• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ರಾಮಾಯಣದ ಇಡೀ ಸಂಭಾವನೆಯನ್ನೇ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಖ್ಯಾತ ನಟ

ರಾಮಾಯಣದ ಇಡೀ ಸಂಭಾವನೆಯನ್ನೇ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಖ್ಯಾತ ನಟ

Ramayan film: ಬಹುನೀರೀಕ್ಷಿತ ಸಿನಿಮಾವಾದ ‘ರಾಮಾಯಣ’ಕ್ಕೆ ಪಡೆದ ಇಡೀ ಸಂಭಾವನೆಯನ್ನೆ ಖ್ಯಾತ ನಟರೊಬ್ಬರು ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಹಣ ದೇಣಿಗೆ ನೀಡಿದ್ದಾರೆ.. ಈ ಸ್ಟಾರ್‌ ನಟ ಯಾರು ಅಂತಾ ತಿಳಿಯಲು ಈ ಸ್ಟೋರಿ ಓದಿ.

Written ByRamya. R. Gowda
Published: Nov 02, 2026, 04:05 PM IST|Updated: Nov 02, 2026, 04:17 PM IST
joinshare
ರಾಮಾಯಣದ ಇಡೀ ಸಂಭಾವನೆಯನ್ನೇ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಖ್ಯಾತ ನಟ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಅಗ್ರಿಗೋಲ್ಡ್ ಗೋಲ್‌ಮಾಲ್‌! 10 ವರ್ಷಗಳಾದ್ರೂ ಕೈ ಸೇರದ ಹೂಡಿಕೆ ಹಣ

ಅಗ್ರಿಗೋಲ್ಡ್ ಗೋಲ್‌ಮಾಲ್‌! 10 ವರ್ಷಗಳಾದ್ರೂ ಕೈ ಸೇರದ ಹೂಡಿಕೆ ಹಣ

2

ಪೊಲೀಸರ ಭರ್ಜರಿ ಕಾರ್ಯಾಚರಣೆ.. ವಶಪಡಿಸಿಕೊಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ...

3

ಕಬ್ಬು ಬೆಳೆಗಾರರಿಂದ ಜೈಲು ಭರೋ ಚಳವಳಿ ಆರಂಭ; ಗುರ್ಲಾಪುರದಿಂದ ಹಿಂಡಲಗಾ ಜೈಲಿಗೆ 95 ಕಿ.ಮೀ ರ್ಯಾಲಿ!

4

ಸ್ವದೇಶಿ ಬುಲೆಟ್‌ ಟ್ರೈನ್‌ ನಿರ್ಮಾಣದತ್ತ ಐತಿಹಾಸಿಕ ಹೆಜ್ಜೆ: ಬೆಂಗಳೂರಿನಲ್ಲಿ ಸ್ಕ್ವೀಜ್ ಟೆಸ್ಟ್‌ ಪರೀಕ್ಷೆ ಯಶಸ್ವಿ

5

ರಾಮಾಯಣದ ಇಡೀ ಸಂಭಾವನೆಯನ್ನೇ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಖ್ಯಾತ ನಟ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಅಂದ್ರೆ ಅದು ನಿರ್ದೇಶಕ ನಿತೇಶ್‌ ತಿವಾರಿ ಅವರ ‘ರಾಮಾಯಣ’. ಬಾಲಿವುಡ್‌ ಮತ್ತು ದಕ್ಷಿಣ ಭಾರತದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಒಂದಾಗಿದ್ದಾರೆ. ಅದ್ಧೂರಿ ಬಜೆಟ್‌, ಭರ್ಜರಿ ತಾರಾಗಣದ ಮೂಲಕ ಸಿನಿಮಾ ಈಗಾಗಲೇ ಸಖತ್‌ ಸದ್ದು ಮಾಡ್ತಿದೆ. ಆದ್ರೆ ಇದೀಗ ಸಿನಿಮಾದಲ್ಲಿ ನಟಿಸಿರೋ ಕಲಾವಿದರಿಗೆ ನೀಡಲಾಗಿರುವ ಸಂಭಾವನೆಯ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಹಾಗಾದ್ರೆ ರಾಮನ ಪಾತ್ರಕ್ಕೆ ರಣಬೀರ್‌ ಪಡೆದ ಸಂಭಾವನೆ ಎಷ್ಟು? ರಾವಣನ ಪಾತ್ರ ಮಾಡ್ತಿರೋ ಯಶ್‌ ಹಣ ಪಡೆಯಲ್ವಾ? ಹನುಮಂತನ ಪಾತ್ರಕ್ಕೆ ಸನ್ನಿ ಡಿಯೋಲ್‌ಗೆ ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.

ರಣಬೀರ್‌ಗೆ 75 ಕೋಟಿ ಸಂಭಾವನೆ!
ರಾಮಾಯಣ ಸಿನಿಮಾದಲ್ಲಿ ಭಗವಾನ್‌ ಶ್ರೀರಾಮನಾಗಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದ ಎಂಬ ಹೆಗ್ಗಳಿಕೆ ರಣಬೀರ್‌ ಪಾಲಾಗಿದೆ.

