• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಅಂತರಾಷ್ಟ್ರೀಯ
  • /ಕತ್ತೆ ಮರಿಗಾಗಿ ಕೋರ್ಟ್‌ ಮೆಟ್ಟಿಲೇರಿದ ಯುವತಿ.. ಪೊಲೀಸರು ಮಾಡಿದ ಕೃತ್ಯ, ನೀವು ಕೂಡ ಕ್ಷಮಿಸಲ್ಲ!

ಕತ್ತೆ ಮರಿಗಾಗಿ ಕೋರ್ಟ್‌ ಮೆಟ್ಟಿಲೇರಿದ ಯುವತಿ.. ಪೊಲೀಸರು ಮಾಡಿದ ಕೃತ್ಯ, ನೀವು ಕೂಡ ಕ್ಷಮಿಸಲ್ಲ!

ಪೊಲೀಸ್‌ ಅಧಿಕಾರಿ ನಮ್ಮ ಆಸ್ತಿಗೆ ಪ್ರವೇಶ ಪಡೆದು ಜೀವ ತೆಗೆದಿದ್ದಾನೆ. ಕತ್ತೆಯೂ ಏನು ಮಾಡಿಲ್ಲ. ಅದು ನಮ್ಮ ಪ್ರದೇಶದಲ್ಲಿ ಓಡಾಡುವಾಗ ಅದರ ಜೀವ ತೆಗೆದಿರುವುದು ಯಾಕೆ ಎಂದು ಪ್ರಶ್ನಿಸಿ ಯುವತಿಯು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

Reported ByBhimappaEdited ByBhimappa
Published: Sep 16, 2026, 02:20 PM IST|Updated: Sep 17, 2026, 01:46 PM IST
joinshare
ಕತ್ತೆ ಮರಿಗಾಗಿ ಕೋರ್ಟ್‌ ಮೆಟ್ಟಿಲೇರಿದ ಯುವತಿ.. ಪೊಲೀಸರು ಮಾಡಿದ ಕೃತ್ಯ, ನೀವು ಕೂಡ ಕ್ಷಮಿಸಲ್ಲ!
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಪ್ರಾಣಿಗಳನ್ನು ಪ್ರೀತಿಯಿಂದ ಸಾಕಲು ಹೆಚ್ಚಿನ ಜನರು ಇಷ್ಟ ಪಡುತ್ತಾರೆ. ಈಗೀಗ ಏನಾಗಿದೆ ಎಂದರೆ ಮನೆಯಲ್ಲಿ ಒಂಟಿಯಾಗಿ ಇರುವುದಕ್ಕಿಂತ ಯಾವುದಾದರೂ ಪ್ರಾಣಿನ ಸಾಕಬೇಕು ಎಂದು ಹೆಚ್ಚಿನವರು ಬಯಸುತ್ತಾರೆ. ಹೀಗೆ ಪ್ರೀತಿಯಿಂದ ಬೆಳೆಸಿದ ಪ್ರಾಣಿಗಳಿಗೆ ಕೆಲವೊಬ್ಬರು ತಮ್ಮ ಆಸ್ತಿಯನ್ನೇ ಬರೆದಿರುವ ಉದಾಹರಣೆಗಳು ಕೂಡ ಇವೆ. ಒಂಟಿತನವನ್ನು ಕಳೆಯಲು ಪ್ರಾಣಿಗಳ ಆಯ್ಕೆ ಆತ್ಯುತ್ತಮ ಎನ್ನವುದು ಎಲ್ಲರ ಉದ್ದೇಶವಾಗಿದೆ. ನಗರಗಳಲ್ಲಂತೂ ಬೆಕ್ಕು, ನಾಯಿ ಸಾಕುವುದು, ತಾವು ಎಲ್ಲಿಗೆ ಹೋದರೂ ಅದನ್ನು ಜೊತೆಗೆ ಕರೆದುಕೊಂಡು ಹೋಗುವುದು, ಒಂದು ಕ್ಷಣ ಕೂಡ ಸಾಕು ಪ್ರಾಣಿನ ಬಿಟ್ಟು ಇರದೇ ಇರುವುದು ಸಾಮಾನ್ಯವಾಗಿದೆ. ಅದರಂತೆ ಇಲ್ಲೊಬ್ಬ ಯುವತಿ ಕತ್ತೆ ಮರಿಯನ್ನು ಸಾಕಿದ್ದರು. ಆದರೆ ಪೊಲೀಸರು ಮಾಡಿದ ಅದೊಂದು ಕ್ರೂರತ್ವದಿಂದ ಯುವತಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಜಾರ್ಜಿಯಾ (Georgia) ದ ಯುವತಿ ಹನ್ನಾ ಇಸ್ರೇಲ್ (Hannah Israel) ಅವರು ಪೊಲೀಸ್‌ ಅಧಿಕಾರಿ ವಿರುದ್ಧ ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ್ದಾರೆ. ಜಾರ್ಜಿಯಾದ ರೋಮ್ ವಿಭಾಗದ ಉತ್ತರ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 11 ರಂದು ಸಲ್ಲಿಸಿದ ನಾಗರಿಕ ಹಕ್ಕುಗಳ ದೂರಿನಲ್ಲಿ ಯಾವುದೇ ಅನುಮತಿ, ವಾರಂಟ್ ಇಲ್ಲದೇ ಪೊಲೀಸ್‌ ಅಧಿಕಾರಿ ನಮ್ಮ ಆಸ್ತಿಗೆ ಪ್ರವೇಶ ಪಡೆದು ಜೀವ ತೆಗೆದಿದ್ದಾನೆ. ಕತ್ತೆಯೂ ಏನು ಮಾಡಿಲ್ಲ. ಅದು ನಮ್ಮ ಪ್ರದೇಶದಲ್ಲಿ ಓಡಾಡುವಾಗ ಅದರ ಜೀವ ತೆಗೆದಿರುವುದು ಯಾಕೆ ಎಂದು ಪ್ರಶ್ನಿಸಿ ಯುವತಿಯು ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. 

