• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಹುಲಿ ಹುಡುಕಲು- ಕಾಡುಗಳ್ಳರನ್ನು ಹಿಡಿಯಲು ರೆಡಿಯಾಯ್ತು ಬೆಲ್ಜಿಯಂ ಸ್ನೀಫರ್..!

ಹುಲಿ ಹುಡುಕಲು- ಕಾಡುಗಳ್ಳರನ್ನು ಹಿಡಿಯಲು ರೆಡಿಯಾಯ್ತು ಬೆಲ್ಜಿಯಂ ಸ್ನೀಫರ್..!

ಕರ್ನಾಟಕ ಕಾಡಿಗೆ ಬೆಲ್ಜಿಯಂ ಸ್ನಿಫರ್ ಡಾಗ್ ಕಾವಲು.. ಕರ್ನಾಟಕದ 5 ಹುಲಿ ರಕ್ಷಿತಾರಣ್ಯಗಳಿಗೆ ವಿಶೇಷ ಶ್ವಾನಗಳು ರವಾನೆ.

Written ByYashaswini V
Published: Sep 19, 2026, 09:23 AM IST|Updated: Sep 19, 2026, 09:24 AM IST
joinshare
ಹುಲಿ ಹುಡುಕಲು- ಕಾಡುಗಳ್ಳರನ್ನು ಹಿಡಿಯಲು ರೆಡಿಯಾಯ್ತು ಬೆಲ್ಜಿಯಂ ಸ್ನೀಫರ್..!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನಿತ್ಯ ಒಂದಲ್ಲ ಒಂದು ಅರಣ್ಯದಲ್ಲಿ ವನ್ಯಜೀವಿ ರಕ್ಷಣೆಗೆ ಕಾಡುಗಳ್ಳರು ತೊಡಕಾಗಿದ್ದು ಇವರ ನಿದ್ರೆಗೆಡಿಸಲು ಜೊತೆಗೆ ಅಪರಾಧ ಪ್ರಕರಣ ಪತ್ತೆಹಚ್ಚಲು ವಿಶೇಷ ಶ್ವಾನ ಪಡೆ ಸದ್ದಿಲ್ಲದೆ ಕಾರ್ಯಾರಂಭಿಸಿದೆ. ಹುಲಿ ಸಂರಕ್ಷಿತ ಪ್ರದೇಶಗಳನ್ನು ಕಾಪಾಡಲು ಈಗ ವಿಶೇಷ ಬೆಲ್ಜಿಯಂ ಸ್ನಿಫರ್ ಡಾಗ್ ತರಲಾಗಿದೆ.. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ..

ರಾಜ್ಯದಲ್ಲಿ ಅರಣ್ಯ ರಕ್ಷಣೆ ಉತ್ತಮವಾಗಿದ್ದರೂ ಕಾಡುಗಳ್ಳರ ಉಪಟಳ ಮಾತ್ರ ಕಡಿಮೆಯಾದಂತಿಲ್ಲ. ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ವನ್ಯಜೀವಿಗಳನ್ನು ಕೊಲ್ಲುವುದು ಒಂದೆಡೆಯಾದರೇ ಮಾಂಸಕ್ಕಾಗಿ ಶಿಕಾರಿ ಮಾಡೋದು ಕೂಡ ಹೆಚ್ಚಾಗಿದೆ. ಕಳ್ಳಬೇಟೆ, ಕಾಡುಗಳ್ಳತನಕ್ಕೆ ಬ್ರೇಕ್ ಹಾಕಲು ಈಗ ಅರಣ್ಯ ಇಲಾಖೆ ವಿಶೇಷ ಶ್ವಾನದಳವನ್ನು ರೆಡಿ ಮಾಡಿದೆ‌.

ಬೆಲ್ಜಿಯಂ ನ ವಿಶೇಷ ಸ್ನಿಫರ್ ಡಾಗ್ ಗೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೇಲುಕಾಮನಹಳ್ಳಿಯಲ್ಲಿ ವಿಶೇಷವಾದ ತರಬೇತಿ ಕೊಟ್ಟು ರಾಜ್ಯದ 5 ಹುಲಿ ರಕ್ಷಿತಾರಣ್ಯಗಳಿಗೆ ತಲಾ ಎರಡರಂತೆ ಹಸ್ತಾಂತರಿಸಲಾಗಿದೆ.

