• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ರಾಜ್ಯಕ್ಕೆ ಮಹಾ ಚಂಡಮಾರುತ "ಮುರುಸು" ಭೀತಿ: ಮುಂದಿನ 5 ದಿನ ಈ ಭಾಗಕ್ಕೆ ಭಾರೀ ಮಳೆ ಮುನ್ಸೂಚನೆ

ರಾಜ್ಯಕ್ಕೆ ಮಹಾ ಚಂಡಮಾರುತ "ಮುರುಸು" ಭೀತಿ: ಮುಂದಿನ 5 ದಿನ ಈ ಭಾಗಕ್ಕೆ ಭಾರೀ ಮಳೆ ಮುನ್ಸೂಚನೆ

Karnataka Weather report : ಬಂಗಾಳಕೊಲ್ಲಿಯ ಕಡಲ ಗರ್ಭದಲ್ಲಿ ಎದ್ದಿರುವ ಮತ್ತೊಂದು ಮಹಾ ರಕ್ಕಸ ಈಗ ಇಡೀ ದಕ್ಷಿಣ ಭಾರತದ ನಿದ್ದೆಗೆಡಿಸಿದ್ದಾನೆ.. ಕೆಲವೇ ದಿನಗಳ ಹಿಂದಷ್ಟೇ ಆಂಧ್ರ ಮತ್ತು ಯಾಣಂ ಕರಾವಳಿಯನ್ನು ಅಪ್ಪಳಿಸಿ ಅನಾಹುತ ಸೃಷ್ಟಿಸಿದ್ದ ‘ಅರ್ನಬ್’ ಚಂಡಮಾರುತದ ಬೆನ್ನಲ್ಲೇ, ಈಗ ಅದಕ್ಕಿಂತಲೂ ಭೀಕರವಾಗಿರುವ "ಮುರುಸು" ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ.. ನವೆಂಬರ್ 2ರ ಸೋಮವಾರ ಸಂಜೆಯ ವೇಳೆಗೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಮುರುಸು ಅಪ್ಪಳಿಸಲಿದ್ದು, ಒಡಿಶಾದಲ್ಲಿ ಈಗಾಗಲೇ ಗುಡ್ಡಗಾಡು ಪ್ರದೇಶಗಳ ಗ್ರಾಮಗಳನ್ನು ಪೊಲೀಸರ ಕಾವಲಿನಲ್ಲಿ ಸ್ಥಳಾಂತರಿಸಲಾಗುತ್ತಿದೆ..

Written ByKrishna NK
Published: Nov 01, 2026, 09:21 PM IST|Updated: Nov 01, 2026, 09:26 PM IST
joinshare
ರಾಜ್ಯಕ್ಕೆ ಮಹಾ ಚಂಡಮಾರುತ "ಮುರುಸು" ಭೀತಿ: ಮುಂದಿನ 5 ದಿನ ಈ ಭಾಗಕ್ಕೆ ಭಾರೀ ಮಳೆ ಮುನ್ಸೂಚನೆ
Image Credit: karnataka weather

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
HMTಯಿಂದ 'ಕನ್ನಡಿಗ' ವಾಚ್ ಅನಾವರಣ : ಮತ್ತೆ ಮರುಕಳಿಸಿತು ಹಳೆಯ ವೈಭವ

HMTಯಿಂದ 'ಕನ್ನಡಿಗ' ವಾಚ್ ಅನಾವರಣ : ಮತ್ತೆ ಮರುಕಳಿಸಿತು ಹಳೆಯ ವೈಭವ

2

ರಾಜ್ಯಕ್ಕೆ ಮಹಾ ಚಂಡಮಾರುತ "ಮುರುಸು" ಭೀತಿ: ಮುಂದಿನ 5 ದಿನ ಈ ಭಾಗಕ್ಕೆ ಭಾರೀ ಮಳೆ ಮುನ್ಸೂಚನೆ

3

ಪೊಲೀಸ್ ಕಮಿಷನರ್‌ ಹೇಳಿಕೆ ಬೆನ್ನಲ್ಲೇ ಹೆಚ್‌ಡಿಕೆ ಗರಂ..! ದಾಖಲೆ ಸ್ಪೋಟಕ್ಕೆ ಸಮಯ ನಿಗದಿ ಮಾಡಿದ ಕೇಂದ್ರ ಸಚಿವ

4

ಸರಣಿ ಗೆದ್ದರೂ ತಂಡದ ಬಗ್ಗೆ ಅಸಮಾಧಾನ: ಕ್ಯಾಪ್ಟನ್‌ ಶ್ರೇಯಸ್ ಅಯ್ಯರ್ ಹೇಳಿದ್ದೇನು?