ಪೊಲೀಸ್‌ ಅಧಿಕಾರಿ ಆಗಿರುವ ಟ್ರೆಂಟನ್ ಗಾರ್ನರ್ ಅವರು ಆಗಸ್ಟ್‌ 29 ರಂದು ಕಾಣೆಯಾದ 12 ವರ್ಷದ ಮಗುವನ್ನು ಹುಡುಕಲು ರಾಕ್‌ಮಾರ್ಟ್‌ ಎನ್ನುವ ಪ್ರದೇಶದ ಬಳಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿಯೇ ಮೇಯಿಕೊಂಡು ಓಡಾಡುತ್ತಿದ್ದ ಕತ್ತೆ ಮರಿಗೆ ಟ್ರೆಂಟನ್ ಗಾರ್ನರ್ ಅವರು ಏಕಾಏಕಿ ಶೂಟ್‌ ಮಾಡಿ ಸಾಯಿಸಿದ್ದಾರೆ. ಒಳಗೆ ಹೋಗಬೇಕಾದರೆ ಟ್ರೆಂಟನ್ ಗಾರ್ನರ್ ಯಾವುದೇ ಅನುಮತಿ ಅಥವಾ ವಾರಂಟ್‌ ಇಲ್ಲದೇ ಹೋಗಿದ್ದರು. ತನಗೆ ಏನು ಮಾಡದ ಕತ್ತೆ ಹೀಹಾ (HeeHaw)ಗೆ ಗುಂಡು ಹಾರಿಸಿ ಕೊಂದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅನುಮತಿ ಇಲ್ಲದೇ ಬಂದಿರುವುದು ಮತ್ತು ಕಾನೂನುಬಾಹಿರವಾಗಿ ನಮ್ಮದೇ ಪ್ರದೇಶದಲ್ಲಿ ತಪ್ಪಿಹೋದ ಮಗುವನ್ನು ಹುಡುಕಿರುವುದು ಸಾಂವಿಧಾನಿಕ ರಕ್ಷಣೆಗಳನ್ನು ಉಲ್ಲಂಘಿಸಿದಂತೆ ಆಗಿದೆ ಎಂದು ಯುವತಿ ಹನ್ನಾ ಇಸ್ರೇಲ್ ವಾದ ಆಗಿದೆ.

