Donald Trump Xi Jinping Summit : ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಅಮೆರಿಕಾಗೆ ಭೇಟಿ ನೀಡಿದ್ದಾರೆ. ಹಲವು ವರ್ಷಗಳ ನಂತರ ಶ್ವೇತಭವನಕ್ಕೆ ಆಗಮಿಸಿದ, ಚೀನಾ ಅಧ್ಯಕ್ಷರಿಗೆ ಟ್ರಂಪ್ ಭವ್ಯ ಸ್ವಾಗತ ಕೋರಿದ್ದಾರೆ.. ಉಭಯ ನಾಯಕರ ಮಧ್ಯೆ ಮಹತ್ವದ ಸಭೆ ನಡೆದಿದ್ದು, ಮೀಟಿಂಗ್‌ನಲ್ಲಿ ಏನ್ ಚರ್ಚೆ ಆಯ್ತು ಅನ್ನೋದರ ವರದಿ ಇಲ್ಲಿದೆ ನೋಡಿ....
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕಗೆ ಭೇಟಿ ನೀಡಿದರು... ಹಲವು ವರ್ಷಗಳ ನಂತರ ಶ್ವೇತಭವನಕ್ಕೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ಟ್ರಂಪ್ ಭವ್ಯ ಸ್ವಾಗತ ಕೋರಿದ್ದಾರೆ.. ಟ್ರಂಪ್, ಷಿ ಜಿನ್‌ಪಿಂಗ್ ಅವರನ್ನು ಸ್ವಾಗತಿಸುವ ವೇಳೆ ತಮ್ಮ ನಡುವಿನ ಉತ್ತಮ ಸ್ನೇಹದ ಬಗ್ಗೆ ಕೊಂಡಾಡಿದರು. 2016ರಲ್ಲಿ ತಾವು ಮೊದಲ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ರಿ... ಆಗಿನಿಂದಲೂ ಇಬ್ಬರ ನಡುವೆ ಪರಸ್ಪರ ಗೌರವ, ಎರಡೂ ದೇಶಗಳ ಜನರ ಹಿತಾಸಕ್ತಿ ಆಧರಿಸಿದ ಸ್ನೇಹ ಬೆಳೆದಿದೆ ಎಂದು ಟ್ರಂಪ್ ಹೇಳಿದರು.
ಶ್ವೇತಭವನದಲ್ಲಿ ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ಮಹತ್ವದ ಸಭೆ ನಡೆದಿದೆ.. AI, ವ್ಯಾಪಾರ, ತೈವಾನ್ ಮತ್ತು ಇರಾನ್‌ನಂತಹ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.. ಇದೇ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಮೆರಿಕ ಮತ್ತು ಚೀನಾ ನಡುವಿನ ಸ್ಪರ್ಧೆ ಆರೋಗ್ಯಕರವಾಗಿರಬೇಕು. AI ಸದಾ ಮಾನವರ ನಿಯಂತ್ರಣದಲ್ಲಿರಬೇಕು ಎಂದು ಒತ್ತಿ ಹೇಳಿದರು.
ಇನ್ನು ಚೀನಾ ಮತ್ತು ಅಮೆರಿಕ ನಡುವಿನ ಸ್ನೇಹದ ಸಂಕೇತವಾಗಿ ಎರಡು ದೈತ್ಯ ಪಾಂಡಾಗಳನ್ನು ಅಮೆರಿಕಕ್ಕೆ ಕಳುಹಿಸುವುದಾಗಿ ಕ್ಸಿ ಜಿನ್ ಪಿಂಗ್ ಘೋಷಿಸಿದ್ದಾರೆ. ಪಿಂಗ್ ಪಿಂಗ್ ಮತ್ತು ಫು ಶುವಾಂಗ್ ಹೆಸರಿನ ಈ ಪಾಂಡಾಗಳು ಅಟ್ಲಾಂಟಾ ಮೃಗಾಲಯದಲ್ಲಿ ಇರಲಿವೆ. ಷಿ ಜಿನ್‌ಪಿಂಗ್ ಅವರು ಈ ಪಾಂಡಾಗಳು ಎರಡೂ ದೇಶಗಳ ಜನರ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸಲಿ ಎಂದು ಹೇಳಿದ್ದಾರೆ.
ಒಟ್ಟಾರೆ, ಪಶ್ಚಿಮ ಏಷ್ಯಾ ಸಂಘರ್ಷ, ತೈವಾನ್ ವಿವಾದ ಹಾಗೂ ವ್ಯಾಪಾರ ಸಮರದ ನಡುವೆಯೇ ಚೀನಾ ಅಧ್ಯಕ್ಷ ಹಾಗೂ ಟ್ರಂಪ್ ಭೇಟಿಯಾಗಿದೆ.. ಚರ್ಚಿಸಲು ಹಲವು ಜಟಿಲ ವಿಷಯಗಳಿದ್ದರೂ ಟ್ರಂಪ್ ಚೀನಾದ ಜೊತೆಗಿನ ಸ್ನೇಹವನ್ನ ಕೊಂಡಾಡಿದ್ದಾರೆ..ಇದೆಲ್ಲದರ ನಡುವೆ ಚೀನಾ ಅಧ್ಯಕ್ಷರು ಎಐ ಬಗ್ಗೆ ಎಚ್ಚರಿಕೆಯ ನುಡಿಯನ್ನೂ ಹಾಡಿದ್ದು, ಉಭಯ ನಾಯಕರ ನಡುವಿನ ಚರ್ಚೆ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದೆ...