• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಯುಟಿಲಿಟಿ
  • /2026 TVS Radeon ಹೊಸ ಬೈಕ್ ಲಾಂಚ್; ಸ್ಟೈಲಿಶ್‌ ಲುಕ್ ಹೊಂದಿರುವ ಇದರ ಬೆಲೆ ಎಷ್ಟು ಗೊತ್ತಾ?

2026 TVS Radeon ಹೊಸ ಬೈಕ್ ಲಾಂಚ್; ಸ್ಟೈಲಿಶ್‌ ಲುಕ್ ಹೊಂದಿರುವ ಇದರ ಬೆಲೆ ಎಷ್ಟು ಗೊತ್ತಾ?

ಹಬ್ಬದ ಸೀಸನ್‌ ಅನ್ನ ಗುರಿಯಾಗಿಸಿಕೊಂಡು ಟಿವಿಎಸ್ ಕಂಪನಿ ಹೊಸ 2026 TVS Radeon ಬೈಕ್‌ ಅನ್ನ ಮಾರುಕಟ್ಟೆಗೆ ಪರಿಚಯಿಸಿದೆ. ₹67,100ರಿಂದ ಆರಂಭವಾಗುವ ಈ 110 ಸಿಸಿ ಬೈಕ್ ಸಂಪೂರ್ಣ LED ಲೈಟಿಂಗ್, ಹೊಸ ಬಣ್ಣಗಳು ಹಾಗೂ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನ ಆಕರ್ಷಿಸುವ ಮೂಲಕ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಕಂಪನಿ ಇದೆ.

Written ByPuttaraj K Alur
Published: Nov 02, 2026, 04:04 PM IST|Updated: Nov 02, 2026, 04:17 PM IST
joinshare
2026 TVS Radeon ಹೊಸ ಬೈಕ್ ಲಾಂಚ್; ಸ್ಟೈಲಿಶ್‌ ಲುಕ್ ಹೊಂದಿರುವ ಇದರ ಬೆಲೆ ಎಷ್ಟು ಗೊತ್ತಾ?
Image Credit: AI Image

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಈ ಪುಡಿಯ ಕೇವಲ ಒಂದು ಚಮಚವು ನರಗಳ ಬಲವನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ರಕ್ತದಿಂದ ತುಂಬುತ್ತದೆ.

ಈ ಪುಡಿಯ ಕೇವಲ ಒಂದು ಚಮಚವು ನರಗಳ ಬಲವನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ರಕ್ತದಿಂದ ತುಂಬುತ್ತದೆ.

2

ಅಗ್ರಿಗೋಲ್ಡ್ ಗೋಲ್‌ಮಾಲ್‌! 10 ವರ್ಷಗಳಾದ್ರೂ ಕೈ ಸೇರದ ಹೂಡಿಕೆ ಹಣ

3

ಪೊಲೀಸರ ಭರ್ಜರಿ ಕಾರ್ಯಾಚರಣೆ.. ವಶಪಡಿಸಿಕೊಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ...

4

ಕಬ್ಬು ಬೆಳೆಗಾರರಿಂದ ಜೈಲು ಭರೋ ಚಳವಳಿ ಆರಂಭ; ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ 95 ಕಿ.ಮೀ ರ್ಯಾಲಿ!

5

ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

TVS Radeon Price: ಹಬ್ಬಗಳ ಸೀಸನ್‌ ಸಮೀಪಿಸುತ್ತಿರುವ ಬೆನ್ನಲ್ಲೇ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರನ್ನ ಸೆಳೆಯಲು ಟಿವಿಎಸ್ ಮೋಟಾರ್ ಕಂಪನಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಬಜೆಟ್ ಬೆಲೆಯ ಬೈಕ್‌ಗಳಿಗೆ ಬೇಡಿಕೆ ಹೆಚ್ಚಿರುವುದನ್ನ ಗಮನದಲ್ಲಿಟ್ಟುಕೊಂಡು 2026ರ ಹೊಸ TVS Radeon ಬೈಕ್ ಅನ್ನ ಮಾರುಕಟ್ಟೆಗೆ ಪರಿಚಯಿಸಿದೆ. 110 ಸಿಸಿ ವಿಭಾಗದ ಈ ಕಮ್ಯೂಟರ್ ಬೈಕ್ ಕೈಗೆಟುಕುವ ಬೆಲೆ ಹಾಗೂ ಹೊಸ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಗಮನ ಸೆಳೆಯುತ್ತಿದೆ.

