New year party destination : ಹೊಸ ವರ್ಷದ ಆಚರಣೆಗೆ ಎಲ್ಲಿಗೆ ಹೋಗಬೇಕು ಅನ್ನೋದು ಈ ಸಮಯದಲ್ಲಿ ಎಲ್ಲರನ್ನು ಕಾಡುವ ಯಕ್ಷ ಪ್ರಶ್ನೆ ಆಗಿದೆ. ಹಲವರು ಗೋವಾದಿಂದ ಮನಾಲಿಯವರೆಗೆ ಯಾವ ಸ್ಥಳಕ್ಕೆ ಹೋಗಬೇಕು ಎಂದು ಯೋಚನೆ ಮಾಡುತ್ತಿರುತ್ತಾರೆ. ಅದಕ್ಕಾಗಿಯೇ ಇಲ್ಲಿ ಒಂದಿಷ್ಟು ತಾಣಗಳ ಪಟ್ಟಿ ಇಲ್ಲಿದೆ.....
1/5
ಶಿಲ್ಲಾಂಗ್
ಸಂಗೀತ, ಸಂಸ್ಕೃತಿ ಮತ್ತು ಪ್ರಕೃತಿಯ ಸೌಂದರ್ಯದ ನಡುವೆ ಹೊಸ ವರ್ಷವನ್ನು ಆಚರಿಸಲು ಶಿಲ್ಲಾಂಗ್ ಕೂಡ ಅತ್ಯುತ್ತಮ ತಾಣವಾಗಿದೆ. ಇಲ್ಲಿನ ಹೊಸ ವರ್ಷದ ಸಂಭ್ರಮದಲ್ಲಿ ಸಂಗೀತ ಕಾರ್ಯಕ್ರಮಗಳು, ಸಮುದಾಯದ ಆಚರಣೆಗಳು ಮತ್ತು ಸ್ಥಳೀಯ ಸಂಸ್ಕೃತಿಯ ಝಲಕ್ ಕಾಣಬಹುದು. ಹಸಿರು ಬೆಟ್ಟಗಳು, ತಂಪಾದ ವಾತಾವರಣ ಮತ್ತು ಸುಂದರ ಪ್ರಕೃತಿ ಪ್ರವಾಸಕ್ಕೆ ವಿಶೇಷ ಅನುಭವ ನೀಡುತ್ತವೆ. ಜನದಟ್ಟಣೆಯ ಪ್ರಮುಖ ಪ್ರವಾಸಿ ತಾಣಗಳಿಂದ ಸ್ವಲ್ಪ ದೂರವಾಗಿ ನೆಮ್ಮದಿಯ ವಾತಾವರಣದಲ್ಲಿ ಹೊಸ ವರ್ಷವನ್ನು ಕಳೆಯಲು ಬಯಸುವವರಿಗೆ ಶಿಲ್ಲಾಂಗ್ ಉತ್ತಮ ಆಯ್ಕೆಯಾಗಬಹುದು.
2/5
ಋಷಿಕೇಶ
ಪಾರ್ಟಿ ಮತ್ತು ಗದ್ದಲದಿಂದ ದೂರವಾಗಿ ಶಾಂತಿ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಹೊಸ ವರ್ಷವನ್ನು ಆರಂಭಿಸಲು ಬಯಸುವವರಿಗೆ ಋಷಿಕೇಶ ಉತ್ತಮ ತಾಣವಾಗಿದೆ. ಯೋಗ, ಧ್ಯಾನ ಮತ್ತು ಆಧ್ಯಾತ್ಮಿಕ ಅನುಭವಗಳಿಗೆ ಹೆಸರುವಾಸಿಯಾಗಿರುವ ಈ ಸ್ಥಳವು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಗಂಗಾ ನದಿಯ ದಡದಲ್ಲಿ ಸಮಯ ಕಳೆಯುವುದು, ಗಂಗಾ ಆರತಿ ವೀಕ್ಷಿಸುವುದು ಹಾಗೂ ವಿವಿಧ ಕ್ಷೇಮ ಮತ್ತು ಧ್ಯಾನ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಹೊಸ ವರ್ಷವನ್ನು ಸಕಾರಾತ್ಮಕವಾಗಿ ಆರಂಭಿಸಬಹುದು. ಏಕಾಂಗಿ ಪ್ರವಾಸಿಗರು ಹಾಗೂ ಮನಸ್ಸಿನ ಶಾಂತಿಯನ್ನು ಬಯಸುವವರಿಗೂ ಋಷಿಕೇಶ ಉತ್ತಮ ಆಯ್ಕೆಯಾಗಿದೆ.
