• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಬ್ರಿಟಿಷರ ಕಾಲದಲ್ಲೂ ಟೀಕೆಗಳಿದ್ದವು, ಕೋಪ ಬೇಡ : "ರಾಮಾಯಣ" ಇವೆಂಟ್‌ನಲ್ಲಿ ಯಶ್‌ ಅದ್ಭುತ ಮಾತು

ಬ್ರಿಟಿಷರ ಕಾಲದಲ್ಲೂ ಟೀಕೆಗಳಿದ್ದವು, ಕೋಪ ಬೇಡ : "ರಾಮಾಯಣ" ಇವೆಂಟ್‌ನಲ್ಲಿ ಯಶ್‌ ಅದ್ಭುತ ಮಾತು

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ 'ರಾಮಾಯಣ' ಚಿತ್ರದ ಬಗ್ಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನಟ ಯಶ್‌ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಒಂದಾಗಿ ಒಳ್ಳೆಯ ಸಿನಿಮಾಗೆ ಬೆಂಬಲಿಸಿ ಎಂದು ಕರೆ ನೀಡಿದರು..

Written ByKrishna NK
Published: Oct 15, 2026, 09:43 PM IST|Updated: Oct 15, 2026, 09:47 PM IST
joinshare
ಬ್ರಿಟಿಷರ ಕಾಲದಲ್ಲೂ ಟೀಕೆಗಳಿದ್ದವು, ಕೋಪ ಬೇಡ : "ರಾಮಾಯಣ" ಇವೆಂಟ್‌ನಲ್ಲಿ ಯಶ್‌ ಅದ್ಭುತ ಮಾತು
Image Credit: Yash Movie

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಜನರೇ ಅಲರ್ಟ್‌... ರಾಜ್ಯದ ಈ ಜಿಲ್ಲೆಗಳಲ್ಲಿ ಅಕ್ಟೋಬರ್ 18ರವರೆಗೆ ಮಳೆ ಅಲರ್ಟ್!

ಜನರೇ ಅಲರ್ಟ್‌... ರಾಜ್ಯದ ಈ ಜಿಲ್ಲೆಗಳಲ್ಲಿ ಅಕ್ಟೋಬರ್ 18ರವರೆಗೆ ಮಳೆ ಅಲರ್ಟ್!

2

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ವೆಸ್ಟ್ ಇಂಡೀಸ್ ಪಂದ್ಯ: ಸಂಚಾರ ಹಾಗೂ ಪಾರ್ಕಿಂಗ್ ನಿಯಮಗಳು ಪ್ರಕಟ

3

ಬ್ರಿಟಿಷರ ಕಾಲದಲ್ಲೂ ಟೀಕೆಗಳಿದ್ದವು, ಕೋಪ ಬೇಡ : "ರಾಮಾಯಣ" ಇವೆಂಟ್‌ನಲ್ಲಿ ಯಶ್‌ ಅದ್ಭುತ ಮಾತು

4

ಕಿರಿಕ್ ಕೀರ್ತಿಗೆ ಭೀಕರ ಅಪಘಾತ : ಫೋಟೋಸ್‌ ವೈರಲ್‌.. ಹೇಗಿದೆ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಆರೋಗ್ಯ?

