ವೈದಿಕ ಜ್ಯೋತಿಷ್ಯದ ಪ್ರಕಾರ, ಈ ತಿಂಗಳಾಂತ್ಯದಲ್ಲಿ ಗುರು ಕೇತು ಸಂಯೋಗ ರಚನೆ ಆಗಲಿದ್ದು, ಇದರಿಂದ ಕುಬೇರ ಯೋಗ ಸೃಷ್ಟಿ ಆಗಲಿದೆ.
ಜ್ಯೋತಿಷ್ಯದ ಪ್ರಕಾರ, ಕುಬೇರ ಯೋಗವು ಕೆಲವು ರಾಶಿಯವರಿಗೆ ಫಲಪ್ರದವಾಗಿರಲಿದೆ ಎನ್ನಲಾಗುತ್ತಿದೆ.
1/6
ಕುಬೇರ ಯೋಗ
ಹಿಂದೂ ಕ್ಯಾಲೆಂಡರ್ ಪ್ರಕಾರ, ಅಕ್ಟೋಬರ್ 31, 2026ರಂದು ಗುರು ಸಿಂಹ ರಾಶಿಗೆ ಸಾಗಲಿದ್ದು ಕೇತು ಜೊತೆಗೆ ಸಂಯೋಗ ಹೊಂದಲಿದ್ದಾನೆ. ಗುರು ಕೇತು ಗ್ರಹಗಳ ಈ ಅಪರೂಪದ ಮೈತ್ರಿಯಿಂದ ಕುಬೇರ ಯೋಗ ಸೃಷ್ಟಿ ಆಗಲಿದೆ.
2/6
ಕುಬೇರ ಯೋಗ ಪ್ರಭಾವ
ಕುಬೇರ ಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರಲಿದೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯ ಜನರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು, ಅವರ ಬದುಕಿನಲ್ಲಿ ಅಪಾರ ಸಂಪತ್ತಿನ ಸುರಿಮಳೆಯೇ ಸುರಿಯಲಿದ್ದು ರಾಜಯೋಗದ ಜೀವನವನ್ನು ಅನುಭವಿಸುವರು ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
3/6
ಮೇಷ ರಾಶಿ
ಕುಬೇರ ಯೋಗವು ಮೇಷ ರಾಶಿಯ ಜನರಿಗೆ ವೃತ್ತಿ ಬದುಕಿನಲ್ಲಿ ಪ್ರಗತಿಯ ಹಾದಿಯನ್ನು ಸುಗಮಗೊಳಿಸಲಿದೆ. ಹೊಸ ವ್ಯವಹಾರವನ್ನು ಆರಂಭಿಸಲು ಬಯಸುವವರಿಗೆ ಇದು ಸರಿಯಾದ ಸಮಯ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವಗಳು ಹೆಚ್ಚಾಗಲಿವೆ.
4/6
ತುಲಾ ರಾಶಿ
ಕುಬೇರ ಯೋಗವು ತುಲಾ ರಾಶಿಯ ಜನರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ಅನಿರೀಕ್ಷಿತ ಧನಲಾಭವು ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಹೊರತರುವಲ್ಲಿ ಪರಿಣಾಮಕಾರಿ ಆಗಿದೆ. ಸ್ವಂತ ಮನೆ ಹೊಂದುವ ನಿಮ್ಮ ಕನಸು ನನಸಾಗುವ ಸುಯೋಗವಿದೆ. ತಾಯಿ ಲಕ್ಷ್ಮಿ ಅನುಗ್ರಹದಿಂದ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ.
5/6
ಧನು ರಾಶಿ
ಕುಬೇರ ಯೋಗದ ಪ್ರಭಾವದಿಂದ ಧನು ರಾಶಿಯ ಜನರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಹೂಡಿಕೆಯಿಂದ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಇದು ಅನುಕೂಲಕರ ಸಮಯ. ವ್ಯವಹಾರಸ್ಥರಿಗೆ ಸಿಲುಕಿರುವ ಹಣ ಕೈ ಸೇರುವ ಸಮಯ ಇದಾಗಿದೆ.
6/6
ಕುಂಭ ರಾಶಿ
ಕುಬೇರ ಯೋಗವು ಕುಂಭ ರಾಶಿಯ ಜನರಿಗೆ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ. ದೀರ್ಘಾವಧಿಯಿಂದ ಕೆಲಸದಲ್ಲಿ ಇದ್ದ ಅಡೆತಡೆಗಳು ನಿವಾರಣೆ ಆಗಲಿವೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಗಳು ಲಾಭದಾಯಕವಾಗಿರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸೂಚನೆಗಳಿವೆ. ಮನೆಯಲ್ಲಿ ಮದುವೆಯಂತಹ ಮಂಗಳ ಕಾರ್ಯಗಳು ನಡೆಯಲಿವೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.