• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಪೊಲೀಸರ ಭರ್ಜರಿ ಕಾರ್ಯಾಚರಣೆ.. ವಶಪಡಿಸಿಕೊಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ...

ಪೊಲೀಸರ ಭರ್ಜರಿ ಕಾರ್ಯಾಚರಣೆ.. ವಶಪಡಿಸಿಕೊಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ...

ಈ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 9.43 ಕೋಟಿ ರೂ. ಮೌಲ್ಯದ ವಶಪಡಿಸಿಕೊಂಡ ಚಿನ್ನ, ಬೆಳ್ಳಿ, ನಗದು ಹಾಗೂ ವಾಹನಗಳ ಹಸ್ತಾಂತರ ಸಚಿವರ ನೇತೃತ್ವದಲ್ಲಿ ಮಾಡಿದರು. ಇನ್ನೂ ತಾವು ಕಳೆದು ಕೊಂಡ ವಸ್ತು, ಹಣ ಮರಳಿ ಬರುವದಿಲ್ಲ ಎಂದು ಕೊಂಡಿದ್ದ ಜನರು ಸಹಿತ ಸಂತಸ ಗೊಂಡಿದ್ದರು. ಹಾಗಾದರೆ ಅಲ್ಲಿ ಎಷ್ಟು ಪ್ರಕರಣಗಳಿಂದ ಇಷ್ಟೊಂದು ಹಣ ವಶಕ್ಕೆ ಪಡೆದರು ಎಂಬುದರ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

Written ByRamya. R. Gowda
Published: Nov 02, 2026, 05:12 PM IST|Updated: Nov 02, 2026, 05:20 PM IST
joinshare
ಪೊಲೀಸರ ಭರ್ಜರಿ ಕಾರ್ಯಾಚರಣೆ.. ವಶಪಡಿಸಿಕೊಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ...

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಗೃಹಲಕ್ಷ್ಮಿ ಫಲಾನುಭವಿಗಳೇ ಎಚ್ಚರ: ಸರ್ವೇ ಹೆಸರಿನಲ್ಲಿ OTP, ಬ್ಯಾಂಕ್ ವಿವರ ಕೇಳಿದ್ರೆ ನೀಡಬೇಡಿ!

ಗೃಹಲಕ್ಷ್ಮಿ ಫಲಾನುಭವಿಗಳೇ ಎಚ್ಚರ: ಸರ್ವೇ ಹೆಸರಿನಲ್ಲಿ OTP, ಬ್ಯಾಂಕ್ ವಿವರ ಕೇಳಿದ್ರೆ ನೀಡಬೇಡಿ!

2

ಟೀಂ ಇಂಡಿಯಾ ಆಟಗಾರರಿಗೆ ಗೌತಮ್ ಗಂಭೀರ್ ಖಡಕ್ ವಾರ್ನಿಂಗ್! ಒಂದು ತಿಂಗಳ ವಿರಾಮದಲ್ಲಿ ಇದನ್ನು ಮರೆಯಬೇಡಿ

3

ಈ ಪುಡಿಯ ಕೇವಲ ಒಂದು ಚಮಚವು ನರಗಳ ಬಲವನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ರಕ್ತದಿಂದ ತುಂಬುತ್ತದೆ.

4

ಅಗ್ರಿಗೋಲ್ಡ್ ಗೋಲ್‌ಮಾಲ್‌! 10 ವರ್ಷಗಳಾದ್ರೂ ಕೈ ಸೇರದ ಹೂಡಿಕೆ ಹಣ

5

ಪೊಲೀಸರ ಭರ್ಜರಿ ಕಾರ್ಯಾಚರಣೆ.. ವಶಪಡಿಸಿಕೊಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ...

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಈ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 9.43 ಕೋಟಿ ರೂ. ಮೌಲ್ಯದ ವಶಪಡಿಸಿಕೊಂಡ ಚಿನ್ನ, ಬೆಳ್ಳಿ, ನಗದು ಹಾಗೂ ವಾಹನಗಳ ಹಸ್ತಾಂತರ ಸಚಿವರ ನೇತೃತ್ವದಲ್ಲಿ ಮಾಡಿದರು. ಇನ್ನೂ ತಾವು ಕಳೆದು ಕೊಂಡ ವಸ್ತು, ಹಣ ಮರಳಿ ಬರುವದಿಲ್ಲ ಎಂದು ಕೊಂಡಿದ್ದ ಜನರು ಸಹಿತ ಸಂತಸ ಗೊಂಡಿದ್ದರು. ಹಾಗಾದರೆ ಅಲ್ಲಿ ಎಷ್ಟು ಪ್ರಕರಣಗಳಿಂದ ಇಷ್ಟೊಂದು ಹಣ ವಶಕ್ಕೆ ಪಡೆದರು ಎಂಬುದರ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...

