• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ಭಾರತದಲ್ಲಿ ವಿಶ್ವದ ಗಮನ ಸೆಳೆದ ʻತಿರುಕ್ಕುರಳ್ʼ ಮತ್ತು ಪುಟಿನ್ ಕಾರಿನ ವಿಶೇಷತೆ ಏನ್‌ ಗೊತ್ತೆ..!?

ಭಾರತದಲ್ಲಿ ವಿಶ್ವದ ಗಮನ ಸೆಳೆದ ʻತಿರುಕ್ಕುರಳ್ʼ ಮತ್ತು ಪುಟಿನ್ ಕಾರಿನ ವಿಶೇಷತೆ ಏನ್‌ ಗೊತ್ತೆ..!?

18ನೇ ಬ್ರಿಕ್ಸ್‌ (BRICS) ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿ, ಶಿಷ್ಟಾಚಾರ ಬದಿಗಿಟ್ಟು ಪುಟಿನ್ ಅವರ 'ಆರಸ್ ಸೆನೆಟ್' ಲಿಮೋಸಿನ್ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸಿದರು. ಈ ಭೇಟಿಯಲ್ಲಿ ಮೋದಿ ಅವರು ಪುಟಿನ್ ಅವರಿಗೆ 'ತಿರುಕ್ಕುರಳ್' ಗ್ರಂಥವನ್ನು ನೀಡಿದ್ದು ಜಗತ್ತಿನ ಗಮನ ಸೆಳೆದಿದೆ.. ಹಾಗಿದ್ರೆ ಕಾರು ಮತ್ತು ಆ ಗ್ರಂಥದ ವಿಶೇಷತೆ ಏನು..? ಬನ್ನಿ ತಿಳಿಯೋಣ...

Reported ByKrishna NKEdited ByKrishna NK
Published: Sep 12, 2026, 07:43 PM IST|Updated: Sep 17, 2026, 04:03 PM IST
joinshare
ಭಾರತದಲ್ಲಿ ವಿಶ್ವದ ಗಮನ ಸೆಳೆದ ʻತಿರುಕ್ಕುರಳ್ʼ ಮತ್ತು ಪುಟಿನ್ ಕಾರಿನ ವಿಶೇಷತೆ ಏನ್‌ ಗೊತ್ತೆ..!?
Image Credit: Russian President Vladimir Putin

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನವದೆಹಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 18ನೇ ಬ್ರಿಕ್ಸ್‌ (BRICS) ಶೃಂಗಸಭೆ ಆರಂಭವಾಗಿದ್ದು, ಇದರಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ ಆಗಮಿಸಿದ್ದಾರೆ. ಹೈದರಾಬಾದ್ ಹೌಸ್‌ನಲ್ಲಿ ನಡೆದ ಮಹತ್ವದ ದ್ವಿಪಕ್ಷೀಯ ಮಾತುಕತೆಯ ನಂತರ, ಶಿಷ್ಟಾಚಾರಗಳನ್ನು ಬದಿಗಿಟ್ಟು ಉಭಯ ನಾಯಕರು ಒಂದೇ ಕಾರಿನಲ್ಲಿ 'ಇನ್ನೋಪ್ರಾಮ್' ಪ್ರದರ್ಶನಕ್ಕೆ ತೆರಳಿದ್ದು, ಹಾಗೂ 'ತಿರುಕ್ಕುರಳ್' ಗ್ರಂಥ ಉಡುಗೊರೆ ಇದೀಗ ಪ್ರಪಂಚದ ಗಮನ ಸೆಳೆಯುತ್ತಿದೆ.

ಕಾರು ಡಿಪ್ಲೋಮಸಿ 4.0: ಬಂದ್ ಬಾಗಿಲ ರಹಸ್ಯ ಸಮಾಲೋಚನೆ
ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಕಟ್ಟುನಿಟ್ಟಿನ ಸಾಂಪ್ರದಾಯಿಕ ನಿಯಮಗಳನ್ನು ಬದಿಗೊತ್ತಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾ ಅಧ್ಯಕ್ಷರ 'ಆರಸ್ ಸೆನೆಟ್' ಲಿಮೋಸಿನ್ ಕಾರಿನಲ್ಲಿ ಜೊತೆಯಾಗಿ ಪಯಣಿಸಿದರು. ಒಂದೇ ವರ್ಷದಲ್ಲಿ 4ನೇ ಬಾರಿಗೆ ಮರುಕಳಿಸಿದ ಈ ಐತಿಹಾಸಿಕ 'ಕಾರು ಡಿಪ್ಲೋಮಸಿ' ವೇಳೆ, ಉಭಯ ನಾಯಕರು ಬಂದ್ ಬಾಗಿಲ ಕಾರಿನೊಳಗೆ ಅತ್ಯಂತ ಗೌಪ್ಯ ಹಾಗೂ ಮುಖಾಮುಖಿ ರಹಸ್ಯ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸೆಪ್ಟೆಂಬರ್ 2025ರ ಚೀನಾದ ಟಿಯಾಂಜಿನ್ SCO ಸಭೆ, ಡಿಸೆಂಬರ್ 2025ರ ನವದೆಹಲಿ ಭೇಟಿ, ಹಾಗೂ ಆಗಸ್ಟ್ 2026ರಲ್ಲಿ ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆದ 'ವರ್ಲ್ಡ್ ನೋಮ್ಯಾಡ್ ಗೇಮ್ಸ್' ವೇಳೆ ಕಂಡುಬಂದಿದ್ದ ಈ ವಿಶೇಷ ಬಾಂಧವ್ಯ, ಇದೀಗ 'ಕಾರು ಡಿಪ್ಲೋಮಸಿ 4.0' ರೂಪದಲ್ಲಿ ಜಾಗತಿಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

