• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 16-10-2026: ಶುಕ್ರವಾರದಂದು ಶೋಭನ ಯೋಗ.. ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ

ದಿನ ಭವಿಷ್ಯ 16-10-2026: ಶುಕ್ರವಾರದಂದು ಶೋಭನ ಯೋಗ.. ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ

Today Horoscope 15th October 2026: 15 ಅಕ್ಟೋಬರ್ 2026ರ ಶುಕ್ರವಾರದಂದು ಶೋಭನ ಯೋಗ ಇರಲಿದ್ದು, ಇಂದಿನ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written ByYashaswini V
Published: Oct 16, 2026, 06:54 AM IST|Updated: Oct 16, 2026, 06:58 AM IST
joinshare
ದಿನ ಭವಿಷ್ಯ 16-10-2026: ಶುಕ್ರವಾರದಂದು ಶೋಭನ ಯೋಗ.. ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

ಶಿಕ್ಷಕರ ಚುನಾವಣೆ.. ಬೆಂಗಳೂರಿನಲ್ಲಿ ಡ್ರೈ ಡೇ ಘೋಷಣೆ, ಹೋಟೆಲ್‌ & ರೆಸ್ಟೋರೆಂಟ್ ಉದ್ಯಮಕ್ಕೆ ₹500 ಕೋಟಿ ನಷ್ಟದ ಆತಂಕ

2

ದಿನ ಭವಿಷ್ಯ 16-10-2026: ಶುಕ್ರವಾರದಂದು ಶೋಭನ ಯೋಗ.. ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ

3

ಪದೇಪದೇ ಲೂಸ್ ಮೋಷನ್ ಆಗಿ ಸುಸ್ತಾಗುತ್ತಿದ್ದೀರಾ? ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

4

Mysuru Dasara 2026: ಜಂಬೂಸವಾರಿಗೆ 12 ಆನೆಗಳು ಫೈನಲ್! ಯಾವ್ಯಾವ ಆನೆಗೆ ಯಾವೆಲ್ಲಾ ಜವಾಬ್ದಾರಿ?

5

ಜನರೇ ಅಲರ್ಟ್‌... ರಾಜ್ಯದ ಈ ಜಿಲ್ಲೆಗಳಲ್ಲಿ ಅಕ್ಟೋಬರ್ 18ರವರೆಗೆ ಮಳೆ ಅಲರ್ಟ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Shukravara 16th October 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಅಶ್ವಯುಜ ಮಾಸ, ಶುಕ್ಲ ಪಕ್ಷ, ಷಷ್ಠಿ ತಿಥಿ, ಶುಕ್ರವಾರದ ಈ ದಿನ ಜ್ಯೇಷ್ಠಾ ನಕ್ಷತ್ರ, ಶೋಭನ ಯೋಗ, ಕೌಲವ ಕರಣ ಇರಲಿದೆ.

ಮೇಷ ರಾಶಿ:
ಶುಕ್ರವಾರದಂದು ಶೋಭನ ಯೋಗವು ಮೇಷ ರಾಶಿಯ ಜನರಿಗೆ ಹಣಕಾಸಿನ ಹರಿವನ್ನು ಹೆಚ್ಚಿಸಲಿದೆ. ವ್ಯವಹಾರಸ್ಥರಿಗೆ ವಿದೇಶಿ ಸಂಪನ್ಮೂಲಗಳಿಂದ ಲಾಭ ಸಿಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೌಟುಂಬಿಕ ಸುಖ ಸಂತೋಷ ಹೆಚ್ಚಾಗಲಿದೆ. ಪ್ರೇಮ ಜೀವನದವೂ ಸಂತೋಷದಾಯಕವಾಗಿರಲಿದೆ.

ವೃಷಭ ರಾಶಿ: 
ಶುಕ್ರವಾರದಂದು ಶೋಭನ ಯೋಗವು ವೃಷಭ ರಾಶಿಯ ಜನರಿಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದೆ. ಇಂದು ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಬಹುದು. ವ್ಯವಹಾರಸ್ಥರು ನಿಮ್ಮ ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಪ್ರತಿಕೂಲ ವಾತಾವರಣ ಇರಬಹುದು. ಸಂಗಾತಿಯ ಭಾವನೆಗಳ ಬಗ್ಗೆ ಕಾಳಜಿ ವಹಿಸಿ.