ಈ ಘಟನೆ ಕುರಿತು ವಿವರಣೆ ನೀಡಿರುವ ಪೊಲೀಸ ಅಧಿಕಾರಿ ಟ್ರೆಂಟನ್ ಗಾರ್ನರ್ ಅವರು ಬೇರೆಯದೇ ಕಥೆಯನ್ನು ಹೇಳಿದ್ದಾರೆ. ಕತ್ತೆ ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಅದನ್ನು ತಡೆಯಲು ಕೆ -9 ಹ್ಯಾಂಡ್ಲರ್ ಟೇಸರ್‌ನಿಂದ ವಿದ್ಯುತ್ ಆರ್ಕ್ ಅನ್ನು ಹಾರಿಸಲಾಯಿತು. ಇಷ್ಟಾದರೂ ಅದನ್ನು ತಡೆಯಲು ಆಗಲಿಲ್ಲ. ಹೀಗಾಗಿ ಅಂತಿಮವಾಗಿ ಕತ್ತೆ ಹೀಹಾವನ್ನು ಹೆದರಿಸಲು ಒಮ್ಮೆ ಗುಂಡು ಹಾರಿಸಲಾಯಿತು. ಅದು ಬೆಟ್ಟದ ಮೇಲೆ ಹೋಗಿ ಸತ್ತುಹೋಯಿತು ಎಂದು ಹೇಳಿದ್ದಾರೆ.

ಪೊಲೀಸರು ಹೋಗುವಾಗ ಕತ್ತೆ ಮೃತಪಟ್ಟಿರುವ ಸ್ಥಳವನ್ನು ಬಹಿರಂಗಪಡಿಸದೆ, ಯಾರಿಗೂ ಮಾಹಿತಿ ನೀಡದೇ ಹೋಗಿದ್ದಾರೆ. ಅಲ್ಲದೇ ಅಪ್ರಾಪ್ತ ವಯಸ್ಕರನ್ನ ಹುಡುಕುವಾಗ ಪ್ರಾಣಿ ಜೀವ ತೆಗೆದಿರುವುದು ಯಾವ ನ್ಯಾಯಾ ಎಂದು ಹನ್ನಾ ಇಸ್ರೇಲ್ ಅವರ ಪ್ರಶ್ನೆ ಆಗಿದೆ. ಕಾನೂನುಬಾಹಿರವಾಗಿ ನಮ್ಮ ಸ್ಥಳದಲ್ಲಿ ಶೋಧ ಮಾಡಲಾಗಿದೆ. ಅಸಂವಿಧಾನಿಕ ಸ್ಥಳ ವಶಪಡಿಸಿಕೊಳ್ಳುವಿಕೆ ಆಗಿದೆ. ಸರಿಯಾದ ಪ್ರಕ್ರಿಯೆಯಿಲ್ಲದೆ ಮೂರು ಪ್ರಾಥಮಿಕ ಫೆಡರಲ್ ಉಲ್ಲಂಘನೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಕತ್ತೆ ಹೀಹಾವನ್ನು ಪ್ರಕರಣದ ವಿಚಾರಣೆ ಮಾಡಿ ತೀರ್ಪು ನೀಡಬೇಕು. ಘಟನೆಗೆ ಪರಿಹಾರ, ಕೃತ್ಯ ಎಸಗಿದವರಿಗೆ ಶಿಕ್ಷೆ, ದಂಡ ಹಾಗೂ ಕಾನೂನು ಶುಲ್ಕಗಳು ಮತ್ತು ನ್ಯಾಯಾಲಯದ ವೆಚ್ಚ ಅವರೇ ಭರಿಸಬೇಕು ಎಂದು ಹನ್ನಾ ಇಸ್ರೇಲ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.  

