• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /Mysuru Dasara 2026: ಜಂಬೂಸವಾರಿಗೆ 12 ಆನೆಗಳು ಫೈನಲ್! ಯಾವ್ಯಾವ ಆನೆಗೆ ಯಾವೆಲ್ಲಾ ಜವಾಬ್ದಾರಿ?

Mysuru Dasara 2026: ಜಂಬೂಸವಾರಿಗೆ 12 ಆನೆಗಳು ಫೈನಲ್! ಯಾವ್ಯಾವ ಆನೆಗೆ ಯಾವೆಲ್ಲಾ ಜವಾಬ್ದಾರಿ?

ಚಿನ್ನದ ಅಂಬಾರಿ ಹೊರುವ ಆನೆಗೆ ಉತ್ತಮ ದೈಹಿಕ ಸಾಮರ್ಥ್ಯ, ಶಿಸ್ತು, ಜನಸಂದಣಿಯ ನಡುವೆಯೂ ಶಾಂತವಾಗಿ ಸಾಗುವ ಗುಣ ಹಾಗೂ ಮಾವುತರ ಸೂಚನೆಗಳನ್ನ ಪಾಲಿಸುವ ಸಾಮರ್ಥ್ಯ ಅತ್ಯಂತ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ ಆನೆಯ ನಾಯಕತ್ವ ಈ ಬಾರಿಯ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

Written ByPuttaraj K Alur
Published: Oct 15, 2026, 11:01 PM IST|Updated: Oct 15, 2026, 11:25 PM IST
joinshare
Mysuru Dasara 2026: ಜಂಬೂಸವಾರಿಗೆ 12 ಆನೆಗಳು ಫೈನಲ್! ಯಾವ್ಯಾವ ಆನೆಗೆ ಯಾವೆಲ್ಲಾ ಜವಾಬ್ದಾರಿ?
Image Credit: Mysuru Dasara

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಪದೇಪದೇ ಲೂಸ್ ಮೋಷನ್ ಆಗಿ ಸುಸ್ತಾಗುತ್ತಿದ್ದೀರಾ? ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಪದೇಪದೇ ಲೂಸ್ ಮೋಷನ್ ಆಗಿ ಸುಸ್ತಾಗುತ್ತಿದ್ದೀರಾ? ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

2

Mysuru Dasara 2026: ಜಂಬೂಸವಾರಿಗೆ 12 ಆನೆಗಳು ಫೈನಲ್! ಯಾವ್ಯಾವ ಆನೆಗೆ ಯಾವೆಲ್ಲಾ ಜವಾಬ್ದಾರಿ?

3

ಜನರೇ ಅಲರ್ಟ್‌... ರಾಜ್ಯದ ಈ ಜಿಲ್ಲೆಗಳಲ್ಲಿ ಅಕ್ಟೋಬರ್ 18ರವರೆಗೆ ಮಳೆ ಅಲರ್ಟ್!

4

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ವೆಸ್ಟ್ ಇಂಡೀಸ್ ಪಂದ್ಯ: ಸಂಚಾರ ಹಾಗೂ ಪಾರ್ಕಿಂಗ್ ನಿಯಮಗಳು ಪ್ರಕಟ

5

ಬ್ರಿಟಿಷರ ಕಾಲದಲ್ಲೂ ಟೀಕೆಗಳಿದ್ದವು, ಕೋಪ ಬೇಡ : "ರಾಮಾಯಣ" ಇವೆಂಟ್‌ನಲ್ಲಿ ಯಶ್‌ ಅದ್ಭುತ ಮಾತು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mysuru Dasara 2026: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಗಜಪಡೆಗಳ ಆಯ್ಕೆ ಅಂತಿಮಗೊಂಡಿದೆ. ಈ ಬಾರಿಯ ಐತಿಹಾಸಿಕ ಜಂಬೂಸವಾರಿಯಲ್ಲಿ ಒಟ್ಟು 12 ಆನೆಗಳು ಭಾಗವಹಿಸಲಿದ್ದು, ಪ್ರಶಾಂತ ಆನೆಗೆ ಚಿನ್ನದ ಅಂಬಾರಿ ಹೊರುವ ಮಹತ್ವದ ಜವಾಬ್ದಾರಿ ನೀಡಲಾಗಿದೆ. ವಿಶೇಷವೆಂದರೆ ಈ ವರ್ಷ ಪ್ರಶಾಂತ ಮೊದಲ ಬಾರಿಗೆ ಜಂಬೂಸವಾರಿ ಗಜಪಡೆಯ ನಾಯಕತ್ವ ವಹಿಸಿಕೊಳ್ಳಲಿದ್ದಾನೆ.

