• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

ಭಾರತದ ಮೊದಲ ಸ್ವದೇಶಿ ನಿರ್ಮಿತ ಹೈ-ಸ್ಪೀಡ್‌ ಬುಲೆಟ್‌ ಟ್ರೈನ್‌ B28, ಬೆಂಗಳೂರಿನ ಬಿಇಎಂಎಲ್‌ ಘಟಕದಲ್ಲಿ ಅತ್ಯಂತ ನಿರ್ಣಾಯಕವಾದ ಸ್ಕ್ವೀಜ್ ಟೆಸ್ಟ್‌ ಸುರಕ್ಷಿತಾ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಇದು ಭಾರತೀಯ ರೈಲ್ವೆ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲು ಎಂತಲೇ ಹೇಳಬಹುದಾಗಿದೆ.

Written ByYashaswini V
Published: Nov 02, 2026, 04:13 PM IST|Updated: Nov 02, 2026, 04:14 PM IST
joinshare
ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಕಬ್ಬು ಬೆಳೆಗಾರರಿಂದ ಜೈಲು ಭರೋ ಚಳವಳಿ ಆರಂಭ; ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ 95 ಕಿ.ಮೀ ರ್ಯಾಲಿ!

ಕಬ್ಬು ಬೆಳೆಗಾರರಿಂದ ಜೈಲು ಭರೋ ಚಳವಳಿ ಆರಂಭ; ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ 95 ಕಿ.ಮೀ ರ್ಯಾಲಿ!

2

ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

3

ರಾಮಾಯಣದ ಇಡೀ ಸಂಭಾವನೆಯನ್ನೇ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಖ್ಯಾತ ನಟ

4

2026 TVS Radeon ಹೊಸ ಬೈಕ್ ಲಾಂಚ್; ಸ್ಟೈಲಿಶ್‌ ಲುಕ್ ಹೊಂದಿರುವ ಇದರ ಬೆಲೆ ಎಷ್ಟು ಗೊತ್ತಾ?

5

ಇಂದು ನೂರಾರು ಕೋಟಿ ಸಂಭಾವನೆ ಪಡೆವ ಐಶ್ವರ್ಯಾ ರೈ ಬಚ್ಚನ್ 1992ರಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತೇ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಭಾರತದ ರೈಲ್ವೆ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಾಗಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ಹೈ-ಸ್ಪೀಡ್ ಬುಲೆಟ್ ಟ್ರೈನ್ 'B28' , ಬೆಂಗಳೂರಿನ ಬಿಇಎಂಎಲ್ ಘಟಕದಲ್ಲಿ ಅತ್ಯಂತ ನಿರ್ಣಾಯಕವಾದ 'ಸ್ಕ್ವೀಜ್ ಟೆಸ್ಟ್'  ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ನೇರ ಸಮ್ಮುಖದಲ್ಲಿ ಹೈ-ಸ್ಪೀಡ್‌ ಬುಲೆಟ್‌ ಟ್ರೈನ್‌ B28 ನ ಸುರಕ್ಷತಾ ಪರೀಕ್ಷೆ ನಡೆದಿದ್ದು, ರೈಲಿನ ಅಧಿಕೃತ ನಿರ್ಮಾಣ ಹಂತಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಭಾರತದಲ್ಲೇ ತಯಾರಾಗುತ್ತಿರುವ ಈ ಬುಲೆಟ್ ರೈಲಿನೊಂದಿಗೆ ದೇಶವು ಸ್ವದೇಶಿ ಅತಿವೇಗದ ರೈಲು ತಂತ್ರಜ್ಞಾನದತ್ತ ಮಹತ್ವದ ಹೆಜ್ಜೆ ಇಡುತ್ತಿದೆ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‌ಗಾಗಿ ಈ ರೈಲನ್ನು ನಿರ್ಮಿಸಲಾಗುತ್ತಿದ್ದು, ಇದು ಜಪಾನ್‌ನ ಶಿಂಕನ್ಸೆನ್ ರೈಲುಗಳಿಗಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಜಪಾನ್ ನೀಡಿದ ಹೆಚ್ಚಿನ ಬೆಲೆಯ ಪ್ರಸ್ತಾವನೆ ಮತ್ತು ವಿಳಂಬದ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಸ್ವಾವಲಂಬಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ಆದರೂ, ಮುಂದಿನ ಪರೀಕ್ಷೆಗಳಿಗಾಗಿ ಜಪಾನ್ ದೇಶವು ಎರಡು ಶಿಂಕನ್ಸೆನ್ ರೈಲು ಸೆಟ್‌ಗಳನ್ನು ಉಚಿತವಾಗಿ ನೀಡಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲ್ವೆ ಸಚಿವರು ವೀಕ್ಷಿಸಿದ ಈ ‘ಸ್ಕ್ವೀಝ್ ಟೆಸ್ಟ್’ ರೈಲಿನ ಸುರಕ್ಷತೆಯನ್ನು ಪರೀಕ್ಷಿಸುವ ಪ್ರಮುಖ ಪ್ರಕ್ರಿಯೆಯಾಗಿದೆ. ಇದರಲ್ಲಿ ರೈಲಿನ ಬೋಗಿಯ ರಚನಾತ್ಮಕ ಬಲ, ದೃಢತೆ ಮತ್ತು ಆಯಾಮಗಳ ಸ್ಥಿರತೆಯನ್ನು ಪರಿಶೀಲಿಸಲು ನಿಯಂತ್ರಿತ ಒತ್ತಡ ಹಾಗೂ ಎಳೆತದ ಬಲವನ್ನು ಪ್ರಯೋಗಿಸಲಾಗುತ್ತದೆ. ಇದೀಗ ಬಿ28 ರೈಲು ಈ ಪರೀಕ್ಷೆಯಲ್ಲಿ ಪಾಸ್ ಆಗಿದ್ದು, ಇದರ ಗರಿಷ್ಠ ಪ್ರಾಯೋಗಿಕ ವೇಗ ಗಂಟೆಗೆ 280 ಕಿ.ಮೀ. ಇರಲಿದೆ.

