• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಮನರಂಜನೆ
  • /ಕಿರಿಕ್ ಕೀರ್ತಿಗೆ ಭೀಕರ ಅಪಘಾತ : ಫೋಟೋಸ್‌ ವೈರಲ್‌.. ಹೇಗಿದೆ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಆರೋಗ್ಯ?

ಕಿರಿಕ್ ಕೀರ್ತಿಗೆ ಭೀಕರ ಅಪಘಾತ : ಫೋಟೋಸ್‌ ವೈರಲ್‌.. ಹೇಗಿದೆ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಆರೋಗ್ಯ?

ಬಿಗ್‌ಬಾಸ್ ಕನ್ನಡ ಖ್ಯಾತಿಯ ನಟ ಕಿರಿಕ್ ಕೀರ್ತಿ ಭೀಕರ ಅಪಘಾತಕ್ಕೊಳಗಾಗಿದ್ದಾರೆ. ಈ ಕುರಿತ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಸಲಿಗೆ ಆಗಿದ್ದಾದ್ರೂ ಏನು.. ಈಗ ಅವರ ಆರೋಗ್ಯ ಸ್ಥಿತಿ ಹೇಗಿದೆ.. ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Oct 15, 2026, 09:06 PM IST|Updated: Oct 15, 2026, 09:08 PM IST
joinshare
ಕಿರಿಕ್ ಕೀರ್ತಿಗೆ ಭೀಕರ ಅಪಘಾತ : ಫೋಟೋಸ್‌ ವೈರಲ್‌.. ಹೇಗಿದೆ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಆರೋಗ್ಯ?
Image Credit: kirik keerthi accident photos

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬ್ರಿಟಿಷರ ಕಾಲದಲ್ಲೂ ಟೀಕೆಗಳಿದ್ದವು, ಕೋಪ ಬೇಡ : "ರಾಮಾಯಣ" ಇವೆಂಟ್‌ನಲ್ಲಿ ಯಶ್‌ ಅದ್ಭುತ ಮಾತು

ಬ್ರಿಟಿಷರ ಕಾಲದಲ್ಲೂ ಟೀಕೆಗಳಿದ್ದವು, ಕೋಪ ಬೇಡ : "ರಾಮಾಯಣ" ಇವೆಂಟ್‌ನಲ್ಲಿ ಯಶ್‌ ಅದ್ಭುತ ಮಾತು

2

ಕಿರಿಕ್ ಕೀರ್ತಿಗೆ ಭೀಕರ ಅಪಘಾತ : ಫೋಟೋಸ್‌ ವೈರಲ್‌.. ಹೇಗಿದೆ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಆರೋಗ್ಯ?

3

ಷೇರು ಮಾರುಕಟ್ಟೆ ಸಂಶೋಧನೆಗಾಗಿ ಹೊಸ AI ತಂತ್ರಜ್ಞಾನ : 'ಕ್ವಾಲಾ ಇಂಟೆಲ್' ಬಿಡುಗಡೆ

4

ಪ್ರತಿಭಟನೆ ವೇಳೆ ಶರ್ಟ್‌ ಹಿಡಿದು ಎಳೆದ್ರಾ ರಾಹುಲ್‌ ಗಾಂಧಿ.. ಅಂದು ನಡೆದದ್ದೇನು..? : ಘಟನೆ ಬಿಚ್ಚಿಟ್ಟ ಸಿಎಂ ಡಿಕೆಶಿ