ಕಳೆದ ಬಾರಿ ನಿಶಾನೆ ಆನೆಯಾಗಿ ಭಾಗವಹಿಸಿದ್ದ ಅನುಭವಿ ಅಭಿಮನ್ಯು ಈ ಬಾರಿಯೂ ನಿಶಾನೆ ಆನೆಯಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾನೆ. ಅಭಿಮನ್ಯುವಿನ ನಂತರ ಗೋಪಿ ಆನೆ ನೌಬತ್ ಜವಾಬ್ದಾರಿ ನಿರ್ವಹಿಸಲಿದೆ. ಉಳಿದ ಆನೆಗಳು ಸಾಲಾನೆಗಳು ಹಾಗೂ ಕುಮ್ಕಿ ಆನೆಗಳಾಗಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಪ್ರಶಾಂತನಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ!

ಮೈಸೂರು ದಸರಾ ಜಂಬೂಸವಾರಿಯ ಅತ್ಯಂತ ಪ್ರಮುಖ ಜವಾಬ್ದಾರಿಯೆಂದರೆ ಚಿನ್ನದ ಅಂಬಾರಿ ಹೊರುವುದು. ನಾಡದೇವತೆ ಚಾಮುಂಡೇಶ್ವರಿಯ ಉತ್ಸವಮೂರ್ತಿಯನ್ನ ಪ್ರತಿಷ್ಠಾಪಿಸುವ ಚಿನ್ನದ ಅಂಬಾರಿಯನ್ನ ಹೊತ್ತು ಸಾಗುವ ಆನೆ ಇಡೀ ಮೆರವಣಿಗೆಯ ಕೇಂದ್ರಬಿಂದುವಾಗಿರುತ್ತದೆ. ಈ ಬಾರಿ ಆ ಮಹತ್ವದ ಜವಾಬ್ದಾರಿ ಪ್ರಶಾಂತ ಆನೆಗೆ ನೀಡಲಾಗಿದೆ. ಜಂಬೂಸವಾರಿಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಪ್ರಶಾಂತನ ಮೇಲೆ ಹೆಚ್ಚಿನ ನಿರೀಕ್ಷೆ ವ್ಯಕ್ತವಾಗಿದೆ. ಚಿನ್ನದ ಅಂಬಾರಿ ಹೊರುವ ಆನೆಗೆ ಉತ್ತಮ ದೈಹಿಕ ಸಾಮರ್ಥ್ಯ, ಶಿಸ್ತು, ಜನಸಂದಣಿಯ ನಡುವೆಯೂ ಶಾಂತವಾಗಿ ಸಾಗುವ ಗುಣ ಹಾಗೂ ಮಾವುತರ ಸೂಚನೆಗಳನ್ನ ಪಾಲಿಸುವ ಸಾಮರ್ಥ್ಯ ಅತ್ಯಂತ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ ಆನೆಯ ನಾಯಕತ್ವ ಈ ಬಾರಿಯ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಅಭಿಮನ್ಯುವಿಗೆ ನಿಶಾನೆ ಆನೆಯ ಗೌರವ

ದಸರಾ ಗಜಪಡೆಯ ಅನುಭವಿ ಆನೆಗಳಲ್ಲಿ ಒಂದಾಗಿರುವ ಅಭಿಮನ್ಯುವಿಗೆ ಈ ಬಾರಿಯೂ ನಿಶಾನೆ ಆನೆಯ ಜವಾಬ್ದಾರಿ ನೀಡಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆ ಮುಂಚೂಣಿಯಲ್ಲಿ ಸಾಗುವುದು ಸಂಪ್ರದಾಯವಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮನ್ಯು ಮೆರವಣಿಗೆಯ ಆರಂಭದಲ್ಲಿ ಸಾಗಲಿದ್ದಾನೆ. ಅನುಭವ ಮತ್ತು ಶಿಸ್ತಿನಿಂದ ಗುರುತಿಸಿಕೊಂಡಿರುವ ಅಭಿಮನ್ಯು, ದಸರಾ ಗಜಪಡೆಯ ಪ್ರಮುಖ ಸದಸ್ಯನಾಗಿ ಮುಂದುವರಿದಿದ್ದಾನೆ. ಈ ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಪ್ರಶಾಂತನಿಗೆ ನೀಡಲಾಗಿದ್ದರೂ, ಅಭಿಮನ್ಯುವಿನ ಪಾತ್ರಕ್ಕೆ ವಿಶೇಷ ಮಹತ್ವವಿದೆ.

