• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /ಅಡಿಕೆ ಬೆಳೆಗಾರರೇ ಗಮನಿಸಿ: ಶಿವಮೊಗ್ಗದಲ್ಲಿ ₹75 ಸಾವಿರ ದಾಟಿದ ಗರಿಷ್ಠ ಧಾರಣೆ! ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಇಲ್ಲಿದೆ

ಅಡಿಕೆ ಬೆಳೆಗಾರರೇ ಗಮನಿಸಿ: ಶಿವಮೊಗ್ಗದಲ್ಲಿ ₹75 ಸಾವಿರ ದಾಟಿದ ಗರಿಷ್ಠ ಧಾರಣೆ! ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಇಲ್ಲಿದೆ

ಕರ್ನಾಟಕದ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ತಳಿ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಧಾರಣೆ ವ್ಯತ್ಯಾಸವಾಗುತ್ತಿದೆ. ಅಕ್ಟೋಬರ್ 14ರಂದು ಶಿವಮೊಗ್ಗದಲ್ಲಿ ಹಸ ಅಡಿಕೆಗೆ ಗರಿಷ್ಠ ₹75,559 ಹಾಗೂ ಚನ್ನಗಿರಿಯಲ್ಲಿ ಹೊಸ ರಾಶಿ ಇಡಿಗೆ ₹49,279 ಬೆಲೆ ದಾಖಲಾಗಿದೆ. ಅಕ್ಟೋಬರ್ 9ರಂದು ತೀರ್ಥಹಳ್ಳಿಯಲ್ಲಿ ಹಸ ಅಡಿಕೆಗೆ ಗರಿಷ್ಠ ₹88,229 ಧಾರಣೆ ದಾಖಲಾಗಿತ್ತು. ರೈತರು ಮಾರಾಟಕ್ಕೂ ಮುನ್ನ ಇತ್ತೀಚಿನ ಮಾರುಕಟ್ಟೆ ಬೆಲೆ ಪರಿಶೀಲಿಸುವುದು ಉತ್ತಮ.

Written ByPuttaraj K Alur
Published: Oct 15, 2026, 10:56 AM IST|Updated: Oct 15, 2026, 11:09 AM IST
joinshare
ಅಡಿಕೆ ಬೆಳೆಗಾರರೇ ಗಮನಿಸಿ: ಶಿವಮೊಗ್ಗದಲ್ಲಿ ₹75 ಸಾವಿರ ದಾಟಿದ ಗರಿಷ್ಠ ಧಾರಣೆ! ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಇಲ್ಲಿದೆ
Image Credit: Karnataka Arecanut Price

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
KRS ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿತ! ತಮಿಳುನಾಡಿಗೆ ನೀರು ಹರಿವು ಮುಂದುವರಿಕೆ, ರೈತರಲ್ಲಿ ಆತಂಕ

KRS ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿತ! ತಮಿಳುನಾಡಿಗೆ ನೀರು ಹರಿವು ಮುಂದುವರಿಕೆ, ರೈತರಲ್ಲಿ ಆತಂಕ

2

ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು & ನಾಳೆ ಗುಡುಗು ಸಹಿತ ಭಾರೀ ಮಳೆ

3

ಅಡಿಕೆ ಬೆಳೆಗಾರರೇ ಗಮನಿಸಿ: ಶಿವಮೊಗ್ಗದಲ್ಲಿ ₹75 ಸಾವಿರ ದಾಟಿದ ಗರಿಷ್ಠ ಧಾರಣೆ! ರಾಜ್ಯದ ವಿವಿಧ ಮಾರುಕಟ್ಟೆಗಳ ಬೆಲೆ ಇಲ್ಲಿದೆ

4

Navratri 2026: ಚಿನ್ನ, ಕಾರು, ಬೈಕ್‌, ಆಸ್ತಿ ಖರೀದಿಗೆ ಈ 3 ದಿನಗಳು ವಿಶೇಷ! ದಸರಾ ದಿನವೂ ಶುಭಯೋಗ