5

ಭಾರತದಲ್ಲಿ ಸಾರ್ವಜನಿಕವಾಗಿ ಚುಂಬಿಸುವುದು ಅಪರಾಧವೇ? ಕಾನೂನು ಹೇಳುವುದೇನು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಈ ಚಂಡಮಾರುತದ ಅಸಲಿ ಶಾಕ್ ತಟ್ಟುತ್ತಿರುವುದು ನಮ್ಮ ಕರ್ನಾಟಕಕ್ಕೆ!.. ಆಂಧ್ರದ ನೆಲ್ಲೂರು ಕರಾವಳಿಯ ಮೂಲಕ ಭೂಪ್ರವೇಶಿಸಲಿರುವ ಈ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದ ತಿರುಗುವಿಕೆಯಿಂದಾಗಿ ರಾಜ್ಯದಲ್ಲಿ ಇಂದಿನಿಂದಲೇ ಹಿಂಗಾರು ಮಳೆ ರುದ್ರನರ್ತನ ಆರಂಭಿಸಿದೆ.. ಸಿಲಿಕಾನ್ ಸಿಟಿ ಬೆಂಗಳೂರಿಗೆ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ಘೋಷಿಸಿದ್ದು, ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಲಿದೆ..

ಪೂರ್ವ ಕರಾವಳಿಯಲ್ಲಿ ಚಂಡಮಾರುತಗಳ ಸರಣಿ ದಾಳಿ ಮುಂದುವರಿದಿದೆ. ಆಂಧ್ರ-ಯಾಣಂನಲ್ಲಿ ವಿನಾಶ ಸೃಷ್ಟಿಸಿದ್ದ ಅರ್ನಬ್ ಚಂಡಮಾರುತ ದುರ್ಬಲಗೊಂಡ ಬೆನ್ನಲ್ಲೇ, ಅದೇ ಬಂಗಾಳಕೊಲ್ಲಿಯಲ್ಲಿ 'ಮುರುಸು' ಎಂಬ ಹೊಸ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಂಡಿದೆ. ಹವಾಮಾನ ಇಲಾಖೆಯ ಪ್ರಕಾರ, ಸೋಮವಾರ ಸಂಜೆಯ ವೇಳೆಗೆ ಇದು ಆಂಧ್ರಪ್ರದೇಶ ಕರಾವಳಿಯ ಅತ್ಯಂತ ಸಮೀಪಕ್ಕೆ ಬರಲಿದೆ. ಈ ವ್ಯವಸ್ಥೆಯು ಕರಾವಳಿ ಆಂಧ್ರ ಮತ್ತು ಯಾಣಂ ವ್ಯಾಪ್ತಿಯಲ್ಲಿ ಭಾರೀ ಆಸ್ತಿಪಾಸ್ತಿ ಹಾನಿ ಮಾಡುವ ಆತಂಕ ಮೂಡಿಸಿದ್ದು, ಕರಾವಳಿ ಭಾಗದಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.

ಮುರುಸು ಚಂಡಮಾರುತದ ತೀವ್ರತೆಗೆ ಬೆಚ್ಚಿಬಿದ್ದಿರುವ ಒಡಿಶಾ ಸರ್ಕಾರ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಬೆಟ್ಟಗುಡ್ಡಗಳ ತಪ್ಪಲಿನಲ್ಲಿರುವ ದುರ್ಬಲ ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಗ್ರಾಮಸ್ಥರು ಮನೆ ಬಿಟ್ಟು ಬರುವಾಗ ಕಳ್ಳತನದ ಭಯ ಪಡಬಾರದು ಎಂಬ ಕಾರಣಕ್ಕೆ ತೆರವಾದ ಮನೆಗಳಿಗೆ ಖುದ್ದು ಪೊಲೀಸರೇ ಕಾವಲು ಕಾಯುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಮತ್ತು ಗುಡ್ಡ ಕುಸಿತ ತಡೆಯಲು ಎಲ್ಲಾ ಆಡಳಿತ ಯಂತ್ರಗಳು ಸನ್ನದ್ಧವಾಗಿವೆ.