ಯಶ್‌ಗೆ ಸಂಭಾವನೆಯೇ ಇಲ್ವಾ?
ಇನ್ನು ರಾವಣನ ಪಾತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅಬ್ಬರಿಸಲಿದ್ದಾರೆ. ಆದ್ರೆ ಯಶ್‌ ಈ ಸಿನಿಮಾಗಾಗಿ ಯಾವುದೇ ಸಂಭಾವನೆ ಪಡೆಯುತ್ತಿಲ್ಲ ಎನ್ನಲಾಗಿದೆ. ಯಾಕಂದ್ರೆ ಯಶ್‌ ಕೇವಲ ನಟರಷ್ಟೇ ಅಲ್ಲ, ಸಿನಿಮಾದ ಸಹನಿರ್ಮಾಪಕರೂ ಹೌದು. ಹೀಗಾಗಿ ಸಂಭಾವನೆಯ ಬದಲಿಗೆ ಬಾಕ್ಸ್‌ ಆಫೀಸ್‌ ಲಾಭದಲ್ಲಿ ಪಾಲು ಪಡೆಯಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಸೀತೆಗೆ 6 ಕೋಟಿ, ಲಕ್ಷ್ಮಣನಿಗೆ 3 ಕೋಟಿ!
ಇನ್ನು ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಾಯಿ ಪಲ್ಲವಿ ಬರೋಬ್ಬರಿ 6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ರಾಮನ ತಮ್ಮ ಲಕ್ಷ್ಮಣನ ಪಾತ್ರ ನಿರ್ವಹಿಸುತ್ತಿರುವ ರವಿ ದುಬೆ ಅವರಿಗೆ 3 ಕೋಟಿ ರೂಪಾಯಿ ನೀಡಲಾಗಿದೆ ಎಂಬ ವರದಿಗಳಿವೆ.

ಹನುಮಂತನ ಪಾತ್ರಕ್ಕೆ 20 ಕೋಟಿ!
ಬಾಲಿವುಡ್‌ ಆ್ಯಕ್ಷನ್‌ ಸ್ಟಾರ್‌ ಸನ್ನಿ ಡಿಯೋಲ್‌ ಈ ಸಿನಿಮಾದಲ್ಲಿ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸನ್ನಿ ಡಿಯೋಲ್‌ ಅವರ ಪಾತ್ರದ ಬಗ್ಗೆಯೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ.

ಶೂರ್ಪನಖಿಗೆ 1.5 ಕೋಟಿ!
ಇನ್ನು ರಾಮಾಯಣದಲ್ಲಿ ಪ್ರಮುಖ ಪಾತ್ರವಾಗಿರುವ ಶೂರ್ಪನಖಿಯಾಗಿ ನಟಿ ರಕುಲ್‌ ಪ್ರೀತ್‌ ಸಿಂಗ್‌ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು 1.50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಹಣ ದೇಣಿಗೆ!
ನಟ ವಿವೇಕ್‌ ಒಬೆರಾಯ್‌ ಕೂಡ ರಾಮಾಯಣ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಶೂರ್ಪನಖಿಯ ಪತಿ ವಿದ್ಯುಜ್ಜೀವನ ಪಾತ್ರಕ್ಕೆ ಅವರು ಸಂಭಾವನೆ ಪಡೆಯದೆ, ತಮಗೆ ನೀಡಬೇಕಿದ್ದ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ದೇಣಿಗೆ ನೀಡುವಂತೆ ನಿರ್ಮಾಪಕರಲ್ಲಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ವರದಿಯಲ್ಲಿದೆ.  ಸದ್ಯ ಇವರ ಅದ್ಭುತ ನಿರ್ಧಾರಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಬಹುನಿರೀಕ್ಷಿತ ಸಿನಿಮಾದ ರಾಮಾಯಾಣ


ಕೈಕೇಯಿಗೆ ಕೇವಲ 25 ಲಕ್ಷ!
ಇನ್ನು ರಾಣಿ ಕೈಕೇಯಿ ಪಾತ್ರದಲ್ಲಿ ನಟಿ ಲಾರಾ ದತ್ತಾ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರು ಕೇವಲ 25 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ರಾಮಾಯಣ ಚಿತ್ರದ ತಾರಾಗಣದಲ್ಲಿ ಕಡಿಮೆ ಸಂಭಾವನೆ ಪಡೆಯುವ ಕಲಾವಿದರಲ್ಲಿ ಲಾರಾ ದತ್ತಾ ಕೂಡ ಒಬ್ಬರಾಗಿದ್ದಾರೆ.

ಒಟ್ಟಿನಲ್ಲಿ ರಾಮಾಯಣ ಸಿನಿಮಾದಲ್ಲಿ ರಣಬೀರ್‌ ಕಪೂರ್‌ 75 ಕೋಟಿ, ಸನ್ನಿ ಡಿಯೋಲ್‌ 20 ಕೋಟಿ, ಸಾಯಿ ಪಲ್ಲವಿ 6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ವರದಿಗಳು ಸಿನಿಪ್ರಿಯರ ಗಮನ ಸೆಳೆದಿವೆ. ಮತ್ತೊಂದೆಡೆ ಯಶ್‌ ಸಂಭಾವನೆ ಪಡೆಯದೆ ಲಾಭದಲ್ಲಿ ಪಾಲು ಪಡೆಯಲಿದ್ದಾರೆ ಎಂಬ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ. ಆದ್ರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರ ಏನಂದ್ರೆ, ಈ ಸಂಭಾವನೆಯ ಅಂಕಿಅಂಶಗಳನ್ನು ಚಿತ್ರತಂಡವಾಗಲಿ, ಕಲಾವಿದರಾಗಲಿ ಅಧಿಕೃತವಾಗಿ ದೃಢಪಡಿಸಿಲ್ಲ.
 

Add Zee News as a Preferred Source
TAGS:
Sandalwood