• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ನಟ ಬಾಲಕೃಷ್ಣ ವಿಡಿಯೋ ತೋರಿಸಿ ಟ್ರಂಪ್‌ಗೆ ಇರಾನ್‌ ಟಾಂಗ್‌..! ಜೈ ಬಾಲಯ್ಯ.. ವಿಡಿಯೋ ವೈರಲ್!

ನಟ ಬಾಲಕೃಷ್ಣ ವಿಡಿಯೋ ತೋರಿಸಿ ಟ್ರಂಪ್‌ಗೆ ಇರಾನ್‌ ಟಾಂಗ್‌..! ಜೈ ಬಾಲಯ್ಯ.. ವಿಡಿಯೋ ವೈರಲ್!

ಮಧ್ಯಪ್ರಾಚ್ಯದ ಅಂಗಳದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಮರ ಈಗ 'ಸಿನಿಮೀಯ' ತಿರುವು ಪಡೆದುಕೊಂಡಿದೆ. ಟ್ರಂಪ್ ಬೆದರಿಕೆಗೆ ಇರಾನ್ ತೆಲುಗು ಸಿನಿಮಾದ ಸೀನ್ ಮೂಲಕವೇ ಟಾಂಗ್ ಕೊಟ್ಟಿದ್ದರೆ, ಕಡಲಾಳದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ಟಾರ್ಪಿಡೊ ದಾಳಿ ಭಾರತೀಯ ಸಿಬ್ಬಂದಿಯ ರಕ್ತ ಬಸಿಯುತ್ತಿದೆ.. ಈ ಕುರಿತ ವಿಶೇಷ ವರದಿ ಇಲ್ಲಿದೆ.

Reported ByKrishna NKEdited ByKrishna NK
Published: Sep 24, 2026, 07:12 PM IST|Updated: Sep 24, 2026, 07:21 PM IST
joinshare
ನಟ ಬಾಲಕೃಷ್ಣ ವಿಡಿಯೋ ತೋರಿಸಿ ಟ್ರಂಪ್‌ಗೆ ಇರಾನ್‌ ಟಾಂಗ್‌..! ಜೈ ಬಾಲಯ್ಯ.. ವಿಡಿಯೋ ವೈರಲ್!
Image Credit: Today News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಇರಾನ್ ಅನ್ನು 'ಧ್ವಂಸ' ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಎಚ್ಚರಿಕೆಗೆ ಜಿಂಬಾಬ್ವೆಯಲ್ಲಿರುವ ಇರಾನ್ ರಾಯಭಾರ ಕಚೇರಿಯು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ 'ಭಗವಂತ ಕೇಸರಿ' ಸಿನಿಮಾದ ಭರ್ಜರಿ ಆಕ್ಷನ್ ವಿಡಿಯೋವನ್ನು 'ಎಕ್ಸ್' (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಚ್ಚರಿಯ ಕೌಂಟರ್ ನೀಡಿದೆ. 'ಇರಾನ್ ರಕ್ಷಣೆಯಿಲ್ಲದೆ ಖಾಲಿ ಕುಳಿತಿಲ್ಲ' ಎಂದು ಎಚ್ಚರಿಸಿರುವ ರಾಯಭಾರ ಕಚೇರಿಯು, ʻಟ್ರಂಪ್ ಹಾಲಿವುಡ್ ಬಿಟ್ಟು ಇತ್ತೀಚೆಗೆ ಬಾಲಿವುಡ್ ಸಿನಿಮಾಗಳನ್ನು ನೋಡುತ್ತಿದ್ದಾರೆ ಅನಿಸುತ್ತಿದೆʼಎಂದು ಟ್ರಂಪ್ ಕಾಲೆಳೆದಿದೆ. ಜಾಗತಿಕ ರಾಜತಾಂತ್ರಿಕ ಸಂಘರ್ಷದ ನಡುವೆ ಇರಾನ್ 'ಬಾಲಯ್ಯ' ಅವರ ಮಾಸ್ ಆಕ್ಷನ್ ಸೀನ್ ಬಳಸಿ ಟ್ರಂಪ್‌ಗೆ ಟಾಂಗ್ ನೀಡಿದ ಶೈಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಒಮಾನ್ ಕರಾವಳಿಯ ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಚಲಿಸುತ್ತಿದ್ದ 'ಎಮ್‌ವಿ ಕೇಪ್ ದಾವೊ' (MV Cape Dao) ವಾಣಿಜ್ಯ ಹಡಗಿನ ಮೇಲೆ ನಡೆದಿರುವ ಭೀಕರ ಟಾರ್ಪಿಡೊ ದಾಳಿಯಲ್ಲಿ ಹಡಗಿನಲ್ಲಿದ್ದ 20 ಭಾರತೀಯ ನಾವಿಕರ ಪೈಕಿ ಉತ್ತರ ಪ್ರದೇಶದ ದೇವ್‌ರಿಯಾ ಮೂಲದ ಯುವ ನಾವಿಕ ಸೂರಜ್ ಯಾದವ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಹಡಗಿನ ಇಂಜಿನ್ ಕೊಠಡಿ ಹಾಗೂ ಸಿಬ್ಬಂದಿ ವಸತಿ ಪ್ರದೇಶಕ್ಕೆ ದಾಳಿಯ ಪರಿಣಾಮ ಬೆಂಕಿ ಕಾಣಿಸಿಕೊಂಡು ತೀವ್ರ ಗಾಯಗೊಂಡಿದ್ದ ನಾವಿಕ ಮೃತಪಟ್ಟಿದ್ದು, ಒಮಾನ್ ನೌಕಾಪಡೆಯ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಹಡಗಿನಲ್ಲಿದ್ದ ಉಳಿದ 19 ಭಾರತೀಯರು ಸೇರಿದಂತೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ. ವಾಣಿಜ್ಯ ಹಡಗುಗಳ ಮೇಲಿನ ಈ ಸರಣಿ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ರಾಯಭಾರ ಕಚೇರಿಯು ಒಮಾನ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ಸೂರಜ್ ಯಾದವ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಹಾಗೂ ಉಳಿದ ನಾವಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾಸಭೆಯ ವೇಳೆ ಯುಎಸ್ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ಕಠಿಣ ಸಂದೇಶ ರವಾನಿಸಿದ್ದು, 'ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವಂತಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ತನ್ನ ಅಟಾಮಿಕ್ ಆಸೆಗೆ ಬ್ರೇಕ್ ಹಾಕಿ ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮಾತ್ರ ರಾಜತಾಂತ್ರಿಕ ಶಾಂತಿ ಒಪ್ಪಂದಕ್ಕೆ ಅಮೆರಿಕಾ ಸಿದ್ಧವಿದೆ ಎಂದಿರುವ ಅವರು, ಜಾಗತಿಕ ತೈಲ ಮತ್ತು ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿ ರಕ್ಷಿಸಲು ಅಮೆರಿಕಾ ಸೇನೆಯು ಭದ್ರತೆ ಒದಗಿಸುತ್ತಿದೆ ಎಂದು ತಿಳಿಸಿದ್ದಾರೆ. ಇರಾನ್‌ಗೆ ಮಾತುಕತೆಯ ಹಲವು ಮಾರ್ಗಗಳು ತೆರೆದಿದ್ದರೂ, ಅಮೆರಿಕದ ಹಿತಾಸಕ್ತಿ ಹಾಗೂ ಸೈನಿಕರ ಮೇಲೆ ದಾಳಿಯಾದರೆ ಮಿಲಿಟರಿ ಬಲಪ್ರಯೋಗದ ಆಯ್ಕೆಯೂ ಜೀವಂತವಾಗಿದೆ ಎಂದು ಎಚ್ಚರಿಸುವ ಮೂಲಕ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯ ಸಭೆಯಲ್ಲಿ ಇರಾನ್‌ಗೆ ತೀವ್ರ 'ಧ್ವಂಸ'ದ ಎಚ್ಚರಿಕೆ ನೀಡಿದ್ದ ಕಠಿಣ ಭಾಷಣದ ಬೆನ್ನಲ್ಲೇ, ನ್ಯೂಯಾರ್ಕ್‌ನಲ್ಲಿ ಕತಾರ್ ಮಧ್ಯಸ್ಥಿಕೆಯಲ್ಲಿ ಸುಮಾರು 3 ಗಂಟೆಗಳ ಕಾಲ ರಹಸ್ಯ ರಾಜತಾಂತ್ರಿಕ ಸಭೆ ನಡೆದಿದೆ. ಟ್ರಂಪ್ ಅವರ ಆಪ್ತ ಹಾಗೂ ವಿಶೇಷ ದೂತರಾದ ಸ್ಟೀವ್ ವಿಟ್ಕೋಫ್ ಮತ್ತು ಜೇರೆಡ್ ಕುಶ್ನರ್ ನೇತೃತ್ವದಲ್ಲಿ ನಡೆದ ಈ ಸಭೆಯನ್ನು ಡೊನಾಲ್ಡ್ ಟ್ರಂಪ್ 'ಅತ್ಯಂತ ಉತ್ತಮ ಹಾಗೂ ಫಲಪ್ರದ' ಎಂದು ಬಣ್ಣಿಸಿದ್ದು, ಸಂಧಾನದ ಹಾದಿ ಮುಕ್ತವಾಗಿದೆ ಎಂದಿದ್ದಾರೆ. ಅಲ್ಲದೆ, ಸೂಕ್ತ ಸಂದರ್ಭ ಬಂದಲ್ಲಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರ ನೇರ ಭೇಟಿಗೂ ಸಿದ್ಧ ಎಂಬ ಸುಳಿವನ್ನು ಅಮೆರಿಕಾ ನೀಡಿದೆ. ಮುಂಬರುವ ಅಮೆರಿಕಾದ ಮಧ್ಯಂತರ ಚುನಾವಣೆ ಹಾಗೂ ಜಾಗತಿಕ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಮತ್ತು ಯುದ್ಧ ಮುಕ್ತಾಯದ ಒಪ್ಪಂದಕ್ಕಾಗಿ ಉಭಯ ದೇಶಗಳ ನಡುವೆ ನಡೆದಿರುವ ಈ ದಿಢೀರ್ ರಾಜತಾಂತ್ರಿಕ ನಡೆಗಳ ಮೇಲೆ ಈಗ ಇಡೀ ಜಗತ್ತಿನ ಕಣ್ಣು ನೆಟ್ಟಿದೆ.