ಮೃತಪಟ್ಟಿರುವ ಕತ್ತೆಯ ನೆನಪಿಗಾಗಿ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಲು ಮತ್ತು ಜಮೀನಿನಲ್ಲಿರುವ ಇತರ ಪ್ರಾಣಿಗಳನ್ನು ಸಾಕಲು ಹನ್ನಾ ಇಸ್ರೇಲ್ ಅವರು GoFundMe ಅಲ್ಲಿ ಪುಟವನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಇದಕ್ಕೆ ಕೋಟಿ ಲೆಕ್ಕದಲ್ಲಿ ಹಣ ಹರಿದು ಬಂದಿದೆ. ಇಷ್ಟೊಂದು ಹಣ ಹರಿದು ಬಂದಿರುವುದು ನೋಡಿ ಹನ್ನಾ ಇಸ್ರೇಲ್ ಅವರೇ ಶಾಕ್‌ ಆಗಿದ್ದಾರೆ. ಅಂದರೆ ಈ ಕತ್ತೆ ಸಾವನ್ನಪ್ಪಿರುವುದು ಅಲ್ಲಿನ ಜನರ ಮೇಲೆ ಎಷ್ಟೊಂದು ಪರಿಣಾಮ ಬೀರಿದೆ ಎಂದು ನಿಮಗೆ ಗೊತ್ತಾಗಬಹುದು. ಯಾವುದೇ ಪ್ರಾಣಿಯನ್ನು ಕೇವಲ ಎಂದು ತೆಗೆದು ಹಾಕುವಂತಿಲ್ಲ. ಯಾರೇ ಆಗಲಿ ಕಾನೂನು ಪ್ರಕಾರ ಹೋದರೆ ಎಲ್ಲದಕ್ಕೂ ಸರಿಯಾದ ನ್ಯಾಯಾ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಇದೇ ಒಂದು ಸ್ಪಷ್ಟ ನಿದರ್ಶನವಾಗಿದೆ.

ಹನ್ನಾ ಇಸ್ರೇಲ್ ಅವರು GoFundMe ಅಲ್ಲಿ ಪುಟವನ್ನು ಪ್ರಾರಂಭಿಸಿದ್ದು ಈಗಾಗಲೇ ಸಾಕಷ್ಟು ಜನರು ಹಣವನ್ನು ದಾನ ಮಾಡಿದ್ದಾರೆ. ಸುಮಾರು 2,200ಕ್ಕೂ ಅಧಿಕ ಜನರು ಹಣವನ್ನು ದಾನ ಮಾಡಿದ್ದಾರೆ. 1.5 ಕೋಟಿ ರೂಪಾಯಿಗಳು ಅಕೌಂಟ್‌ಗೆ ಬಂದಿವೆ. ಇದರಿಂದ ಹನ್ನಾ ಇಸ್ರೇಲ್ ಅವರು ಪ್ರಾಣಿಗಳನ್ನ ದತ್ತು ತೆಗೆದುಕೊಂಡು ಸಾಕುವುದು ಮಾಡಬಹುದು. ಈ ಕತ್ತೆ ಮೃತ ಪಟ್ಟಿರುವ ಪ್ರಕರಣವನ್ನು ಜಾರ್ಜಿಯಾ ಕೃಷಿ ಇಲಾಖೆಯ ಕಾನೂನು ಜಾರಿ ವಿಭಾಗವು ಸ್ವತಂತ್ರ ವಿಚಾರಣೆಯನ್ನು ಪ್ರಾರಂಭಿಸಿದೆ.‌ ಕೃತ್ಯ ಎಸಗಿರುವ ಪೊಲೀಸ್ ಅಧಿಕಾರಿ ಟ್ರೆಂಟನ್ ಗಾರ್ನರ್ ಅವರು ಆಡಳಿತಾತ್ಮಕ ರಜೆಯಲ್ಲಿದ್ದಾರೆ. ತನಿಖೆ ಮುಗಿದ ಮೇಲೆ ಅಂತಿಮವಾಗಿ ಏನು ಬರಲಿದೆ ಎಂದು ಕಾದು ನೋಡಬೇಕು. ಭೂಮಿ ಮೇಲೆ ಎಲ್ಲ ಜೀವಕ್ಕೂ ಅದರದ್ದೇ ಪ್ರಾಮುಖ್ಯತೆ ಇದೆ ಎನ್ನುವುದು ಇದು ಎತ್ತಿ ತೋರಿಸುತ್ತದೆ. 

