ಭಯೋತ್ಪಾದನೆ ಮತ್ತು ಉಗ್ರರಿಗೆ ಆಶ್ರಯ ನೀಡುವ ವಿಚಾರದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ (UN) ಮಹಾಸಭೆಯ ಸಂದರ್ಭದಲ್ಲಿ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮಾಧ್ಯಮ ಪ್ರತಿನಿಧಿಗಳು ಉಗ್ರ ನಿಗ್ರಹ ಹಾಗೂ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ವಿಚಾರವಾಗಿ ನೇರ ಪ್ರಶ್ನೆಗಳನ್ನು ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.. ಹೆಚ್ಚಿನ ವಿವರ ಇಲ್ಲಿದೆ..
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಹಲವು ವರ್ಷಗಳ ನಂತರ ಅಮೆರಿಕಾಗೆ ಭೇಟಿ ನೀಡಿದ್ದು, ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ವ್ಯಾಪಾರ ಸಮರ, ತೈವಾನ್ ವಿವಾದ, ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಕೃತಕ ಬುದ್ಧಿಮತ್ತೆಯ (AI) ಸವಾಲುಗಳ ನಡುವೆ ನಡೆದ ಈ ಉನ್ನತ ಮಟ್ಟದ ಸಭೆಯ ಸಂಪೂರ್ಣ ವರದಿ ಇಲ್ಲಿದೆ.
ಮಧ್ಯಪ್ರಾಚ್ಯದ ಅಂಗಳದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಮರ ಈಗ ಸಿನಿಮೀಯ ತಿರುವು ಪಡೆದುಕೊಂಡಿದೆ. ಟ್ರಂಪ್ ಬೆದರಿಕೆಗೆ ಇರಾನ್ ತೆಲುಗು ಸಿನಿಮಾದ ಸೀನ್ ಮೂಲಕವೇ ಟಾಂಗ್ ಕೊಟ್ಟಿದ್ದರೆ, ಕಡಲಾಳದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ಟಾರ್ಪಿಡೊ ದಾಳಿ ಭಾರತೀಯ ಸಿಬ್ಬಂದಿಯ ರಕ್ತ ಬಸಿಯುತ್ತಿದೆ.. ಈ ಕುರಿತ ವಿಶೇಷ ವರದಿ ಇಲ್ಲಿದೆ.
ಭಾರತದ ಮೊದಲ ಅಂತರರಾಷ್ಟ್ರೀಯ ಸುದ್ದಿ ವಾಹಿನಿ WION 10 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ, ಜೀ ಮೀಡಿಯಾ WION ವಿಶ್ವ ಸಮ್ಮೇಳನಗಳು ಮತ್ತು WION ಲಕ್ಸ್ ಎಂಬ ಎರಡು ಹೊಸ ಉಪಕ್ರಮಗಳನ್ನು ಘೋಷಿಸಿದೆ. ಬುಧವಾರ (ಸೆ. 23) ನವದೆಹಲಿಯಲ್ಲಿ ನಡೆದ WION ಐಕಾನಿಕ್ ಟೂರಿಸಂ ಶೃಂಗಸಭೆ ಮತ್ತು ಪ್ರಶಸ್ತಿಗಳು 2026 ರಲ್ಲಿ ಜೀ ಮೀಡಿಯಾದ ಕಂಪನಿಯ ಸಿಇಒ ರಕ್ತಿಮ್ ದಾಸ್ ಈ ಬಗ್ಗೆ ಘೋಷಿಸಿದ್ದಾರೆ.
ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಅವರು ಅಮೆರಿಕದೊಂದಿಗೆ ಮತ್ತೆ ಮಾತುಕತೆ ಆರಂಭಿಸಲು 7 ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಇರಾನ್ ಈ ಷರತ್ತುಗಳ ಸಂದೇಶವನ್ನು ಕತಾರ್ ಮೂಲಕ ವಾಷಿಂಗ್ಟನ್‌ಗೆ (ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ) ತಲುಪಿಸಿದ್ದು, ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಪಾಕಿಸ್ತಾನವೂ ಮಧ್ಯಸ್ಥಿಕೆಗೆ ಯತ್ನಿಸುತ್ತಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಕಿಮ್ ಜಾಂಗ್ ಉನ್ ಆಡಳಿತ ನಡೆಸಿದ ಸರಣಿ ಭೂಗತ ಪರಮಾಣು ಪರೀಕ್ಷೆಗಳು ಈಗ ಉತ್ತರ ಕೊರಿಯಾದ ನೆಲಕ್ಕೇ ಕಂಟಕವಾಗಿವೆ. ಸೈನ್ಸ್ ಜರ್ನಲ್ ಅಧ್ಯಯನದ ಪ್ರಕಾರ, ಮೌಂಟ್ ಮಂಟಾಪ್ ಅಡಿಯಲ್ಲಿ ನಡೆದ ಸ್ಫೋಟಗಳಿಂದ ಭೂಪದರದ ಒತ್ತಡ ಬದಲಾಗಿ, ಸುಪ್ತವಾಗಿದ್ದ ದೋಷರೇಖೆಗಳು ಮರುಸಕ್ರಿಯಗೊಂಡಿವೆ. 2008ರಿಂದ 2025ರ ನಡುವೆ ಬರೋಬ್ಬರಿ 1,399 ಭೂಕಂಪನಗಳು ದಾಖಲಾಗಿದ್ದು, ಭವಿಷ್ಯದಲ್ಲಿ 6.4 ತೀವ್ರತೆಯ ದೊಡ್ಡ ನೈಸರ್ಗಿಕ ಭೂಕಂಪ ಸಂಭವಿಸುವ ಭೌಗೋಳಿಕ ಅಪಾಯ ಎದುರಾಗಿದೆ.