ದಸರಾ, ದೀಪಾವಳಿ, ಸಂಕ್ರಾಂತಿ ಸೇರಿದಂತೆ ಸಾಲು ಸಾಲು ಹಬ್ಬಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಬೈಕ್ ಖರೀದಿಗೆ ಮುಂದಾಗುವ ಗ್ರಾಹಕರನ್ನ ಆಕರ್ಷಿಸುವುದು ಕಂಪನಿಯ ಉದ್ದೇಶವಾಗಿದೆ. ಸಾಮಾನ್ಯ ಜನರ ಬಜೆಟ್‌ಗೆ ಹೊಂದುವ ದರದಲ್ಲಿ ಹೊಸ ಮಾದರಿಯನ್ನ ಪರಿಚಯಿಸಿರುವ ಟಿವಿಎಸ್, ಹಬ್ಬದ ಸಂದರ್ಭದಲ್ಲಿ ಉತ್ತಮ ವ್ಯಾಪಾರ ನಿರೀಕ್ಷೆಯಲ್ಲಿದೆ.

₹67 ಸಾವಿರದಿಂದ ಆರಂಭವಾಗುವ ಬೆಲೆ

ಹೊಸ 2026 TVS Radeon ಬೈಕ್‌ನ ಆನ್‌ರೋಡ್ ಬೆಲೆ ₹67,100ರಿಂದ ಆರಂಭವಾಗಿ, ವೇರಿಯಂಟ್‌ಗಳಿಗೆ ಅನುಗುಣವಾಗಿ ₹73,100ರವರೆಗೆ ಇದೆ. ವಿಭಿನ್ನ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಕಂಪನಿಯು ಮೂರು ವೇರಿಯಂಟ್‌ಗಳನ್ನ ಪರಿಚಯಿಸಿದೆ. ಅವುಗಳೆಂದರೆ Base, Digi-Drum ಮತ್ತು Digi-Disc. ಕಡಿಮೆ ಬೆಲೆಯ ಬೈಕ್ ಹುಡುಕುತ್ತಿರುವ ಗ್ರಾಹಕರನ್ನ ಗಮನದಲ್ಲಿಟ್ಟುಕೊಂಡು ಈ ಮಾದರಿಯನ್ನ ಮಾರುಕಟ್ಟೆಗೆ ತರಲಾಗಿದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಹೊಸ ಬೈಕ್ ಖರೀದಿಸುವ ಯೋಜನೆ ಹೊಂದಿರುವವರಿಗೆ ಈ ಬೆಲೆ ಪ್ರಮುಖ ಆಕರ್ಷಣೆಯಾಗಿದೆ.

ಸಂಪೂರ್ಣ LED ಲೈಟಿಂಗ್ ವ್ಯವಸ್ಥೆ

ಹೊಸ TVS Radeon ಬೈಕ್‌ನಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಸಂಪೂರ್ಣ LED ಲೈಟಿಂಗ್ ವ್ಯವಸ್ಥೆ. ಹಿಂದಿನ ಮಾದರಿಗೆ ಹೋಲಿಸಿದರೆ ಬೆಳಕಿನ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳನ್ನ ಪರಿಚಯಿಸಲಾಗಿದೆ. ಇದರಲ್ಲಿ LED ಹೆಡ್‌ಲೈಟ್, LED ಟೈಲ್‌ಲೈಟ್ ಮತ್ತು LED ಟರ್ನ್ ಇಂಡಿಕೇಟರ್‌ಗಳನ್ನ ನೀಡಲಾಗಿದೆ. ಇದರ ಜೊತೆಗೆ ಸಿಗ್ನೆಚರ್ DRL ಕೂಡ ಹೊಸ ಬೈಕ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. ಹೊಸ ಬಣ್ಣಗಳ ಆಯ್ಕೆಯನ್ನೂ ಕಂಪನಿ ಒದಗಿಸಿದೆ. ಆಲ್‌ LED ಲೈಟಿಂಗ್‌ನಿಂದ ಬೈಕ್‌ಗೆ ಹೊಸ ವಿನ್ಯಾಸದ ಸ್ಪರ್ಶ ನೀಡಲಾಗಿದೆ.