ಹನ್ನಾ ಇಸ್ರೇಲ್ ಅವರು ಹೀಹಾ ಹೆಸರಿನ ಕತ್ತೆ ಮೃತಪಟ್ಟಿರುವುದಕ್ಕೆ ಸೋಶಿಯಲ್‌ ಮೀಡಿಯಾದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲರೂ ಪೊಲೀಸ್‌ ಅಧಿಕಾರಿಯ ದರ್ಪವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಶೋಧನಕಾರ್ಯಕ್ಕೆ ಹೋದವರು ಸುಮ್ಮನೆ ನೋಡಿಕೊಂಡು ವಾಪಸ್‌ ಆಗಬಹುದಿತ್ತು. ಅದು ಬಿಟ್ಟು ಒಂದು ಪ್ರಾಣಿಯ ಜೀವ ತಗೆಯುವುದು ಏನಿತ್ತು?. ಅದರಲ್ಲಿ ಕತ್ತೆಯಂತಹ ಪ್ರಾಣಿ ಮನುಷ್ಯನ ಮೇಲೆ ದಾಳಿ ಮಾಡಲ್ಲ. ಅದರಲ್ಲಿ ದಾಳಿ ಮಾಡಿದರೂ ಸೇಡು ಇಟ್ಟುಕೊಂಡು ಓಡಾಡಿಸುವುದು, ನಮ್ಮನ್ನೇ ಹಿಂಬಾಲಿಸುವುದು ಏನು ಮಾಡಲ್ಲ. ಪೊಲೀಸ್‌ ಅಧಿಕಾರಿ ಕೊಟ್ಟಿರುವ ಮಾಹಿತಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾದ ವಿರೋಧ ಕೇಳಿ ಬಂದಿದೆ. ತನಿಖೆ ನಡೆಯುತ್ತಿದ್ದು ತೀರ್ಪು ಏನು ಬರುತ್ತದೆ ಎಂದು ಜನರು ಕಾಯುತ್ತಿದ್ದಾರೆ. ಹನ್ನಾ ಇಸ್ರೇಲ್ ಅವರು ಕತ್ತೆ ಜೊತೆಗೆ ಇದ್ದಂತಹ ವಿಡಿಯೋಗಳು, ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿವೆ. ಪುಟ್ಟ ಕತ್ತೆ ಓಡಾಡುವುದು, ಹನ್ನಾ ಇಸ್ರೇಲ್ ಅವರು ಅದನ್ನು ಮುದ್ದು ಮಾಡುವುದು, ಬಾಟಲಿನಲ್ಲಿ ಹಾಲು ಕೊಡುತ್ತಿರುವುದು, ಎತ್ತಿಕೊಂಡಿರುವುದು, ಕತ್ತೆಗೆ ಬಟ್ಟೆ ಹಾಕಿರುವುದು ಎಲ್ಲವೂ ಫೋಟೋದಲ್ಲಿ ಇವೆ.  

Add Zee News as a Preferred Source
TAGS:
World News