5

KMF ಬ್ರಹ್ಮಾಂಡ ಭ್ರಷ್ಟಾಚಾರ : ರಾಬಕೊವಿ ಹಾಲು ಒಕ್ಕೂಟದಲ್ಲಿ ₹16.5 ಕೋಟಿ ಅವ್ಯವಹಾರ ಆರೋಪ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Kirik Keerthi accident : ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ಹಾಗೂ ನಟ ಕೀರ್ತಿ ಶಂಕರಘಟ್ಟ ಇತ್ತೀಚಿಗೆ ತಮಗಾದ ಭೀಕರ ಅಪಘಾತದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ದೊಡ್ಡ ಅಪಘಾತವೊಂದರಿಂದ ಸುಮಾರು ನಾಲ್ಕೈದು ತಿಂಗಳುಗಳ ಕಾಲ ಸಂಪೂರ್ಣವಾಗಿ ಹಾಸಿಗೆ ಹಿಡಿಯುವಂತಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ, ನಟ ಕೀರ್ತಿ ಶಂಕರಘಟ್ಟ (ಕಿರಿಕ್‌ ಕೀರ್ತಿ) ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಗೆ ಸಂಭವಿಸಿದ ಅಪಘಾತದದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.. "ಒಂದು ಅಪಘಾತ ನನ್ನನ್ನು ಮುಗಿಸೇ ಬಿಟ್ಟಿತ್ತು. ಅದು ಅಪಘಾತಕ್ಕಿಂತ ದೊಡ್ಡ ಆಘಾತವಾಗಿತ್ತು. ಹೊಸ ವರ್ಷದಿಂದ ಹೊಸ ಬದುಕು ಆರಂಭಿಸಬೇಕು ಅಂದುಕೊಂಡಿದ್ದೆ, ಆದರೆ ಅಷ್ಟರಲ್ಲೇ ಈ ಆಘಾತ ಎದುರಾಯಿತು ಎಂದು ತಮ್ಮ ನೋವುನ್ನು ತೋಡಿಕೊಂಡಿದ್ದಾರೆ... ಆದರೆ, ಅಪಘಾತ ಹೇಗಾಯ್ತು.. ಎಲ್ಲಿ ಈ ಘಟನೆ ಸಂಭವಿಸಿತು..? ಎನ್ನುವ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಳ್ಳದ ನಟ, ತಾವು ಈ ದುರಂತದಿಂದ 4 ರಿಂದ 5 ತಿಂಗಳು ಮನೆಯಲ್ಲಿ ಮಲಗಿಕೊಳ್ಳುವಂತಾಯಿತು ಎಂದು ತಿಳಿಸಿದ್ದಾರೆ.  

ಕುಸಿದಿದ್ದ ದೇಹದ ತೂಕ ಮತ್ತು ಆತ್ಮವಿಶ್ವಾಸ
ಅಪಘಾತ ಮತ್ತು ನಿರಂತರ ವಿಶ್ರಾಂತಿಯಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ತೀವ್ರ ನೊಂದಿದ್ದಾಗಿ ಕೀರ್ತಿ ವಿವರಿಸಿದ್ದಾರೆ. "ಮನೆಯಲ್ಲೇ ಉಳಿದುಕೊಂಡಿದ್ದರಿಂದ ನನ್ನಲ್ಲಿದ್ದ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಸಿದಿತ್ತು. ದೇಹದ ತೂಕವು ಕುಸಿದು ಕೇವಲ 55 ಕೆಜಿಗೆ ಇಳಿದಿತ್ತು. ಆದರೂ ನಾನು ಪ್ರಯತ್ನ ಮಾತ್ರ ಬಿಡಲಿಲ್ಲ. ಭಗವಂತ ನನ್ನನ್ನು ಮತ್ತೆ ಎದ್ದು ನಿಲ್ಲಿಸಲು ನಿರ್ಧರಿಸಿದ್ದಂತೆನಿಸುತ್ತದೆ.. ಸದ್ಯ ದೇವರ ಕೃಪೆ ಮತ್ತು ಆಪ್ತರ ಬೆಂಬಲದಿಂದ ತೂಕ ಮತ್ತೆ 60 ಕೆಜಿ ದಾಟಿ ಮುನ್ನುಗ್ಗುತ್ತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಧೈರ್ಯ ತುಂಬಿದ ಅಭಿಮಾನಿಗಳು 
ವೈಯಕ್ತಿಕ ಕಾರಣಗಳಿಂದ ಕಳೆದ ಒಂದೆರಡು ವಾರಗಳಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದ ಕೀರ್ತಿ, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. "ದೇವರು ಮತ್ತು ದೇವರಂತಿರುವ ಕೆಲವರು ಕೈಹಿಡಿದು ಮೇಲೆತ್ತಿದ್ದಾರೆ. ಈಗ ತಾನೇ ಮತ್ತೆ ಎಲ್ಲವೂ ಶುರುವಾಗಿದೆ, ಸಾಗಬೇಕಾದ ದಾರಿ ತುಂಬಾ ಇದೆ. ನಿಮ್ಮೆಲ್ಲರ ಆಶೀರ್ವಾದ ಸದಾ ಹೀಗೇ ಇರಲಿ" ಎಂದು ಮನದಾಳದ ಮಾತುಗಳನ್ನು ಆಡಿದ್ದಾರೆ. ಕೀರ್ತಿ ಅವರ ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಕಮೆಂಟ್‌ಗಳ ಮೂಲಕ ಹಾರೈಕೆ ತಿಳಿಸಿದ್ದಾರೆ..

Add Zee News as a Preferred Source
TAGS:
Cinema