ಪಾಕಿಸ್ತಾನದ ಖೈಬರ್ ಪಂಖ್ತುಂಖ್ವಾ ಪ್ರಾಂತ್ಯದ ಕೋಹಾಟ್‌ನ ಪೋಲಿಸ್ ಲೈನ್ಸ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದು (15 ಮಂದಿ ಪೊಲೀಸರು) 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.. ನೋಡಿ
Trumo signs russia sanctions bill |ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ. ರಷ್ಯಾದಿಂದ ಅತಿ ಹೆಚ್ಚು ಇಂಧನ ಖರೀದಿಸುವ ಐದು ದೇಶಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಈ ಶಾಸನವು ಅವಕಾಶ ನೀಡುತ್ತದೆ.
ಪೊಲೀಸ್ ಅಧಿಕಾರಿ ನಮ್ಮ ಆಸ್ತಿಗೆ ಪ್ರವೇಶ ಪಡೆದು ಜೀವ ತೆಗೆದಿದ್ದಾನೆ. ಕತ್ತೆಯೂ ಏನು ಮಾಡಿಲ್ಲ. ಅದು ನಮ್ಮ ಪ್ರದೇಶದಲ್ಲಿ ಓಡಾಡುವಾಗ ಅದರ ಜೀವ ತೆಗೆದಿರುವುದು ಯಾಕೆ ಎಂದು ಪ್ರಶ್ನಿಸಿ ಯುವತಿಯು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
19ನೇ ಶತಮಾನದ ಕೊನೆಯಲ್ಲಿ, ಭಾರತವನ್ನು ಆಳುತ್ತಿದ್ದ ಬ್ರಿಟಿಷರು ಈ ವಿದ್ಯುತ್ ಸೀಲಿಂಗ್ ಫ್ಯಾನ್‌ಗಳನ್ನು ಭಾರತಕ್ಕೆ ಪರಿಚಯಿಸಿದರು. ಅಲ್ಲಿಂದ ಮುಂದೆ ಭಾರತೀಯರ ಮನೆಗಳಲ್ಲಿ ಫ್ಯಾನ್‌ಗಳ ಆಳ್ವಿಕೆ ಶುರುವಾಯಿತು.
ವಿಶ್ವಸಂಸ್ಥೆಯು ತನ್ನ 80 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಕಾರ್ಯದರ್ಶಿಯೊಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರ ಅಧಿಕಾರಾವಧಿ ಮುಗಿಯುತ್ತಿದ್ದು, ಲ್ಯಾಟಿನ್ ಅಮೇರಿಕನ್ ಪ್ರದೇಶಕ್ಕೆ ಈ ಹುದ್ದೆ ಒಲಿಯುವ ಸಂಪ್ರದಾಯದಂತೆ ಗಯಾನಾದ ಕ್ಯಾರೊಲಿನ್ ರೊಡ್ರಿಗಸ್-ಬಿರ್ಕೆಟ್ ಮತ್ತು ಕೋಸ್ಟಾ ರಿಕಾದ ರೆಬೆಕ್ಕಾ ಗ್ರಿನ್ಸ್‌ಪಾನ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ.. ಈ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ..
