Darshan case big twist witness puneeth Inquiry in court: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆಯಲಿದೆ. ಪ್ರಕರಣದ ಐ ವಿಟ್ನೆಸ್ ಆಗಿರುವ ಪುನೀತ್‌ಗೆ ಇಂದು ಎಸ್‌ಪಿಪಿ ಪ್ರಸನ್ನ ಕುಮಾರ್ ವಿಚಾರಣೆ
ನಡೆಸಲಿದ್ದಾರೆ.
ವಿಚಾರಣೆ ವೇಳೆ ಗೊತ್ತಿಲ್ಲ, ನೋಡಿಲ್ಲ, ನೆನಪಿಲ್ಲ ಎಂದು ಹೇಳಿಕೆ ನೀಡಿದ್ದ ಪುನೀತ್ ಇದೀಗ ಪ್ರತಿಕೂಲ ಸಾಕ್ಷಿಯಾಗಿದ್ದಾರೆ. ಹೀಗಾಗಿ ಇಂದಿನ ವಿಚಾರಣೆ ಸಾಕಷ್ಟು ಕುತೂಹಲ ಮೂಡಿಸಿದೆ.ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿ ಪುನೀತ್ ವಿಚಾರಣೆ ಇಂದು ನಿರ್ಣಾಯಕ ಹಂತ ತಲುಪಲಿದೆ. ಈ ಹಿಂದೆ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಕೇಳಿದ ಹಲವು ಪ್ರಶ್ನೆಗಳಿಗೆ ಗೊತ್ತಿಲ್ಲ, ನೋಡಿಲ್ಲ, ಜ್ಞಾಪಕಕ್ಕೆ ಬರುತ್ತಿಲ್ಲ ಎಂದು ಪುನೀತ್ ಉತ್ತರಿಸಿದ್ದರು.
164ರ ಹೇಳಿಕೆ ಮುಂದಿಟ್ಟುಕೊಂಡು ಪ್ರಶ್ನೆ
ಇದರಿಂದಾಗಿ ಪುನೀತ್ ಅವರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.ಇದೀಗ ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ಇಂದು ಪ್ರಾಸಿಕ್ಯೂಷನ್ ಪರವಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರಿಂದಲೇ ಪುನೀತ್‌ಗೆ ಪಾಟೀಸವಾಲ್ ನಡೆಯಲಿದೆ.ಅಷ್ಟೇ ಅಲ್ಲ.. ಪುನೀತ್ ಈ ಹಿಂದೆ ನೀಡಿದ್ದ 164ರ ಹೇಳಿಕೆಯ ದಾಖಲೆಯನ್ನು ತರಿಸಿಕೊಂಡು ಅದರ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯಿದೆ. ಹಿಂದಿನ ಹೇಳಿಕೆ ಹಾಗೂ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಗಳ ನಡುವಿನ ವ್ಯತ್ಯಾಸದ ಬಗ್ಗೆ ವಿಚಾರಣೆ ನಡೆಯಲಿದೆ.
ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಪುನೀತ್ ಅವರ ಇಂದಿನ ವಿಚಾರಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಎಸ್‌ಪಿಪಿ ಕೇಳುವ ಪ್ರಶ್ನೆಗಳಿಗೆ ಪುನೀತ್ ಯಾವ ರೀತಿ ಉತ್ತರಿಸುತ್ತಾರೆ? ಅವರ ಹಿಂದಿನ ಹೇಳಿಕೆಗಳು ಪ್ರಕರಣದ ವಿಚಾರಣೆಗೆ ಯಾವ ತಿರುವು ನೀಡಲಿವೆ ಅನ್ನೋ ಕುತೂಹಲ ಇದೀಗ ಮೂಡಿದೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್.. ದರ್ಶನ್‌ಗೆ ಮತ್ತೊಂದು ಸಂಕಷ್ಟ!
ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಕಷ್ಟಗಳ ಸರಮಾಲೆಯೇ ಎದುರಾಗ್ತಿದೆ. ಕೋರ್ಟ್‌ನಲ್ಲಿ ಸಾಕ್ಷಿಗಳ ವಿಚಾರಣೆ ಮುಂದುವರಿದಿದ್ದು, ಕೆಲ ಸಾಕ್ಷಿಗಳ ಹೇಳಿಕೆಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಇನ್ನು ಪ್ರಕರಣದ ಪ್ರಮುಖ ಬೆಳವಣಿಗೆಗಳೇನು? ದರ್ಶನ್‌ಗೆ ಎದುರಾಗಿರುವ ಹೊಸ ಸವಾಲುಗಳೇನು? ನೋಡೋಣ ಈ ವರದಿ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. 2024ರ ಜೂನ್‌ನಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಸದ್ಯ ಬೆಂಗಳೂರಿನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.ಪ್ರಕರಣದ ವಿಚಾರಣೆ ವೇಳೆ ಸಾಕ್ಷಿಗಳ ಹೇಳಿಕೆಗಳು ಕುತೂಹಲ ಮೂಡಿಸಿವೆ. ಅಕ್ಟೋಬರ್ 28ರಂದು ಸಾಕ್ಷಿ ಪುನೀತ್ ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷಿ ಎಂದು ಘೋಷಿಸಲ್ಪಟ್ಟಿದ್ದಾರೆ. ಅಕ್ಟೋಬರ್ 29ರಂದು ಮತ್ತೊಬ್ಬ ಸಾಕ್ಷಿ ಆರೋಪಿಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಪ್ರಕರಣದ ವಿಚಾರಣೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಇನ್ನು ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಅಪ್ರೂವರ್ ಆಗಿರುವುದು ಕೂಡ ಪ್ರಮುಖ ಬೆಳವಣಿಗೆ. ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯಲ್ಲಿ ದರ್ಶನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದಿದ್ದ ಸಂದರ್ಭದಲ್ಲಿ ದರ್ಶನ್ ಕೂಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇವು ನ್ಯಾಯಾಲಯದಲ್ಲಿ ಪರಿಶೀಲನೆಗೆ ಒಳಪಡಬೇಕಾದ ಆರೋಪಗಳಾಗಿವೆ.
ದರ್ಶನ್‌ಗೆ ಮುಂದುವರಿದ ಸಂಕಷ್ಟ
ಒಂದೆಡೆ ಸಾಕ್ಷಿಗಳ ವಿಚಾರಣೆ, ಮತ್ತೊಂದೆಡೆ ಅಪ್ರೂವರ್ ಹೇಳಿಕೆ. ಹೀಗೆ ರೇಣುಕಾಸ್ವಾಮಿ ಕೇಸ್‌ನಲ್ಲಿ ಪ್ರತಿದಿನವೂ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಅಕ್ಟೋಬರ್ 28ರಂದು ದರ್ಶನ್ ವೈದ್ಯಕೀಯ ಚಿಕಿತ್ಸೆಗಾಗಿ ಮನವಿ ಸಲ್ಲಿಸಿರುವ ಬಗ್ಗೆಯೂ ವರದಿಯಾಗಿದೆ.ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತದತ್ತ ಸಾಗುತ್ತಿದೆ. ಸಾಕ್ಷಿಗಳ ಹೇಳಿಕೆ, ಅಪ್ರೂವರ್ ವಿಚಾರಣೆ ಹಾಗೂ ಕೋರ್ಟ್‌ನ ಮುಂದಿನ ನಡೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಂತಿಮವಾಗಿ ನ್ಯಾಯಾಲಯದ ತೀರ್ಪು ಏನಾಗಲಿದೆ ಅನ್ನೋ ಕುತೂಹಲ ಮಾತ್ರ ಹೆಚ್ಚಾಗಿದೆ.
ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಪುನೀತ್ ಅವರ ಇಂದಿನ ವಿಚಾರಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಎಸ್‌ಪಿಪಿ ಕೇಳುವ ಪ್ರಶ್ನೆಗಳಿಗೆ ಪುನೀತ್ ಯಾವ ರೀತಿ ಉತ್ತರಿಸುತ್ತಾರೆ? ಅವರ ಹಿಂದಿನ ಹೇಳಿಕೆಗಳು ಪ್ರಕರಣದ ವಿಚಾರಣೆಗೆ ಯಾವ ತಿರುವು ನೀಡಲಿವೆ ಅನ್ನೋ ಕುತೂಹಲ ಇದೀಗ ಮೂಡಿದೆ.