• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

ಶಿಕ್ಷಕರ ಚುನಾವಣೆ ಹಿನ್ನಲೆಯಲ್ಲಿ ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಹೋಟೆಲ್‌ ಉದ್ಯಮಕ್ಕೆ ಸುಮಾರು ₹500 ಕೋಟಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಹೋಟೆಲ್‌ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

Written ByYashaswini V
Published: Oct 16, 2026, 08:30 AM IST|Updated: Oct 16, 2026, 08:33 AM IST
joinshare
ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

2

ದಿನ ಭವಿಷ್ಯ 16-10-2026: ಶುಕ್ರವಾರದಂದು ಶೋಭನ ಯೋಗ.. ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ

3

ಪದೇಪದೇ ಲೂಸ್ ಮೋಷನ್ ಆಗಿ ಸುಸ್ತಾಗುತ್ತಿದ್ದೀರಾ? ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

4

Mysuru Dasara 2026: ಜಂಬೂಸವಾರಿಗೆ 12 ಆನೆಗಳು ಫೈನಲ್! ಯಾವ್ಯಾವ ಆನೆಗೆ ಯಾವೆಲ್ಲಾ ಜವಾಬ್ದಾರಿ?

5

ಜನರೇ ಅಲರ್ಟ್‌... ರಾಜ್ಯದ ಈ ಜಿಲ್ಲೆಗಳಲ್ಲಿ ಅಕ್ಟೋಬರ್ 18ರವರೆಗೆ ಮಳೆ ಅಲರ್ಟ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಶಿಕ್ಷಕರ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ (ಪೋಲೀಸ್ ಕಮೀಶನರೇಟ್ ವ್ಯಾಪ್ತಿ ಹೊರತುಪಡಿಸಿ) ಡ್ರೈ ಡೇ (Dry Day) ಘೋಷಣೆ ಮಾಡಲಾಗಿದೆ. ಅಕ್ಟೋಬರ್‌ನಲ್ಲಿ ಡ್ರೈ ಡೇ ಘೋಷಣೆಯಿಂದ ಬೆಂಗಳೂರಿನಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಲಿದೆ ಎಂದು ಹೋಟೆಲ್‌ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಡ್ರೈ ಡೇ:
ಈ ಕುರಿತಂತೆ ಆದೇಶ ಹೊರಡಿಸಿರುವ ಬೆಂಗಳೂರು ಜಿಲ್ಲೆ ಜಿಲ್ಲಾಧಿಕಾರಿಗಳು, ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ 2026 ಹಿನ್ನಲೆಯಲ್ಲಿ ಬೆಂಗಳೂರು ನಗರದಾದ್ಯಂತ ಶುಷ್ಕ ದಿನ (Dry Day) ಘೋಷಿಸಲು ನಿರ್ದೇಶಿಸಲಾಗಿರುತ್ತದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಮತದಾನದ ಪ್ರಯುಕ್ತ, ಅಕ್ಟೋಬರ್‌ 21, 2026 ರಿಂದ ಅಕ್ಟೋಬರ್‌ 23, 2026 ರ ಸಂಜೆ 4.00 ಗಂಟೆಯವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ಅಕ್ಟೋಬರ್‌ 27, 2026 ರ ಬೆಳಿಗ್ಗೆ 06.00 ಗಂಟೆಯಿಂದ ಮಧ್ಯರಾತ್ರಿ 12.00 ಗಂಟೆವರೆಗೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ (ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ) ಪಾನ ನಿಷೇಧ ಜಾರಿಗೊಳಿಸಿ, ಎಲ್ಲಾ ರೀತಿಯ ಮದ್ಯ ಉತ್ಪಾದನೆ, ಮಾರಾಟ, ಹಂಚಿಕೆ, ಸಾಗಾಣಿಕ, ಶೇಖರಣೆ ಇತ್ಯಾದಿಗಳನ್ನು ನಿಷೇಧಿಸಿ 'ಒಣ ದಿನ' (ಡ್ರೈ ಡೇ) ಗಳೆಂದು ಘೋಷಿಸಲು ಆದೇಶಿಸಲಾಗಿದೆ.