Trump talks about annihilating Iran.

But he knows Iran is not defenseless.

Since we informed they have recently been watching Bollywood instead of Hollywood. pic.twitter.com/v6Le8zkH5X

— Iran Embassy in Zimbabwe (@IRANinZIMBABWE) September 23, 2026

 ಪ್ರಪಂಚದ ಶೇಕಡಾ 20 ರಷ್ಟು ತೈಲ ಹಾದುಹೋಗುವ ಅತ್ಯಂತ ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ತೀವ್ರ ಆತಂಕದಿಂದಾಗಿ ಜಾಗತಿಕ ಕಡಲ ಬಿಕ್ಕಟ್ಟು ಎದುರಾಗಿದ್ದು, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತೈಲ ಪೂರೈಕೆ ಹಾಗೂ ಬೆಲೆ ಏರಿಕೆಯ ಭೀತಿ ಎದುರಾಗಿದೆ. ತನ್ನ ವಿರುದ್ಧದ ಬಂದರು ದಿಗ್ಬಂಧನ ತೆರವು ಹಾಗೂ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳ ಬಿಡುಗಡೆಗೆ ಇರಾನ್‌ನ ಟೆಹ್ರಾನ್ ಸರ್ಕಾರ ಪಟ್ಟು ಹಿಡಿದಿದ್ದರೆ, ಇತ್ತ ಯೆಮೆನ್‌ನಲ್ಲಿ ಕಡಲ ಮಾರ್ಗಗಳಿಗೆ ಬೆದರಿಕೆಯೊಡ್ಡುತ್ತಿರುವ ಹೌತಿ ದಂಗೆಕೋರರ ದಂಡಯಾತ್ರೆಗೆ ಕಡಿವಾಣ ಹಾಕಲು ಅಮೆರಿಕಾ ಭಾರಿ ಯೋಜನೆ ರೂಪಿಸಿದೆ. ಪ್ರಮುಖ ಸರಕು ಮತ್ತು ತೈಲ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಜಾಗತಿಕ ಮಟ್ಟದಲ್ಲಿ ತೀವ್ರ ಆಗ್ರಹ ಕೇಳಿಬರುತ್ತಿದ್ದು, ಕಡಲ ಮಾರ್ಗಗಳ ಈ ಸಂಘರ್ಷವನ್ನು ಯುದ್ಧಭೂಮಿಯ ಬದಲಿಗೆ ರಾಜತಾಂತ್ರಿಕ ಸಂವಾದದ ಮೂಲಕವೇ ಬಗೆಹರಿಸಿಕೊಳ್ಳಬೇಕೆಂದು ಜಾಗತಿಕ ನಾಯಕರು ಪ್ರತಿಪಾದಿಸಿದ್ದಾರೆ.

ಒಟ್ಟಿನಲ್ಲಿ, ವಿಶ್ವಸಂಸ್ಥೆಯ ಅಂಗಳದಲ್ಲಿ 'ಧ್ವಂಸ'ದ ಗರ್ಜನೆ, ತೆರೆಮರೆಯಲ್ಲಿ 3 ಗಂಟೆಗಳ 'ರಹಸ್ಯ ರಾಜತಾಂತ್ರಿಕತೆ', ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮೀಯ ಶೈಲಿಯ 'ಟಾಂಗ್' - ಇವಿಷ್ಟರ ನಡುವೆ ಹಾರ್ಮುಜ್ ಜಲಸಂಧಿ ಮಾತ್ರ ರಕ್ತಸಿಕ್ತವಾಗುತ್ತಿದೆ. ಭಾರತೀಯ ಯುವ ನಾವಿಕನ ದುರಂತ ಸಾವು, ಜಾಗತಿಕ ಇಂಧನ ಭದ್ರತೆ ಮತ್ತು ಅಮಾಯಕರ ಜೀವದ ಮೇಲಿರುವ ಅಪಾಯವನ್ನು ಎತ್ತಿಹಿಡಿದಿದೆ. ಟ್ರಂಪ್ ಅವರ 'ಪರಮಾಣು ರಹಿತ ಇರಾನ್' ಷರತ್ತಿಗೆ ಟೆಹ್ರಾನ್ ಮಣಿಯಲಿದೆಯಾ? ಅಥವಾ ಈ ಸಂಘರ್ಷ ಜಾಗತಿಕ ಆರ್ಥಿಕತೆಯನ್ನೇ ಬುಡಮೇಲು ಮಾಡಲಿದೆಯಾ? ಮುಂಬರುವ ದಿನಗಳು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸಲಿವೆ.

Add Zee News as a Preferred Source
TAGS:
World News