ಷಿತವಲ್ಲ. ಹೀಗಾಗಿ ಯಾರೂ ಕೂಡ ಈಜಾಡುವುದಿಲ್ಲ. ಆದರೆ ಸೂರ್ಯಾಸ್ತ ನೋಡುವುದು ಒಳ್ಳೆಯ ಅನುಭವನ್ನು ನೀಡುತ್ತದೆ. ನೀವು ಒಮ್ಮೆ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದು. 

ಸಸಿಹಿತ್ಲು ಬೀಚ್‌; ಮಂಗಳೂರಿನಲ್ಲಿರುವ ಈ ಪ್ರದೇಶವೂ ಸರ್ಫಿಂಗ್‌ ಆಟಕ್ಕೆ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಇಂಡಿಯಾ ಓಪನ್‌ ಆಫ್‌ ಸರ್ಫಿಂಗ್‌ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಈ ಪ್ರದೇಶವೂ ಅತ್ಯಂತ ಬ್ಯೂಟಿಫುಲ್‌ ಆಗಿದ್ದು ಮತ್ತು ಜನದಟ್ಟಣೆ ಅಷ್ಟೊಂದು ಹೊಂದಿಲ್ಲ. ಪ್ರಶಾಂತವಾದ ಸ್ಥಳವಾಗಿದೆ. ಹೀಗಾಗಿ ಏಕಾಂತ ಬಯಸುವವರು ಈ ಪ್ರದೇಶಕ್ಕೆ ಭೇಟಿ ನೀಡಬಹುದು. ಇದೇ ಸ್ಥಳದಲ್ಲಿಯೇ ಪಾವಂಜೆ, ಶಾಂಭವಿ ನದಿಗಳು ಅರೇಬಿಕ್‌ ಸಮುದ್ರವನ್ನು ಸೇರುತ್ತವೆ. ಮಂಗಳೂರಿನ ಸ್ವಚ್ಛ ಮತ್ತು ಶಾಂತಿಯುತವಾದ ಕಡಲುಗಳಲ್ಲಿ ಇದು ಒಂದಾಗಿದೆ.  

ಕುದ್ರೋಳಿ ಗೋಕರ್ಣನಾಥ ದೇವಾಲಯ; ಈ ಮಹಾನ್‌ ದೇವಾಲಯವು ಶ್ರೀನಾರಾಯಣ ಗುರುಗಳಿಂದ ಸ್ಥಾಪಿಸಲ್ಪಟ್ಟ ಭವ್ಯವಾದ, ಸುದಂರವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರು ಪಡೆದುಕೊಂಡಿದೆ. ಇನ್ನೇನು ದಸರಾ ಬರುತ್ತಿದೆ. ಇಲ್ಲಿ ನಡೆಯುವಂತಹ ಮಂಗಳೂರು ದಸರಾ ಮಹೋತ್ಸವವು ದೇಶಸದ್ಯಾಂತ ಪ್ರಸಿದ್ಧಿಯಾಗಿದೆ. ಈ ದೇವಾಲಯವನ್ನು 1912 ರಲ್ಲಿ ಅಧ್ಯಕ್ಷ ಹೊಯ್ಗೆಬಜಾರ್‌ ಕೊರಗಪ್ಪ ಅವರು ನಿರ್ಮಾಣ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಇಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಜಾತಿ ಸಮಾನತೆಯ ಸಂದೇಶವನ್ನು ನೀಡಿದರು.  

ಕದ್ರಿ ಮಂಜುನಾಥ ದೇವಸ್ಥಾನ; ಕದ್ರಿಯ ಬೆಟ್ಟದ ಮೇಲೆ ಈ ಪುರಾತನ ದೇವಾಲಯ ಇದೆ. ಈ ಪುರಾತನ ದೇವಾಲಯವನ್ನು 10, 11ನೇ ಶತಮಾನದಲ್ಲಿ ವಿಜಯನಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕದ್ರಿ ಮಂಜುನಾಥ ದೇವಸ್ಥಾನ ಬಳಿ ಇರುವಂತಹ ಜೋಗಿ ಮಠ ಮತ್ತು ನೈಸರ್ಗಿಕ ನೀರಿನ ಕಾರಂಜಿಗಳು ಪ್ರಮುಖವಾಗಿ ಪ್ರವಾಸಿಗರ ಆಕರ್ಷಣೆ ಆಗಿದೆ. 

