ಕರ್ನಾಟಕ ಸರ್ಕಾರ ಹಲವು ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಹಲವು ಪ್ರಮುಖ ಹುದ್ದೆಗಳಿಗೆ ಹೊಸ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಕುರಿತ ಫುಲ್ ಡೀಟೇಲ್ಸ್ ಇಲ್ಲಿದೆ.
ಪ್ರಮುಖ ಐಎಎಸ್ (IAS) ಅಧಿಕಾರಿಗಳ ವರ್ಗಾವಣೆಗಳು:
* ಡಾ. ತ್ರಿಲೋಕ್ ಚಂದ್ರ ಕೆ.ವಿ., IAS (KN:2007) — ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ.
* ತ್ರಿಲೋಕ್ ಚಂದ್ರ ಅವರಿಗೆ ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹುದ್ದೆ.
* ಈ ಹುದ್ದೆಯಲ್ಲಿ ಅವರು ಕ್ಯಾಪ್ಟನ್ ಡಾ. ರಾಜೇಂದ್ರ ಕೆ., IAS ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
* ಡಾ. ರಾಕೇಶ್ ಕುಮಾರ್ ಕೆ., IAS (KN:2012) — ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಹುದ್ದೆಯಿಂದ ವರ್ಗಾವಣೆ.
* ರಾಕೇಶ್ ಕುಮಾರ್ ಅವರಿಗೆ ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆ .
* ಜೊತೆಗೆ ಬೆಂಗಳೂರು ಸರ್ವೇ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಆಯುಕ್ತ ಹುದ್ದೆಯ ಹೆಚ್ಚುವರಿ/ಏಕಕಾಲಿಕ ಹೊಣೆಗಾರಿಕೆ ನೀಡಲಾಗಿದೆ.
* ಡಾ. ಅರುಂಧತಿ ಚಂದ್ರಶೇಖರ್, IAS (KN:2012) — ಪಂಚಾಯತ್ ರಾಜ್ ಆಯುಕ್ತ ಹುದ್ದೆಯಿಂದ ವರ್ಗಾವಣೆ.
* ಅರುಂಧತಿ ಚಂದ್ರಶೇಖರ್ ಅವರಿಗೆ ಬೆಂಗಳೂರು ಖಜಾನೆ ಆಯುಕ್ತರು (Commissioner of Treasuries) ಹುದ್ದೆ.
* ರಘುನಂದನ ಮೂರ್ತಿ, IAS ಅವರ concurrent charge ಬದಲಿಗೆ ಈ ನೇಮಕ ಮಾಡಲಾಗಿದೆ.
* ಪಾಟೀಲ್ ಯಲಗೌಡ ಶಿವನಗೌಡ, IAS (KN:2012) — ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದೇಶಕ ಹುದ್ದೆಯಿಂದ ವರ್ಗಾವಣೆ.
* ಅವರಿಗೆ ಬೆಂಗಳೂರು ಗ್ರಾಮೀಣಾಭಿವೃದ್ಧಿ ಆಯುಕ್ತರು ಹುದ್ದೆ .
* ಫೌಜಿಯಾ ತರುನ್ನುಮ್ ಬಿ., IAS ಅವರ concurrent charge ಬದಲಿಗೆ ನೇಮಕ.
* ಪಾಟೀಲ್ ಯಲಗೌಡ ಶಿವನಗೌಡ ಅವರಿಗೆ ಪಂಚಾಯತ್ ರಾಜ್ ಆಯುಕ್ತರ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
* ಜೊತೆಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯ concurrent charge ನೀಡಲಾಗಿದೆ.



ಇತರೆ ಪ್ರಮುಖ ವರ್ಗಾವಣೆಗಳು:
* ವೈಶಾಲಿ ಎಂ.ಎಲ್., IAS (KN:2013) — HESCOM ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಿಂದ ವರ್ಗಾವಣೆ.
* ಅವರಿಗೆ Mysuru Sales International Limited (MSIL), Bengaluru ವ್ಯವಸ್ಥಾಪಕ ನಿರ್ದೇಶಕಿ ಹುದ್ದೆ ನೀಡಲಾಗಿದೆ.
* ಶಶಿಧರ್ ಕುರೇರ, IAS (KN:2018) — GESCOM ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿದು, The Hutti Gold Mines Company Limited ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ concurrent charge ವಹಿಸಲಿದ್ದಾರೆ.
* ಈ ಹೊಣೆಗಾರಿಕೆ ಶಿಲ್ಪಾ ಆರ್., KAS ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ನೀಡಲಾಗಿದೆ.
* ಆನಂದ ಪ್ರಕಾಶ್ ಮೀನಾ, IAS (KN:2019) — ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ವರ್ಗಾವಣೆ.
* ಅವರಿಗೆ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ನೀಡಲಾಗಿದೆ.
* ರಿಷಿ ಆನಂದ್, IAS ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ನೇಮಕ.
* ರಿಷಿ ಆನಂದ್, IAS (KN:2020) — ವಿಜಯಪುರ ಜಿಲ್ಲಾ ಪಂಚಾಯತ್ CEO ಹುದ್ದೆಯಿಂದ ವರ್ಗಾವಣೆ.
* ಅವರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ CEO ಹುದ್ದೆ ನೀಡಲಾಗಿದೆ.
* ಹೇಮಂತ್ ಎನ್., IAS ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ನೇಮಕ.
* ಹೇಮಂತ್ ಎನ್., IAS (KN:2020) — ಶಿವಮೊಗ್ಗ ಜಿಲ್ಲಾ ಪಂಚಾಯತ್ CEO ಹುದ್ದೆಯಿಂದ ವರ್ಗಾವಣೆ.
* ಅವರಿಗೆ HESCOM ವ್ಯವಸ್ಥಾಪಕ ನಿರ್ದೇಶಕ, ಹುಬ್ಬಳ್ಳಿ ಹುದ್ದೆ ನೀಡಲಾಗಿದೆ.
* ವೈಶಾಲಿ ಎಂ.ಎಲ್., IAS ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ನೇಮಕ.
* ದಿನೇಶ್ ಕುಮಾರ್ ಮೀನಾ, IAS (KN:2023) — ಕೊಳ್ಳೇಗಾಲ ಉಪವಿಭಾಗದ ಸಹಾಯಕ ಆಯುಕ್ತ ಹುದ್ದೆಯಿಂದ ವರ್ಗಾವಣೆ.
* ಅವರಿಗೆ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ ನೀಡಲಾಗಿದೆ.
* ಆನಂದ ಪ್ರಕಾಶ್ ಮೀನಾ, IAS ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ನೇಮಕ.