ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಮತ್ತು ಗುರು ಲಗ್ನದ ಮನೆಯಲ್ಲಿದ್ದಾಗ ದಿಗ್ಬಲ ಯೋಗ ನಿರ್ಮಾಣವಾಗುತ್ತದೆ. ನವೆಂಬರ್‌ನಲ್ಲಿ ಸೃಷ್ಟಿಯಾಗಲಿರುವ ದಿಗ್ಬಲ ಯೋಗದ ಪ್ರಭಾವದಿಂದ 6 ರಾಶಿಯವರ ಲಕ್ ಬದಲಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ..
1/6
ಕರ್ಕಾಟಕ ರಾಶಿ
ದಿಗ್ಬಲ ಯೋಗವು ಕರ್ಕಾಟಕ ರಾಶಿಯ ಜನರಿಗೆ ಭಾಗ್ಯೋದಯದ ಸಮಯ ಎಂದು ಸಾಬೀತುಪಡಿಸಲಿದ್ದು, ಈ ಸಮಯದಲ್ಲಿ ಆದಾಯದಲ್ಲಿ ಭಾರೀ ಏರಿಕೆಯನ್ನು ಕಾಣಬಹುದಾಗಿದೆ. ಈ ಅವಧಿಯಲ್ಲಿ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗುವ ನಿರೀಕ್ಷೆ ಇದ್ದು, ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ.
2/6
ಸಿಂಹ ರಾಶಿ
ದಿಗ್ಬಲ ಯೋಗದ ಪ್ರಭಾವದಿಂದ ಸಿಂಹ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರಲಿದ್ದು ಈ ಸಮಯದಲ್ಲಿ ಕುಟುಂಬದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಸ್ವಂತ ಮನೆ ಕಟ್ಟುವ ನಿಮ್ಮ ಪ್ರಯತ್ನ ಕೈ ಗೂಡಲಿದ್ದು ಆಸ್ತಿ ಸಂಬಂಧಿತ ವಿವಾದಗಳು ಸುಗಮವಾಗಿ ಬಗೆಹರಿಯಲಿವೆ. ಸ್ಥಗಿತಗೊಂಡಿದ್ದ ಮದುವೆ ಮಾತುಕತೆಗಳಲ್ಲಿ ಧನಾತ್ಮಕತೆಯನ್ನು ಕಾಣಬಹುದು.
3/6
ಕನ್ಯಾ ರಾಶಿ
ದಿಗ್ಬಲ ಯೋಗದಿಂದ ಕನ್ಯಾ ರಾಶಿಯ ಜನರಿಗೆ ಅನಿರೀಕ್ಷಿತ ಆದಾಯದ ಮೂಲಗಳು ವೃದ್ಧಿಯಾಗಲಿದ್ದು ಸಾಕ್ಷಾತ್ ಕುಬೇರನ ಸಂಪತ್ತೇ ನಿಮ್ಮ ಕೈ ಸೇರುವ ನಿರೀಕ್ಷೆ ಇದೆ. ಕೆಲಸದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆಯನ್ನು ಪಡೆಯುವಿರಿ. ಹೊಸ ಸಂಪರ್ಕಗಳು ನಿಮ್ಮ ವ್ಯವಹಾರ ವಿಸ್ತರಣೆಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
4/6
ತುಲಾ ರಾಶಿ
ದಿಗ್ಬಲ ಯೋಗವು ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸೂಚನೆಗಳನ್ನು ನೀಡದಲಿಎ. ನಿರುದ್ಯೋಗಿಗಳಿಗೆ ನೀವು ಪ್ರಯತ್ನಿಸುತ್ತಿದ್ದ ಕೆಲಸಗಳು ಕೈಗೂಡಲಿವೆ. ವ್ಯಾಪಾರಸ್ಥರಿಗೆ ಅನುಕೂಲಕರ ಸಮಯ. ಮನೆಯಲ್ಲಿ ಮದುವೆಯಂತಹ ಮಂಗಳ ಕಾರ್ಯಗಳ ಬಗ್ಗೆ ಶುಭ ಸಮಾಚಾರವನ್ನು ನಿರೀಕ್ಷಿಸಬಹುದು. ಆದಾಯದಲ್ಲಿ ಗಮನಾರ್ಹ ಹೆಚ್ಚಳವು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲಿದೆ.
5/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಅದೃಷ್ಟದ ಮನೆಯಲ್ಲಿ ದಿಗ್ಬಲ ಯೋಗವು ವೃತ್ತಿ ಬದುಕಿನಲ್ಲಿ ನಿಮ್ಮ ಶತ್ರುಗಳ ವಿರುದ್ಧ ಜಯವನ್ನು ನೀಡಲಿದೆ. ಕೆಲಸದಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗಲಿದೆ. ವ್ಯವಹಾರಸ್ಥರಿಗೆ ನಿಮ್ಮ ಪ್ರಯತ್ನಗಳಿಗೆ ಶುಭ ಫಲಗಳು ಸಿಗುವ ಸುವರ್ಣ ಸಮಯ ಇದಾಗಿದೆ. ಯಾವುದೇ ಕ್ಷೇತ್ರದಲ್ಲಿ ತ್ವರಿತ ಪ್ರಗತಿಯನ್ನು ಕಾಣುವಿರಿ. ಕುಬೇರನ ಖಜಾನೆಯೇ ನಿಮ್ಮ ಕೈ ಸೇರುವ ನಿರೀಕ್ಷೆ ಇದೆ.
6/6
ಮಕರ ರಾಶಿ
ದಿಗ್ಬಲ ಯೋಗ ಪ್ರಭಾವದಿಂದ ಮಕರ ರಾಶಿಯವರಿಗೂ ಅದೃಷ್ಟ ಬದಲಾಗಲಿದೆ. ವೈವಾಹಿಕ ಜೀವನದಲ್ಲಿ ಇದ್ದ ಸಮಸ್ಯೆಗಳು ಸುಸೂತ್ರವಾಗಿ ಬಗೆಹರಿಯಲಿವೆ. ಕೆಲಸದಲ್ಲಿ ಏಳ್ಗೆಯ ಜೊತೆಗೆ ಸಮಾಜದಲ್ಲಿ ನಿಮ್ಮ ಸ್ಥಾನಮಾನವೂ ಹೆಚ್ಚಾಗಲಿದೆ. ವಿದೇಶ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದಾಗಿದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.