ಅರಣ್ಯ ಅಪರಾಧ ಪತ್ತೆ ಪ್ರಕರಣದಲ್ಲಿ ಈ ಹಿಂದೆಯೂ ಕೂಡ ಅರಣ್ಯ ಇಲಾಖೆ ಶ್ವಾನಗಳನ್ನು ಬಳಸಿಕೊಂಡಿತ್ತು. ಮುಧೋಳ್ ತಳಿಯ ಶ್ವಾನಗಳಿಗೂ ತರಬೇತಿ ನೀಡಿದ್ದರು. ಇದಕ್ಕೂ ಮುನ್ನ, ರಾಣಾ ಎಂಬ ಜರ್ಮನ್ ಶೆಫರ್ಡ್ ತಳಿಯ ಶ್ವಾನವನ್ನು ಮೊದಲ ಬಾರಿಗೆ ಬಂಡೀಪುರದಲ್ಲಿ ಅರಣ್ಯ ಅಪರಾಧ ಪತ್ತೆಯಲ್ಲಿ ಬಳಸಲಾಗಿತ್ತು. ವಿವಿಧ ತಳಿಯ ಶ್ವಾನಗಳನ್ನು ಅರಣ್ಯ ಇಲಾಖೆ ಬಳಸಿಕೊಂಡಿದ್ದರಾದರು ಇವುಗಳಿಗೆ ಹೋಲಿಸಿದರೆ ಬೆಲ್ಜಿಯಂ ಸ್ನೀಫರ್ ಶ್ವಾನಗಳು ಪತ್ತೆದಾರಿಕೆಯಲ್ಲಿ ಅತೀ ವೇಗದ್ದು ಎನಿಸಿಕೊಂಡಿದೆ.  ವಾಸನೆ ಗ್ರಹಿಕೆಯಲ್ಲಿ  ಬಹಳಷ್ಟು ದೂರ ವಾಸನೆಯನ್ನು ಈ ಶ್ವಾನಗಳು ಹುಡುಕಿಕೊಂಡು ಹೋಗಲಿದೆ.  ಜೊತೆಗೆ ತೆಳುವಾದ ಉದ್ದನೆಯ ದೇಹದಿಂದ ಬೇರೆ ತಳಿಯ ಶ್ವಾನಗಳಾಗಿಂತ ಎರಡು ಪಟ್ಟು ಹೆಚ್ಚು ವೇಗವಾಗಿ ಓಡಲಿದೆ. ದಟ್ಟಾರಣ್ಯದಲ್ಲಿ ಹಾಗೂ ಟ್ರಾಕ್ ಮಾಡುವ ಸಂದರ್ಭದಲ್ಲಿ ಎತ್ತರಕ್ಕೆ ಜಿಗಿಯುವ ಸಾಮರ್ಥ್ಯವನ್ನ ಈ ನಾಯಿಗಳು ಹೊಂದಿವೆ. ಹಾಗಾಗಿ, ಅರಣ್ಯ‌ ಇಲಾಖೆ ಈ ಬೆಲ್ಜಿಯಂ ಶ್ವಾನಗಳಿಗೆ ವಿಶೇಷ ತರಬೇತಿ ಕೊಟ್ಟು ಹುಲಿ ರಕ್ಷಿತಾರಣ್ಯಗಳಿಗೆ ನೀಡಿದೆ.

ಪತ್ತೆದಾರಿಕೆಯಲ್ಲಿ ಚಾಣಕ್ಯ ಎನಿಸಿರುವ ಈ ಬೆಲ್ಜಿಯಂ ಸ್ನೀಫರ್ ಶ್ವಾನಗಳನ್ನು ಅಪರಾಧ ಪತ್ತೆ ಪ್ರಕರಣದಲ್ಲಿ ಬಳಸಿಕೊಳ್ಳುವ ಜೊತೆಗೆ ಹುಲಿ ಕಾರ್ಯಾಚರಣೆಯಲ್ಲೂ ತೊಡಗಿಸುವುದು ವಿಶೇಷ. ಹುಲಿ ಸೆರೆ ಹಿಡಿಯುವಾಗ ಹುಲಿ ಇರುವಿಕೆಯ ಸ್ಥಳವನ್ನು ಈ ಶ್ವಾನಗಳು ಪತ್ತೆಹಚ್ಚಲಿದೆ‌. ಬೇಟೆಗಾರರು, ಕಾಡುಗಳ್ಳರನ್ನು ಸೆರೆ ಹಿಡಿಯಲು ನೆರವಾಗುವ ಈ ಶ್ವಾನ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಕೂಡ ಸಹಕಾರಿಯಾಗಿದೆ.

ಸದ್ಯಕ್ಕೆ, ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶಗಳಿಗೆ ತಲಾ ಎರಡರಂತೆ ಈ ಬೆಲ್ಜಿಯಂ ಸ್ನೀಫರ್ ಶ್ವಾನಗಳನ್ನು ನೀಡಿದ್ದು ಇದರ ಸಂಖ್ಯೆ ಹೆಚ್ಚು ಮಾಡಿ ಮತ್ತಷ್ಟು ಶ್ವಾನಗಳನ್ನು ಕಾಡಿನ ಕಾವಲಿಗೆ ನಿಯೋಜಿಸಲು ಅರಣ್ಯ ಇಲಾಖೆ ಮುಂದಾಗಿದೆ.
 

Add Zee News as a Preferred Source
TAGS:
Kannada News
Travel