ಮಿಥುನ ರಾಶಿ: 
ಮಿಥುನ ರಾಶಿಯ ಜನರಿಗೆ ಶೋಭನ ಯೋಗವು ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸಲಿದೆ. ಕುಟುಂಬದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಮಕ್ಕಳ ಬಗ್ಗೆ ಚಿಂತೆ ನಿಮ್ಮನ್ನು ಕಾಡಬಹುದು. ಪ್ರಮುಖ ವ್ಯವಹಾರಗಳಲ್ಲಿ ಸಂಬಂಧಿಕರ ಬೆಂಬಲ ಸಿಗಲಿದ್ದು, ಸಮಸ್ಯೆಗಳು ಸುಗಮವಾಗಿ ಬಗೆಹರಿಯಲಿವೆ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯ ಜನರಿಗೆ ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನವಾಗಿರಲಿದೆ. ಶೋಭನ ಯೋಗವು ಇಂದು ನಿಮಗೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭವನ್ನು ನೀಡಲಿದೆ. ಇದರೊಂದಿಗೆ ಅನಾವಶ್ಯಕ ಖರ್ಚುಗಳು ನಿಮ್ಮನ್ನು ಬಾಧಿಸಬಹುದು. ಈ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.

ಸಿಂಹ ರಾಶಿ:
ಶೋಭನ ಯೋಗವು ಸಿಂಹ ರಾಶಿಯ ಜನರಿಗೆ ಶುಭ ದಿನವೆಂದು ಸಾಬೀತುಪಡಿಸಲಿದೆ.  ಕುಟುಂಬ ಜೀವನದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ. ಪ್ರೇಮ ಜೀವನದಲ್ಲಿ ಇದ್ದ ಸಮಸ್ಯೆಗಳು ಬಗೆಹರಿಯಲಿವೆ. ಮಕ್ಕಳಿಂದ ಶುಭ ಸಮಾಚಾರವನ್ನು ಕಾಣುವಿರಿ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗುವ ನಿರೀಕ್ಷೆ ಇದೆ.

ಕನ್ಯಾ ರಾಶಿ:
ಶುಕ್ರವಾರದಂದು ಶೋಭನ ಯೋಗವು ಕನ್ಯಾ ರಾಶಿಯ ಜನರಿಗೂ ಕೂಡ ಉತ್ತಮ ಫಲಗಳನ್ನು ನೀಡಲಿದೆ. ಇಂದು ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ. ನಿಮ್ಮ ಕೆಲಸದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಕುಟುಂಬ ಜೀವನದಲ್ಲಿ ಸಂತೋಷದಾಯಕ ವಾತಾವರಣ ಇರಲಿದೆ.

ತುಲಾ ರಾಶಿ: 
ಶುಕ್ರವಾರದಂದು ಶೋಭನ ಯೋಗ ಪ್ರಭಾವದಿಂದ ಇಂದು ನಿಮ್ಮ ಖರ್ಚುಗಳು ಅಧಿಕವಾಗಬಹುದು. ಮಾಡುವ ಕೆಲಸದಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಗರೂಕರಾಗಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳು ಸಿಗಬಹುದು.

ವೃಶ್ಚಿಕ ರಾಶಿ:
ಶುಕ್ರವಾರದಂದು ಶೋಭನ ಯೋಗವು ವೃಶ್ಚಿಕ ರಾಶಿಯ ಜನರಿಗೆ ಇಂದು ಎಲ್ಲಾ ರೀತಿಯಲ್ಲೂ ಸಕಾರಾತ್ಮಕ ಫಲಿತಾಂಶಗಳು ಸಿಗಲಿವೆ. ಕಚೇರಿಯಲ್ಲಿ ಉದ್ಯೋಗಸ್ಥರಿಗೆ ಸಮಯ ಅನುಕೂಲಕರವಾಗಿದೆ. ವ್ಯಾಪಾರ ಒಪ್ಪಂದಗಳು, ಹೊಸ ಪಾಲುದಾರಿಕೆ ವ್ಯವಹಾರಗಳು ಲಾಭದಾಯಕವಾಗಿರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.