ಈ ತಂತ್ರಜ್ಞಾನದ ರೈಲು ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಿರ್ಮಾಣ ಘಟಕದಿಂದ ಹೊರಬರುವ ನಿರೀಕ್ಷೆಯಿದೆ. 2027ರ ಆಗಸ್ಟ್ 15ರಂದು ಸೂರತ್-ವಾಪಿ ನಡುವಿನ 97 ಕಿ.ಮೀ. ಮಾರ್ಗದಲ್ಲಿ ಇದರ ಪ್ರಾಯೋಗಿಕ ಉದ್ಘಾಟನಾ ಸಂಚಾರ ನಡೆಯಲಿದ್ದು, ಮುಂಬೈ-ಅಹಮದಾಬಾದ್ ಸಂಪೂರ್ಣ ಕಾರಿಡಾರ್ ಕಾಮಗಾರಿ 2029-30ರ ವೇಳೆಗೆ ಪೂರ್ಣಗೊಳ್ಳುವ ನೀರಿಕ್ಷೆಯಿದೆ.

ಮುಂದಿನ ಯೋಜನೆ ಬೆಂಗಳೂರು-ಪುಣೆ ಕಾರಿಡಾರ್?
ಬೆಂಗಳೂರು-ಪುಣೆ ನಡುವೆ ಪ್ರಸ್ತಾಪಿಸಲಾಗಿರುವ ಬುಲೆಟ್ ರೈಲು ಕಾರಿಡಾರ್ ಮುಂದಿನ ಅತಿವೇಗದ ರೈಲು ಯೋಜನೆಗಳ ಪೈಕಿ ಒಂದಾಗಿರಬಹುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಸುಳಿವು ನೀಡಿದ್ದಾರೆ.
 

🚄 The Making of Bharat’s First Bullet Train 📍BEML Factory, Bengaluru #Bharat_BulletTrain https://t.co/L3WhfXMXfG

— Ashwini Vaishnaw (@AshwiniVaishnaw) November 1, 2026

Add Zee News as a Preferred Source
TAGS:
Indian Railways
Tech