ಹೌದು ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕಳ್ಳರು ಹಾಗೂ ಸೈಬರ್ ಖದೀಮರ ಹೆಡಿಮುರಿ ಕಟ್ಟಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಕಳುವಾಗಿದ್ದ ಸ್ವತ್ತುಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 9.43 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಾಹನ ಹಾಗೂ ನಗದನ್ನು ನಿಜವಾದ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಳೆದುಕೊಂಡ‌ಹಣ ಮರಳಿ ಸಿಕ್ಕ ಖುಷಿಯಲ್ಲಿ ಜನರಿದ್ದರು...

ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಸಂತ್ರಸ್ತರ ಮುಖದಲ್ಲಿ ಇಂದು ಮಂದಹಾಸ ಮೂಡಿತ್ತು. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ 28 ಠಾಣೆಗಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಿನಾಂಕ 11.02.2026 ರಿಂದ 01.11.2026 ರ ಅವಧಿಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 115 ಸ್ವತ್ತಿನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಒಟ್ಟು 9,43,34,447 ರೂಪಾಯಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲಿಸರು ವಶಪಡಿಸಿಕೊಂಡ ಒಟ್ಟು 5,23,66,285 ರೂಪಾಯಿ ಮೌಲ್ಯದ ಭೌತಿಕ ಸ್ವತ್ತುಗಳಲ್ಲಿ: 39.99 ಲಕ್ಷ ಮೌಲ್ಯದ 1.794 ಕೆಜಿ ಚಿನ್ನ, 21.08 ಲಕ್ಷ ಮೌಲ್ಯದ 8.919 ಕೆಜಿ ಬೆಳ್ಳಿ, 1,35,99,250 ರೂಪಾಯಿ ನಗದು ಹಣ, 21.12 ಲಕ್ಷ ಮೌಲ್ಯದ 46 ದ್ವಿಚಕ್ರ ವಾಹನಗಳು, 1.26 ಕೋಟಿ ಮೌಲ್ಯದ 16 ನಾಲ್ಕು ಚಕ್ರದ ವಾಹನಗಳು, 3.35 ಲಕ್ಷ ಮೌಲ್ಯದ ರೈತರ ಪಂಪ್‌ಸೆಟ್‌ಗಳು, ಬ್ಯಾಟರಿ ಹಾಗೂ 4 ಕ್ವಿಂಟಲ್ ಹತ್ತಿ ಸೇರಿವೆ. ಹಾಗೂ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೂ ಪೊಲೀಸರು ಬ್ರೇಕ್ ಹಾಕಿದ್ದು, 20 ಸೈಬರ್ ವಂಚನೆ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ವಂಚಕರಿಂದ ಬರೋಬ್ಬರಿ 4,19,68,162 ರೂಪಾಯಿ ಹಣವನ್ನು ಪತ್ತೆ ಹಚ್ಚಿ ದೂರುದಾರರಿಗೆ ಮರುಪಾವತಿ ಮಾಡಿದರು..

ಕಳ್ಳತವಾದ ವಸ್ತುಗಳು ಮರಳಿ ಸಿಗುವುದು ಕಷ್ಟ. ಆದರೆ ವಿಜಯಪುರ ಜಿಲ್ಲಾ ಪೊಲೀಸರು ಕೇವಲ 10 ತಿಂಗಳುಗಳಲ್ಲಿ ಸುಮಾರು 9.43 ಕೋಟಿಗೂ ಅಧಿಕ ಮೌಲ್ಯದ ಸ್ವತ್ತನ್ನು ಪತ್ತೆ ಹಚ್ಚಿ ವಾರಸುದಾರರಿಗೆ ನೀಡುವ ಮೂಲಕ ನಿಜಕ್ಕೂ ಮಾದರಿ ಕೆಲಸ ಮಾಡಿದ್ದಾರೆ. ಇನ್ನೂ ಕಳತನ ಆಗುವ ಮುನ್ನವೇ ಜನರು ಸಹಿತ ಜಾಗೃತಿ ವಹಿಸುವದು ಅವಶ್ಯಕವಾಗಿದೆ...
 

Add Zee News as a Preferred Source
TAGS:
Kannada News