5

ಷೇರು ಮಾರುಕಟ್ಟೆ ಸಂಶೋಧನೆಗಾಗಿ ಹೊಸ AI ತಂತ್ರಜ್ಞಾನ : 'ಕ್ವಾಲಾ ಇಂಟೆಲ್' ಬಿಡುಗಡೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Yash on Ramayana : ಬೆಂಗಳೂರಿನಲ್ಲಿ ನಡೆದ 'ರಾಮಾಯಣ' ಸಿನಿಮಾದ ವಿಶೇಷ ಕಾರ್ಯಕ್ರಮದಲ್ಲಿ ನಟ ಯಶ್‌ ಭಾಗವಹಿಸಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ನಿತೇಶ್‌ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರದಲ್ಲಿ ರಣಬೀರ್‌ ಕಪೂರ್‌, ಸಾಯಿ ಪಲ್ಲವಿ ಮತ್ತು ರಕುಲ್‌ ಪ್ರಿತ್‌ ಸಿಂಗ್‌ ನಟಿಸುತ್ತಿದ್ದು, ಸೋನಿ ಪಿಕ್ಚರ್ಸ್‌ ಇದನ್ನು ಜಾಗತಿಕ ಮಟ್ಟದಲ್ಲಿ ವಿತರಣೆ ಮಾಡುತ್ತಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್‌, "ನಾವು ರಾಮಾಯಣವನ್ನು ಕೇವಲ ಸಿನಿಮಾವಾಗಿ ನೋಡಿಲ್ಲ, ಭಕ್ತಿಯಿಂದ ಹಾಗೂ ನಮ್ಮ ಕಥೆಯನ್ನು ಜಗತ್ತಿಗೆ ಹೇಳುವ ದೃಷ್ಟಿಯಿಂದ ಇದರ ಹಿಂದೆ ಕೆಲಸ ಮಾಡಿದ್ದೇವೆ. ಭಾರತದ ಸಂಪ್ರದಾಯ ಮತ್ತು ನಮ್ಮ ಇತಿಹಾಸವನ್ನು ಜಗತ್ತಿಗೆ ತೋರಿಸುವುದು ನಮ್ಮ ಉದ್ದೇಶ" ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟೀಕೆಗಳ ಬಗ್ಗೆಯೂ ಮಾತನಾಡಿದ ಅವರು, "ಸೋಷಿಯಲ್‌ ಮೀಡಿಯಾದಲ್ಲಿ ವಿಎಫ್‌ಎಕ್ಸ್‌ ಮತ್ತು ನಟರ ಬಗ್ಗೆ ಏನೇನೋ ಮಾತನಾಡುತ್ತಾರೆ.. ಗಡಿ ದಾಟಿ, ಪಣಕ್ಕಿಟ್ಟು ಇಂತಹ ದೊಡ್ಡ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆ ಪ್ರಯತ್ನಗಳೇ ಇತಿಹಾಸದಲ್ಲಿ ಮೈಲಿಗಲ್ಲಾಗುತ್ತವೆ. ಎಲ್ಲರೂ ಒಂದಾಗಿ ಮಾಡುವ ಇಂತಹ ಕೆಲಸಗಳಿಗೆ ಎಲ್ಲರೂ ಸಪೋರ್ಟ್ ಮಾಡಬೇಕು" ಎಂದು ಮನವಿ ಮಾಡಿದರು.

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳು ಒಟ್ಟಾಗಿ ಬರಬೇಕು ಎಂದ ಯಶ್‌, "ನಾವು ಎಲ್ಲರನ್ನೂ ಒಟ್ಟಾಗಿ ಸೇರಿಸುವ ಪ್ರಯತ್ನ ಮಾಡುತ್ತಿದ್ದೇವೆ, ಯಾರ ಮೇಲೂ ಕೋಪ ಮಾಡಿಕೊಳ್ಳಬೇಡಿ. ಎಲ್ಲರೂ ಒಳ್ಳೆಯ ಸಿನಿಮಾಗೆ ಬೆಂಬಲ ನೀಡುತ್ತಾರೆ" ಎಂದರು ಯಶ್‌ ಮಾತನಾಡಿದರು.

ನನಗೆ ಗೊತ್ತು, ನೀವು ನನ್ನ ಸಿನಿಮಾಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ಎಷ್ಟು ಹೊಡೆದಾಡಿದ್ದೀರಿ, ಹಲವಾರು ವಿಚಾರಗಳ ಮಧ್ಯೆಯೂ ನೀವು ಬೆಂಬಲ ನೀಡಿದ್ದೀರಿ. ಉತ್ತಮ ಗಳಿಕೆಯೂ ಕಂಡಿದೆ. ಒಂದು ಮಾತು ಹೇಳ್ತೀನಿ ನಿಮ್ಮ ಋಣವನ್ನು ನಾವು ಯಾವತ್ತೂ ತಿರಿಸೋಕೆ ಆಗಲ್ಲ ಎಂದರು. ಅಲ್ಲದೆ, ಈ ಸಿನಿಮಾ ಮನೆ ಮಂದಿ ಕುಳಿತು ನೋಡುವ ಸಿನಿಮಾ.. ಯಾವ ಸಿನಿಮಾವನ್ನು ಯಾರಿಗಾಗಿ ಮಾಡ್ಬೇಕು ಅಂತ ನಮಗೆ ಗೊತ್ತಿರುತ್ತೆ. ಚಿತ್ರವನ್ನು ನೋಡಿ ಆಮೇಲೆ ಸಿಗೋಣ.. ಎಂದು ಯಶ್‌ ಹೇಳಿದರು.

Add Zee News as a Preferred Source
TAGS:
Cinema