5

Bank Holidays in October 2026: ಅಕ್ಟೋಬರ್ 15 ರಿಂದ 31 ರ ನಡುವೆ 10 ದಿನ ಬ್ಯಾಂಕ್‌ಗಳು ಬಂದ್‌!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Karnataka Arecanut Price Today: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆಯ ಮಾರುಕಟ್ಟೆ ಧಾರಣೆ ರೈತರ ಗಮನ ಸೆಳೆದಿದೆ. ಶಿವಮೊಗ್ಗ, ಸಾಗರ, ಚನ್ನಗಿರಿ, ಶಿಕಾರಿಪುರ ಮತ್ತು ಶಿರಸಿ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಯ ತಳಿ ಹಾಗೂ ಗುಣಮಟ್ಟಕ್ಕೆ ಅನುಗುಣವಾಗಿ ವಿಭಿನ್ನ ಬೆಲೆಗಳು ದಾಖಲಾಗಿವೆ. ಇತ್ತೀಚಿನ ಲಭ್ಯವಿರುವ ಮಾರುಕಟ್ಟೆ ಮಾಹಿತಿಯ ಪ್ರಕಾರ, ಶಿವಮೊಗ್ಗದಲ್ಲಿ ಹಸ ಅಡಿಕೆಯ ಗರಿಷ್ಠ ಧಾರಣೆ ಕ್ವಿಂಟಾಲ್‌ಗೆ ₹75,559 ತಲುಪಿದೆ. ಅಡಿಕೆ ಬೆಳೆಗಾರರು ತಮ್ಮ ಉತ್ಪನ್ನವನ್ನ ಮಾರುಕಟ್ಟೆಗೆ ತರುವ ಮುನ್ನ ವಿವಿಧ ಎಪಿಎಂಸಿಗಳಲ್ಲಿನ ಬೆಲೆಗಳನ್ನ ಪರಿಶೀಲಿಸುವುದು ಮುಖ್ಯವಾಗಿದೆ. ರಾಶಿ, ಚಾಲಿ, ಗೊರಬಲು, ಬೆಟ್ಟೆ ಮತ್ತು ಹಸ ಅಡಿಕೆ ಸೇರಿದಂತೆ ವಿವಿಧ ತಳಿಗಳ ಬೆಲೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬರುತ್ತದೆ.

ಶಿವಮೊಗ್ಗದಲ್ಲಿ ಹಸ ಅಡಿಕೆಗೆ ಗರಿಷ್ಠ ₹75,559

ಅಕ್ಟೋಬರ್ 14ರಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಹಸ ಅಡಿಕೆಗೆ ಕನಿಷ್ಠ ₹49,509 ಹಾಗೂ ಗರಿಷ್ಠ ₹75,559 ಧಾರಣೆ ದಾಖಲಾಗಿದೆ. ಇದರ ಸರಾಸರಿ ದರ ₹61,599 ಆಗಿದೆ. ಇದೇ ಮಾರುಕಟ್ಟೆಯಲ್ಲಿ ರಾಶಿ ಇಡಿ ಅಡಿಕೆಗೆ ಕನಿಷ್ಠ ₹40,009 ಮತ್ತು ಗರಿಷ್ಠ ₹48,789 ಬೆಲೆ ದಾಖಲಾಗಿದೆ. ಗೊರಬಲು ತಳಿಯ ಗರಿಷ್ಠ ಧಾರಣೆ ₹37,399 ಆಗಿದ್ದರೆ, ಹೊಸ ರಾಶಿ ಇಡಿ ಅಡಿಕೆಗೆ ಗರಿಷ್ಠ ₹47,801 ಬೆಲೆ ಲಭ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ₹75 ಸಾವಿರಕ್ಕಿಂತ ಹೆಚ್ಚಿನ ಗರಿಷ್ಠ ಬೆಲೆ ಹಸ ಅಡಿಕೆ ತಳಿಗೆ ಸಂಬಂಧಿಸಿದ್ದು, ಎಲ್ಲಾ ವಿಧದ ಅಡಿಕೆಗೂ ಇದೇ ದರ ದೊರೆಯುತ್ತದೆ ಎಂದರ್ಥವಲ್ಲ.

ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ

ಶಿವಮೊಗ್ಗ ಜಿಲ್ಲೆಯ ಮತ್ತೊಂದು ಪ್ರಮುಖ ಅಡಿಕೆ ವ್ಯಾಪಾರ ಕೇಂದ್ರವಾಗಿರುವ ಸಾಗರದಲ್ಲಿ ಅಕ್ಟೋಬರ್ 12ರಂದು ರಾಶಿ ಇಡಿ ಅಡಿಕೆಗೆ ಕನಿಷ್ಠ ₹41,029 ಮತ್ತು ಗರಿಷ್ಠ ₹48,419 ಬೆಲೆ ದಾಖಲಾಗಿದೆ. ಸರಾಸರಿ ಧಾರಣೆ ₹44,999 ಆಗಿದೆ. ಚಾಲಿ ಅಡಿಕೆಗೆ ಕನಿಷ್ಠ ₹32,699 ಹಾಗೂ ಗರಿಷ್ಠ ₹40,009 ಬೆಲೆ ದೊರೆತಿದೆ. ಸಿಪ್ಪೆಗೋಟು ತಳಿಯ ಗರಿಷ್ಠ ದರ ₹19,459 ಆಗಿದೆ. ಈ ಅಂಕಿಅಂಶಗಳು ಒಂದೇ ಮಾರುಕಟ್ಟೆಯಲ್ಲಿಯೂ ಅಡಿಕೆಯ ವಿಧಕ್ಕೆ ಅನುಗುಣವಾಗಿ ಬೆಲೆಯಲ್ಲಿ ದೊಡ್ಡ ವ್ಯತ್ಯಾಸ ಇರಬಹುದು ಎಂಬುದನ್ನ ತೋರಿಸುತ್ತವೆ.

