ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮತ್ತೆ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ಬಹಿರಂಗವಾಗಿಯೇ ಹರಿಹಾಯ್ದಿದ್ದು ರಾಜ್ಯ ರಾಜಕೀಯದಲ್ಲಿ ಹೊಸ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿದೆ ಎನ್ನಬಹುದು. ದಲಿತ ಸಂಘಟನೆಗಳು, ನೀಲಿ ಶಾಲು ಹಾಗೂ ಸಂವಿಧಾನದ ಆಶಯಗಳ ಕುರಿತು ಮಾಜಿ ಸಂಸದರು ನೀಡಿದ್ದಾರೆ ಎನ್ನಲಾದ ಹೇಳಿಕೆಗಳ ವಿರುದ್ಧ ಪ್ರದೀಪ್ ಈಶ್ವರ್ ಅವರು ಅತ್ಯಂತ ಕಠಿಣ ಮಾತುಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಮೈಸೂರಿನ ಮಾಜಿ ಸಂಸದರ ವಿರುದ್ಧ ನೇರ ಟೀಕೆಗಳನ್ನು ಮಾಡಿದ್ದಾರೆ. ಸಾರ್ವಜನಿಕವಾಗಿ ಬಳಸದ ಪದಗಳು ಮತ್ತು ಪೊಲೀಸ್ ವೃತ್ತ ನಿರೀಕ್ಷಕರ ಅಥವಾ ಸರ್ಕಲ್ ಇನ್ಸ್‌ಪೆಕ್ಟರ್ ಕುರಿತು ಏಕವಚನದಲ್ಲಿ ಪ್ರತಾಪ್ ಸಿಂಹ ಅವರು ಮಾತನಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇಸ್ಲಾಂ ಧರ್ಮ ಮತ್ತು ಮಸೀದಿಗಳ ಮುಂಭಾಗ ನಡೆಯುವ ಮೆರವಣಿಗೆಗಳ ಕುರಿತು ಬೇಜವಾಬ್ದಾರಿಯಿಂದ ಬಾಯಿ ತೆವಲಿಗೆ ಪ್ರತಾಪ್ ಸಿಂಹ ಅವರು ಮಾತನಾಡಿದ್ದಾರೆ. ಇನ್ನು ಪ್ರತಾಪ್ ಸಿಂಹ ಅವರು ನೀಲಿ ಶಾಲಿನ ಬಗ್ಗೆ ಮಾತನಾಡಿದ್ದನ್ನು ಪ್ರದೀಪ್ ಈಶ್ವರ್ ಅವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು ದಲಿತರ ಬಗ್ಗೆ, ನೀಲಿ ಶಾಲಿನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡು. ಈಗ ನೀವು ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ಮುಂದುವರೆಸಿದ ಪ್ರದೀಪ್ ಈಶ್ವರ್ ಅವರು, ಈ ದೇಶವನ್ನು ಕಟ್ಟಿದ್ದೇ ದಲಿತರು. ನೀಲಿ ಶಾಲಿನ ಬಗ್ಗೆ ಮಾತನಾಡಲು ನೀನು ಯಾವ ಮ..?, ಎಂದು ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ. ದಲಿತ ಸಮುದಾಯ ಮತ್ತು ದಲಿತ ಸಂಘರ್ಷ ಸಮಿತಿ ಡಿಎಸ್‌ಎಸ್ ಕುರಿತು ಮಾತನಾಡುವಾಗ ನಾಲಿಗೆ ಹತೋಟಿಯಲ್ಲಿ ಇಟ್ಟುಕೊಂಡು ಮಾತನಾಡು. ನೀನು ಹೇಳಿದಂತೆ ಇಲ್ಲಿ ಯಾರು ಕೂಡ ಅನಿಸಿಕೊಳ್ಳಲ್ಲ ಎಂದು ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀನು ಬೇಕಾದರೆ ಒಂದು ಕೇಸರಿ ಶಾಲು ಧರಿಸಿಕೊಂಡು ಬಾ, ನಾವು ಸಾವಿರಾರು ಜನರು ನೀಲಿ ಶಾಲುಗಳನ್ನು ಹಾಕಿಕೊಂಡು ಬರುತ್ತೇವೆ ಎಂದು ಪ್ರದೀಪ್ ಈಶ್ವರ್ ಅವರು, ಮಾಜಿ ಸಂಸದ ಪ್ರತಾಪ್ ಸಿಂಹಗೆ ಸವಾಲು ಹಾಕಿದ್ದಾರೆ. ದಲಿತರ ಬಗ್ಗೆ ಲಘುವಾಗಿ ಮಾತನಾಡಿರುವುದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಲೇ ಕ್ಷಮೆ ಕೇಳಬೇಕು. ಈಗಾಗಲೇ ನನ್ನ ಮೇಲೆ ಒಂದು ಪ್ರಕರಣ ದಾಖಲು ಮಾಡಿದ್ದೀಯಾ. ಬೇಕಿದ್ದರೇ ನನ್ನ ಮೇಲೆ ನೂರು ಕೇಸ್‌ಗಳನ್ನು ಹಾಕಿಕೊಳ್ಳಲಿ, ಆದರೆ ದಲಿತರ ಸ್ವಾಭಿಮಾನದ ವಿಚಾರದಲ್ಲಿ ನಾವು ಹಿಂದೆ ಸರಿಯುವುದಿಲ್ಲ ಎಂದು ಪ್ರದೀಪ್ ಈಶ್ವರ್ ಆಗ್ರಹಿಸಿದ್ದಾರೆ.
ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಅವರು ವಾಗ್ದಾಳಿ ನಡೆಸಿರುವುದು ರಾಜ್ಯದಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ ಎಂದು ಹೇಳಬಹುದು. ಒಂದು ಕಡೆ ಶಾಸಕರ ನೇರ ಹಾಗೂ ಆಕ್ರಮಣಕಾರಿ ಶೈಲಿಯು ಎರಡು ಪಕ್ಷಗಳ ನಡುವೆ ಅಂದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ವಾಗ್ವಾದಕ್ಕೆ ಕಾರಣವಾಗಬಹುದು. ಇದರ ಜೊತೆಗೆ ದಲಿತ ಪರ ಸಂಘಟನೆಗಳ ಹಕ್ಕುಗಳು ಮತ್ತು ಸಂಕೇತಗಳ ರಕ್ಷಣೆಯ ಕುರಿತಾದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ ಎನ್ನಬಹುದು. ಸಾರ್ವಜನಿಕ ಪ್ರತಿನಿಧಿಗಳು ಬಳಸುವ ಭಾಷೆ, ಘನತೆ ವಿಷಯದಲ್ಲಿ ಪ್ರದೀಪ್ ಈಶ್ವರ್ ಅವರ ಈ ಹೇಳಿಕೆಗಳು ವ್ಯಾಪಾಕ ಟೀಕೆ, ವಿರೋಧ ವ್ಯಕ್ತವಾಗಬಹುದು.
ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ ಪದಗಳು;
ಮೈಸೂರಿನ ಮಾಜಿ ಸಂಸದ, ನಾಲಾಯಕ್, ಅಯೋಗ್ಯ, ಮುಟ್ಟಾಳಾ, ನಾ.. ಒಬ್ಬ ಇದ್ದಾನೆ. ಅವನು ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಬಗ್ಗೆ ಏಕವಚನ ಮಾತಾಡುತ್ತಾನೆ. ಪಾಪಾ ಇಸ್ಲಾಂ ಧರ್ಮ ಮಸೀದಿ ಮುಂದೆ ನೀನು ಮೆರವಣಿಗೆ ಹೋಗು ರಾಜಾ, ಅಲ್ಲೇ ನಿಂತುಕೊಂಡು ಬಾಯಿ ತೆವಲಿಗೆ ಮಾತಾಡಿದ್ದಾರೆ. ಬಾಯಿ ತೆವಲಿಗೆ ಮಾತಾಡಿದ್ದಾರೆ. ನೀನು ಯಾವನೋ ದಲಿತರ ಬಗ್ಗೆ ಮಾತಾಡೋಕೆ?, ನೀಲಿ ಶಾಲಿನ ಬಗ್ಗೆ ಮಾತಾಡೋಕೆ ನೀನು ಯಾರೋ ಮ..?,
ನೀನು ಒಂದು ಕೇಸರಿ ಶಾಲು ಹಾಕಿಕೊಂಡು ಬಾ ಮ.., ನಾವು ಸಾವಿರ ನೀಲಿ ಶಾಲು ಹಾಕಿಕೊಂಡೇ ಬರ್ತೀವಿ. ಈ ದೇಶ ಕಟ್ಟಿದ್ದು ದಲಿತರು. ಬ.. ಮ.. ನೀನು ಯಾವನೋ ನೀಲಿ ಶಾಲಿನ ಬಗ್ಗೆ ಮಾತಾಡೋಕೆ?. ಕೇಸರಿ ಶಾಲಿನ ಬಗ್ಗೆ ಮಾತಾಡಿದ್ರೆ ನೀನು ಸುಮ್ನೇ ಇರ್ತೀಯಾ?, ಡಿಎಸ್‌ಎಸ್ ಬಗ್ಗೆ ಮಾತಾಡುವಾಗ ಬಾಯಿ ಕಂಟ್ರೋಲ್‌ನಲ್ಲಿ ಇರ್ಬೇಕು ಮು.., ದಲಿತರಿಗೆ ಕ್ಷಮೆಕೇಳಬೇಕು, ನೀಲಿ ಶಾಲಿನ ಬಗ್ಗೆ ಮಾತಾಡೋಕೆ ಹೋಗಬಾರದು. ದಲಿತರ ಬಗ್ಗೆ ಮಾತಾಡೋಕೆ ಖಬರ್ದಾರ್?, ಒಂದು ಕೇಸ್ ಹಾಕಿದ್ದೀಯಲ್ಲ, ನೂರು ಹಾಕು, ದಲಿತರ ಬಗ್ಗೆ ಮಾತಾಡೋಕೆ ಮು.. ಎಂದು ಬೀಪ್ ಸೌಂಡ್ ಹಾಕುವಾಗೆ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.