ಮೂರು ವೇರಿಯಂಟ್‌ಗಳಲ್ಲಿ ಲಭ್ಯ

2026 TVS Radeon ಬೈಕ್ ಮೂರು ವಿಭಿನ್ನ ವೇರಿಯಂಟ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
Base ವೇರಿಯಂಟ್: ಈ ಮಾದರಿಯಲ್ಲಿ ಕಪ್ಪು ಮತ್ತು ನೀಲಿ ಬಣ್ಣಗಳ ಆಯ್ಕೆ ನೀಡಲಾಗಿದೆ.
Digi-Drum ವೇರಿಯಂಟ್: ಈ ವೇರಿಯಂಟ್ ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ.
Digi-Disc ವೇರಿಯಂಟ್: ಈ ಮಾದರಿಯಲ್ಲಿ ಕಪ್ಪು ಮತ್ತು ಕಿತ್ತಳೆ ಹಾಗೂ ಕೆಂಪು ಮತ್ತು ಕಪ್ಪು ಬಣ್ಣಗಳ ಆಯ್ಕೆಗಳಿವೆ. ವಿಶೇಷವಾಗಿ Digi-Disc ವೇರಿಯಂಟ್‌ನಲ್ಲಿ ಮುಂಭಾಗದ ಡಿಸ್ಕ್ ಬ್ರೇಕ್ ವ್ಯವಸ್ಥೆ ನೀಡಲಾಗಿದೆ.
ಹೀಗೆ ಮೂರು ವೇರಿಯಂಟ್‌ಗಳ ಮೂಲಕ ಗ್ರಾಹಕರಿಗೆ ತಮ್ಮ ಆಯ್ಕೆಗೆ ಅನುಗುಣವಾಗಿ ಬೈಕ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ.

110 ಸಿಸಿ ಎಂಜಿನ್, 4 ಸ್ಪೀಡ್ ಗೇರ್‌ಬಾಕ್ಸ್

ಎಂಜಿನ್ ವಿಚಾರಕ್ಕೆ ಬಂದರೆ, ಹೊಸ TVS Radeon ಹಿಂದಿನ ಮಾದರಿಯಲ್ಲಿದ್ದ 110 ಸಿಸಿ ಏರ್ ಮತ್ತು ಆಯಿಲ್ ಕೂಲ್ಡ್ ಎಂಜಿನ್‌ನೊಂದಿಗೆ ಮುಂದುವರಿದಿದೆ. ಈ ಎಂಜಿನ್‌ಗೆ 4 ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಬೈಕ್‌ನ ಇತರ ಪ್ರಮುಖ ಭಾಗಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಹೊಸ ಲೈಟಿಂಗ್ ವ್ಯವಸ್ಥೆ, ಬಣ್ಣಗಳ ಆಯ್ಕೆ ಮತ್ತು ಕೆಲವು ವೈಶಿಷ್ಟ್ಯಗಳನ್ನ ಪ್ರಮುಖವಾಗಿ ಪರಿಚಯಿಸಲಾಗಿದೆ. ಆದರೆ ಹೊಸ ಮಾದರಿಯ ನಿಖರ ಮೈಲೇಜ್ ಎಷ್ಟಿರಲಿದೆ ಎಂಬುದರ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

USB ಚಾರ್ಜಿಂಗ್, ಡಿಜಿಟಲ್ ಫೀಚರ್ಸ್

ಹೊಸ Radeon ಬೈಕ್‌ನಲ್ಲಿ LED ಲೈಟಿಂಗ್ ಮಾತ್ರವಲ್ಲದೆ USB ಚಾರ್ಜಿಂಗ್ ವ್ಯವಸ್ಥೆ ಮತ್ತು ಕಲರ್ ಡಿಜಿಟಲ್ ಡಿಸ್‌ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನ ನೀಡಲಾಗಿದೆ. ಆಯ್ದ ವೇರಿಯಂಟ್‌ನಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯೂ ಲಭ್ಯವಿದೆ. ಈ ಮೂಲಕ ಸಾಮಾನ್ಯ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಹೊಸ ವೈಶಿಷ್ಟ್ಯಗಳನ್ನ ಪರಿಚಯಿಸಲು ಟಿವಿಎಸ್ ಮುಂದಾಗಿದೆ.

ಹಳೆಯ ಮಾದರಿಯ ಜೊತೆಗೆ ಹೊಸ 2026 ಆವೃತ್ತಿ ಮುಂದುವರಿಯಲಿದೆಯೇ ಅಥವಾ ಅದಕ್ಕೆ ಬದಲಿಯಾಗಿ ಹೊಸ ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆಯೇ ಎಂಬುದನ್ನ ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ. ಒಟ್ನಲ್ಲಿ ₹67,100ರ ಆರಂಭಿಕ ಆನ್‌ರೋಡ್ ಬೆಲೆ, 110 ಸಿಸಿ ಎಂಜಿನ್, ಸಂಪೂರ್ಣ LED ಲೈಟಿಂಗ್, ಮೂರು ವೇರಿಯಂಟ್‌ಗಳು ಮತ್ತು ಹೊಸ ಬಣ್ಣಗಳ ಆಯ್ಕೆಯೊಂದಿಗೆ 2026 TVS Radeon ಮಾರುಕಟ್ಟೆಗೆ ಬಂದಿದೆ. ಆದರೆ ಹೊಸ ಬೈಕ್‌ನ ಮೈಲೇಜ್ ಕುರಿತು ಕಂಪನಿ ಮಾಹಿತಿಯನ್ನ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

Add Zee News as a Preferred Source
TAGS:
Tech
Kannada News