ಚನ್ನಗಿರಿ, ಶಿಕಾರಿಪುರದಲ್ಲಿ ಅಡಿಕೆ ಬೆಲೆ ಎಷ್ಟು?

ದಾವಣಗೆರೆ ಜಿಲ್ಲೆಯ ಚನ್ನಗಿರಿ ಅಡಿಕೆ ವ್ಯಾಪಾರದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಅಕ್ಟೋಬರ್ 13ರ ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಲ್ಲಿ ಅಡಿಕೆಗೆ ಕನಿಷ್ಠ ₹43,019 ಹಾಗೂ ಗರಿಷ್ಠ ₹49,289 ಧಾರಣೆ ದಾಖಲಾಗಿದೆ. ಪ್ರಮುಖ ಅಥವಾ ಮೋಡಲ್ ದರ ₹47,632 ಆಗಿದೆ. ಇನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮಾರುಕಟ್ಟೆಯಲ್ಲಿ ಅಕ್ಟೋಬರ್ 13ರಂದು ಕನಿಷ್ಠ ₹35,000 ಮತ್ತು ಗರಿಷ್ಠ ₹41,000 ಬೆಲೆ ದಾಖಲಾಗಿದ್ದು, ಮೋಡಲ್ ದರ ₹40,246 ಆಗಿದೆ. ಮಾರುಕಟ್ಟೆಯ ದಿನಾಂಕ, ಅಡಿಕೆಯ ತಳಿ, ಗುಣಮಟ್ಟ ಹಾಗೂ ಹರಾಜಿನಲ್ಲಿ ಭಾಗವಹಿಸುವ ಖರೀದಿದಾರರ ಬೇಡಿಕೆಗೆ ಅನುಗುಣವಾಗಿ ಧಾರಣೆ ಬದಲಾಗುತ್ತದೆ.

ಶಿರಸಿ ಮಾರುಕಟ್ಟೆಯಲ್ಲಿ ವಿವಿಧ ತಳಿಗಳ ದರ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರುಕಟ್ಟೆಯ ಅಕ್ಟೋಬರ್ 8ರ ಲಭ್ಯವಿರುವ ದಾಖಲೆಗಳ ಪ್ರಕಾರ, ಚಾಲಿ ಅಡಿಕೆಗೆ ಗರಿಷ್ಠ ₹46,199, ರಾಶಿ ಅಡಿಕೆಗೆ ₹45,699 ಹಾಗೂ ಬೆಟ್ಟೆ ಅಡಿಕೆಗೆ ₹41,099 ಬೆಲೆ ದಾಖಲಾಗಿದೆ. ಕೆಂಪುಗೋಟು ತಳಿಯ ಗರಿಷ್ಠ ಧಾರಣೆ ₹31,599 ಆಗಿದ್ದರೆ, ಬಿಳೆಗೋಟು ತಳಿಗೆ ₹32,200 ಗರಿಷ್ಠ ಬೆಲೆ ಲಭ್ಯವಾಗಿದೆ. ಈ ದರಗಳು ಅಕ್ಟೋಬರ್ 8ಕ್ಕೆ ಸಂಬಂಧಿಸಿದ್ದು, ಇಂದಿನ ನೇರ ಮಾರುಕಟ್ಟೆ ಧಾರಣೆಯಾಗಿ ಪರಿಗಣಿಸಬಾರದು.

ಅಡಿಕೆ ಬೆಲೆ ಏರಿಳಿತಕ್ಕೆ ಕಾರಣವೇನು?

ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ನಿಗದಿಯಾಗಲು ಹಲವು ಅಂಶಗಳು ಕಾರಣವಾಗುತ್ತವೆ. ಮಾರುಕಟ್ಟೆಗೆ ಬರುವ ಅಡಿಕೆಯ ಪ್ರಮಾಣ, ಗುಣಮಟ್ಟ, ತೇವಾಂಶ, ತಳಿಯ ವೈಶಿಷ್ಟ್ಯ ಹಾಗೂ ಖರೀದಿದಾರರ ಬೇಡಿಕೆ ಪ್ರಮುಖ ಪಾತ್ರ ವಹಿಸುತ್ತವೆ. ಅಡಿಕೆಯನ್ನ ಸರಿಯಾಗಿ ಒಣಗಿಸಿ, ಗುಣಮಟ್ಟದ ಆಧಾರದಲ್ಲಿ ವಿಂಗಡಿಸಿ ಮಾರಾಟಕ್ಕೆ ತಂದರೆ ಉತ್ತಮ ದರ ಪಡೆಯುವ ಅವಕಾಶ ಹೆಚ್ಚಾಗಬಹುದು. ಆದರೆ ಗರಿಷ್ಠ ಧಾರಣೆ ಎಲ್ಲ ರೈತರಿಗೂ ದೊರೆಯುತ್ತದೆ ಎಂಬ ಖಾತರಿ ಇರುವುದಿಲ್ಲ. ರೈತರು ಕೇವಲ ಗರಿಷ್ಠ ಬೆಲೆಯನ್ನ ಆಧರಿಸಿ ಮಾರಾಟದ ನಿರ್ಧಾರ ಕೈಗೊಳ್ಳದೆ, ಮಾರುಕಟ್ಟೆಯ ಮೋಡಲ್ ದರ, ಸಾಗಣೆ ವೆಚ್ಚ ಹಾಗೂ ಉತ್ಪನ್ನದ ಗುಣಮಟ್ಟವನ್ನೂ ಪರಿಗಣಿಸುವುದು ಸೂಕ್ತ.

ಅಡಿಕೆ ಬೆಳೆಗಾರರಿಗೆ ಮುಖ್ಯ ಸಲಹೆ

ಮಾರುಕಟ್ಟೆಗೆ ಅಡಿಕೆ ಸಾಗಿಸುವ ಮುನ್ನ ಸಂಬಂಧಪಟ್ಟ ಎಪಿಎಂಸಿ ಅಥವಾ ಸಹಕಾರ ಸಂಘದಿಂದ ಆ ದಿನದ ಧಾರಣೆ ತಿಳಿದುಕೊಳ್ಳುವುದು ಉತ್ತಮ. ಹಳೆಯ ದರಗಳನ್ನ ಇಂದಿನ ದರವೆಂದು ಪರಿಗಣಿಸಿ ಮಾರಾಟಕ್ಕೆ ಮುಂದಾಗಬಾರದು. ಒಟ್ನಲ್ಲಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ತಳಿ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬದಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಆವಕ ಮತ್ತು ಖರೀದಿ ಬೇಡಿಕೆ ಹೇಗಿರಲಿದೆ ಎಂಬುದರ ಮೇಲೆ ಬೆಲೆಗಳ ಚಲನೆ ಅವಲಂಬಿತವಾಗಿರುತ್ತದೆ.

ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ

ಅಕ್ಟೋಬರ್ 9–14, 2026ರ ಇತ್ತೀಚಿನ ಲಭ್ಯವಿರುವ ದರಗಳು. ಎಲ್ಲಾ ಬೆಲೆಗಳು ಪ್ರತಿ ಕ್ವಿಂಟಾಲ್‌ಗೆ (100 ಕೆ.ಜಿ.).

| ಮಾರುಕಟ್ಟೆ        | ಅಡಿಕೆ ತಳಿ    | ಕನಿಷ್ಠ ದರ | ಗರಿಷ್ಠ ದರ |
| ---------------- | ------------ | --------- | --------- |
| ಶಿವಮೊಗ್ಗ (ಅ.14)  | ಹಸ           | ₹49,509   | ₹75,559   |
| ಚನ್ನಗಿರಿ (ಅ.14)  | ಹೊಸ ರಾಶಿ ಇಡಿ | ₹46,009   | ₹49,279   |
| ಸಾಗರ (ಅ.12)      | ರಾಶಿ ಇಡಿ     | ₹41,029   | ₹48,419   |
| ಶಿಕಾರಿಪುರ (ಅ.13) | ರಾಶಿ ಇಡಿ     | ₹44,969   | ₹47,911   |
| ಭದ್ರಾವತಿ (ಅ.13)  | ರಾಶಿ ಇಡಿ     | ₹42,921   | ₹48,199   |
| ಕೊಪ್ಪ (ಅ.9)      | ಹಸ           | ₹53,099   | ₹76,619   |
| ತೀರ್ಥಹಳ್ಳಿ (ಅ.9) | ಹಸ           | ₹56,009   | ₹88,229   |
| ಶೃಂಗೇರಿ (ಅ.9)    | ಹಸ           | ₹48,999   | ₹84,500   |
| ಹೊಸನಗರ (ಅ.9)     | ರಾಶಿ ಇಡಿ     | ₹41,526   | ₹49,669   |
| ತರೀಕೆರೆ (ಅ.12)   | ರಾಶಿ ಇಡಿ     | ₹35,199   | ₹48,699   |
| ಸೊರಬ (ಅ.13)      | ರಾಶಿ ಇಡಿ     | ₹36,009   | ₹47,599   |

(ಮೂಲ: ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ (MAMCOS))

Add Zee News as a Preferred Source
TAGS:
Business
Kannada News