'ಚಕ್ರಗಳ ಮೇಲಿನ ಕೋಟೆ' ಆರಸ್ ಸೆನೆಟ್
ರಷ್ಯಾದ ಮಹತ್ವಾಕಾಂಕ್ಷೆಯ 'ಕಾರ್ಟೆಜ್' ಯೋಜನೆಯಡಿ ನಿರ್ಮಾಣಗೊಂಡಿರುವ 'ಆರಸ್ ಸೆನೆಟ್' ಲಿಮೋಸಿನ್, ಅಧ್ಯಕ್ಷ ಪುಟಿನ್ ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಲ್ಟ್ರಾ-ಲಕ್ಸುರಿ ಸೂಪರ್ ಕಾರ್ ಆಗಿದೆ. ಅತ್ಯುನ್ನತ VR10 ರಕ್ಷಾ ಕವಚ ಹೊಂದಿರುವ ಈ ಕಾರು ಬಾಂಬ್, ರಾಕೆಟ್ ಹಾಗೂ ಗುಂಡಿನ ದಾಳಿಯನ್ನು ಸುಲಭವಾಗಿ ತಡೆಯಬಲ್ಲ 'ಚಕ್ರಗಳ ಮೇಲಿನ ಕೋಟೆ'ಯಂತಿದೆ. ರಾಸಾಯನಿಕ ಮತ್ತು ಜೈವಿಕ ದಾಳಿಗಳ ಸಂದರ್ಭದಲ್ಲಿ ನಿರಂತರ ಆಮ್ಲಜನಕ ಪೂರೈಸುವ ಸ್ವಾವಲಂಬಿ ವ್ಯವಸ್ಥೆ ಹಾಗೂ ಸಂಪೂರ್ಣ ನೀರಿನಲ್ಲಿ ಮುಳುಗಿದರೂ ಜಲಾಂತರ್ಗಾಮಿಯಂತೆ ಸುರಕ್ಷತೆ ಒದಗಿಸುವ ಏರ್‌ಟೈಟ್ ತಂತ್ರಜ್ಞಾನವನ್ನು ಇದು ಹೊಂದಿದೆ.

'ತಿರುಕ್ಕುರಳ್' ಉಡುಗೊರೆ
ರಾಜತಾಂತ್ರಿಕ ಚರ್ಚೆಯ ಜೊತೆಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದ ಪ್ರಧಾನಿ ಮೋದಿ, ಸಂತ ತಿರುವಳ್ಳುವರ್ ರಚಿತ ಪ್ರಾಚೀನ ತಮಿಳು ನೀತಿಶಾಸ್ತ್ರ ಗ್ರಂಥ 'ತಿರುಕ್ಕುರಳ್‌'ನ ರಷ್ಯನ್ ಭಾಷಾಂತರ ಪ್ರತಿಯನ್ನು ಪುಟಿನ್ ಅವರಿಗೆ ಉಡುಗೊರೆಯಾಗಿ ನೀಡಿದರು. ಆದರ್ಶ ಆಡಳಿತ, ನೈತಿಕತೆ ಮತ್ತು ಸಾರ್ವಕಾಲಿಕ ಸ್ನೇಹದ ಸಂದೇಶ ಸಾರುವ ಈ ಕೃತಿಯನ್ನು ಹಸ್ತಾಂತರಿಸುವ ಮೂಲಕ ತಮಿಳು ಸಾಹಿತ್ಯದ ಜಾಗತಿಕ ಮೌಲ್ಯಗಳನ್ನು ರಷ್ಯಾಗೆ ತಲುಪಿಸುವ ಕಾರ್ಯ ಮಾಡಲಾಗಿದೆ.

ಪಾಶ್ಚಿಮಾತ್ಯ ದೇಶಗಳಿಗೆ ತೀವ್ರ ಮುಖಭಂಗ
ಭಾರತವನ್ನು ರಷ್ಯಾದಿಂದ ದೂರವಿಡಲು ಯತ್ನಿಸುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಈ ಭೇಟಿ ಮತ್ತು 'ಕಾರು ಡಿಪ್ಲೋಮಸಿ' ತೀವ್ರ ಮುಖಭಂಗ ಉಂಟುಮಾಡಿದೆ. ಅಮೆರಿಕಾ ಮತ್ತು ಯುರೋಪ್ ಒಡ್ಡಿದ್ದ ರಾಜತಾಂತ್ರಿಕ ಒತ್ತಡಗಳ ನಡುವೆಯೂ ಭಾರತ ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ಬಲವಾಗಿ ಎತ್ತಿಹಿಡಿದಿದೆ. ಕಚ್ಚಾ ತೈಲ, ರಕ್ಷಣೆ, ಬಾಹ್ಯಾಕಾಶ ಹಾಗೂ ವ್ಯಾಪಾರ ವಲಯಗಳಲ್ಲಿ ರಷ್ಯಾದೊಂದಿಗಿನ ಪಾಲುದಾರಿಕೆ ಅಚಲ ಎಂಬ ಸ್ಪಷ್ಟ ಸಂದೇಶವನ್ನು ನವದೆಹಲಿ ರವಾನಿಸಿದೆ.

Add Zee News as a Preferred Source
TAGS:
World News