ಧನು ರಾಶಿ:
ಶುಕ್ರವಾರದಂದು ಶೋಭನ ಯೋಗದ ಪ್ರಭಾವದಿಂದ ಧನು ರಾಶಿಯ ಜನರಿಗೆ ಇಂದು ಅನಿರೀಕ್ಷಿತ ಖರ್ಚುಗಳು ಹೆಚ್ಚಾಗಬಹುದು. ಹೊಸ ವ್ಯವಹಾರಗಳಲ್ಲಿ ಕೈ ಹಾಕುವಾಗ ಜಾಗರೂಕರಾಗಿ ಹೆಜ್ಜೆ ಇಡುವುದು ಒಳ್ಳೆಯದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬ ಜೀವನದಲ್ಲಿ ಸಮಸ್ಯೆಗಳು ಬಗೆಹರಿಯಬಹುದು.

ಮಕರ ರಾಶಿ:
ಮಕರ ರಾಶಿಯವರಿಗೆ ಶೋಭನ ಯೋಗವು ಫಲಪ್ರದವಾಗಿದ್ದು ಪಾಲುದಾರಿಕೆ ವ್ಯವಹಾರದಲ್ಲಿ ಭಾರೀ ಲಾಭವನ್ನು ನೀಡಲಿದೆ. ಮಾನಸಿಕ ಶಾಂತಿಗಾಗಿ ಧ್ಯಾನ ಮಾಡುವುದು ಒಳ್ಳೆಯದು. ಆರೋಗ್ಯ ಸುಧಾರಣೆಗಾಗಿ ಆಹಾರದ ಬಗ್ಗೆ ಕಾಳಜಿವಹಿಸಿ. ಕುಟುಂಬ ಜೀವನದಲ್ಲಿ ಅನುಕೂಲಕರ ವಾತಾವರಣ ಇರಲಿದೆ.

ಕುಂಭ ರಾಶಿ:
ಶುಕ್ರವಾರದಂದು ಶೋಭನ ಯೋಗವು ಕುಂಭ ರಾಶಿಯವರಿಗೆ ಇಂದು ಅನುಕೂಲಕರವಾಗಿರಲಿದೆ. ಈ ದಿನ ಹಣಕಾಸಿನ ಪರಿಸ್ಥಿತಿ ಸ್ವಲ್ಪ ದುರ್ಬಲವಾಗಿರಬಹುದು. ನಿಮ್ಮ ಮಾತಿನ ಮೇಲೆ ಸಂಯಮವನ್ನು ಕಾಪಾಡಿಕೊಳ್ಳಿ. ಕುಟುಂಬ ಜೀವನದಲ್ಲಿ ಪ್ರತಿಕೂಲ ವಾತಾವರಣ ಇರಲಿದೆ.

ಮೀನ ರಾಶಿ:
ಮೀನ ರಾಶಿಯ ಜನರಿಗೆ ಶುಕ್ರವಾರದಂದು ಶೋಭನ ಯೋಗವು ಫಲಪ್ರದವಾಗಿದ್ದು, ಸಮಾಜದಲ್ಲಿ ನಿಮ್ಮ ಕೀರ್ತಿ, ಗೌರವ ಹೆಚ್ಚಾಗಲಿದೆ. ಕುಟುಂಬಸ್ಥರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಸಂಗಾತಿಯೊಂದಿಗೆ ಹೊರ ಹೋಗಲು ಯೋಜಿಸಬಹುದು. ಸಂಬಂಧಿಕರಿಂದ ಸಿಹಿ ಸಮಾಚಾರ ಕೇಳುವಿರಿ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Dina Bhavishya
Horoscope Today