• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಜ್ಯೋತಿಷ್ಯ
  • /ದಿನ ಭವಿಷ್ಯ 02-11-2026: ಸೋಮವಾರದಂದು ಶುಭ ಯೋಗ, ಯಾವ ರಾಶಿಗೆ ಏನು ಫಲ?

ದಿನ ಭವಿಷ್ಯ 02-11-2026: ಸೋಮವಾರದಂದು ಶುಭ ಯೋಗ, ಯಾವ ರಾಶಿಗೆ ಏನು ಫಲ?

Today Horoscope 31st October 2026: 02 ನವೆಂಬರ್ 2026ರಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Written ByYashaswini V
Published: Nov 02, 2026, 06:25 AM IST|Updated: Nov 02, 2026, 07:42 AM IST
joinshare
ದಿನ ಭವಿಷ್ಯ 02-11-2026: ಸೋಮವಾರದಂದು ಶುಭ ಯೋಗ, ಯಾವ ರಾಶಿಗೆ ಏನು ಫಲ?

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ನಂದಿನಿ ಸಮೃದ್ಧಿ ಹಾಲಿನ ದರ ಲೀಟರ್‌ಗೆ 12 ರೂ. ಏರಿಕೆ! ಬೆಲೆ ಹೆಚ್ಚಳದ ಆಧಾರ, ಮಾನದಂಡಗಳೇನು?

ನಂದಿನಿ ಸಮೃದ್ಧಿ ಹಾಲಿನ ದರ ಲೀಟರ್‌ಗೆ 12 ರೂ. ಏರಿಕೆ! ಬೆಲೆ ಹೆಚ್ಚಳದ ಆಧಾರ, ಮಾನದಂಡಗಳೇನು?

2

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ!

3

ದಿನ ಭವಿಷ್ಯ 02-11-2026: ಸೋಮವಾರದಂದು ಶುಭ ಯೋಗ, ಯಾವ ರಾಶಿಗೆ ಏನು ಫಲ?

4

HMTಯಿಂದ 'ಕನ್ನಡಿಗ' ವಾಚ್ ಅನಾವರಣ : ಮತ್ತೆ ಮರುಕಳಿಸಿತು ಹಳೆಯ ವೈಭವ

5

ರಾಜ್ಯಕ್ಕೆ ಮಹಾ ಚಂಡಮಾರುತ "ಮುರುಸು" ಭೀತಿ: ಮುಂದಿನ 5 ದಿನ ಈ ಭಾಗಕ್ಕೆ ಭಾರೀ ಮಳೆ ಮುನ್ಸೂಚನೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Somavara 02nd November 2026 Dina Bhavishya In Kannada: ಶ್ರೀ ಶಾಲಿವಾಹನ ಶಕೆ 1948, ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಸೋಮವಾರದ ಈ ದಿನ ಆಶ್ಲೇಷಾ ನಕ್ಷತ್ರ, ಶುಭ ಯೋಗ, ತೈತಿಲ ಕರಣ ಇರಲಿದೆ.

ಮೇಷ ರಾಶಿ:
ಇಂದು ಮೇಷ ರಾಶಿಯ ಜನರಿಗೆ ಮಿಶ್ರ ಫಲಗಳು ಸಿಗುವ ಸೂಚನೆಗಳಿವೆ. ದಿನವಿಡೀ ಆಲಸ್ಯ ನಿಮ್ಮನ್ನು ಕಾಡಲಿದ್ದು, ಮಾಡುವ ಕೆಲಸಗಳ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ಉದ್ಯೋಗಸ್ಥರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಿಗಲಿದೆ. ಕುಟುಂಬದವರೊಂದಿಗೆ ಸಮಯ ಕಳೆಯುವ ಅವಕಾಶಗಳು ಸಿಗಲಿವೆ.

ವೃಷಭ ರಾಶಿ: 
ವೃಷಭ ರಾಶಿಯವರಿಗೆ ಇಂದು ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ಕುಟುಂಬ ಜೀವನದಲ್ಲಿ ವಾತಾವರಣ ಸಂತೋಷದಿಂದ ಕೂಡಿರಲಿದೆ. ಉದ್ಯಮಿಗಳಿಗೆ ಲಾಭಾಂಶಗಳು ಹೆಚ್ಚಾಗಲಿವೆ. ಆದರೆ, ಇಂದು ಯಾವುದೇ ರೀತಿಯ ಹೂಡಿಕೆಗಳಿಗೆ ಕೈ ಹಾಕದೆ ಇರುವುದು ಒಳ್ಳೆಯದು.

ಮಿಥುನ ರಾಶಿ: 
ಮಿಥುನ ರಾಶಿಯವರಿಗೆ ಇಂದಿನ ದಿನವು ತುಂಬಾ ಉತ್ಸಾಹಭರಿತವಾಗಿರಲಿದೆ. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆಗೆ ಮನ್ನಣೆ ಸಿಗಲಿದೆ. ಸಹೋದ್ಯೋಗಿಗಳೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ. ಆರೋಗ್ಯವೂ ಸುಧಾರಣೆಗೊಳ್ಳಲಿದೆ. ಕುಟುಂಬದಲ್ಲಿ ಸಂತೋಷ ಮನೆಮಾಡಲಿದೆ.

ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಇಂದು ವಿಶೇಷವಾಗಿ ಲಾಭದಾಯಕವಾದ ದಿನವಾಗಿದೆ. ಕೆಲಸದಲ್ಲಿ ಉತ್ತಮ ಫಲ ಸಿಗುವ ನಿರೀಕ್ಷೆ ಇದೆ. ಕುಟುಂಬ ವಾತಾವರಣವು ಸಂತೋಷದಿಂದ ಕೂಡಿರಲಿದೆ. ಉದ್ಯಮಿಗಳಿಗೆ ಲಾಭಾಂಶಗಳು ಹೆಚ್ಚಾಗಲಿವೆ. ಹಣಕಾಸಿನ ಪರಿಸ್ಥಿತಿಯೂ ಬಲಗೊಳ್ಳಲಿದೆ. ಆರೋಗ್ಯದ ಬಗ್ಗೆ ನಿಗಾವಹಿಸಿ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಇಂದು ಉತ್ತಮ ಫಲಗಳು ಸಿಗಲಿವೆ. ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಲ್ಲೂ ಸುಧಾರಣೆಯನ್ನು ಕಾಣುವಿರಿ. ನಿಮ್ಮ ಬಹುಕಾಲದ ಆಸೆಗಳು ನೆರವೇರುವ ಸುಮಧುರ ಸಮಯ ಇದಾಗಿರಲಿದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ.

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ಮಾಡುವ ಪ್ರತಿ ಕೆಲಸದಲ್ಲೂ ಸಕಾರಾತ್ಮಕ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ಉದ್ಯೋಗಸ್ಥರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಉದ್ಯಮಿಗಳು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.

ತುಲಾ ರಾಶಿ: 
ತುಲಾ ರಾಶಿಯ ಜನರಿಗೆ ಇಂದು ವ್ಯವಹಾರದಲ್ಲಿ ಉತ್ತಮ ಲಾಭ ನಿರೀಕ್ಷೆ ಇದೆ. ದಿನದ ಆರಂಭದಲ್ಲಿ ಕೆಲವು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಅಗತ್ಯ ಬೆಂಬಲ ಸಿಗಲಿದೆ. ಉದ್ಯಮಿಗಳು ಬಂಪರ್‌ ಆದಾಯವನ್ನು ಪಡೆಯುವ ಸೂಚನೆಗಳಿವೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯ ಜನರಿಗೆ ಇಂದಿನ ಇದನವು ಉತ್ತಮವಾಗಿರುತ್ತದೆ. ಕೆಲಸದಲ್ಲಿ ಹೆಚ್ಚಿನ ಶ್ರಮ ಬೇಕಾಗಬಹುದು. ಸಂಜೆ ದಿಢೀರ್‌ ಪ್ರಯಾಣಕ್ಕೆ ಸಿದ್ಧವಾಗಿರಿ. ಈ ದಿನ ಪ್ರಭಾವಿ ವ್ಯಕ್ತಿಯೊಬ್ಬರ ಪರಿಚಯವಾಗಬಹುದು. ಮುಂದಿನ ದಿನಗಳಲ್ಲಿ ಅವರಿಂದ ಭಾರೀ ಪ್ರಯೋಜನವಾಗಬಹುದು. ಕುಟುಂಬ ಜೀವನದಲ್ಲಿ ತಾಳ್ಮೆ ಕಾದುಕೊಳ್ಳಿ.

ಧನು ರಾಶಿ:
ಧನು ರಾಶಿಯ ಜನರಿಗೆ ಇಂದು ಅನುಕೂಲಕರವಾದ ಸಮಯ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಅನವಶ್ಯಕ ವಾದ-ವಿವಾದಗಳಲ್ಲಿ ಸಿಲುಕದೇ ಇರುವುದು ಒಳ್ಳೆಯದು. ನಿಮ್ಮ ಬಹುಕಾಲದ ಆಸೆಗಳು ನನಸಾಗುವ ದಿನ. ಹಣಕಾಸಿನ ಪರಿಸ್ಥಿತಿಯೂ ಸುಧಾರಣೆಗೊಳ್ಳಲಿದೆ.

ಮಕರ ರಾಶಿ:
ಮಕರ ರಾಶಿಯವರು ಇಂದು ಯಾರೊಂದಿಗೂ ಜಗಳವಾಗದಂತೆ ನಿಗಾವಹಿಸಿ. ಕುಟುಂಬ ಜೀವನವು ಸಂತೋಷದಿಂದ ಕೂಡಿರಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ನಿರೀಕ್ಷಿಸಬಹುದು. ಆರೋಗ್ಯದಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ವ್ಯವಹಾರಸ್ಥರಿಗೆ ಅನುಕೂಲಕರ ದಿನ.

ಕುಂಭ ರಾಶಿ:
ಕುಂಭ ರಾಶಿಯವರು ಇಂದು ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಟೀಮ್‌ ವರ್ಕ್‌ನಲ್ಲಿ ಕೆಲಸ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವ ನಿರೀಕ್ಷೆ ಇದೆ. ಉದ್ಯಮಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.

ಮೀನ ರಾಶಿ:
ಮೀನ ರಾಶಿಯವರಿಗೆ ಇಂದು ಎಲ್ಲಾ ರೀತಿಯಲ್ಲೂ ಧನಾತ್ಮಕ ಫಲಿತಾಂಶಗಳು ಸಿಗಬಹುದು. ವ್ಯವಹಾರಸ್ಥರಿಗೆ ನಿಮ್ಮ ನಿರಂತರ ಪ್ರಯತ್ನಗಳಿಗೆ ಉತ್ತಮ ಫಲ ಸಿಗಲಿದೆ. ದೀರ್ಘಾವಧಿಯಿಂದ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕುಟುಂಬಸ್ಥರ ಆರೋಗ್ಯ ಕಾಳಜಿಯ ವಿಷಯವಾಗಿದೆ.

ಸೂಚನೆ :  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
 

Add Zee News as a Preferred Source
TAGS:
Dina Bhavishya