ಗ್ರಾಮೀಣ ಭಾಗದ ಕಷ್ಟಕರ ವಾತಾವರಣದಲ್ಲಿದ್ದರೂ ಕ್ಸಿ ತಮ್ಮ ಶಿಕ್ಷಣದ ಮೇಲಿನ ಆಸಕ್ತಿಯನ್ನು ಬಿಡಲಿಲ್ಲ. ಆಡಳಿತ ಮತ್ತು ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಆಳವಾದ ಆಸಕ್ತಿ ತಳೆದಿದ್ದ ಅವರು, ಚೀನಾದ ಅತ್ಯಂತ ಪ್ರತಿಷ್ಠಿತ ತ್ಸಿಂಗ್‌ಹುವಾ ವಿಶ್ವವಿದ್ಯಾಲಯವನ್ನು ಸೇರಿ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
BRICS ಸಹಕಾರದಿಂದ ಭಾರತಕ್ಕೆ ಹೊಸ ವ್ಯಾಪಾರ ಮಾರುಕಟ್ಟೆಗಳು, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು, UPI ಆಧಾರಿತ ಅಂತಾರಾಷ್ಟ್ರೀಯ ಪಾವತಿಗಳು ಮತ್ತು ವಿದೇಶಿ ಹೂಡಿಕೆಗಳ ಅವಕಾಶಗಳು ಹೆಚ್ಚಾಗಬಹುದು. ಇದರಿಂದ ಭಾರತೀಯ ಕಂಪನಿಗಳು, MSMEಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ರಫ್ತು ಕ್ಷೇತ್ರಕ್ಕೆ ಲಾಭವಾಗುವ ಸಾಧ್ಯತೆಯಿದೆ. ಆದರೆ ಡಾಲರ್‌ಗೆ ತಕ್ಷಣ ಪರ್ಯಾಯವಲ್ಲ; ನಿರ್ಧಾರಗಳು ಕಾರ್ಯರೂಪಕ್ಕೆ ಬಂದಾಗಲೇ ನಿಜವಾದ ಆರ್ಥಿಕ ಲಾಭ ಸಿಗಲಿದೆ.
ದಾಳಿ ನಡೆದು ಬರೋಬ್ಬರಿ 25 ವರ್ಷ ಕಳೆದಿದೆ. ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್‌ಖೈದಾ ದಾಳಿ ನಡೆಸಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಆದ್ರೆ, ಈ ರಕ್ತಚರಿತ್ರೆಗೂ ವರ್ಷಗಳ ಮುನ್ನವೇ ಬಿನ್ ಲಾಡೆನ್‌ನ ಕಣ್ಣು ಭಾರತದ ಮೇಲೂ ಇತ್ತು ಅನ್ನೋ ಸ್ಫೋಟಕ ಸಂಗತಿ ಈಗ ಬಯಲಾಗಿದೆ.. ಈ ಕುರಿತ ಸಂಚಲನಾತ್ಮಕ ವರದಿ ಇಲ್ಲಿದೆ..
18ನೇ ಬ್ರಿಕ್ಸ್ (BRICS) ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿ, ಶಿಷ್ಟಾಚಾರ ಬದಿಗಿಟ್ಟು ಪುಟಿನ್ ಅವರ ಆರಸ್ ಸೆನೆಟ್ ಲಿಮೋಸಿನ್ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸಿದರು. ಈ ಭೇಟಿಯಲ್ಲಿ ಮೋದಿ ಅವರು ಪುಟಿನ್ ಅವರಿಗೆ ತಿರುಕ್ಕುರಳ್ ಗ್ರಂಥವನ್ನು ನೀಡಿದ್ದು ಜಗತ್ತಿನ ಗಮನ ಸೆಳೆದಿದೆ.. ಹಾಗಿದ್ರೆ ಕಾರು ಮತ್ತು ಆ ಗ್ರಂಥದ ವಿಶೇಷತೆ ಏನು..? ಬನ್ನಿ ತಿಳಿಯೋಣ...
ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಇಂಧನ ಮಾರುಕಟ್ಟೆಯ ಏರಿಳಿತಗಳು ಹಾಗೂ ಜಾಗತಿಕ ಪೂರೈಕೆ ಸರಪಳಿಯ ಅಡೆತಡೆಗಳ ನಡುವೆಯೂ, ಉದಯೋನ್ಮುಖ ಮಾರುಕಟ್ಟೆಗಳು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಮುಖ ಒಕ್ಕೂಟವಾದ ಬ್ರಿಕ್ಸ್ ತನ್ನ 18 ನೇ ವಾರ್ಷಿಕ ಶೃಂಗಸಭೆಗಾಗಿ ನವದೆಹಲಿಯಲ್ಲಿ ಸಭೆ ಸೇರುತ್ತಿದೆ. ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ ಈ ಐತಿಹಾಸಿಕ ಶೃಂಗಸಭೆಯು ಭಾರತದ ನಾಲ್ಕನೇ ಅಧ್ಯಕ್ಷತೆಯನ್ನು ಗುರುತಿಸುತ್ತದೆ. ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ ಎಂಬ ಪ್ರಮುಖ ಧೇಯವಾಕ್ಯದೊಂದಿಗೆ ಭಾರತವು ಈ ಒಕ್ಕೂಟದ ಸಾರಥ್ಯ ವಹಿಸಿಕೊಂಡಿದೆ.