ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಎನ್ನಲಾಗುವ ಸೂರ್ಯನನ್ನು ಆತ್ಮಕಾರಕ ಎನ್ನಲಾಗುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ಶೀಘ್ರದಲ್ಲೇ ಆತ್ಮಕಾರಕ ಸೂರ್ಯ ಕನ್ಯಾ ರಾಶಿಯನ್ನು ತೊರೆದು ತುಲಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
1/6
ಸೂರ್ಯ ಗೋಚಾರ
ಹಿಂದೂ ಕ್ಯಾಲೆಂಡರ್ ಪ್ರಕಾರ, ನವರಾತ್ರಿಯಲ್ಲಿ ಗ್ರಹಗಳ ಅಧಿಪತಿ ಸೂರ್ಯ ಅಕ್ಟೋಬರ್ 17, 2026 ಧನಕಾರಕ ಶುಕ್ರನ ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ.
2/6
ಸೂರ್ಯ ಗೋಚಾರ ಫಲ
ತುಲಾ ರಾಶಿಯಲ್ಲಿ ಸೂರ್ಯ ಸಂಚಾರದ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಈ ಸಮಯದಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದ್ದು, ಅವರು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ನಡೆಸುವರು ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
3/6
ಸಿಂಹ ರಾಶಿ
ಸೂರ್ಯ ರಾಶಿ ಪರಿವರ್ತನೆಯು ಸಿಂಹ ರಾಶಿಯ ಜನರಿಗೆ ಶುಭ ಫಲಗಳನ್ನು ಹೆಚ್ಚಿಸಲಿದೆ. ಕೈಗಾರಿಕೋದ್ಯಮಿಗಳಿಗೆ ಲಾಭಾಂಶಗಳು ಹೆಚ್ಚಾಗಲಿವೆ. ನಿಮ್ಮೆಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ವ್ಯವಹಾರಸ್ಥರಿಗೆ ನಿರೀಕ್ಷೆಯಂತೆ ಲಾಭ ಸಿಗಲಿದೆ. ಆರೋಗ್ಯದಲ್ಲೂ ಸುಧಾರಣೆ ಕಾಣುವಿರಿ.
4/6
ತುಲಾ ರಾಶಿ
ಸ್ವ ರಾಶಿಯಲ್ಲಿ ಸೂರ್ಯ ಸಂಚಾರವು ತುಲಾ ರಾಶಿಯ ಜನರಿಗೆ ಹಣದ ಸುರಿಮಳೆಯನ್ನೇ ಸುರಿಸಲಿದೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವೃತ್ತಿಪರರಿಗೆ ಪ್ರಮೋಷನ್ ಸಾಧ್ಯತೆ ಇದೆ. ಒಡಹುಟ್ಟಿದವರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ.
5/6
ಮಕರ ರಾಶಿ
ಸೂರ್ಯ ಗೋಚಾರ ಫಲವು ಮಕರ ರಾಶಿಯ ಜನರಿಗೆ ವಿಶೇಷ ಆಶೀರ್ವಾದವನ್ನು ನೀಡಲಿದೆ. ಕಚೇರಿಯಲ್ಲಿ ವಾತಾವರಣ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಒತ್ತಡಗಳು ಕಡಿಮೆ ಆಗಲಿದ್ದು, ಉದ್ಯಮಿಗಳು ಉತ್ತಮ ಫಲಿತಾಂಶವನ್ನು ಪಡೆಯುವ ನಿರೀಕ್ಷೆ ಇದೆ. ಆರೋಗ್ಯದಲ್ಲಿ ಸುಧಾರಣೆಯು ನಿಮಗೆ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಲಿದೆ.
6/6
ಕುಂಭ ರಾಶಿ
ನವರಾತ್ರಿಯಲ್ಲಿ ಸೂರ್ಯ ರಾಶಿ ಪರಿವರ್ತನೆಯು ಕುಂಭ ರಾಶಿಯ ಜನರ ಜೀವನದಲ್ಲಿ ಸಾಕಾರಾತ್ಮಕತೆಯನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ಹಣಕಾಸಿನ ಪರಿಸ್ಥಿತಿ ಸುಧಾರಣೆಗೊಳ್ಳಲಿದೆ. ಹಣದ ಮೂಲಗಳು ಹೆಚ್ಚಾಗಲಿದ್ದು ಮನೆಯಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.