ಜಿಲ್ಲಾಧಿಕಾರಿಗಳ ಆದೇಶದಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ:
ಅಕ್ಟೋಬರ್‌ ತಿಂಗಳಿನಲ್ಲಿ ಡ್ರೈ ಡೇ ಘೋಷಣೆಯಿಂದ ಹೋಟೆಲ್‌ ಉದ್ಯಮಕ್ಕೆ ಭಾರೀ ದೊಡ್ಡ ಹೊಡೆತ ಬೀಳಲಿದೆ ಎಂದು ಹೋಟೆಲ್ ಮಾಲೀಕರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಅಬಕಾರಿ ಸಚಿವರಿಗೆ ಬೆಂಗಳೂರು ಹೋಟೆಲುಗಳ ಸಂಘ (ರಿ.) ಪತ್ರ ಬರೆದಿದ್ದು ಈ ರೀತಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಮಾನ್ಯರೇ, 
ವಿಷಯ: ಶಿಕ್ಷಕರ ಚುನಾವಣೆಯ ಅಂಗವಾಗಿ Dry Day ಘೋಷಿಸಿರುವ ಬಗ್ಗೆ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಶಿಕ್ಷಕರ ಚುನಾವಣೆಯ ಅಂಗವಾಗಿ ದಿನಾಂಕ 21 ಅಕ್ಟೋಬರ್‌ 2026ರ ಸಂಜೆ 4:00 ಗಂಟೆಯಿಂದ ದಿನಾಂಕ 23 ಅಕ್ಟೋಬರ್‌ 2026 ರವರೆಗೆ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತ ಎಣಿಕೆಯ ದಿನವಾದ 2026ರ ಅಕ್ಟೋಬರ್  27 ರಂದು ಡ್ರೈ ಡೇ ಘೋಷಣೆ ಮಾಡಲಾಗಿದೆ. ಇದರಿಂದಾಗಿ ಸಿಲಿಕಾನ್‌ ಸಿಟಿಯಲ್ಲಿ ಬಾರ್‌ & ರಸ್ಟೋರೆಂಟ್‌‌ ಉದ್ಯಮಿಗಳಿಗೆ ಭಾರೀ ನಷ್ಟ ಉಂಟಾಗಲಿದೆ ಎಂದಿದ್ದಾರೆ.

ಸೀಮಿತ ಮತದಾರರರಿಗಾಗಿ ಈ ಕ್ರಮ ಸರಿಯಲ್ಲ:
ಈ ಚುನಾವಣೆಯಲ್ಲಿ ಕೇವಲ ಸುಮಾರು 20,000 ಮತದಾರರಿದ್ದು, ಅದರಲ್ಲಿ ಸುಮಾರು 15,009 ಮಹಿಳಾ ಮತದಾರರಿದ್ದಾರೆ, ಅಂತಹ ಸೀಮಿತ ಮತದಾರರನ್ನು ಹೊಂದಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ (ಪೋಲೀಸ್ ಕಮೀಷನರೇಟ್ ವ್ಯಾಪ್ತಿ ಹೊರತುಪಡಿಸಿ) Dry Day ಘೋಷಿಸುವುದರಿಂದ ಮದ್ಯ ಮಾರಾಟಗಾರರು ಹಾಗೂ ಆತಿಥ್ಯ ಉದ್ಯಮದವರಿಗೆ ಅನಗತ್ಯ ತೊಂದರೆಯಾಗಲಿದೆ. ಇದು ಶಿಕ್ಷಕ ಸಮುದಾಯಕ್ಕೂ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಇದಲ್ಲದೆ, ಈ ನಿರ್ಧಾರದಿಂದ ಸುಮಾರು ₹500 ಕೋಟಿಗೂ ಅಧಿಕ ವಹಿವಾಟಿನ ನಷ್ಟ ಉಂಟಾಗಲಿದ್ದು, ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ಆದಾಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ.

ಆದ್ದರಿಂದ, ಉದ್ಯಮದ ಹಿತದೃಷ್ಟಿಯಿಂದ ಶಿಕ್ಷಕರ ಚುನಾವಣೆ ಹಾಗೂ ಮತ ಎಣಿಕೆಯ ಸಂದರ್ಭದಲ್ಲಿ ಘೋಷಿಸಿರುವ ಡ್ರೈ ಡೇ ಅನ್ನು ಹಿಂಪಡೆಯಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

Add Zee News as a Preferred Source
TAGS:
Kannada News
D K Shivakumar