ಕರ್ನಾಟಕ ಲೋಕಸೇವಾ ಆಯೋಗವನ್ನೇ ಮುಚ್ಚುವ ಮಾತುಗಳನ್ನಾಡಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕ ಸರ್ಕಾರದಿಂದ ಹಲವು IAS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ.
ಈ ಕಾರ್ಯಕ್ರಮವನ್ನು ಯಾವುದೇ ಅದ್ಧೂರಿತನ ಇಲ್ಲದೆ ಕುಟುಂಬದ ಸದಸ್ಯರಿಗೆ ಮಾತ್ರ ಸೀಮಿತವಾಗಿ ನಡೆಸಲಾಗಿದೆ ಎಂದು ಜಮೀರ್ ಅಹಮದ್ ವಿವರಿಸಿದರು.
ಕೆಪಿಎಸ್‌ಸಿಯನ್ನೇ ಮುಚ್ಚುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆದರೆ ಕೆಪಿಎಸ್‌ಸಿಯನ್ನ ಮುಚ್ಚುವುದು ಅಥವಾ ಅದರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು ಸಂವಿಧಾನಾತ್ಮಕ ಮತ್ತು ಕಾನೂನುಬದ್ಧ ವಿಚಾರವಾಗಿರುವುದರಿಂದ, ಈ ಬಗ್ಗೆ ಆಳವಾಗಿ ಕಾನೂನು ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಈಗ ಅನುದಾನ ನೀಡಿದರೆ ರಾಜ್ಯದ ಹಣದ ಹರಿವು ಹಾಗೂ ವಿತ್ತೀಯ ನಿರ್ವಹಣೆ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ರಾಜ್ಯ ಈಗಾಗಲೇ ತನ್ನ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ತಲುಪಿದ್ದು, ಹೆಚ್ಚುವರಿ ಸಾಲ ಪಡೆಯಲು ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕಸ್ತೂರಿ ರಂಗನ್ ವರದಿ ಜಾರಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಲವಾದ ಕಾನೂನು ಹೋರಾಟ ನಡೆಸಲು ತಜ್ಞ ವಕೀಲರ ತಂಡವನ್ನು ರಚಿಸಬೇಕು.
ಕರ್ನಾಟಕದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ KPSC ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಪರೀಕ್ಷೆಗಳು 2026ರ ಜನವರಿ 8 ಮತ್ತು 9ರಂದು ನಡೆದಿದ್ದವು. ಬಳಿಕ ಪರೀಕ್ಷೆಯ ಫಲಿತಾಂಶ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಕ್ರಮದ ಆರೋಪಗಳು ಕೇಳಿಬಂದವು.
ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ವ್ಯಕ್ತಪಡಿಸಿದ ಕಳಕಳಿ ಏನು? ಅವರ ಮಾತಿನ ಮುಖ್ಯಾಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.
ನೀಲಿ ಶಾಲಿನ ಬಗ್ಗೆ ಮಾತನಾಡಲು ನೀನು ಯಾವ ಮ..?, ಎಂದು ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ. ದಲಿತ ಸಮುದಾಯ ಮತ್ತು ದಲಿತ ಸಂಘರ್ಷ ಸಮಿತಿ ಡಿಎಸ್‌ಎಸ್ ಕುರಿತು ಮಾತನಾಡುವಾಗ ನಾಲಿಗೆ ಹತೋಟಿಯಲ್ಲಿ ಇಟ್ಟುಕೊಂಡು ಮಾತನಾಡು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಚ್.ಕೆ.ಪಾಟೀಲ್ ಅವರು ರೈತರ ಸಮಸ್ಯೆ ಆಲಿಸಿ, ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗದಗ ತಾಲೂಕಿನಲ್ಲಿ ಶೇ.49ರಷ್ಟು ಮಳೆ ಕೊರತೆಯಾಗಿದ್ದರೂ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿರುವುದು ಏಕೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆ ಮತ್ತಷ್ಟು ಜನಸ್ನೇಹಿ ಮಾಡಲಾಗಿದೆ. ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿಗಾಗಿ ದಾಖಲೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ನಂಬಿಕೆ ನಕ್ಷೆ ವ್ಯವಸ್ಥೆ ಜಾರಿ ತರಲಾಗಿತ್ತು.
ಮತದಾರರ ಪಟ್ಟಿಯಿಂದ ಒಂದು 1.08 ಕೋಟಿ ಮತದಾರರನ್ನು ತೆಗೆದು ಹಾಕಿರುವುದಲ್ಲದೆ, 43.81 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರೆಂದು ವಿಚಾರಣೆ ನಡೆಸುತ್ತಿದೆ.
ಆರ್. ಅಶೋಕ್ ಅವರು ಯಕ್ಸಂಬಾದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ನಡೆಸಿ, ಸರ್ಕಾರದಲ್ಲಿ ಇನ್ನೂ ಎರಡು ವಿಕೆಟ್ ಪತನವಾಗಲಿದೆ ಎಂದು ಹೇಳಿದ್ದಾರೆ. ಇದು ಅವರ ರಾಜಕೀಯ ಹೇಳಿಕೆಯಾಗಿದೆ.
Karnataka Panchayat Elections 2026: ಕರ್ನಾಟಕದಲ್ಲಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು 2026ರ ಡಿಸೆಂಬರ್ ಒಳಗೆ ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ. ಈ ಬಾರಿ EVM ಬದಲಿಗೆ ಮತಪತ್ರ ಹಾಗೂ ಮತಪೆಟ್ಟಿಗೆ ಬಳಸಿ ಚುನಾವಣೆ ನಡೆಸಲಾಗುತ್ತಿದ್ದು, ಮತಪೆಟ್ಟಿಗೆ ಖರೀದಿ ಮತ್ತು ಲೈವ್ ವೆಬ್‌ಕಾಸ್ಟಿಂಗ್‌ಗಾಗಿ ₹151.31 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ.
Krishna Byre Gowda City Rounds: ಬೆಂಗಳೂರು ನಗರದಲ್ಲಿ ರಾತ್ರೋರಾತ್ರಿ ಸಿಟಿ ರೌಂಡ್ಸ್ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು ನಗರದ ಪರಿಸ್ಥಿತಿ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಮುಖ್ಯಮಂತ್ರಿಗಳು ಯೋಗ್ಯ ನಾಯಕರಲ್ಲ ಎಂದಾದರೆ ಅವರ ವಿರುದ್ಧ ಓಪನ್ ಆಗಿ ಪ್ರೊಟೆಸ್ಟ್ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 23 ಹೊಸ ತಾಲೂಕುಗಳನ್ನ ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ 2026ರ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 124ಕ್ಕೆ ಏರಿಕೆಯಾಗಿದೆ. ಹೊಸದಾಗಿ ಘೋಷಿಸಲಾದ ತಾಲೂಕುಗಳಲ್ಲಿ 21 ತೀವ್ರ ಹಾಗೂ 2 ಮಧ್ಯಮ ಬರಪೀಡಿತ ತಾಲೂಕುಗಳಾಗಿವೆ.