ಸೇಂಟ್‌ ಅಲೋಶಿಯಸ್‌ ಚಾಪೆಲ್;‌ ರೋಮ್‌ನ ಸಿಸ್ಟೀನ್‌ ಚಾಪೆಲ್‌ಗೆ ಹೋಲಿಸಲಾಗುವ ಈ ಚರ್ಚ್‌ ತನಗಿರುವ ವಿಶಿಷ್ಟವಾದ ಇಟಾಲಿಯನ್‌ ಶೈಲಿಯ ತೈಲಚಿತ್ರಗಳು ಮತ್ತು ಭಿತ್ತಿಚಿತ್ರಗಳಿಗೆ ವಿಶ್ವ ವಿಖ್ಯಾತವಾಗಿದೆ. ಮಂಗಳೂರಿನ ಹೃದಯ ಭಾದಲ್ಲಿ ಇರುವ ಸೇಂಟ್‌ ಅಲೋಶಿಯಸ್‌ ಕಾಲೇಜು ಆವರಣದಲ್ಲಿ ಇದೆ. ಈ ಚಾಪೆಲ್‌ ಅನ್ನು 1884 1885 ರಲ್ಲಿ ಜೆಸ್ಯೂಟ್‌ ಮಿಷನರಿಗಳು ನಿರ್ಮಾಣ ಮಾಡಿದರು. 

ಸುಲ್ತಾನ್‌ ಬತ್ತೇರಿ; ಮಂಗಳೂರಿನಲ್ಲಿರುವ ಇನ್ನೊಂದು ಪ್ರಸಿದ್ಧ ಕ್ಷೇತ್ರವಾಗಿದೆ. 1784 ರಲ್ಲಿ ಟಿಪ್ಪು ಸುಲ್ತಾನ್‌ ಶತ್ರುಗಳ ನೌಕಾಪಡೆಗಳ ಮೇಲೆ ಕಣ್ಣಿಡಲು ಕಪ್ಪು ಕಲ್ಲಿನಿಂದ ನಿರ್ಮಾಣ ಮಾಡಿದ ಗೋಪುರವೇ ಮಂಗಳೂರಿನ ಪ್ರಸಿದ್ಧ ಸುಲ್ತಾನ್‌ ಬತ್ತೇರಿ ಆಗಿದೆ. ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಕೂಡ ಸುಂದರವಾದ ತಾಣವಾಗಿದ್ದು ಎಲ್ಲರೂ ಇಷ್ಟ ಪಡುವಂತಹ ಸ್ಥಳವಾಗಿದೆ. ಭಾರತದ ಕರ್ನಾಟಕ ರಾಜ್ಯದ ಪ್ರಮುಖ ಬಂದರು ನಗರವಾದ ಮಂಗಳೂರು ನಗರದ ಮಧ್ಯ ಭಾಗದಿಂದ ನಾಲ್ಕು ಕಿಲೋ ಮೀಟರ್‌ ದೂರದಲ್ಲಿ ಬೇಳೂರಿನಲ್ಲಿ ಸುಲ್ತಾನ್‌ ಬತ್ತೇರಿ ಇದೆ.  

ಪಿಲಿಕುಳ ನಿಸರ್ಗಧಾಮ; ವೀಕೆಂಡ್‌ ಕಳೆಯಲು ಇದು ಅತ್ಯುತ್ತಮವಾದ ಪರಿಸರದ ಪ್ರವಾಸೋದ್ಯಮ ತಾಣಗಳಲ್ಲಿ ಒಂದು. ಪಿಲಿಕುಳ ನಿಸರ್ಗಧಾಮದಲ್ಲಿ ವಿಶಾಲವಾದ ಮೃಗಾಲಯ, ಸಸ್ಯೋದ್ಯಾನ, ಸಾಂಸ್ಕೃತಿಕ ಗ್ರಾಮ, ದೋಣಿ ವಿಹಾರ ಮತ್ತು ಭಾರತದ ಮೊಟ್ಟ ಮೊದಲ 3D ತಾರಾಲಯ ಈ ಸ್ಥಳದಲ್ಲಿದೆ. ಈ ಎಲ್ಲವೂ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡುತ್ತಾರೆ. ಮೃಗಾಲಯ ನೋಡುವುದಕ್ಕಂತೂ ಮಕ್ಕಳು ಸಂಖ್ಯೆಯಲ್ಲಿ ಪೋಷಕರೊಂದಿಗೆ, ಶಾಲಾ ಪ್ರವಾಸದ ವೇಳೆ ಭೇಟಿ ನೀಡುತ್ತಾರೆ.    