3/5
ಮನಾಲಿ
ಹಿಮದಿಂದ ಆವೃತವಾಗಿರುವ ಪರ್ವತಗಳ ನಡುವೆ ಹೊಸ ವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಲು ಮನಾಲಿ ಅತ್ಯುತ್ತಮ ತಾಣವಾಗಿದೆ. ಹಿಮಭರಿತ ಬೆಟ್ಟಗಳು, ಸುಂದರ ಕೆಫೆಗಳು, ಬೆಂಕಿಯ ಸುತ್ತ ಕೂತು ಕಳೆಯುವ ಕ್ಷಣಗಳು ಹಾಗೂ ಲೈವ್ ಮ್ಯೂಸಿಕ್ ಕಾರ್ಯಕ್ರಮಗಳು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತವೆ. ಸಾಹಸ ಪ್ರಿಯರಿಗೆ ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಚಳಿಗಾಲದ ಟ್ರೆಕ್ಕಿಂಗ್‌ನಂತಹ ಹಲವು ಚಟುವಟಿಕೆಗಳೂ ಲಭ್ಯವಿವೆ. ಹಿಮದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಮನಾಲಿಯಲ್ಲಿ ಮರೆಯಲಾಗದ ಅನುಭವವಾಗಬಹುದು.
4/5
ಜೈಪುರ
ಹೊಸ ವರ್ಷವನ್ನು ರಾಜಮನೆತನದ ವೈಭವದೊಂದಿಗೆ ಆಚರಿಸಬೇಕು ಎನ್ನುವವರಿಗೆ ಜೈಪುರ ಸೂಕ್ತ ಆಯ್ಕೆಯಾಗಿದೆ. ರಾಜಸ್ಥಾನದ ಸಂಪ್ರದಾಯ, ಸಂಸ್ಕೃತಿ ಮತ್ತು ಆಧುನಿಕ ಮನರಂಜನೆಯ ಅದ್ಭುತ ಸಂಯೋಜನೆ ಇಲ್ಲಿನ ವಿಶೇಷತೆ. ಪಾರಂಪರಿಕ ಹೋಟೆಲ್‌ಗಳು, ಅರಮನೆಗಳು ಮತ್ತು ರೆಸಾರ್ಟ್‌ಗಳಲ್ಲಿ ಹೊಸ ವರ್ಷದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ಮನರಂಜನೆ ಮತ್ತು ಪಟಾಕಿಗಳೊಂದಿಗೆ ಜೈಪುರದಲ್ಲಿ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಬಹುದು. ಚಳಿಗಾಲದ ಆಹ್ಲಾದಕರ ವಾತಾವರಣವೂ ಪ್ರವಾಸಕ್ಕೆ ಮತ್ತಷ್ಟು ಮೆರಗು ನೀಡುತ್ತದೆ.
5/5
ಗೋವಾ
ಗೋವಾ: ಹೊಸ ವರ್ಷದ ಆಚರಣೆಗೆ ಭಾರತದಲ್ಲಿ ಅತ್ಯಂತ ಉತ್ತಮ ಸ್ಥಳ ಎಂದರೆ ಅದು ಗೋವಾ. ಇದು ದೇಶದ ಅತ್ಯಂತ ಜನಪ್ರಿಯ ಹೊಸ ವರ್ಷದ ತಾಣವಾಗಿದೆ. ಇದಕ್ಕೆ ಕಾರಣ ಬೀಚ್ ಪಾರ್ಟಿ, ಸಂಗೀತ ಉತ್ಸವಗಳು ಮತ್ತು ಪಟಾಕಿಗಳ ಸದ್ದು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನೈಟ್ ಪಾರ್ಟಿ ಮಾಡಲು ಬಯಸುವವರಿಗೆ ಗೋವಾ ಸೂಕ್ತ ಆಯ್ಕೆಯಾಗಿದೆ.