ಮೊದಲೇ ಹಣದುಬ್ಬರದಿಂದ ತತ್ತರಿಸಿರುವ ಜನರಿಗೆ ಇದೀಗ ನಂದಿನ ಹಾಲಿನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಿದೆ. ಆದರೂ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಮ್ಮಂತೆ ರೈತರೂ ಕೂಡ ಜೀವನ ನಡೆಸುವುದು ಕಷ್ಟಕರವಾಗಿದ್ದು, ಇತ್ತೀಚಿನ ಹಾಲಿನ ದರ ಏರಿಕೆಯಿಂದ ನಮ್ಮ ರೈತಾಪಿ ವರ್ಗಕ್ಕೆ ಆರ್ಥಿಕ ಬಲ ಸಿಗಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆ. ಆದರೆ, ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸಲು ಅನುಮತಿ ನೀಡಿದೆ. ಕೆಎಂಎಫ್ ನಂದಿನಿಯ ಸಾಮಾನ್ಯ ಹಾಲಿನ ದರವನ್ನು ₹8 ಹೆಚ್ಚಿಸಿದ್ದು, ಇತ್ತ ಹೆಚ್ಚು ಫ್ಯಾಟ್ ಹೊಂದಿರುವ ಶುಭಂ ಮತ್ತು ಸಮೃದ್ಧಿ ಹಾಲಿನ ಬೆಲೆಗಳನ್ನು ಪ್ರತಿ ಲೀಟರ್‌ಗೆ ₹12 ಗೆ ಏರಿಸಿದೆ.
ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್‌ಗೆ 8 ರೂ. ಮಾತ್ರ ಹೆಚ್ಚಿಸಿದ್ದರೂ, ಕೆಎಂಎಫ್ ಕೆಲವು ಮಾದರಿಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹12 ಹೆಚ್ಚಿಸಿದೆ. ಹಾಗಾಗಿ, ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇದನ್ನು ಬಗೆಹರಿಸಲು ಹಾಲಿನ ಉತ್ಪನ್ನಗಳಲ್ಲಿನ ಬೆಲೆ ವ್ಯತ್ಯಾಸಕ್ಕೆ ಕಾರಣ ಏನೆಂಬುದನ್ನು ತಿಳಿಯುವುದು ಅಗತ್ಯವಾಗಿದೆ.
ಹಾಲಿನ ಬೆಲೆ ವ್ಯತ್ಯಾಸ:
ವಾಸ್ತವವಾಗಿ, ಕೆಎಂಎಫ್ ಸಾಮಾನ್ಯ ನಂದಿನಿ ಹಾಲು ಎಂದರೆ ನೀಲಿ ಬಣ್ಣದ ಪ್ಯಾಕೆಟ್‌ನಲ್ಲಿ ಬರುವ ಟೋನ್ಡ್ ಹಾಲಿನ ಬೆಲೆಯನ್ನು ಸರ್ಕಾರದ ಅನುಮತಿಯಂತೆ ಪ್ರತಿ ಲೀಟರ್‌ಗೆ ₹8 ಹೆಚ್ಚಿಸಿದೆ. ಇದೇ ವೇಳೆ, ಹೆಚ್ಚು ಫ್ಯಾಟ್ ಜೊತೆಗೆ ಬರುವ ನಂದಿನಿಯ ಇನ್ನೆರಡು ಬ್ರಾಂಡ್ ಹಾಲುಗಳಾದ ಶುಭಂ ಮತ್ತು ಸಮೃದ್ಧಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ₹12 ಹೆಚ್ಚಿಸಿದೆ. ಇದೇ ಸಂದರ್ಭದಲ್ಲಿ ನಂದಿನ ಮೊಸರಿನ ಬೆಲೆಯನ್ನೂ ಕೂಡ 14 ರೂ.ಗೆ ಏರಿಕೆ ಮಾಡಿದೆ.