ಪೊಳಲಿ ರಾಜರಾಜೇಶ್ವರಿ ದೇವಾಲಯ; ಪೊಳಲಿ ರಾಜರಾಜೇಶ್ವರಿ ದೇವಾಲಯದಲ್ಲಿ ಶ್ರೀಜಗನ್ಮಾತೆ, ಮಹಾತಾಯಿ, ಎಲ್ಲರನ್ನು ಕರುಣಿಸುವ ಧನ್ಯತೆ ಶ್ರೀ ರಾಜರಾಜೇಶ್ವರಿ ದೇವಿ ಇದ್ದಾಳೆ. ಮಂಗಳೂರಿಗೆ ನೀವು ಭೇಟಿ ನೀಡಿದಾಗ ಇಲ್ಲಿಗೆ ಭೇಟಿ ನೀಡಿ. ಏಕೆಂದರೆ ಇದೊಂದು ಆದ್ಯಾತ್ಮಿಕ ಲೋಕದ ಹೆಚ್ಚು ಶಕ್ತಿವಂತ, ಪೂಜ್ಯ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಈ ದೇವಾಲಯದ ವಿಶೇಷತೆಗಳು ಅಷ್ಟೇ ವೈಭವದಿಂದ ಕೂಡಿವೆ. ಅಲ್ಲಿನ ಸ್ಥಳೀಯರಲ್ಲಿ ಈ ಜಗನ್ಮಾತೆಯ ಬಗ್ಗೆ ಹಲವಾರು ಸತ್ಯ ಘಟನೆಗಳು ಇವೆ. 

ಪೊಳಲಿ ರಾಜರಾಜೇಶ್ವರಿ ದೇವಾಲಯದ ಒಳಗಿರುವ ಶ್ರೀ ರಾಜರಾಜೇಶ್ವರಿ ದೇವಿ ವಿಗ್ರಹವನ್ನು ಸಂಪೂರ್ಣವಾಗಿ ಜೇಡಿ ಮಣ್ಣಿನಿಂದ ಮತ್ತು ಗಿಡಮೂಲಿಕೆಗಳ ಮಿಶ್ರಣದಿಂದ ಅಚ್ಚೋತ್ತಿ ಹೆಚ್ಚಿನ ಶಕ್ತಿಗಾಗಿ ರೂಪಿಸಲಾಗಿದೆ. ದೇವಾಲಯವು ಸುಂದರವಾದ, ಅಂದವಾದ ಐತಿಹಾಸಿಕ ವಾಸ್ತುಶಿಲ್ಪವನ್ನು ಹೊಂದಿದೆ. ಹೀಗಾಗಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದಾಗ ಮನಸ್ಸಿಗೆ ಮುದ ನೀಡುತ್ತದೆ. ಮುಖ ಮಂಟಪದ ಛಾವಣಿಯನ್ನು ಮರದಲ್ಲಿ ಸೂಕ್ಷ್ಮವಾಗಿ ಕೆತ್ತಲಾಗಿದೆ. ಛಾವಣಿಯ ಇತರ ಭಾಗಗಳನ್ನು ತಾಮ್ರದ ಫಲಕಗಳಿಂದ ಮುಚ್ಚಲಾಗಿದೆ. ತಾಮ್ರದ ಫಲಕಗಳು ಇರುವುದರಿಂದ ಇಲ್ಲಿಗೆ ಹೋದವರಿಗೆ ಆರೋಗ್ಯವೂ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. 

 

Add Zee News as a Preferred Source
TAGS:
Travel