ಗೋಪಿ ಆನೆಗೆ ನೌಬತ್ ಜವಾಬ್ದಾರಿ

ಜಂಬೂಸವಾರಿಯಲ್ಲಿ ನಿಶಾನೆ ಆನೆಯ ನಂತರ ನೌಬತ್ ಆನೆ ಸಾಗುವುದು ಸಂಪ್ರದಾಯವಾಗಿದೆ. ಈ ಬಾರಿ ಗೋಪಿ ಆನೆಗೆ ನೌಬತ್ ಜವಾಬ್ದಾರಿ ನೀಡಲಾಗಿದೆ. ಮೈಸೂರು ದಸರಾ ಮೆರವಣಿಗೆಯಲ್ಲಿ ನೌಬತ್ ಆನೆಗೂ ವಿಶೇಷ ಸ್ಥಾನವಿದ್ದು, ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆಯ ವೈಭವವನ್ನ ಹೆಚ್ಚಿಸುವಲ್ಲಿ ಈ ಪಾತ್ರ ಪ್ರಮುಖವಾಗಿದೆ. ಅಭಿಮನ್ಯುವಿನ ನಂತರ ಗೋಪಿ ಆನೆ ಸಾಗಲಿದ್ದು, ಬಳಿಕ ಇತರ ಗಜಪಡೆಗಳು ತಮ್ಮ ನಿಗದಿತ ಸ್ಥಾನಗಳಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಜಂಬೂಸವಾರಿಗೆ ಆಯ್ಕೆಯಾದ 12 ಆನೆಗಳ ಪಟ್ಟಿ

ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಆನೆಗಳು ಹಾಗೂ ಅವುಗಳಿಗೆ ನೀಡಲಾಗಿರುವ ಜವಾಬ್ದಾರಿಗಳ ವಿವರ ಇಲ್ಲಿದೆ.

 

ಆನೆಯ ಹೆಸರುಜವಾಬ್ದಾರಿ 
ಪ್ರಶಾಂತಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್
ಅಭಿಮನ್ಯು   ನಿಶಾನೆ ಆನೆ
ಗೋಪಿ ನೌಬತ್ ಆನೆ 
ಮಹೇಂದ್ರಸಾಲಾನೆ/ಕುಮ್ಕಿ ತಂಡ
ಲಕ್ಷ್ಮಿಸಾಲಾನೆ/ಕುಮ್ಕಿ ತಂಡ
ಶ್ರೀರಾಮಸಾಲಾನೆ/ಕುಮ್ಕಿ ತಂಡ
ಚೈತ್ರ ಸಾಲಾನೆ/ಕುಮ್ಕಿ ತಂಡ
ಸುಗ್ರೀವಸಾಲಾನೆ/ಕುಮ್ಕಿ ತಂಡ
ಶ್ರೀಕಂಠಸಾಲಾನೆ/ಕುಮ್ಕಿ ತಂಡ
ಏಕಲವ್ಯಸಾಲಾನೆ/ಕುಮ್ಕಿ ತಂಡ
ಕಾವೇರಿಸಾಲಾನೆ/ಕುಮ್ಕಿ ತಂಡ
ರೂಪಾ ಸಾಲಾನೆ/ಕುಮ್ಕಿ ತಂಡ


ಧನಂಜಯ ಆನೆಗೆ ಜಂಬೂಸವಾರಿಯಿಂದ ವಿಶ್ರಾಂತಿ

ಈ ಬಾರಿ ದಸರಾ ಮಹೋತ್ಸವಕ್ಕಾಗಿ ಒಟ್ಟು 13 ಆನೆಗಳನ್ನ ಕಾಡಿನಿಂದ ಕರೆತರಲಾಗಿತ್ತು. ಆದರೆ ಅವುಗಳಲ್ಲಿ 12 ಆನೆಗಳನ್ನ ಮಾತ್ರ ಮೈಸೂರು ಜಂಬೂಸವಾರಿ ಮೆರವಣಿಗೆಗೆ ಆಯ್ಕೆ ಮಾಡಲಾಗಿದೆ. ಧನಂಜಯ ಆನೆಯನ್ನ ಈ ಬಾರಿಯ ಮೈಸೂರು ಜಂಬೂಸವಾರಿ ತಂಡದಿಂದ ಹೊರಗಿಡಲಾಗಿದೆ. ಇದಕ್ಕೆ ಕಾರಣ ಧನಂಜಯನಿಗೆ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಮರದ ಅಂಬಾರಿ ಹೊರುವ ಜವಾಬ್ದಾರಿ ನೀಡಿರುವುದು. ಹೀಗಾಗಿ ಧನಂಜಯ ಮೈಸೂರು ಜಂಬೂಸವಾರಿಯಲ್ಲಿ ಭಾಗವಹಿಸದಿದ್ದರೂ, ಶ್ರೀರಂಗಪಟ್ಟಣ ದಸರಾ ಮೆರವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾನೆ. 