ಹಾಲಿನ ದರ ಏರಿಕೆ ಮಾನದಂಡ:
ಹಾಲು ಒಕ್ಕೂಟಗಳ ನಿಯಮಗಳ ಪ್ರಕಾರ, ಹಾಲಿನ ದರ ಏರಿಕೆಯನ್ನು ಕೇವಲ ಲೀಟರ್ ಪ್ರಮಾಣದಲ್ಲಿ ಮಾತ್ರ ಪರಿಷ್ಕರಿಸಲಾಗುವುದಿಲ್ಲ. ಹಾಲಿನ ದರ ಪರಿಷ್ಕರಣೆಗೆ ಅದರಲ್ಲಿರುವ ಜಿಡ್ಡಿನ ಅಂಶವಾದ ಫ್ಯಾಟ್ ಮತ್ತು ಎಸ್‌ಎನ್‌ಎಫ್ ಎಂದರೆ ಹಾಲಿನಲ್ಲಿರುವ ಘನವಸ್ತು ಪ್ರಮಾಣವನ್ನು ಆಧರಿಸಿ ಬೆಲೆ ನಿರ್ಧರಿಸಲಾಗುತ್ತದೆ. ಈ ಪದ್ಧತಿಯೇ ಹಾಲಿನ ದರ ಏರಿಕೆಯಲ್ಲಿನ ವ್ಯತ್ಯಾಸಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.
ಲೀಟರ್ ಹಾಲಿನ ಬೆಲೆ ₹12 ಹೆಚ್ಚಾಗಲು ಏನು ಕಾರಣ?
ನಂದಿನಿ ನೀಲಿ ಪ್ಯಾಕೆಟ್ ಹಾಲಿನಲ್ಲಿ ಸುಮಾರು 3.0% ಫ್ಯಾಟ್ ಇರುತ್ತದೆ ಅದುವೇ ಸಾಮಾನ್ಯ ಟೋನ್ಡ್ ಮಿಲ್ಕ್. ಹಾಗಾಗಿ, ಇದರ ಬೆಲೆ ಸರ್ಕಾರದ ಅನುಮತಿಯಂತೆ ಕೇವಲ ₹8 ಏರಿಕೆ ಆಗಿದೆ. ಆದರೆ, ಶುಭಂ ಮತ್ತು ಸಮೃದ್ಧಿ ಹಾಲಿನಲ್ಲಿ 4.5 ರಿಂದ 6.0% ವರೆಗೆ ಫ್ಯಾಟ್ ಇರಲಿದೆ. ಇದುವೇ ಹೈ ಫ್ಯಾಟ್ ಹಾಲು. ಹಾಗಾಗೀ ಈ ಹಾಲಿನ ದರಗಳನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ ₹12 ಏರಿಕೆ ಮಾಡಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರ, ಡೈರಿಗಳಲ್ಲಿ ಹಾಲಿನ ಬೆಲೆಯನ್ನು ಕೇವಲ ಲೀಟರ್ ಲೆಕ್ಕದಲ್ಲಿ ನಿಗದಿಪಡಿಸುವುದಿಲ್ಲ. ದರ ಪರಿಷ್ಕರಣೆಯು ಹಾಲಿನ ಗುಣಮಟ್ಟ, ಹಾಲಿನಲ್ಲಿರುವ ಫ್ಯಾಟ್ ಹಾಗೂ ಎಸ್‌ಎನ್‌ಎಫ್ ಪ್ರಮಾಣವನ್ನು ಆಧರಿಸಿರುತ್ತದೆ. ಹಾಗಾಗಿಯೇ, ಅಧಿಯ ಫ್ಯಾಟ್ ಯುಕ್ತ ಹಾಲು ಪೂರೈಸುವ ರೈತರಿಗೆ ಸಿಗುವ ಆದಾಯವೂ ಹೆಚ್ಚು ಎಂದು ಹೇಳಿದೆ.