ಈ ಚಂಡಮಾರುತದ ಪರಿಣಾಮ ಕೇವಲ ಆಂಧ್ರ-ಒಡಿಶಾಗೆ ಸೀಮಿತವಾಗಿಲ್ಲ, ಬದಲಾಗಿ ಇಡೀ ಕರ್ನಾಟಕದ ಹವಾಮಾನವನ್ನೇ ತಲೆಕೆಳಗಾಗಿಸಿದೆ. ಬಂಗಾಳಕೊಲ್ಲಿಯಲ್ಲಿರುವ ಮುರುಸು ಸೈಕ್ಲೋನ್ ವ್ಯವಸ್ಥೆಯು ದುರ್ಬಲಗೊಂಡು ಆಂಧ್ರದ ನೆಲ್ಲೂರು ಕರಾವಳಿಯ ಮೂಲಕ ಭೂಪ್ರವೇಶ ಮಾಡಿ ಪಶ್ಚಿಮಕ್ಕೆ ಸಾಗಲಿದೆ. ಇದರ ಬೆನ್ನಲ್ಲೇ ಅರಬ್ಬಿ ಸಮುದ್ರದ ವಾಯುಭಾರ ತಿರುಗುವಿಕೆಯೂ ಸಾಥ್ ನೀಡಿದ್ದು, ಕರ್ನಾಟಕದಲ್ಲಿ ಹಿಂಗಾರು ಮಾರುತಗಳು ತೀವ್ರ ಚುರುಕುಗೊಂಡಿವೆ. ಪರಿಣಾಮವಾಗಿ ನವೆಂಬರ್ 5ರವರೆಗೆ ಇಡೀ ರಾಜ್ಯದಲ್ಲಿ ಅಬ್ಬರದ ಮಳೆಯಾಗಲಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮುರುಸು ಚಂಡಮಾರುತದ ತಂಪಾದ ಮತ್ತು ತೇವಾಂಶಭರಿತ ಮೋಡಗಳು ಆವರಿಸಿಕೊಂಡಿವೆ. ನಗರದಲ್ಲಿ ಕಳೆದ ಎರಡು ದಿನಗಳಿಂದ ಕಂಡುಬರುತ್ತಿದ್ದ ಬಿಸಿಲಿನ ವಾತಾವರಣ ಮಾಯವಾಗಿದ್ದು, ನವೆಂಬರ್ 2 ಮತ್ತು 3 ರಂದು ನಗರದಲ್ಲಿ ಭಾರಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಹವಾಮಾನ ಇಲಾಖೆಯು ಸಿಲಿಕಾನ್ ಸಿಟಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಮಳೆಯಿಂದಾಗಿ ನಗರದಲ್ಲಿ ಟ್ರಾಫಿಕ್ ಜಾಮ್ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ನಗರ ನಿವಾಸಿಗಳು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

ಮುಂದಿನ 4 ದಿನಗಳ ಕಾಲ ರಾಜ್ಯದ ಎಲ್ಲಾ ದಿಕ್ಕುಗಳಲ್ಲೂ ಮಳೆಯ ಆರ್ಭಟ ಜೋರಾಗಿರಲಿದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ನವೆಂಬರ್ 3ರಂದು ಯೆಲ್ಲೋ ಅಲರ್ಟ್ ನೀಡಲಾಗಿದ್ದು, ನವೆಂಬರ್ 5ರವರೆಗೆ ಕಡಲ ತೀರದಲ್ಲಿ ಬಿರುಗಾಳಿ ಮಳೆ ಅಬ್ಬರಿಸಲಿದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರಿನಲ್ಲಿ ಕಾಫಿ ಮತ್ತು ಅಡಿಕೆ ಬೆಳೆಗಾರರಿಗೆ ಮಳೆಯ ಆತಂಕ ಶುರುವಾಗಿದೆ. ಇತ್ತ ಉತ್ತರ ಒಳನಾಡಿನ ಕಲಬುರ್ಗಿ, ಬೀದರ್ ಹಾಗೂ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು-ಸಿಡಿಲಿನ ಸಮೇತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನತೆ ಎಚ್ಚರಿಕೆಯಿಂದಿರುವಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಒಟ್ಟಿನಲ್ಲಿ, ಬಂಗಾಳಕೊಲ್ಲಿಯ ಆಳ ಸಮುದ್ರದಲ್ಲಿ ಜನಿಸಿರುವ 'ಮುರುಸು' ಚಂಡಮಾರುತ ಆಂಧ್ರ ಮತ್ತು ಒಡಿಶಾ ಕರಾವಳಿಯ ಬಾಗಿಲು ತಟ್ಟುತ್ತಿದ್ದರೆ, ಅದರ ಬಾಲದ ಹೊಡೆತಕ್ಕೆ ಕರ್ನಾಟಕದ ಹಿಂಗಾರು ಮಳೆ ಈಗ ರಣಕಹಳೆ ಊದಿದೆ.. ಕರಾವಳಿಯ ಅಲೆಗಳಿಂದ ಹಿಡಿದು ಮಲೆನಾಡಿನ ಬೆಟ್ಟಗಳು, ರಾಜಧಾನಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಗಡಿ ಜಿಲ್ಲೆಗಳವರೆಗೆ ಮುಂದಿನ 5 ದಿನ ವರುಣನ ರುದ್ರನರ್ತನ ನಡೆಯಲಿದೆ.. ಈಗಾಗಲೇ ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದರೆ, ಚಂಡಮಾರುತದ ನೇರ ಹೊಡೆತಕ್ಕೆ ಸಿಲುಕಲಿರುವ ಆಂಧ್ರ-ಒಡಿಶಾ ಕರಾವಳಿ ಜನತೆ ನಡುಗುತ್ತಿದ್ದಾರೆ.. ಮುಂದಿನ 48 ಗಂಟೆಗಳಲ್ಲಿ ಈ ಮುರುಸು ಚಂಡಮಾರುತ ಎಷ್ಟು ದೊಡ್ಡ ಅನಾಹುತ ಸೃಷ್ಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Add Zee News as a Preferred Source
TAGS:
Weather Update