ಸಾಲಾನೆ ಮತ್ತು ಕುಮ್ಕಿ ಆನೆಗಳ ಪಾತ್ರವೇನು?

ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯಷ್ಟೇ ಉಳಿದ ಆನೆಗಳ ಪಾತ್ರವೂ ಮಹತ್ವದ್ದಾಗಿದೆ. ಸಾಲಾನೆಗಳು ಮೆರವಣಿಗೆಯ ಶಿಸ್ತು ಮತ್ತು ಸಾಂಪ್ರದಾಯಿಕ ವೈಭವವನ್ನ ಹೆಚ್ಚಿಸಿದರೆ, ಕುಮ್ಕಿ ಆನೆಗಳು ಅಗತ್ಯ ಸಂದರ್ಭದಲ್ಲಿ ಪ್ರಮುಖ ಆನೆಗೆ ಬೆಂಬಲ ನೀಡುವ ಪಾತ್ರ ನಿರ್ವಹಿಸುತ್ತವೆ. ವಿಶೇಷವಾಗಿ ಜನಸಂದಣಿ, ವಾದ್ಯಗಳ ಸದ್ದು ಮತ್ತು ಮೆರವಣಿಗೆಯ ಚಟುವಟಿಕೆಗಳ ನಡುವೆ ಗಜಪಡೆಗಳು ಶಾಂತವಾಗಿ ಸಾಗುವುದು ಅತ್ಯಂತ ಮುಖ್ಯವಾಗಿದೆ. ಮಹೇಂದ್ರ, ಲಕ್ಷ್ಮಿ, ಶ್ರೀರಾಮ, ಚೈತ್ರ, ಸುಗ್ರೀವ, ಶ್ರೀಕಂಠ, ಏಕಲವ್ಯ, ಕಾವೇರಿ ಮತ್ತು ರೂಪಾ ಆನೆಗಳು ಈ ಬಾರಿ ಸಾಲಾನೆ ಹಾಗೂ ಕುಮ್ಕಿ ತಂಡಗಳಲ್ಲಿ ಭಾಗವಹಿಸಲಿವೆ.

ಜಂಬೂಸವಾರಿ ವೈಭವ ಕಣ್ತುಂಬಿಕೊಳ್ಳಲು ಜನರ ನಿರೀಕ್ಷೆ

ಮೈಸೂರು ದಸರಾ ಎಂದರೆ ಅರಮನೆಯ ಸೊಬಗು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾತಂಡಗಳ ಪ್ರದರ್ಶನ ಮತ್ತು ಅದ್ದೂರಿ ಜಂಬೂಸವಾರಿ ಮೆರವಣಿಗೆ ನೆನಪಾಗುತ್ತದೆ. ವಿಶೇಷವಾಗಿ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿಯ ಉತ್ಸವಮೂರ್ತಿಯನ್ನ ಹೊತ್ತು ಸಾಗುವ ಗಜಪಡೆಯ ದೃಶ್ಯ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಈ ಬಾರಿ ಪ್ರಶಾಂತ ಆನೆ ಮೊದಲ ಬಾರಿಗೆ ಗಜಪಡೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವುದರಿಂದ ಜಂಬೂಸವಾರಿ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಅನುಭವಿ ಅಭಿಮನ್ಯು ನಿಶಾನೆ ಆನೆಯಾಗಿ, ಗೋಪಿ ನೌಬತ್ ಆನೆಯಾಗಿ ಹಾಗೂ ಉಳಿದ ಒಂಬತ್ತು ಆನೆಗಳು ಸಾಲಾನೆ ಮತ್ತು ಕುಮ್ಕಿ ತಂಡಗಳಾಗಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಒಟ್ನಲ್ಲಿ 2026ರ ಮೈಸೂರು ದಸರಾ ಜಂಬೂಸವಾರಿಗೆ 12 ಆನೆಗಳ ಆಯ್ಕೆ ಅಂತಿಮಗೊಂಡಿದ್ದು, ಪ್ರಶಾಂತ ಆನೆಯ ನಾಯಕತ್ವದಲ್ಲಿ ಗಜಪಡೆ ಹೇಗೆ ಹೆಜ್ಜೆ ಹಾಕಲಿದೆ ಎಂಬುದನ್ನ ನೋಡಲು ದಸರಾ ಪ್ರೇಮಿಗಳು ಕಾತರರಾಗಿದ್ದಾರೆ.

Add Zee News as a Preferred Source
TAGS:
Kannada News